ಭಾನುವಾರ, ಏಪ್ರಿಲ್ 27, 2025
Homehoroscopeಶನಿಯ ಸ್ಥಾನ ಬದಲಾವಣೆಯಿಂದ ನಿಮ್ಮ ರಾಶಿಗೆ ಯಾವ ಫಲ !

ಶನಿಯ ಸ್ಥಾನ ಬದಲಾವಣೆಯಿಂದ ನಿಮ್ಮ ರಾಶಿಗೆ ಯಾವ ಫಲ !

- Advertisement -

ಧನುಸ್ಸು ರಾಶಿಯಲ್ಲಿರುವ ಶನಿ ತನ್ನ ಸ್ಥಾನವನ್ನು ಬದಲಾಯಿಸಿದ್ದು, ಮಕರ ರಾಶಿಯಲ್ಲಿ ವಾಸವಾಗಿದ್ದಾನೆ. ಇಂದಿನಿಂದ ಎರಡೂವರೆ ತಿಂಗಳುಗಳ ಕಾಲ ಶನಿ ಇದೇ ಚಿಹ್ನೆಯಲ್ಲಿಯೇ ಉಳಿದುಕೊಳ್ಳುತ್ತಾನೆ. 11 ಮೇ 2020ರ ವೇಳೆಗೆ ಹಿಮ್ಮುಖ ಚಲನೆಯನ್ನು ಪಡೆದುಕೊಂಡು, 29 ಸಪ್ಟೆಂಬರ್ 2020ರಲ್ಲಿ  ಪುನಃ ಪ್ರಗತಿಪರ ಚಲನೆಯನ್ನು ಕೈಗೊಳ್ಳುವನು. ಧನುಸ್ಸು ರಾಶಿ ಹಾಗೂ ಮಕರ ರಾಶಿಗೆ ಸಾಡೇ ಸಾತಿ ಪ್ರಭಾವ ನಡೆಯುತ್ತಿರುವ ಜೊತೆಗೆ ಕುಂಭ ರಾಶಿಗೂ ಸಾಡೇ ಸಾತಿ ಶನಿ ಪ್ರಭಾವ ಆರಂಭವಾಗುತ್ತದೆ. ವೃಶ್ಚಿಕ ರಾಶಿಗೆ ಸಾಡೇ ಸಾತಿ ಶನಿ ಪ್ರಭಾವ ಕಡಿಮೆಯಾಗಲಿದೆ. ಆದರೆ ಕುಂಭ ರಾಶಿಯವರಿಗೆ ಏಳೂವರೆ ವರ್ಷ, ಮಿಥುನ ರಾಶಿಯವರಿಗೆ ಎರಡೂವರೆ ವರ್ಷಗಳ ಕಾಲ ಅಷ್ಟಮ ಶನಿ ಹಾಗೂ ಕನ್ಯಾರಾಶಿಯವರಿಗೆ ಎರಡೂವರೆ ವರ್ಷಗಳ ಕಾಲ ಪಂಚಮ ಶನಿಕಾಟ ನೀಡಲಿದ್ದಾನೆ. ಶನಿಯ ಸ್ಥಾನ ಬದಲಾವಣೆಯು ಹನ್ನೆರಡೂ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಶನಿ 12 ರಾಶಿಗಳ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತಾನೆ ಅನ್ನೋದು ತಿಳಿದುಕೊಳ್ಳೋಣಾ.

ಮೇಷರಾಶಿ : ಮಕರ ರಾಶಿಗೆ ಶನಿ ಪ್ರವೇಶವಾಗುವುದರಿಂದ ಮೇಷರಾಶಿಯ 10ನೇ ಮನೆಯಲ್ಲಿ ಶನಿಯು ನೆಲೆಸುವುದರಿಂದ  ಖರ್ಚುಗಳಲ್ಲಿ ಹೆಚ್ಚಳವಾಗಲಿದೆ. ಉದ್ಯೋಗದಲ್ಲಿ ತೊಂದರೆ, ಶತ್ರು ಕಾಟ, ದೈಹಿಕ ಆರೋಗ್ಯ ಸಮಸ್ಯೆ, ಆದಾಯಕ್ಕಿಂತ ಖರ್ಚು ಹೆಚ್ಚಳವಾಗೋ ಸಾಧ್ಯತೆ. ಕುಟುಂಬ ಕಲಹ, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ಯಾವುದೇ ಕೆಲಸ ಮಾಡುವಾಗಲೂ ಎಚ್ಚರಿಕೆಯ ಹೆಜ್ಜೆ ಇಡುವುದು ಉತ್ತಮ.

ವೃಷಭರಾಶಿ : ನಿಮ್ಮ ರಾಶಿಯಲ್ಲಿ ಶನಿಯು ಒಂಬತ್ತನೇ ಮನೆಯಲ್ಲಿ ನೆಲೆಸುತ್ತಾನೆ. ಹೀಗಾಗಿ ಮಿಶ್ರ ಫಲವನ್ನು ನೀಡುತ್ತಾನೆ. ಅನಾವಶ್ಯಕವಾಗಿ ನಿಂದನೆಗೆ ಗುರಿಯಾಗುತ್ತೀರಿ. ಆಪ್ತರು, ಬಂಧು ಮಿತ್ರರು ನಿಮ್ಮಿಂದ ದೂರವಾಗಬಹುದು. ಕುಟುಂಬದಲ್ಲಿ ವಾದ ವಿವಾದದಿಂದ ನೆಮ್ಮದಿ ಭಂಗ, ಧಾರ್ಮಿಕ ಕಾರ್ಯಗಳಲ್ಲಿ ವಿಘ್ನ. ಹೃದಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಆದರೆ ಹಂತಹಂತವಾಗಿ ನಿಮಗೆ ಏಳಿಗೆ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಬಂಧುಗಳ ಸಹಾಯ ಸಾಧ್ಯ.

ಮಿಥುನರಾಶಿ : ನಿಮ್ಮ ರಾಶಿಯಲ್ಲಿ ಶನಿಯು ಎಂಟನೇ ಮನೆಯಲ್ಲಿ ನೆಲೆಸುತ್ತಾನೆ. ಹೀಗಾಗಿ ನೀವು ಕೈಗೊಳ್ಳುವ ಯಾವುದೇ ಕಾರ್ಯಗಳೂ ಕೂಡ ನಿಧಾನಗತಿಯಲ್ಲಿ ಸಾಗಲಿದೆ. ಧನಹಾನಿ ಸಂಭವ, ಪತ್ನಿ, ಪುತ್ರರೊಂದಿಗೆ ಕಲಹ, ಆತ್ಮೀಯರೊಂದಿಗೆ ಶತ್ರುತ್ವ, ಶ್ರಮಕ್ಕೆ ತಕ್ಕ ಫಲ ದೊರೆಯದಿರುವುದು, ಅನ್ಯವ್ಯಕ್ತಿಗಳಿಂದ ಮನಸಿಗೆ ನೋವು, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಸಂಚಾರದ ವೇಳೆ ಎಚ್ಚರಿಕೆ ಅಗತ್ಯ.

ಕಟಕರಾಶಿ : ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಶನಿಯು ಪ್ರವೇಶಿಸುತ್ತಾನೆ. ಅಪವಾದ ಭೀತಿ, ವೃತ್ತಿಯಲ್ಲಿ ಬದಲಾವಣೆ, ಖರ್ಚು ವೆಚ್ಚುಗಳು ಅಧಿಕ, ಅನಾರೋಗ್ಯ ಸಮಸ್ಯೆ, ಕುಟುಂಬ ಕಲಹ, ವಿದ್ಯಾರ್ಥಿಗಳಿಗೆ ವೃತ್ತಿಯಲ್ಲಿ ಹಿನ್ನೆಡೆ, ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಎದುರಾಗೋ ಸಾಧ್ಯತೆಯಿದೆ.

ಸಿಂಹರಾಶಿ : ನಿಮ್ಮ ರಾಶಿಯ ಆರನೇ ಮನೆಯನ್ನು ಶನಿಯು ಪ್ರವೇಶಿಸುವುದರಿಂದ ಶನಿಯು ನಿಮಗೆ ಉತ್ತಮ ಫಲವನ್ನು ನೀಡುತ್ತಾನೆ. ಅಚ್ಚರಿಯ ಫಲ ಲಭ್ಯ, ಸಕಲ ಇಷ್ಟಾರ್ಥಗಳು ನೆರವೇರಲಿದೆ. ಹೊಸ ಆದಾಯದ ಮೂಲಗಳಿಂದ ಸಂತಸ, ವಾಹನ, ಆಸ್ತಿ ಖರೀದಿಯ ಯೋಗ, ಆರೋಗ್ಯ, ಉದ್ಯೋಗ ಭಾಗ್ಯ, ಬಂಧು ಮಿತ್ರರು, ಪತ್ನಿಯ ಸಹಕಾರ. ಸಾಮಾಜಿಕವಾಗಿ ಮನ್ನಣೆ, ಹಂತ, ಹಂತವಾಗಿ ಜೀವನದಲ್ಲಿ ಅಭಿವೃದ್ಧಿ ಕಂಡು ಬರಲಿದ್ದು, ಸಾಲದಿಂದ ಮುಕ್ತರಾಗುವಿರಿ.

ಕನ್ಯಾರಾಶಿ : ನಿಮ್ಮ ರಾಶಿಯ ಐದನೇ ಮನೆಯಲ್ಲಿ ಶನಿಯು ಪ್ರವೇಶಿಸಲಿದ್ದಾನೆ. ಹೀಗಾಗಿ ಪಂಚಮ ಶನಿಯು ಸ್ವಲ್ಪ ಕಷ್ಟವನ್ನು ನೀಡುತ್ತಾನೆ. ಜೀವನದಲ್ಲಿ ಕಿರಿಕಿರಿ ಉಂಟಾಗಲಿದೆ. ಉದ್ಯೋಗ ಸ್ಥಳದ ಬದಲಾವಣೆ ಸಾಧ್ಯತೆ, ಅಪವಾದ ಭೀತಿ, ಅಪಘಾತದ ಭಯ ಕಾಡಬಹುದು. ಹಣದ ಕೊರತೆ, ಅನಾವಶ್ಯಕ ಕಲಹ, ಅಪಕೀರ್ತಿ ಸಂಭವ. ಮಗುವಿನ ವಿಚಾರದಲ್ಲಿ ಎಚ್ಚರ ಅಗತ್ಯ. ಸಹೋದ್ಯೋಗಿಗಳ ಜೊತೆ ಘರ್ಷಣೆ ಬೇಡ, ಅಧಿಕಾರಿಗಳ ಸೂಚನೆ ಪಾಲಿಸಿ.

ತುಲಾರಾಶಿ : ನಿಮ್ಮ ರಾಶಿಯ ನಾಲ್ಕನೇ ಮನೆಯನ್ನು ಶನಿಯು ಪ್ರವೇಶಿಸಲಿದ್ದಾನೆ. ಹೀಗಾಗಿ ನಿಮಗೆ ಮಿಶ್ರಫಲ ಲಭಿಸಲಿದೆ. ಕೋರ್ಟ್, ಕಚೇರಿ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಅಪವಾದ, ಅಧಿಕ ಖರ್ಚು, ತಾಯಿಗೆ ಅನಾರೋಗ್ಯ, ನರ, ಸ್ನಾಯುಗಳಲ್ಲಿ ನೋವು, ಸೊಂಟದ ನೋವು ಕಾಣಿಸಿಕೊಳ್ಳಬಹುದು.  ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ.

ವೃಚ್ಚಿಕ ರಾಶಿ : ಶನಿಯು ನಿಮ್ಮ ರಾಶಿಯ ಮೂರನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಧನ ಪ್ರಾಪ್ತಿಯ ಜೊತೆಗೆ ಕೆಲಸ ಕಾರ್ಯಗಳಲ್ಲಿ ಜಯ, ವೃತ್ತಿ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ, ಮನೆಯಲ್ಲಿ ಶುಭ ಕಾರ್ಯ, ಉದ್ಯೋಗ ಬಡ್ತಿ. ಅಧಿಕಾರಿಗಳಿಂದ ಪ್ರಶಂಸೆ. ಆದರೆ ತಂದೆ ತಾಯಿಯ ಜೊತೆಗೆ ವಾಗ್ವಾದ, ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು ರಾಶಿ: ಶನಿಯು ನಿಮ್ಮ ರಾಶಿಯಲ್ಲಿ ಎರಡನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಮಾತಿಗಿಂತ ಮೌನವೇ ಲೇಸು, ಉದ್ಯೋಗ ಕ್ಷೇತ್ರದಲ್ಲಿ ಅಪವಾಧ ಭೀತಿ, ಕೆಲಸದಲ್ಲಿ ನಿರಾಸಕ್ತಿ, ಆಕಸ್ಮಿಕ ಧನಹಾನಿ, ಶುಭಕಾರ್ಯ ಮುಂದೂಡಿಕೆ, ಯಾವುದೇ ಕೆಲಸವನ್ನು ಮುಂದೂಡಬೇಡಿ. ಮನೆಯಿಂದ ದೂರವಿರಬೇಕಾದ ಸ್ಥಿತಿ, ಯಾರಿಗೂ ಸಾಲ ಕೊಡಿಸುವ ಉಸಾಬರಿಗೆ ಹೋಗಬೇಡಿ.

ಮಕರ ರಾಶಿ : ಶನಿಯು ನಿಮ್ಮ ರಾಶಿಯ ಅಧಿಪತಿಯಾಗಿದ್ದು ಜನ್ಮರಾಶಿಗೆ ಪ್ರವೇಶಿಸಲಿದ್ದಾನೆ. ಶನಿಯು ಒಂದನೇ ಮನೆಯಲ್ಲಿ ಸಂಚರಿಸುವುದರಿಂದ ಆರೋಗ್ಯ ಹಾನಿ, ಧನ ಹಾನಿ, ತಂದೆಯ ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಸೂಚನೆಯನ್ನು ಪಾಲಿಸಿ, ಅನಗತ್ಯ ಪ್ರಯಾಣ, ಕುಟುಂಬ ಕಲಹ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಅನಗತ್ಯ ಅಲೆದಾಟ, ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಲಿದೆ.

ಕುಂಭರಾಶಿ : ಶನಿಯು ನಿಮ್ಮ ರಾಶಿಯ ಹನ್ನೆರಡನೆ ಮನೆಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮಿಶ್ರಫಲವನ್ನು ಕಾಣುವಿರಿ. ಕೆಲಸ ಕಾರ್ಯಗಳಲ್ಲಿ ವಿಘ್ನ, ಇಲ್ಲ ಸಲ್ಲದ ಅಪವಾದ, ಹಣಕಾಸಿನ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಎಣಿಸಿದ ಕಾರ್ಯಕ್ಕೆ ಅರ್ಧಕ್ಕೆ ನಿಲ್ಲುತ್ತದೆ. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ ಸಾಧ್ಯತೆ, ಉದ್ಯೋಗ ಹುಡುಕುವವರಿಗೆ ಅಡ್ಡಿ, ಆಡಂಬರದ ಜೀವನಕ್ಕಾಗಿ ದುಂದು ವೆಚ್ಚ. ಆದರೆ ಹಂತ ಹಂತವಾಗಿ ಅಭಿವೃದ್ದಿಯನ್ನು ಕಾಣುವಿರಿ.

ಮೀನರಾಶಿ : ನಿಮ್ಮ ರಾಶಿಯಲ್ಲಿ ಶನಿಯು ಹನ್ನೊಂದನೇ ಮನೆಯನ್ನು ಪ್ರವೇಶಿಸಿದ್ದಾನೆ. ಹೀಗಾಗಿ ನಿಮಗೆ ಶುಭಫಲಗಳೇ ಕಂಡುಬರುತ್ತದೆ. ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯ ದೂರ, ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು, ವಿವಿಧ ಮೂಲಗಳಿಂದ ಧನಪ್ರಾಪ್ತಿ, ವಿದೇಶ ಪ್ರಯಾಣ ಯೋಗ, ಆಕಸ್ಮಿಕ ಧನಲಾಭ, ಅವಿವಾಹಿತರಿಗೆ ವಿವಾಹ ಯೋಗ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ. ತಾಳ್ಮೆಯಿಂದ ಇರುವುದು ಉತ್ತಮ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular