ಟಿಕ್ ಟಾಕ್ ಸ್ಟಾರ್ ಗಳಿಗೆ ಹಣ ನೀಡುತ್ತೆ ಫೇಸ್ ಬುಕ್ !

0

ಭಾರತ – ನಡುವಿನ ಸಂಘರ್ಷದ ಬೆನ್ನಲ್ಲೇ ದೇಶದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದೆ. ಲಕ್ಷಾಂತರ ಮಂದಿ ಟಿಕ್ ಟಾಕ್ ಬಳಕೆದಾರರು ಬೇಸರ ಗೊಂಡಿದ್ದಾರೆ. ಆದರೆ ಟಿಕ್ ಟಾಕ್ ಇಲ್ಲದ ಬೇಸರವನ್ನು ತುಂಬಲು ಫೇಸ್ ಬುಕ್ ಮುಂದಾಗಿದ್ದು, ಟಿಕ್ ಟಾಕ್ ಸ್ಟಾರ್ ಗಳಿಗೆ ದುಬಾರಿ ಹಣ ನೀಡೋದಕ್ಕೆ ಮುಂದಾಗಿದೆ.

ಚೀನಾ ಮೂಲದ ಟಿಕ್ ಟಾಕ್ ದೇಶದಲ್ಲಿ ಸಖತ್ ಸೌಂಡ್ ಮಾಡಿತ್ತು. ಅದೆಷ್ಟೋ ಮಂದಿ ರಾತ್ರೋ ರಾತ್ರಿ ಸ್ಟಾರ್ ಗಳಾಗಿ ಹೊರ ಹೊಮ್ಮಿದ್ರು. ಆದ್ರೆ ಟಿಕ್ ಟಾಕ್ ಬ್ಯಾಸ್ ಆಗಿ ತಿಂಗಳುಗಳೇ ಕಳೆದಿದೆ. ಸದಾ ಕಾಲ ಟಿಕ್ ಟಾಕ್ ನಲ್ಲಿ ಬ್ಯುಸಿಯಾಗಿರುತ್ತಿದ್ದವರೆಲ್ಲಾ ಬೇಸರದಲ್ಲಿಯೇ ದಿನ ಕಳೆಯುತ್ತಿದ್ದಾರೆ. ಅದ್ರಲ್ಲೂ ಹಲವರಂತೂ ಲಕ್ಷಾಂತರ ಮಂದಿ ಫ್ಯಾನ್ಸ್, ಫಾಲೋವರ್ಸ್ ಗಳನ್ನು ಹೊಂದಿದ್ದರು.

ಟಿಕ್ ಟಾಕ್ ಇಲ್ಲದ ಬೇಸರವನ್ನು ದೂರ ಮಾಡಲು ಸಾಮಾಜಿಕ ಜಾಲತಾಣ ಫೇಸ್ ಬುಕ್ ಮುಂದಾಗಿದೆ. ಈಗಾಗಲೇ ಟಿಕ್ ಟಾಕ್ ಹೋಲುವ ವಿಡಿಯೋ ಫೀಚರ್ಸ್ ಕಂಪೆನೆಯೊಂದನ್ನು ಆರಂಭಿಸಿದ್ದು, ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋ ಫೀಚರ್ಸ್ ಆಫ್ ಕಾರ್ಯಾರಂಭ ಮಾಡಿದೆ.

ರೀಲ್ಸ್ ನ್ನು ಭಾರತದಲ್ಲಿ ಪ್ರಖ್ಯಾತಿಗೊಳಿಸುವ ನಿಟ್ಟಿನಲ್ಲಿ ಫೇಸ್ ಬುಕ್ ಟಿಕ್ ಟಾಕ್ ಸ್ಟಾರ್ ಗಳ ಹುಡುಕಾಟ ನಡೆಸುತ್ತಿದೆ. ಅಲ್ಲದೇ ಟಿಕ್ ಟಾಕ್ ಬಳಕೆದಾರರಿಗೆ ರೀಲ್ಸ್ ಬಳಸುವಂತೆ ಫೇಸ್ ಬುಕ್ ಈಗಾಗಲೇ ಸಲಹೆ ನೀಡುತ್ತಿದೆ.

ಅಷ್ಟೇ ಯಾಕೆ ಟಿಕ್ ಟಾಕ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದವರಿಗೆ ಹಾಗೂ ಸ್ಟಾರ್ ಗಳಾಗಿ ಮೆರೆದವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಲು ಕೂಡ ಫೇಸ್ ಬುಕ್ ಮುಂದಾಗಿದೆ ಎನ್ನಲಾಗುತ್ತಿದೆ.

ಟಿಕ್ ಟಾಕ್ ಭಾರತ ಮಾತ್ರವಲ್ಲದೇ ವಿಶ್ವದ ನಾನಾ ರಾಷ್ಟ್ರಗಳಲ್ಲಿಯೂ ಬ್ಯಾನ್ ಆಗುವ ಸಾಧ್ಯತೆಯಿದೆ. ಟಿಕ್ ಟಾಕ್ ಮರೆಯಾಗುತ್ತಿದ್ದಂತೆಯೇ ಎಲ್ಲಾ ಲಾಭವನ್ನು ತನ್ನದಾಗಿಸಿಕೊಳ್ಳಲು ಫೇಸ್ ಬುಕ್ ಮಾಸ್ಟರ್ ಫ್ಲ್ಯಾನ್ ರೂಪಿಸಿದೆ.

Leave A Reply

Your email address will not be published.