ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 30-07-2020

ನಿತ್ಯಭವಿಷ್ಯ : 30-07-2020

- Advertisement -

ಮೇಷರಾಶಿ
ಉದ್ಯೋಗಾವಕಾಶ ಪ್ರಾಪ್ತಿ, ಕೆಲಸಗಳಿಗೆ ಕಾರ್ಮಿಕರು ದೊರೆಯುವುದು, ವ್ಯಾಪಾರೋದ್ಯಮದಲ್ಲಿ ಅನುಕೂಲ, ಕ್ರಯ ವಿಕ್ರಯಗಳಲ್ಲಿ ಲಾಭಕರವಾದ ಆದಾಯ ವಿರುತ್ತದೆ. ಆರ್ಥಿಕವಾಗಿ ದಿನದಿಂದ ದಿನೇ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೂಡಲಿದೆ. ವಿದ್ಯಾರ್ಥಿಗಳು ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ಬಂಧುಗಳಿಂದ ಸಹಕಾರ, ಮಕ್ಕಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭರಾಶಿ
ಉದ್ಯೋಗಸ್ಥರಿಗೆ ಅನುಕೂಲ, ಶುಭಮಂಗಲ ಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಧನವ್ಯಯವಾದೀತು. ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆಯು ಕಂಕಣಬಲಕ್ಕೆ ಪೂರಕವಾದೀತು. ಎಲ್ಲಾ ವಿಚಾರದಲ್ಲಿ ಅಡಚಣೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ಮುನ್ನಡೆಯಿರಿ. ತಂದೆಯ ಸ್ನೇಹಿತರಿಂದ ಸಹಾಯ, ಹಣಕಾಸು ಅನುಕೂಲ, ಸರ್ಕಾರಿ ಉದ್ಯೋಗಸ್ಥರಿಗೆ ಒತ್ತಡ, ಉದ್ಯೋಗದಲ್ಲಿ ಬಡ್ತಿ.

ಮಿಥುನರಾಶಿ
ಸ್ಥಿರಾಸ್ತಿ ಖರೀದಿಗೆ ಅನುಕೂಲ, ಯಾವುದೇ ಕೆಲಸಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ದೈಹಿಕವಾಗಿ, ಆರ್ಥಿಕವಾಗಿ ಪರಿಸ್ಥಿತಿಯನ್ನು ಚೆನ್ನಾಗಿ ವಿಮರ್ಶಿಸಿ ಮುಂದುವರಿಯುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆತಂಕವಿದೆ. ವಾಹನ ಖರೀದಿಗೆ ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಒಳ್ಳೆಯ ಹೆಸರು, ಅಧಿಕ ತಿರುಗಾಟ, ಸಾಲ ಬಾಧೆಯಿಂದ ಮುಕ್ತಿ ಸಾಧ್ಯತೆ.

ಕಟಕರಾಶಿ
ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಯಿಂದ ತೊಂದರೆ, ಸಪ್ತಮದ ಶನಿಯು ಆರ್ಥಿಕವಾಗಿ ನಾನಾ ರೀತಿಯಲ್ಲಿ ಗೊಂದಲಕ್ಕೆ ಕಾರಣನಾದಾನು. ದೈಹಿಕವಾಗಿ ಆಗಾಗ ಸಮಸ್ಯೆಗಳು ತೋರಿ ಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಕಿರುಕುಳ ವಿರುತ್ತದೆ. ಸ್ವಯಂಕೃತ್ಯಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ನೆರೆಹೊರೆಯವರಿಂದ ಕಿರಿಕಿರಿ, ನೆಮ್ಮದಿಗೆ ಭಂಗ.

ಸಿಂಹರಾಶಿ
ವ್ಯಾಪಾರಸ್ಥರಿಗೆ ಅನುಕೂಲ, ದೈವಾನುಗ್ರಹ ಉತ್ತಮವಿದ್ದು ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಪ್ರಮೋಶನ್‌ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲ ಸಂಪೂರ್ಣ ಫ‌ಲವನ್ನು ಪಡೆದು ಸಂತಸ ಹೊಂದಿಯಾರು. ಗುತ್ತಿಗೆದಾರರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಶುಭ ಫಲ, ಮನೆಯಲ್ಲಿ ಅಶಾಂತಿ ವಾತಾವರಣ, ಮನಸ್ಸಿಗೆ ಬೇಸರ.

ಕನ್ಯಾರಾಶಿ
ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪ್ರಾಪ್ತಿ, ಆಹಾರ ಸೇವನೆಯಲ್ಲಿ, ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕೋರ್ಟು ಕಚೇರಿಯ ಕೆಲಸಕಾರ್ಯಗಳು ಹಿನ್ನಡೆಯನ್ನು ಅನುಭವಿಸುವುದು. ವೃತ್ತಿರಂಗದಲ್ಲಿ ಕೆಲಸಕಾರ್ಯಗಳು ಅಡೆತಡೆಗಳಿಂದ ನಡೆಯಲಿದೆ. ಜಾಗ್ರತೆ ಇರಲಿ. ಅಧಿಕವಾದ ಉಷ್ಣ ಬಾಧೆ, ತಲೆ ನೋವು, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಘ್ನ.

ತುಲಾರಾಶಿ
ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ವೃತ್ತಿರಂಗದಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಿದೆ. ಕುಟುಂಬಿಕವಾಗಿ ಬಂಧುಮಿತ್ರರು ಸಹಕಾರವನ್ನು ನೀಡಲಿದ್ದಾರೆ. ಗೃಹ ನಿರ್ಮಾಣ ಕಾರ್ಯಗಳಿಗೆ ಅವಸರಿಸದಿರಿ. ಶ್ರೀದೇವತಾರಾಧನೆಗಾಗಿ ಖರ್ಚು ಬರಲಿದೆ. ಇತರರ ಸಹವಾಸದ ಬಗ್ಗೆ ಜಾಗ್ರತೆ ಮಾಡಿರಿ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ಚಿಂತೆಯಿಂದ ನಿದ್ರಾಭಂಗ.

ವೃಶ್ಚಿಕರಾಶಿ
ಕಂಟ್ರಾಕ್ಟ್ ವೃತ್ತಿಯವರಿಗೆ ಲಾಭಕರವಾದ ಆದಾಯ ಸಿಗಲಿದೆ. ನಿರುದ್ಯೋಗಿಗಳು ಹಲವಾರು, ಅವಕಾಶವನ್ನು ಪಡೆಯಲಿದ್ದಾರೆ. ಯಾವುದೇ ಕೆಲಸಕಾರ್ಯಗಳಿಗೆ ಅವಸರಿಸದೆ ಯೋಚಿಸಿ, ಚಿಂತಿಸಿ ಮುನ್ನಡೆಯುವುದು ಉತ್ತಮ. ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ, ಬಂಧುಗಳಿಂದ ಸಮಸ್ಯೆ, ಸರ್ಕಾರಿ ಉದ್ಯೋಗಸ್ಥರಿಗೆ ಲಾಭ, ಮಕ್ಕಳಲ್ಲಿ ಮನಃಸ್ತಾಪ, ಸಾಲಬಾಧೆಯಿಂದ ಮಾನಹಾನಿ.

ಧನಸ್ಸುರಾಶಿ
ವ್ಯಾಪಾರ, ವ್ಯವಹಾರದಲ್ಲಿ ತೀವ್ರತರದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಮನೆ ಬದಲಾವಣೆಯು ಸಮಾಧಾನಕರವಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಯೋಚಿಸಬೇಕಾದೀತು. ವಾಹನ ಚಾಲನೆಯ ಬಗ್ಗೆ ಜಾಗ್ರತೆ. ದಾಂಪತ್ಯದಲ್ಲಿ ಮನಃಸ್ತಾಪ, ಪ್ರೇಮಿಗಳಿಗೆ ತೊಂದರೆ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗದಲ್ಲಿ ಕಳೆದುಕೊಳ್ಳುವ ಸಾಧ್ಯತೆ.

ಮಕರರಾಶಿ
ಸಾಲಗಾರರಿಂದ ಮುಕ್ತಿ ಸಾಧ್ಯತೆ, ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳೊಂದಿಗೆ ಮನಃಸ್ತಾಪ. ದೇಹಾರೋಗ್ಯವು ಉತ್ತಮವಾಗಿರುತ್ತದೆ. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ತೋರಿ ಬರುತ್ತದೆ. ಅನಿರೀಕ್ಷಿತ ಅತಿಥಿಗಳ ಆಗಮನವು ಸಂತಸ ತರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು.

ಕುಂಭರಾಶಿ
ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಸಂಸಾರದಲ್ಲಿ ಅಹಂಭಾವ, ದಾಂಪತ್ಯದಲ್ಲಿ ವಿರಸ, ವಿಶ್ವಾಸಿಗಳು ನಿಮ್ಮ ದುರುಪಯೋಗ ಮಾಡಿಯಾರು. ಆಗಾಗ ಆರ್ಥಿಕ ಸ್ಥಿತಿಯು ಆತಂಕಕ್ಕೆ ಕಾರಣವಾದೀತು. ಶುಭಮಂಗಲ ಕೆಲಸಗಳಿಗೆ ಅಡಚಣೆಗಳು ತೋರಿ ಬಂದಾವು. ಬಂಧುಮಿತ್ರರಿಂದ ಅಪಹಾಸ್ಯಕ್ಕೆ ಗುರಿಯಾಗದಿರಿ. ಉದ್ಯೋಗದಲ್ಲಿ ಬಡ್ತಿ.

ಮೀನರಾಶಿ
ಅಕ್ರಮ ಕಾರ್ಯಗಳಿಂದ ತೊಂದರೆ, ಎಲ್ಲವನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಿರಿ. ಅನಿರೀಕ್ಷಿತವಾಗಿ ಧನಾಗಮನವಿದ್ದು ಕಾರ್ಯಸಾಧನೆಗೆ ಅನುಕೂಲವಾದೀತು. ಕೆಲಸಕಾರ್ಯಗಳು ಹಿರಿಯರ ಸೂಕ್ತ ಸಲಹೆಗಳಿಂದ ಅನುಕೂಲವಾಗಲಿವೆ. ಆರೋಗ್ಯದಲ್ಲಿ ಜಾಗ್ರತೆ. ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಸ್ನೇಹಿತರಲ್ಲಿ ವೈಮನಸ್ಸು, ಸಂಗಾತಿ ದೂರವಾಗುವಷ್ಟು ಕಲಹ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular