ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ ; 09-08-2020

ನಿತ್ಯಭವಿಷ್ಯ ; 09-08-2020

- Advertisement -

ಮೇಷರಾಶಿ
ಅಧಿಕಾರಿಗಳಲ್ಲಿ ಕಲಹ, ಸಂದೇಹದ ಗುಣ, ಧನ ಸಂಗ್ರಹದಿಂದ ಆರ್ಥಿಕ ಪರಿಸ್ಥಿತಿಯು ಅಭಿವೃದ್ಧಿಕರವಾಗಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧದ ಬಗ್ಗೆ ಆಸಕ್ತಿ ವಹಿಸುವಂತಾದೀತು. ಕಾರ್ಯಕ್ಷೇತ್ರದಲ್ಲಿ ಸಮಾಧಾನ ವಿರುತ್ತದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ, ಅನುಮಾನದ ರೋಗ, ಶತ್ರುಗಳಿಂದ ತೊಂದರೆ, ಕುಟುಂಬದಲ್ಲಿ ಕಲಹ.

ವೃಷಭರಾಶಿ
ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ದೂರ ಪ್ರಯಾಣ, ಇಷ್ಟಾರ್ಥ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಧನಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಸ್ತ್ರಾಭರಣ ಕೊಳ್ಳುವ ಯೋಗ. ಕೋರ್ಟುಕಚೇರಿಯ ಕಾರ್ಯ ಭಾಗದಲ್ಲಿ ಗೆಲುವು ನಿಮ್ಮದಾಗಲಿದೆ. ಅವಿವಾಹಿತರಿಗೆ ಏಕಾಂಗಿತನದ ನೋವು ನೀಗಲಿದೆ. ಆರೋಗ್ಯದಲ್ಲಿ ಗಮನವಿರಲಿ.

ಮಿಥುನರಾಶಿ
ಮನಸ್ಸಿಗೆ ಸಮಾಧಾನ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿರಿ. ಆಗಾಗ ಏಕಾಂಗಿತನದ ಒತ್ತಡಗಳನ್ನೆಲ್ಲಾ ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುವ ಅವಕಾಶಗಳಿರುತ್ತವೆ. ಯತ್ನ ಕಾರ್ಯಗಳಲ್ಲಿ ವಿಘ್ನ, ಸಾಲಬಾದೆ ಮನಃಕ್ಲೇಷ, ಕುಟುಂಬದಲ್ಲಿ ಅಸೌಖ್ಯ, ಉದ್ಯೋಗದಲ್ಲಿ ಕಿರಿ-ಕಿರಿ, ಹಣದ ತೊಂದರೆ, ಮಿತ್ರರಲ್ಲಿ ದ್ವೇಷ.

ಕಟಕರಾಶಿ
ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ ನಿಂದನೆ, ವೃತ್ತಿರಂಗದ ಋಣ ನಿಮ್ಮನ್ನು ಆಗಾಗ ಸಹನೆಯಿಂದ ವರ್ತಿಸುವಂತೆ ಮಾಡಲಿದೆ. ಆಕಸ್ಮಿಕ ಧನವಿನಿಯೋಗದಲ್ಲಿ ನಷ್ಟವಾದೀತು. ಹಾಗೇ ಆರೋಗ್ಯದಲ್ಲಿ ಏರುಪೇರು ಕಾಣಲಿದೆ. ಹಿತೈಷಿಗಳಿಂದ ಹಿತವಚನವಿದೆ. ದುಷ್ಟಬುದ್ಧಿ ಅನಾರೋಗ್ಯ, ಅಧಿಕ ಧನವ್ಯಯ, ಪರಸ್ಥಳ ವಾಸ.

ಸಿಂಹರಾಶಿ
ಹೆಣ್ಣುಮಕ್ಕಳಿಗಾಗಿ ಅಧಿಕ ಖರ್ಚು, ಬೇರೆಯವರ ಬಗ್ಗೆ ನಿಂದನೆ, ಸಾಂಸಾರಿಕವಾಗಿ ನಿಮ್ಮ ಸಂಬಂಧಗಳು ಇನ್ನೂ ಗಟ್ಟಿಯಾಗಲಿವೆ. ವೃತ್ತಿರಂಗದಲ್ಲಿ ನಿಮ್ಮತನ ಕಾಯ್ದುಕೊಳ್ಳಿರಿ. ಮುಂದಿನ ಅಭಿವೃದ್ಧಿಗೆ ಪೂರಕವಾಗಲಿದೆ. ಬಂದ ಅವಕಾಶವನ್ನು ನಿರುದ್ಯೋಗಿಗಳು ಉಪಯೋಗಿಸಿಕೊಳ್ಳಿರಿ. ಅಪವಾದ ಮಾಡುವ ಬುದ್ಧಿ, ಉದ್ಯೋಗದಲ್ಲಿ ಅಲ್ಪ ಲಾಭ.

ಕನ್ಯಾರಾಶಿ
ಬಂಧು-ಮಿತ್ರರಿಂದ ಪ್ರಶಂಸೆ, ಉತ್ತಮ ಬುದ್ಧಿಶಕ್ತಿ, ಸಕಾಲಿಕ ಮಿತ್ರರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರುವುದೇ ಲೇಸು. ವೃತ್ತಿರಂಗದಲ್ಲಿ ಶ್ರಮಕ್ಕೆ ತಕ್ಕ ಫ‌ಲ ಸಿಗಲಿದೆ. ವರ್ಗಾವಣೆಯ ಸಂಭವವಿರುತ್ತದೆ. ವಿವಾಹ ಯೋಗ, ಸ್ಥಳ ಬದಲಾವಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ತುಲಾರಾಶಿ
ಹಿತಶತ್ರುಗಳಿಂದ ತೊಂದರೆ, ಕಲಹ ಯಾರನ್ನು ಹೆಚ್ಚಾಗಿ ನಂಬಬೇಡಿ, ಶರೀರದಲ್ಲಿ ಆಯಾಸ, ಅಧಿಕ ಖರ್ಚು ಅಪಕೀರ್ತಿ, ಹಿನ್ನಡೆ ಸಾಧಿಸಿದವರಿಗೆ ಅನಿರೀಕ್ಷಿತವಾಗಿ ಕಾರ್ಯಸಾಧನೆಯಾಗಲಿದೆ. ಉದ್ಯೋಗಿಗಳಿಗೆ ಸ್ಥಾನಪಲ್ಲಟ ಸಾಧ್ಯತೆ ಇದೆ. ಅಧಿಕಾರಿ ವರ್ಗಕ್ಕೆ ಹೆಚ್ಚಿನ ಜವಾಬ್ದಾರಿ ಮನಸ್ಸಿಗೆ ಕಿರಿಕಿರಿಯಾದೀತು. ದಿನಾಂತ್ಯ ಶುಭವಿದೆ. ಅಧರ್ಮಗಳಲ್ಲಿ ಆಸಕ್ತಿ.

ವೃಶ್ಚಿಕರಾಶಿ
ಋಣಭಾದೆ, ಮಾತಾ-ಪಿತೃಗಳನ್ನು ನಿಂದನೆ ಮಾಡುವಿರಿ, ದ್ರವ್ಯ ನಷ್ಟ, ಶತ್ರುಭಯ, ಪ್ರೇಮಿಗಳಿಗೆ ಸಮಯ ಕಳೆದುದ್ದೇ ಗೊತ್ತಾಗದು. ಆಕಸ್ಮಿಕ ಧನಲಾಭ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ, ಹೊಸ ಕಟ್ಟಡ, ಮನೆ ಖರೀದಿ, ನಿವೇಶನ ಲಾಭವೂ ಸಿಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ರೋಗಬಾಧೆ, ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಏರುಪೇರು.

ಧನಸ್ಸುರಾಶಿ
ಶ್ರಮಕ್ಕೆ ತಕ್ಕ ಫಲ, ಕುಟುಂಬ ಸದಸ್ಯರ ಬೆಂಬಲ, ಅಧಿಕಾರಿ ವರ್ಗದವರಿಗೆ ಮುನ್ನಡೆ ಹರುಷ ತರಲಿದೆ. ಎಲ್ಲಾ ವಿಚಾರದಲ್ಲಿ ಯೋಚಿಸಿ ಸಾವಧಾನವಾಗಿ ಮುನ್ನಡೆಯವುದೇ ಲೇಸು. ರಾಜಕೀಯ ಪುಢಾರಿಗಳಿಗೆ ಮನಸ್ಸಿಗೆ ಸಂತಸವಿದೆ. ಶುಭವಿದೆ. ನೂತನ ಉದ್ಯೋಗ ಪ್ರಾಪ್ತಿ, ದೂರ ಪ್ರಯಾಣ, ಅಧಿಕ ಖರ್ಚು, ತೀರ್ಥಕ್ಷೇತ್ರ ದರ್ಶನಕ್ಕೆ ತಯಾರಿ.

ಮಕರರಾಶಿ
ವ್ಯಾಪಾರದಲ್ಲಿ ದನಲಾಭ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಕ್ರೀಡಾ ಜಗತ್ತಿನಲ್ಲಿ ಅನಿರೀಕ್ಷಿತ ಯಶಸ್ಸು ಕಂಡು ಬರುವುದು. ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ತುಸು ಚೇತರಿಕೆಯ ಸಮಾಧಾನ ತರಲಿದೆ. ಕೃಷಿಕರು ಉತ್ಸಾಹಶೀಲರಾಗಿ ಮುನ್ನಡೆಗೆ ಸಾಧನೆ ಆಗುತ್ತದೆ. ಆರೋಗ್ಯ ಪ್ರಾಪ್ತಿ, ಶತ್ರುಗಳ ಸದೆಬಡೆಯುವವಿರಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಕುಂಭರಾಶಿ
ಆಕಸ್ಮಿಕ ಖರ್ಚು, ಮನಸ್ತಾಪ, ಕೃಷಿಕರಿಗೆ ಅಲ್ಪ ಲಾಭ, ಕಾರ್ಯಕ್ಷೇತ್ರದಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ಸಾಂಸಾರಿಕವಾಗಿ ಹಿತೈಷಿಗಳೇ ನಿಮಗೆ ಕಿರಿಕಿರಿ ತಂದಾರು. ವ್ಯಾಪಾರ, ವ್ಯವಹಾರದಲ್ಲಿ ತುಸು ಹೂಡಿಕೆಯು ಲಾಭಕರವಾಗಲಿದೆ. ಸ್ಥಗಿತ ಕಾರ್ಯಗಳು ಮುಂದುವರಿಕೆ, ಋಣಭಾದೆ, ನೀಚ ಜನರ ಸಹವಾಸ.

ಮೀನರಾಶಿ
ವಿರೋಧಿಗಳಿಂದ ತೊಂದರೆ, ಪತ್ನಿಗೆ ಅನಾರೋಗ್ಯ, ವೃತ್ತಿರಂಗದಲ್ಲಿ ನಿಮ್ಮತನವನ್ನು ಕಾಯ್ದುಕೊಂಡು ಮುನ್ನಡೆಯಿರಿ. ಆದಾಯದ ಮಾರ್ಗಸೂಚಿ ನಿಮ್ಮ ಮುಂದಿದೆ. ಆರಿಸಿಕೊಳ್ಳಿರಿ. ಲಾಭಾಂಶ ಪಡೆಯಿರಿ. ಧಾರ್ಮಿಕ ಕಾರ್ಯಗಳು ವಿಳಂಬಗತಿಯಲ್ಲಿ ನಡೆದೀತು. ಸಾಲ ಮಾಡುವ ಸಾಧ್ಯತೆ, ಮಿತ್ರರಿಂದ ತೊಂದರೆ, ಅಪಕೀರ್ತಿ, ಅನಗತ್ಯ ತಿರುಗಾಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular