ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಹಿಳೆ !

0

ಕುಂದಾಪುರ : ಸೀಟ್ ಬೆಲ್ಟ್ ಹಾಕಿದ್ದರೂ ಕೂಡ ಮಹಿಳೆಗೆ 500 ರೂಪಾಯಿ ದಂಡ ವಿಧಿಸಿರೊ ಟ್ರಾಫಿಕ್ ಪೊಲೀಸರ ಕ್ರಮದ ವಿರುದ್ದ ಮಹಿಳೆಯೋರ್ವರು ಗರಂ ಆಗಿರೋ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿಯಲ್ಲಿ ಹೈವೆ ಪೆಟ್ರೋಲ್ ವಾಹನದಲ್ಲಿ ಕುಳಿತಿದ್ದ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದವರ ವಿರುದ್ದ ದಂಡ ವಿಧಿಸುತ್ತಿದ್ದರು. ಆದ್ರೆ ಮಹಿಳೆಯೋರ್ವರು ಸೀಟ್ ಬೆಲ್ಟ್ ಧರಿಸಿದ್ದೂ, ಎಲ್ಲಾ ದಾಖಲೆಗಳನ್ನು ತೋರಿಸಿದ್ದರೂ ಕೂಡ ಪೊಲೀಸರು ದಂಡ ವಿಧಿಸುವಂತೆ ಹೇಳಿದ್ದಾರೆ. ಇದರಿಂದ ಕೆರಳಿದ ಮಹಿಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ.

https://youtu.be/CnYTqJ4vTLU
ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಮಹಿಳೆ
Leave A Reply

Your email address will not be published.