ಮೇಷರಾಶಿ
ವಾಹನ ರಿಪೇರಿ, ಸಣ್ಣಪುಟ್ಟ ಅಪಘಾತಗಳಿಂದ ಪಾರಾಗುವಿರಿ, ವ್ಯವಹಾರದಲ್ಲಿ ಏರುಪೇರು, ಮಾತೃವಿಗೆ ಅನಾರೋಗ್ಯ, ಲೇವಾದೇವಿ ವ್ಯವಹಾರ ಆದಷ್ಟು ಕಡಿಮೆ ಮಾಡಿರಿ, ಗೃಹದಲ್ಲಿ ಸಣ್ಣಪುಟ್ಟ ಜಗಳಗಳು ಕಂಡುಬಂದಾವು, ಆರ್ಥಿಕ ಒತ್ತಡವು ಕಂಡುಬರಲಿದೆ, ಅನ್ಯಾಯದಿಂದ ವೈಮನಸ್ಸು.
ವೃಷಭರಾಶಿ
ಕೃಷಿ, ಪಶು, ಹೈನುಗಾರಿಕೆ ಉದ್ದಿಮೆಯವರಿಗೆ ಕೈತುಂಬಾ ಕೆಲಸವಿದ್ದರೂ ಅದಕ್ಕೆ ತಕ್ಕ ಫಲವು ದೊರಕುವುದಿಲ್ಲ, ಶತ್ರು ಭಾದೆ, ವ್ಯಾಸಂಗದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು.ವಿಲಾಸೀ ಸಾಮಾಗ್ರಿಗಳ ವೃತ್ತಿಯವರಿಗೆ ಆದಾಯ ವೃದ್ಧಿ ಇರುತ್ತದೆ, ವಾಹನಾದಿಯಿಂದ ಲಾಭ. ಅಧಿಕ ಖರ್ಚು.
ಮಿಥುನರಾಶಿ
ಉದ್ಯೋಗದಲ್ಲಿ ಕಿರಿ-ಕಿರಿ, ಸಾಲಭಾದೆ, ಮನಕ್ಲೇಷ, ಖನಿಜ, ಲೋಹ ವಸ್ತುಗಳ ಮಾರಾಟದಲ್ಲಿ ಅಲ್ಪ ಲಾಭ, ಆಕಸ್ಮಿಕ ಧನ ವ್ಯಯವಾಗುವುದು ಕಂಡುಬಂದು ಚಿಂತಿತರಾಗುವಿರಿ, ಗೃಹಿಣಿಗೆ ರಕ್ತದೊತ್ತಡ ಭಾದೆ ಕಾಣಬಹುದು, ನಂಬಿದ ಜನರಿಂದ ಅಶಾಂತಿ.
ಕಟಕರಾಶಿ
ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನಮಾನ, ಅಧಿಕಾರ-ಪ್ರಾಪ್ತಿ, ಕೈಹಾಕಿದ ಕೆಲಸದಲ್ಲಿ ಪ್ರಗತಿ, ವಿದೇಶ ಯಾನದ ಯೋಗವು ಸ್ವಲ್ಪದರಲ್ಲೇ ತಪ್ಪಿಹೋದೀತು, ವಾಹನ ರಿಪೇರಿ, ಕಟ್ಟಡ ರಚನೆಯ ಕಾರ್ಯದವರಿಗೆ ಲಾಭ ಕಂಡುಬಂದೀತು, ಕಮಿಶನ್ ವ್ಯವಹಾರ ದಲ್ಲಿ ಕುಸಿತ ಕಂಡುಬರಲಿದೆ, ಶುಭವಾರ್ತೆ.
ಸಿಂಹರಾಶಿ
ಆದಾಯಕ್ಕಿಂತ ಖರ್ಚು ಜಾಸ್ತಿ, ಬಂಧುಗಳಲ್ಲಿ ಕಲಹ, ಬಂಧುಗಳಿಂದ ವ್ಯವಹಾರದಲ್ಲಿ ಮನಸ್ತಾಪ, ಪರೋಪಕಾರ ಮಾಡಲು ಹೋಗಿ ಕೈ ಸುಟ್ಟುಕೊಂಡೀರಾ ಜೋಕೆ, ನಿಮಗೆ ಎಲ್ಲಾ ತರಹದ ಸಮೃದ್ಧಿ ಇದ್ದರೂ ಚಿಂತೆಯು ನಿಮ್ಮನ್ನು ಹಿಂಬಾಲಿಸಲಿದೆ, ಅತಿಯಾದ ನಿದ್ದೆ, ಸುಖ ಭೋಜನ.
ಕನ್ಯಾರಾಶಿ
ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ, ಮಂಗಲಕಾರ್ಯ ಹಾಗೂ ದೇವತಾಕಾರ್ಯ ಗಳಿಗೆ ವಿಳಂಬ ತಂದೀತು, ವಿದ್ಯಾರ್ಜನೆಯಲ್ಲಿ ನೀವು ನಿರೀಕ್ಷಿಸಿದಷ್ಟು ಫಲ ದೊರಕದು, ಶುಭ ಹಾಗೂ ಅಶುಭ ಫಲಗಳ ಸಮ್ಮಿಲನವಿದೆ. ಆರ್ಥಿಕ ಕ್ಲೇಶವಿದೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಧನ ಲಾಭ.
ತುಲಾರಾಶಿ
ಸಾಲಭಾದೆ, ಕುಟುಂಬದಲ್ಲಿ ಅಸೌಖ್ಯ, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ, ಋಣಭಾದೆ, ಮನಸ್ಸು ತಾನು ಬಯಸಿದ್ದನ್ನು ಮಾಡಲು ಮುಂದೆ ಹೋದರೆ ಹಿರಿಯರಿಂದ ತಡೆ ಬರುತ್ತದೆ, ಆಕಸ್ಮಿಕ ಧನಲಾಭ, ನೂತನ ಬಂಧು, ಮಿತ್ರರ ಭೇಟಿಯಿಂದ ಸಂತೋಷ, ಸಂಭ್ರಮಗಳು ಇದ್ದೀತು,
ವೃಶ್ಚಿಕರಾಶಿ
ಚಂಚಲ ಮನಸ್ಸು, ಎಲ್ಲಿ ಹೋದರೂ ಅಶಾಂತಿ, ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ನೂತನ ಉದ್ಯೋಗಲಾಭದಿಂದ ಸಂತಸವಾಗಲಿದೆ, ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ, ನೂತನ ಕಾರ್ಯದ ಒತ್ತಡ ಮನಕ್ಲೇಶ ತಂದರೂ ಸಮಾಧಾನ ಮಾಡಿಕೊಳ್ಳಿರಿ, ಯತ್ನ ಕಾರ್ಯಗಳಲ್ಲಿ ವಿಳಂಬ, ದೇಹಲಾಸ್ಯ.
ಧನಸ್ಸು
ಅನಾರೋಗ್ಯ, ಅಧಿಕ ತಿರುಗಾಟ, ಅಲರ್ಜಿಯಂತಹ ಪೀಡೆಗಳು ಕಂಡುಬರಲಿದೆ, ದೀರ್ಘಕಾಲೀನ ಅಸ್ತಮಾ ಪೀಡೆಯವರಿಗೆ ಸ್ವಲ್ಪ ಜಾಗ್ರತೆ ಮಾಡಬೇಕಾದೀತು, ಜನಹಿತ ಕಾರ್ಯದಿಂದ ಶ್ಲಾಘನೆ ದೊರಕಲಿದೆ, ಆರೋಗ್ಯ ಜಾಗ್ರತೆ.ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಿಶ್ರ ಫಲ.
ಮಕರರಾಶಿ
ವ್ಯಾಪಾರದಲ್ಲಿ ಧನಲಾಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಆರೋಗ್ಯಪ್ರಾಪ್ತಿ, ವಿರೋಧಿಗಳಿಂದ ತೊಂದರೆ ಎಚ್ಚರ, ಕೃಷಿ ಕಾರ್ಯ, ರಖಂ ವ್ಯವಹಾರದವರಿಗೆ ಉತ್ತಮ ಲಾಭವಿದೆ, ಸ್ತ್ರೀ ನಿಮಿತ್ತ ನ್ಯಾಯಾಲಯದ ದರ್ಶನವಾದೀತು, ಅನಗತ್ಯವಾಗಿ ಹಣದ ಪೋಲಾದೀತು. ವಿದ್ಯಾರ್ಥಿಗಳಿಗೆ ಯಶೋಭಿವೃದ್ಧಿ ಇದೆ.
ಕುಂಭರಾಶಿ
ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕಲಿದೆ, ವಿಮೆ, ಕಮಿಶನ್ ವ್ಯವಹಾರ ಕಠಿಣ ತರದ ದುಡಿಮೆ ಇತ್ಯಾದಿಗಳವರಿಗೆ ಹೆಚ್ಚಿನ ಲಾಭವು ಇರದು, ಸ್ತ್ರೀಗೆ ಆರೋಗ್ಯದಲ್ಲಿ ಏರುಪೇರು.ಪರಸ್ಥಳ ವಾಸ, ಹಣದ ಅಡಚಣೆ, ಅಪಜಯ, ಋಣಭಾದೆ.
ಮೀನರಾಶಿ
ಸಣ್ಣಪುಟ್ಟ ಅಡಚಣೆಗಳಿಂದಾಗಿ ಕೈಗೊಂಡ ಕಾರ್ಯಗಳು ವಿಳಂಬವಾದೀತು, ಶತ್ರುಬಾಧೆ, ವ್ಯವಹಾರದಲ್ಲಿ ಅಲ್ಪ ಲಾಭ, ಬಂಧುವರ್ಗದವರ ಸಹಾಯ ಯಾಚನೆ, ಸಾಮಾಜಿಕ ಹಾಗೂ ದೇವತಾ ಕಾರ್ಯಗಳು ನಿಮ್ಮಿಂದ ಜರಗಲಿವೆ, ಶುಭವಿದೆ.ಬಂಧುಗಳ ಭೇಟಿ, ಮನಶಾಂತಿ, ಗುರು ಹಿರಿಯರಲ್ಲಿ ಭಕ್ತಿ.