ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 06-09-2020

ನಿತ್ಯಭವಿಷ್ಯ : 06-09-2020

- Advertisement -

ಮೇಷರಾಶಿ
ತಾಯಿಯಿಂದ ಲಾಭ, ನಿವೇಶನ ಪ್ರಾಪ್ತಿ, ಆರ್ಥಿಕವಾಗಿ ಅಭಿವದ್ಧಿ ಕಂಡು ಬಂದರೂ ಹೆಚ್ಚಿನ ಜಾಗ್ರತೆ ಮಾಡುವುದು ಒಳಿತು. ಇಷ್ಟ ಮಿತ್ರರ ಆಗಮನದಿಂದ ಸಂತಸ ಹಾಗೂ ಒಳ್ಳೆಯ ಸಲಹೆಗಳು ದೊರೆತು ಮನಸ್ಸಿಗೆ ಸಂತೋಷ, ಸ್ನೇಹಿತರಿಂದ ನೆರವು, ಪ್ರೀತಿ ಸಮಾಗಮ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಮನಃ ಶಾಂತಿ.

ವೃಷಭರಾಶಿ
ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಸರ್ಕಾರಿ ಕೆಲಸದವರಿಗೆ ಕಷ್ಟ, ಅಶಾಂತಿ, ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡುಬಂದು ತುಂಬಾ ಕಠಿನ ಪರಿಸ್ಥಿತಿಯನ್ನು ನೀವು ಎದುರಿಸುವಿರಿ. ಆದರೂ ಶನಿಯ ಬಲದಿಂದ ನಿಮ್ಮಲ್ಲಿ ಆತ್ಮಸ್ಥೈರ್ಯವು ಮೂಡಿ ಬರುವುದು, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಕಲಹ, ಶತ್ರುಗಳಿಂದ ತೊಂದರೆ.

ಮಿಥುನರಾಶಿ
ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಬಂಧುಗಳಿಂದ ಸಹಾಯ, ಗುರು ಹಿರಿಯರ ದರ್ಶನ, ಸುವರ್ಣ ಪ್ರಾಪ್ತಿ, ಸಮಾಜದಲ್ಲಿ ಗೌರವ, ದ್ರವ್ಯಲಾಭ, ವ್ಯರ್ಥ ಧನಹಾನಿ, ನಿಮ್ಮ ಚುರುಕುತನ ಹಾಗೂ ಅವಿರತ ಚಟುವಟಿಕೆಯಿಂದ ನಿಮಗೆ ಒಳ್ಳೆಯ ಭರವಸೆಯ ಜೀವನವು ಕೂಡಿ ಬರುವುದು. ನೀವೆಣಿಸಿದ ಕಾರ್ಯಗಳಲ್ಲಿ ನಿಮಗೆ ಜಯವು ಲಭಿಸೀತು.

ಕಟಕರಾಶಿ
ಅತಿಯಾದ ಕೋಪ, ಉದರ ಶೂಲಭಾದೆ, ಆತ್ಮೀಯರಲ್ಲಿ ಕಲಹ, ಮಾತಿನ ಚಕಮಕಿ, ಮನಸ್ಸನ್ನು ಸ್ವಲ್ಪ ತಹಬದಿಗೆ ತರಲು ನೋಡುವುದು ಅತೀ ಅಗತ್ಯ. ಸ್ವಲ್ಪ ಸಮಾಧಾನಿಗಳಾದ ನೀವು ಹೆಚ್ಚು ಚಿಂತಿಸುವಿರಿ. ಚಿಂತೆ ಬಿಟ್ಟು ಬಿಡಿರಿ, ಇದ್ದುದ್ದನ್ನು ಹಾಗೆ ಸ್ವೀಕರಿಸುವುದು ಉತ್ತಮ, ಶರೀರದಲ್ಲಿ ಆಯಾಸ, ದುಃಖದಾಯಕ ಪ್ರಸಂಗಗಳು, ನಾನಾ ರೀತಿಯ ತೊಂದರೆ, ಮನಃಕ್ಲೇಷ.

ಸಿಂಹರಾಶಿ
ತಾಳ್ಮೆ ಅಗತ್ಯ, ಮಾತಿನ ಮೇಲೆ ಹಿಡಿತವಿರಲಿ, ವ್ಯವಹಾರದಲ್ಲಿ ದೃಷ್ಟಿ ದೋಷದಿಂದ ತೊಂದರೆ, ಹಿರಿಯರ ಹಾಗೂ ಸಂಬಂಧಿಕರ ಹಿತನುಡಿ ಹಾಗೂ ಸಹಾಯವು ನಿಮಗೆ ಸ್ವಲ್ಪ ಸಮಾಧಾನ ನೀಡಲಿದೆ. ಆದರೆ ಮನೆಯಲ್ಲಿ ಹಿರಿಯರ ಆರೋಗ್ಯದ ಏರುಪೇರಿನಿಂದ ಉದ್ವಿಗ್ನತೆಯು ಕಾಡಲಿದೆ, ಆರೋಗ್ಯದಲ್ಲಿ ವ್ಯತ್ಯಾಸ, ಭೂಮಿ ಖರೀದಿ ಯೋಗ, ದಾಯಾದಿ ಕಲಹ, ದಾನ ಧರ್ಮದಲ್ಲಿ ಆಸಕ್ತಿ, ದೂರ ಪ್ರಯಾಣ.

ಕನ್ಯಾರಾಶಿ
ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟ ವಸ್ತುಗಳ ಖರೀದಿ, ಕೆಲಸ ಕಾರ್ಯಗಳಲ್ಲಿ ಜಯ, ನಿಮಗೆ ಒಂದರ ಹಿಂದೆ ಒಂದೊಂದು ಜಯದ ಮೆಟ್ಟಿಲು ಲಭಿಸೀತು. ಆದರೂ ಸ್ವಯಂಕೃತ ಅಪರಾಧದ ಬಗ್ಗೆ ನಿಮಗೇ ದುಖಃವಾದೀತು. ಮಿಂಚಿದ ಕಾರ್ಯ ಇನ್ನು ಚಿಂತಿಸಿ ಪ್ರಯೋಜನವಿಲ್ಲ, ಅಧಿಕಾರ ಪ್ರಾಪ್ತಿ, ರಿಯಲ್ ಎಸ್ಟೇಟ್ ನವರಿಗೆ ಅಧಿಕ ಲಾಭ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಸ್ಥಗಿತ ಕಾರ್ಯಗಳ ಮುನ್ನಡೆ.

ತುಲಾರಾಶಿ
ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ಮೋಸ, ಅನಾರೋಗ್ಯ, ಅತಿಯಾದ ಭಯ, ಹಿತಶತ್ರುಗಳ ಕಿರುಕುಳವು ಸ್ವಲ್ಪ ಕಡಿಮೆಯಾದೀತು. ಆರೋಗ್ಯದ ಏರುಪೇರಿನ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಯಾಕೆಂದರೆ ನಿಮಗೆ ಸಹನೆಯ ಅಗತ್ಯವಿದೆ. ತಾಳ್ಮೆಯಿಂದ ಮುನ್ನಡೆಯಿರಿ, ಮಾತಿನಲ್ಲಿ ಹಿಡಿತವಿರಲಿ, ಚಂಚಲ ಮನಸ್ಸು, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಆಕಸ್ಮಿಕ ಖರ್ಚು.

ವೃಶ್ಚಿಕರಾಶಿ
ವ್ಯಾಪಾರದಲ್ಲಿ ನಷ್ಟ, ಚಂಚಲ ಮನಸ್ಸು, ಮನಃ ಕ್ಲೇಷ, ಮಕ್ಕಳ ಲಗ್ನದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದೆ ಮುನ್ನಡೆಯಿರಿ. ಎಲ್ಲವೂ ನಿರ್ವಿಘ್ನವಾಗಿ ನಡೆಯಲಿದೆ. ಆರೋಗ್ಯದಲ್ಲಿ ಹೆಚ್ಚಿನ ತೊಂದರೆಗಳು ಕಂಡು ಬಂದರೂ ಉಪಶಮನವಾಗಲಿದೆ, ಸಲ್ಲದ ಅಪವಾದ, ಚಂಚಲ ಮನಸ್ಸು, ನೀಚ ಜನರ ಸಹವಾಸ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಕಾರ್ಯ ವಿಫಲ.

ಧನಸ್ಸುರಾಶಿ
ಮನಃಶಾಂತಿ, ಸೇವಕರಿಂದ ಸಹಾಯ, ಮಾತಾ-ಪಿತೃಗಳ ಸೇವೆ, ಗೃಹ ನಿರ್ಮಾಣ ಯಾ ಖರೀದಿಯ ಬಗ್ಗೆ ಚಿಂತಿಸುವಿರಿ. ಸ್ವಲ್ಪ ಪ್ರಯತ್ನ ಬಲದಿಂದ ಮುನ್ನಡೆಯಿರಿ. ನಿಮ್ಮ ಪ್ರಯತ್ನವು ನಿಮಗೆ ಸಫ‌ಲತೆಯನ್ನು ಕೊಡಲಿದೆ. ಆದರೂ ಸಮಾಧಾನದಿಂದಿರಿ, ವ್ಯಾಪಾರದಲ್ಲಿ ಲಾಭ, ಹಾರ್ದಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವಿರೋಧಿಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಆಸಕ್ತಿ.

ಮಕರರಾಶಿ
ಹೊರದೇಶ ಪ್ರಯಾಣ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಕುಟುಂಬ ಸೌಖ್ಯ, ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿಯು ತೋರಿಬರುವುದು. ಆದರೂ ಚಿಂತೆಯು ನಿಮ್ಮ ಬೆಂಬಿಡದೆ ಹಿಂಬಾಲಿಸುವುದು. ಸ್ವಪ್ರಯತ್ನದಿಂದ ಮುನ್ನಡೆಯುವುದು ಅಗತ್ಯ. ಕಿರು ಸಂಚಾವಿದೆ, ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯಕ್ಕೆ ಕಾಲು ಬೆನ್ನು ನೋವು, ಶುಭ ಸಮಾರಂಭಗಳಲ್ಲಿ ಭಾಗಿ, ಮನಃಶಾಂತಿ.

ಕುಂಭರಾಶಿ
ಶತ್ರುಬಾಧೆ, ಮಿತ್ರರಿಂದ ಮೋಸ, ಯಾರನ್ನು ನಂಬಬೇಡಿ, ಅಲ್ಪ ಲಾಭ, ಅಧಿಕ ಖರ್ಚು, ಕುಟುಂಬದ ಸದಸ್ಯರ ವರ್ತನೆಯು ನಿಮಗೆ ಕಿರಿಕಿರಿ ಎನಿಸಲಿದೆ. ಯಾರು ಏನೆಂದರೂ ಅದನ್ನು ತಲೆಯೊಳಗೆ ಹಾಕದೆ, ನಿಮ್ಮ ನೇರ ನಡೆಯಿಂದ ಮುನ್ನಡೆಯಿರಿ. ಎಲ್ಲರೂ ಹಿಂಬಾಲಿಸಿಯಾರು ಪುತ್ರರಲ್ಲಿ ದ್ವೇಷ, ಕಲಹ, ಅನ್ಯ ಜನರಲ್ಲಿ ವೈಮನಸ್ಯ, ಅಲ್ಪ ಪ್ರಗತಿ, ತೀರ್ಥಯಾತ್ರೆ ದರ್ಶನ, ಅಕಾಲ ಭೋಜನ.

ಮೀನರಾಶಿ
ಮಾಡುವ ಕೆಲಸದಲ್ಲಿ ವಿಘ್ನ, ವಾದ-ವಿವಾದ, ದ್ರವ್ಯ ನಷ್ಟ, ವಿವಾಹಕ್ಕೆ ಅಡಚಣೆ, ಆರೋಗ್ಯ ಅಭಿವೃದ್ಧಿ, ವ್ಯರ್ಥ ಧನಹಾನಿ, ದಾಯಾದಿ ಕಲಹ, ಶತ್ರುಗಳಿಂದ ತೊಂದರೆ, ಹೊಸ ಕೆಲಸದ ಬೇಟೆಯಲ್ಲಿ ನೀವಿದ್ದೀರಿ. ಅದರಲ್ಲಿ ನೀವು ಜಯ ಗಳಿಸುವಿರಿ. ಪ್ರಯತ್ನದಿಂದ ಮುಂದುವರಿದಲ್ಲಿ ನಿಮಗೆ ಕಂಕಣಬಲದ ಯೋಗವು ಪ್ರಾಪ್ತಿಯಾದೀತು. ಆರೋಗ್ಯದಲ್ಲಿ ಚೇತರಿಕೆಯು ಇದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular