ಮೇಷರಾಶಿ
ಆರ್ಥಿಕ ಸಮಸ್ಯೆಗಳು ಹೆಚ್ಚಾಗುವುದು, ಆಸೆಗಳಿಂದ ದೂರ ಇರುವ ಯೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ರಾಜಕೀಯ ರಂಗದವರಿಗೆ ಸ್ವಲ್ಪ ಏರುಪೇರು ಕಂಡು ಬಂದು ಅಸಮಾಧಾನವಾದೀತು. ರೈತ ವರ್ಗಕ್ಕೆ ತುಸು ತಲೆಬಿಸಿಯಾಗುವ ಪರಿಸ್ಥಿತಿಯು ಎದುರಾದೀತು. ಸಾಮಾನ್ಯ ವರ್ಗಕ್ಕೂ ಇದರ ಬಿಸಿ ತಟ್ಟಲಿದೆ.
ವೃಷಭರಾಶಿ
ಕೋರ್ಟು ಕಚೇರಿ ವಿಭಾಗದಲ್ಲಿ ನಿಮಗೆ ಒಳ್ಳೆಯ ಸೂಚನೆ ಕಂಡು ಬರಲಿದೆ. ಕೆಲಸಗಳಲ್ಲಿ ಹಿನ್ನಡೆ, ಒತ್ತಡ ಮತ್ತು ನಿದ್ರಾಭಂಗ, ಅನಾರೋಗ್ಯದಿಂದ ಆತಂಕ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ. ಆರೋಗ್ಯದ ಹಿತದೃಷ್ಟಿಯಿಂದ ಮನಸ್ಸನ್ನು ಶಾಂತಗೊಳಿಸುವುದು ಅಗತ್ಯ ವಿರುತ್ತದೆ. ಆದಷ್ಟು ಕುಲದೇವತಾ ಆರಾಧನೆಗೈಯುವುದು.

ಮಿಥುನರಾಶಿ
ನೀವು ಭಾವುಕರಾಗಿ ವರ್ತಿಸಬೇಡಿರಿ. ಮಿತ್ರರಿಂದ ಭಾವನೆಗಳಿಗೆ ಪೆಟ್ಟು, ಪರಸ್ಪರ ದೂರ ಆಗುವ ಸಂದರ್ಭ, ಆರ್ಥಿಕ ಹಿನ್ನಡೆ. ಆಫೀಸಿನಲ್ಲೂ ಮನೆಯಲ್ಲೂ ಒಳ್ಳೆಯ ವಾತಾವಾರಣವು ಇರುವುದು. ಅನುಭವಿಸುವಿರಿ. ಆರೋಗ್ಯದಲ್ಲೂ ಒಳ್ಳೆಯ ಸುಧಾರಣೆ ಕಂಡು ಬಂದು ಸಮಾಧಾನವಾದೀತು.
ಕಟಕರಾಶಿ
ದ್ವಿಮುಖ ವರ್ತನೆಯನ್ನು ಸಾಧಿಸಬೇಡಿರಿ. ಅನಾರೋಗ್ಯ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಐಷಾರಾಮಿ ಜೀವನದ ಆಲೋಚನೆಗಳಿಗೆ ಹಿನ್ನಡೆ. ನಿಮ್ಮ ಮನಸ್ಸಿಗೆ ಸರಿ ಅನ್ನಿಸಿದನ್ನು ನಿಸ್ಸಂಕೋಚವಾಗಿ ಮಾಡಿರಿ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಚಿಂತೆಗೈಯುವುದು ಬೇಡ. ಕಿರು ಸಂಚಾರವು ಇದೆ.
ಸಿಂಹರಾಶಿ
ಸಂತಾನದ ಅಭಿವೃದ್ಧಿಯು ಕಂಡು ಬಂದೀತು. ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಪ್ರಗತಿ ಕಾಣದೆ ಆತಂಕ, ಗೃಹ ಬದಲಾವಣೆ, ಸ್ಥಳ ಬದಲಾವಣೆ. ಸಂತೋಷದಿಂದ ಅನುಭವಿಸಿ ಆನಂದಿಸಿರಿ. ಶಾಶ್ವತ ಪರಿಹಾರದ ಬಗ್ಗೆ ಆಲೋಚಿಸುವುದು ಬೇಡ. ಮುಂದೆ ಆ ದಾರಿಯು ನಿಮಗೆ ಗೋಚರಿಸಲಿದೆ.

ಕನ್ಯಾರಾಶಿ
ಕನ್ಯಾ ಪಿತೃಗಳಿಗೆ ಸುಲಭದಲ್ಲೇ ನೆಂಟಸ್ತಿಕೆಯು ಒದಗಿ ಬರಲಿದೆ. ನಷ್ಟಗಳು ಅಧಿಕ, ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಹಿನ್ನಡೆ, ದಾಯದಿ ಕಲಹಗಳು. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಮನೆಯಲ್ಲಿ ತುಂಬಾ ಬೇಸರವಾಗುವ ಪರಿಸ್ಥಿತಿ ಇರುತ್ತದೆ.
ತುಲಾರಾಶಿ
ಕಾರ್ಮಿಕ ವರ್ಗದವರಿಗೆ ಒಳ್ಳೆಯ ಉತ್ಪತ್ತಿಯು ಕಂಡು ಬರುವುದು. ಅನಾರೋಗ್ಯದಿಂದ ಉದ್ಯೋಗಕ್ಕೆ ರಜೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ಸ್ವಂತ ವ್ಯಾಪಾರದಲ್ಲಿ ಭಾದೆ. ಸಂಘ ಜೀವಿಗಳಿಗೆ ಸಂತೋಷದ ದಿನಗಳಿವು. ಮಕ್ಕಳಿಂದ ಸಂತೋಷ ಹಾಗೂ ಆರ್ಥಿಕ ನೆರವು ಕೂಡಿ ಬರುವುದು ಶುಭವಿದೆ.

ವೃಶ್ಚಿಕರಾಶಿ
ಸಂಗಾತಿಯ ಅಹಂಭಾವ, ಶತ್ರುವಿನ ಕಾಟ, ನಿದ್ರಾಭಂಗ ಸಾಧ್ಯತೆ. ಭಾವುಕರಾಗುವುದು ಬೇಡ. ಇತರರ ಭಾವನೆಗಳಿಗೆ ಸ್ಪಂದಿಸಿರಿ. ನಿಮ್ಮ ಆತ್ಮೀಯವಾಗಿ ಬೆರೆಯುವ ಗುಣಕ್ಕೆ ಬೇರೆಯವರು ಮತ್ಸರ ಪಟ್ಟಾರು. ಮಿತ್ರ ವರ್ಗದವರಿಗೆ ಸಮ್ಮಾನವು ನಡೆದೀತು.
ಧನುರಾಶಿ
ಮಕ್ಕಳಿಂದ ನಿಮಗೆ ಸಮಾಧಾನವು ದೊರಕಲಿದೆ. ಮಕ್ಕಳೊಂದಿಗೆ ಮನಸ್ತಾಪ, ವೇದನೆ ಅನುಭವಿಸುವ ಸಂದರ್ಭ, ಲಾಭದಲ್ಲಿ ಕುಂಠಿತ. ಪತ್ನಿಯ ಬಗ್ಗೆ ಚಿಂತೆ ಸಲ್ಲದು. ವ್ಯಾವಹಾರಿಕವಾಗಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಿರಿ. ಉದ್ಯೋಗರಂಗದಲ್ಲಿ ಆತ್ಮೀಯರಿಂದ ಶ್ಲಾಘನೆ ದೊರಕೀತು.

ಮಕರರಾಶಿ
ಕುಂಬಾರರಿಗೆ ಗುಡಿ ಕೈಗಾರಿಕೆಯ ಹಾಗೂ ಚಿತ್ರೋದ್ಯಮದವರಿಗೆ ಇದು ತುಂಬಾ ಕಷ್ಟದ ಕಾಲವಾಗಿರುತ್ತದೆ. ಪ್ರೀತಿ-ಪ್ರೇಮದ ವಿಷಯಗಳಿಂದ ಕಲಹ, ಉದ್ಯೋಗ ಕಳೆದುಕೊಳ್ಳುವ ಭಯ, ಮಕ್ಕಳ ಭವಿಷ್ಯದ ಚಿಂತೆಗಳು, ಸಂತಾನದ ದೋಷಗಳು. ಆದರೂ ಮಕ್ಕಳಿಂದ ಸ್ವಲ್ಪ ಸಮಾಧಾನ ಕಾಣುವಂತಾದೀತು. ಗೃಹದಲ್ಲಿ ಸಂತಸವಿದೆ.
ಕುಂಭರಾಶಿ
ಚಂಚಲ ಚಿತ್ತದಿಂದ ಮನಸ್ಸನ್ನು ಹರಿ ಹಾಯಲು ಬಿಡಬೇಡಿರಿ. ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸಾಲ ದೊರೆಯುವ ಸಂಭವ ಕಡಿಮೆ, ವಿಪರೀತ ಧೈರ್ಯ ಮತ್ತು ಸಾಹಸ, ಅದೃಷ್ಟಹೀನ ಎನ್ನುವ ಭಾವನೆ. ನಿಮ್ಮ ಬುದ್ಧಿಯನ್ನು ಸ್ವಾಧೀನ ದಲ್ಲಿಟ್ಟುಕೊಳ್ಳಿರಿ. ಉದ್ವೇಗದ ವರ್ತನೆ ಬೇಡ. ಆಹಾರದಲ್ಲಿ ಏನೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಿರಿ.

ಮೀನರಾಶಿ
ನೆರೆಹೊರೆಯವರು ದೂರವಾಗುವ ಆತಂಕ, ಪ್ರಶಾಂತತೆಯ ವಾತಾವರಣ, ಕೋರ್ಟ್ ಕೇಸುಗಳಲ್ಲಿ ಜಯ, ಹಣಕಾಸಿನ ಚಿಂತೆಗಳು ಅಧಿಕ. ನಿಮ್ಮ ಮನೆಯಲ್ಲಿ ಹಿರಿಯರಿಗೆ ಸಂಭ್ರಮದ ವಾರ್ತೆ ಬಂದೀತು. ಅನೇಕ ದಿನಗಳಿಂದ ನಿರೀಕ್ಷಿಸುತ್ತಿದ್ದ ಶುಭವಾರ್ತೆ ಕೇಳಿ ಬರಲಿದೆ. ಸಹೋದ್ಯೋಗಿಗಳಿಂದ ಕಿರುಕುಳ ಹಾಗೂ ಬೇಸರ ಕಂಡು ಬಂದೀತು.