ನವದೆಹಲಿ : ಮಹಿಳೆಯೋರ್ವರ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ (Woman Gang rape ) ಎಸಗಿರುವ ಘಟನೆ ಪಶ್ಚಿಮ ದೆಹಲಿಯ ಪಂಜಾಬಿ ಬಾಗ್‌ನಲ್ಲಿ ನಡೆದಿದೆ. ಘಟನೆ ನಡೆದು ನಾಲ್ಕು ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ನವೀನ್ ಸಿಂಗ್ ಭಂಡಾರಿ ( 28 ವರ್ಷ), ಬಿಶ್ವ ಮೋಹನ್ ಆಚಾರ್ಯ ( 26 ವರ್ಷ) ಮತ್ತು ಅಕ್ಷಯ್ ತನೇಜಾ ( 30ವರ್ಷ ) ಎಂಬವರೇ ಬಂಧಿತ ಆರೋಪಿಗಳು. ಪಂಜಾಬಿ ಬಾಗ್‌ನಲ್ಲಿ 36 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಮಹಿಳೆ ಮಾದಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿಯೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ ಮತ್ತು 328 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಘನಶ್ಯಾಮ್ ಬನ್ಸಾಲ್ ಹೇಳಿದ್ದಾರೆ.
ಇದನ್ನೂ ಓದಿ : ಹಲ್ಲಿಯ ಮೇಲೆ ಅತ್ಯಾಚಾರ ನಡೆಸಿದ ಕಾಮಾಂಧರು: ನಾಲ್ವರ ಬಂಧನ
ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗಾಗಿ ಕಚೇರಿಯಲ್ಲೇ ದೂರು ಸಮಿತಿ : ದೌರ್ಜನ್ಯ ತಪ್ಪಿಸಲು ಮಹಿಳಾ ಆಯೋಗದ ಸಿದ್ಧತೆ
ದೆಹಲಿಯಲ್ಲಿ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ನಡೆಸುತ್ತಿದ್ದಾರೆ.
Delhi Crime News: Woman Gang rape in West Delhi, 3 Arrested Within 4 Hours