Woman Kidnapped : ಮದುವೆಯ ಕರೆಯೋಲೆ ನೀಡಲು ಹೋಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಭೋಪಾಲ್‌ : ಸಂಬಂಧಿಕರಿಗೆ ಮದುವೆಯ ಕರೆಯೋಲೆ ನೀಡಲು ತೆರಳಿದ್ದ ಯುವತಿಯೋರ್ವಳನ್ನು ಅಪರಹಿಸಿ (Woman Kidnapped) ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಬೇರೊಬ್ಬರಿಗೆ ಮಾರಾಟ (Gang Raped Sold) ಮಾಡಿರುವ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ. ಕೊನೆಗೂ ಯುವತಿ ಪೋಷಕರು ಮಡಿಲು ಸೇರಿದ್ದರೆ, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಯುವತಿ ಮದುವೆಗೆ ಆಹ್ವಾನಿಸಲು ಗ್ರಾಮಕ್ಕೆ ತೆರಳಿದ್ದ ವೇಳೆಯಲ್ಲಿ ಮೂವರು ಯುವಕರು, ಯುವತಿಯನ್ನು ಅಪಹರಿಸಿದ್ದಾರೆ. ನಂತರ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಂತರದಲ್ಲಿ ರಾಜಕೀಯ ಮುಖಂಡನೋರ್ವನಿಗೆ ಮಾರಾಟ ಮಾಡಿದ್ದಾರೆ. ಕೆಲವು ದಿನಗಳ ಕಾಲ ಆಕೆಯನ್ನು ಗುಪ್ತ ಸ್ಥಳಗಳಲ್ಲಿ ಆರೋಪಿಗಳು ಇರಿಸಿಕೊಂಡಿದ್ದರು.

ರಾಜಕೀಯ ಮುಖಂಡನ ಜೊತೆಗೆ ಐದು ದಿನಗಳ ಕಾಲ ಯುವತಿಯನ್ನು ಇರಿಸಿದ್ದ ಆರೋಪಿಗಳು ನಂತರದಲ್ಲಿ ಮತ್ತೋರ್ವ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಆದರೆ ಯುವತಿ ತಾನಿದ್ದ ಸ್ಥಳಕ್ಕೆ ತಂದೆಯನ್ನು ಕರೆಯಿಸಿಕೊಂಡು ಆರೋಪಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಯುವತಿಯ ದೂರನ್ನು ಆಧರಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹಲವು ತಂಡಗಳನ್ನು ರಚಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಮೆಟ್ರೋ ಪಿಲ್ಲರ್​​ಗೆ ಡಿಕ್ಕಿ ಹೊಡೆದ ಕೆಎಸ್​ಆರ್​ಟಿಸಿ ಬಸ್​ :ನಾಲ್ವರ ಸ್ಥಿತಿ ಗಂಭೀರ

ಇದನ್ನೂ ಓದಿ : ಮದುವೆ ಸಮಾರಂಭದ ವೇಳೆ ಕೈ ಕೊಟ್ಟ ಕರೆಂಟ್​: ವಧು – ವರರು ಅದಲುಬದಲು

Woman Kidnapped Distributing wedding cards Gang Raped Sold

Comments are closed.