ನಿತ್ಯಭವಿಷ್ಯ : 05-10-2020

0

ಮೇಷರಾಶಿ
ಉದ್ಯೋಗದಲ್ಲಿ ವರ್ಗಾವಣೆ, ಪರಸ್ಥಳ ವಾಸ, ಶರೀರದಲ್ಲಿ ಆತಂಕ, ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಸಾಂಸಾರಿಕವಾಗಿ ಸುಖ, ಸಂತೋಷಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣಲಿವೆ. ಯಾವುದಕ್ಕೂ ಹೊಂದಾಣಿಕೆಯು ಅಗತ್ಯವಿದೆ. ನಿಮ್ಮ ಮನೆತನದ ಹಿರಿಯ ವ್ಯಕ್ತಿಯೊಂದಿಗೆ ಸಲಹೆಗಳನ್ನು ಕೇಳಿರಿ.

ವೃಷಭರಾಶಿ
ಕಠಿಣ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಮುನ್ನಡೆವ ಅಗತ್ಯವಿದೆ. ಕೆಲಸ ಕಾರ್ಯಗಳಿಗೆ ಅಡ್ಡಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಹಿತ ಶತ್ರುಗಳ ನಡೆನುಡಿ ಗಮನಿಸುತ್ತಾ ಇರಬೇಕು. ಹಳೇ ಮಿತ್ರರ ಭೇಟಿ ಸಂತೋಷಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ಮಿಥುನರಾಶಿ
ಆಪ್ತರೊಡನೆ ಮಾತುಕತೆ, ವಿದ್ಯಾರ್ಥಿಗಳಿಗೆ ತೊಂದರೆ, ಪರಿಶ್ರಮಕ್ಕೆ ತಕ್ಕ ಫಲ, ನಿಮ್ಮ ಕನಸು ನನಸಾಗುವ ದಿನ. ಉತ್ತಮ ಗುರುಬಲದ ನಿಮಗೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಬುನಾದಿ ಹಾಕಬಹುದು. ಕಾರ್ಮಿಕ ವರ್ಗದವರಿಗೆ ಭಡ್ತಿಯ ಸೂಚನೆ ತಂದೀತು. ಸಮಾಧಾನದಿಂದ ಕಳೆಯುವ ದಿನಗಳಾಗಲಿವೆ. ಶುಭವಿದೆ.

ಕಟಕರಾಶಿ
ಕಾರ್ಯನಿಮಿತ್ತ ಸಂಚಾರವು ಕೂಡಿ ಬಂದೀತು. ಕುಟುಂಬದಲ್ಲಿ ಕಲಹ, ನಿಮ್ಮ ಒಳ್ಳೆಯತನ ದುರುಪಯೋಗವಾಗಬಾರದು, ಮುಖ್ಯ ಕೆಲಸಗಳು ಅಂತಿಮ ಹಂತಕ್ಕೆ ಬರಲಿದೆ. ಲಾಭ ಸ್ಥಾನದ ಕೇತುವಿನಿಂದಾಗಿ ಅನಿರೀಕ್ಷಿತವಾಗಿ ಲಾಭ ಪಡೆಯುವಿರಿ. ಮಕ್ಕಳ ಶ್ರೇಯೋಭಿವೃದ್ಧಿಯು ತೋರಿ ಬಂದೀತು. ಮನಸ್ಸು ಸ್ವತ್ಛಂದವಾಗಿಟ್ಟುಕೊಳ್ಳಿರಿ.

ಸಿಂಹರಾಶಿ
ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ. ಹಲವು ದಿನಗಳಿಂದ ಚಿಂತೆಯ ಗೂಡಾದಿದ್ದ ನೀವು ಇಂದು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಿರಿ. ಹಲವು ಕಾಲದಿಂದ ನನೆಗುದಿಗೆ ಬಿದ್ದಿದ ಕಾರ್ಯಕ್ಕೆ ಸ್ವಲ್ಪ ಚಾಲನೆಯು ದೊರಕಲಿದೆ.

ಕನ್ಯಾರಾಶಿ
ಮಂಗಲಕಾರ್ಯದ ಬಗ್ಗೆ ಆಲೋಚಿಸಿರುವಿರಿ. ಆಗಿಯೇ ತಿರುವುದು. ಮನೆಯಲ್ಲಿ ಸಂಭ್ರಮ ಹಾಗೂ ಸಂತಸದ ವಾತಾವರಣ. ಅಧಿಕ ಖರ್ಚು, ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಅನಾರೋಗ್ಯ, ಬದುಕಿಗೆ ಉತ್ತಮ ತಿರುವು, ಬಂಧು ಮಿತ್ರರಲ್ಲಿ ಆತ್ಮೀಯತೆ. ಕೆಟ್ಟ ವ್ಯಸನದ ಮಿತ್ರರ ಚಾಳಿಯಿಂದ ನೀವು ಜೀವನವನ್ನು ಕಳೆದು ಕೊಂಡೀರಾ ಜೋಕೆ.

ತುಲಾರಾಶಿ
ಏನೂ ಏರುಪೇರು ಇಲ್ಲದೆ ಸಾಮಾನ್ಯರಂತೆ ದಿನ ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿವಹಿಸಿ, ಮಧ್ಯಸ್ಥಿಕೆ ವ್ಯವಹಾರದಲ್ಲಿ ಎಚ್ಚರವಹಿಸಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಆರ್ಥಿಕ ರಂಗದಲ್ಲಿ ಸ್ವಲ್ಪ ಏಳಿಗೆ ಕಂಡು ಬಂದೀತು. ಗೃಹದಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಹಕಾರವಿದ್ದು ತುಸು ನೆಮ್ಮದಿ ದೊರಕೀತು.

ವೃಶ್ಚಿಕರಾಶಿ
ಉತ್ತಮ ಗುರುಬಲವಿರುವುದರಿಂದ ಕೈಹಾಕಿದ ಕೆಲಸದಲ್ಲಿ ಜಯ ಸಾಧಿಸುವಿರಿ. ಆರೋಗ್ಯದಲ್ಲಿ ಏರುಪೇರು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಮಾಧಾನ ಮೂಡಿ ಬಂದೀತು. ಆದರೂ ಆರೋಗ್ಯದಲ್ಲಿ ಜಾಗ್ರತೆ ಮಾಡುವುದು.

ಧನಸುರಾಶಿ
ವೃತ್ತಿರಂಗದಲ್ಲಿ ಏರಿಳಿತ ಕಂಡು ಬಂದರೂ ಸಮಾಧಾನವಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು, ದಾಂಪತ್ಯದಲ್ಲಿ ಆಂತರಿಕ ಸಮಸ್ಯೆ, ಮನಕ್ಲೇಷ, ವಿರೋಧಿಗಳಿಂದ ಕುತಂತ್ರ, ಆದಾಯ ಕಡಿಮೆ ಖರ್ಚು ಜಾಸ್ತಿ. ಬೇರೊಂದೂರಿಗೆ ವರ್ಗಾವಣೆ ಇದ್ದೀತು. ಉಪೇಕ್ಷೆ ಮಾಡದಿರಿ. ಮುಂದೆ ಒಳ್ಳೆಯದಿದೆ. ಮಾವನ ಮನೆಯಿಂದ ಒಳ್ಳೆಯ ಹಿತನುಡಿಗಳ ಲಾಭ ಸಿಕ್ಕೀತು.

ಮಕರರಾಶಿ
ಮನೆಯಲ್ಲಿ ಮಕ್ಕಳ ಕಿರಿಕಿರಿಯಿಂದ, ಸಿಟ್ಟು ಬಂದೀತು. ತಾಳ್ಮೆ ಅಗತ್ಯವಿದೆ. ಮಹಿಳೆಯರಿಗೆ ವಸ್ತ್ರಾಭರಣ ಖರೀದಿ ಯೋಗ, ಕಾರ್ಮಿಕ ವರ್ಗದಿಂದ ಸಹಾಯ, ರಫ್ತು ಮಾರಾಟಗಾರರಿಗೆ ಲಾಭ. ಕಾರ್ಯರಂಗದಲ್ಲಿ ಅನ್ಯ ರಿಂದ ಉಪಟಳ ಕಂಡು ಬಂದೀತು. ವೃತ್ತಿಯ ಬೇಟೆಯಲ್ಲಿರುವವರಿಗೆ ಮನಸ್ಸಿಗೆ ಸಮಾಧಾನ ತರುವ ಉದ್ಯೋಗ ಸಿಗಲಿದೆ.

ಕುಂಭರಾಶಿ
ಪ್ರಚಾರ ಸಭೆಗಳಲ್ಲಿ ಭಾಗಿ, ಸಲ್ಲದ ಅಪವಾದ, ತಾಳ್ಮೆ ಅಗತ್ಯ, ಅನಾರೋಗ್ಯ, ದೂರ ಪ್ರಯಾಣ, ಸದಾ ತಿರುಗಾಟ. ಕಾರ್ಯಗತಿಯಲ್ಲಿ ಏಳಿಗೆ ಕಂಡು ಬರಲಿದೆ. ಉತ್ತಮ ದೈವಾನುಗ್ರಹದಿಂದ ನಿಮ್ಮಣಿಕೆಯ ಕಾರ್ಯಗಳೆಲ್ಲಾ ಸಿದ್ದಿಸಲಿವೆ. ಆರ್ಥಿಕವಾಗಿ ಏನೂ ಚಿಂತೆ ಇರದು. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು.

ಮೀನರಾಶಿ
ನೂತನ ಜಾಗದ, ಯಾ ವಾಹನ ಖರೀದಿಯಿಂದ ಸಂತಸ. ಅಮೂಲ್ಯ ವಸ್ತುಗಳ ಖರೀದಿ, ಹಳೆಯ ಸ್ನೇಹಿತರ ಭೇಟಿ, ಅನ್ಯರಲ್ಲಿ ವೈಮನಸ್ಸು, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಶತ್ರುಬಾಧೆ. ಮಕ್ಕಳ ಅಭಿವೃದ್ಧಿ ಕಂಡು ಸಂತಸವಾದೀತು. ಮಕ್ಕಳ ನೆಂಟಸ್ಥಿಕೆಯ ವಿಚಾರದಲ್ಲಿ ಸ್ವಲ್ಪ ವಿಚಾರಿಸಿ ಮುನ್ನಡೆಯಿರಿ. ಸಂಚಾರದಿಂದ ಸಮಾಧಾನವಿದ್ದೀತು.

Leave A Reply

Your email address will not be published.