Muzarayi Department Orders : ದೇವಾಲಯದ ಆವರಣದಲ್ಲಿ ಅನ್ಯಧರ್ಮಿಯ ವ್ಯಾಪಾರಕ್ಕೆ ಬ್ರೇಕ್‌ : ಮುಜರಾಯಿ ಇಲಾಖೆ ಖಡಕ್ ಆದೇಶ

ಬೆಂಗಳೂರು : ಹಿಜಾಬ್, ಹಲಾಲ ಬಳಿಕ ವ್ಯಾಪಾರ‌ಕ್ಷೇತ್ರಕ್ಕೂ ಕಾಲಿಟ್ಟ ಧರ್ಮದಂಗಲ್ ಚುರುಕುಗೊಂಡಿದೆ. ಹಿಂದೂ ದೇವಾಲಯಗಳ ಆವರಣದಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ನೀಡಬಾರದೆಂಬ ಹಿಂದೂಪರ ಸಂಘಟನೆಗಳ ಬೇಡಿಕೆಗೆ ಈಗ ಮುಜರಾಯಿ ಇಲಾಖೆಯೂ (Muzarayi Department Orders)ಬಲತಂದಿದ್ದು, ಈಗಾಗಲೇ ರೂಪಿಸಲಾಗಿರುವ ಕಾನೂನನ್ನು ಶಿಸ್ತಾಗಿ ಪಾಲಿಸಲು ನಿರ್ಧರಿಸಿದೆ.

ಹೌದು, ಮುಜರಾಯಿ ಇಲಾಖೆ ಈ ಹಿಂದೆಯೇ ರೂಪಿತವಾಗಿರುವ ದೇವಾಲಯಗಳ ವ್ಯಾಪಾರ ನಿಯಮವನ್ನು ಧೃಡವಾಗಿ ಪಾಲಿಸಲು ನಿರ್ಧರಿಸಿದೆ. ಹೀಗಾಗಿ ಇನ್ಮುಂದೇ ರಾಜ್ಯದ ಮುಜರಾಯಿ ದೇವಸ್ಥಾನದ ಅಂಗಡಿಗಳಲ್ಲಿ ಅನ್ಯ ಧರ್ಮಿಯರಿಗೆ ಅವಕಾಶವಿಲ್ಲ. ಕೇವಲ ಅಂಗಡಿ ಮಾತ್ರವಲ್ಲ ಜಾತ್ರೆ ಸೇರಿದಂತೆ ಉಳಿದ ಸಂದರ್ಭದಲ್ಲೂ ಮುಜರಾಯಿ ದೇಗುಲದ ವ್ಯಾಪಾರ ಮಳಿಗೆಗಳ ಹರಾಜಿನಲ್ಲೂ ಅನ್ಯಧರ್ಮಿಯರಿಗೆ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಮುಜರಾಯಿ ಅಂಗಡಿ ಮಳಿಗೆಗಳ ಹರಾಜಿನಲ್ಲಿ ಮೊದಲು ಎಲ್ಲ ಧರ್ಮದವರು ಭಾಗವಹಿಸುತ್ತಿದ್ದರು.ಅಲ್ಲದೇ ಹಿಂದೂಗಳು ಪಡೆದ ಅಂಗಡಿಗಳನ್ನು ಸಬ್ ಲೀಸ್ ಮೂಲಕ ಬೇರೆ ಧರ್ಮದವರು ನಡೆಸುತ್ತಿದ್ದರು. ಆದರೆ ಇನ್ಮುಂದೇ ಹರಾಜಿನಲ್ಲಿ ಬೇರೆ ಧರ್ಮದವರು ಭಾಗವಹಿಸಲು ಅವಕಾಶ ಇಲ್ಲ ಎಂದು ಮುಜರಾಯಿ ಇಲಾಖೆ ಹೇಳಿದೆ. ಜೊತೆಗೆ ಹಿಂದೂಗಳು ಸಬ್ ಲೀಸ್ ಕೂಡ ಅನ್ಯ ಧರ್ಮೀಯರಿಗೆ ನೀಡುವಂತಿಲ್ಲ. 2012 ಹಿಂದೂ ರಿಲಿಜಿಯನ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಒಂದು ವೇಳೆ ಹಿಂದೂಗಳು ಹರಾಜಿನಲ್ಲಿ ಪಡೆದ ಅಂಗಡಿಯನ್ನು ಅನ್ಯಧರ್ಮಿಯರಿಗೆ ನೀಡಿದರೇ ಆ ದೇವಾಲಯದ EOಗಳ ಮೇಲೆ ಕ್ರಮ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

ಹೀಗಾಗಿ ಯಾರು ಹರಾಜಿನಲ್ಲಿ ಪಡೆಯುತ್ತಾರೆಯೋ ಅವರೇ ಅಂಗಡಿಗಳನ್ನ ನಡೆಸಬೇಕು ಎಂದು ಸೂಚಿಸಲಾಗಿದೆ. ಈ. ಸಂಬಂಧ ಈಗಾಗಲೇ ಮುಜರಾಯಿ ಇಲಾಖೆ ಬೆಂಗಳೂರಲ್ಲಿ ಸುಮಾರು 48 ಅಂಗಡಿಗಳಿಗೆ ನೋಟಿಸ್‌ ನೀಡಿದೆ. ನಗರದಬಂಡಿ‌ ಶೇಷಮ್ಮ ಚೌಲ್ಟ್ರಿ, ಬಳೆ ಪೇಟೆ, ಶ್ರೀನಿವಾಸ ದೇವಸ್ಥಾನ ಬಳೇಪೇಟೆ ಸುಗ್ರೀವ ವೆಂಕಟರಮಣ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಬಳೇಪೇಟೆ ಕಾಡು ಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರ ಹೀಗೆ ಹಲವು ಕಡೆ ದೇವಾಲಯ ಅಂಗಡಿಗಳಿಗೆ ನೋಟಿಸ್ ಕೂಡ ನೀಡಲಾಗಿದ್ದು ನಿಯಮವನ್ನು ಸರಿಯಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಅಲ್ಲದೇ ಈಗಾಗಲೇ ಹಿಂದೂ ದೇವಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಯ ಧರ್ಮಿಯರ ಅಂಗಡಿಗಳ ತೆರವಿಗೆ ಮುಜರಾಯಿ ಇಲಾಖೆ 42 ದಿನಗಳ ಕಾಲಾವಕಾಶ ನೀಡಿದೆ. ಒಂದೊಮ್ಮೆ ನಿಯಮ ಮೀರಿ ಅನ್ಯಧರ್ಮಿಯರು ದೇವಾಲಯದ ಆವರಣದಲ್ಲಿ ವ್ಯಾಪಾರ ಮುಂದುವರೆಸಿದರೆಡ ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ ಮುಜರಾಯಿ ಇಲಾಖೆ.

ಇದನ್ನೂ ಓದಿ : ಮಹಿಳೆಯರ ಸುರಕ್ಷತೆಗಾಗಿ ಕಚೇರಿಯಲ್ಲೇ ದೂರು ಸಮಿತಿ : ದೌರ್ಜನ್ಯ ತಪ್ಪಿಸಲು ಮಹಿಳಾ ಆಯೋಗದ ಸಿದ್ಧತೆ

ಇದನ್ನೂ ಓದಿ : ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, 4 ಗಂಟೆಗಳಲ್ಲಿ ಮೂವರು ಆರೋಪಿಗಳ ಬಂಧನ

The temple premises are not open to Other Religions Muzarayi Department Orders

Comments are closed.