‘ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಲಿ’: ವಾಣಿಜ್ಯ ಮಂಡಳಿಗೆ ಮೇಘನಾ ನೋವಿನ ಪತ್ರ

0

ಬೆಂಗಳೂರು : ಡ್ರಗ್ಸ್ ಮಾಫಿಯಾದಲ್ಲಿ ಚಿರು ಹೆಸರನ್ನು ಬಳಕೆ ಮಾಡಿರುವ ಜೊತೆಗೆ ಚಿರು ಮರಣೋತ್ತರ ಪರೀಕ್ಷೆ ನಡೆದ ಬಗ್ಗೆ ಅನುಮಾನಕರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕೆಂದು ಚಿರು ಪತ್ನಿ ಮೇಘನಾ ರಾಜ್ ಚಲನಚಿತ್ರ ವಾಣಿಜ್ಯ ಮಂಡಳಿತ ನೋವಿನ ಪತ್ರ ಬರೆದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಯುವ ನಟ, ನಟಿಯರ ವಿರುದ್ದ ಆರೋಪ ಮಾಡಿದ್ದರು. ಪ್ರಮುಖವಾಗಿ ಚಿತ್ರರಂಗದ ಯಾವೆಲ್ಲಾ ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆನ್ನುವುದು ನನಗೆ ಗೊತ್ತು.

ಯಾವ ರೆಸಾರ್ಟ್, ಯಾರ ಮನೆಯಲ್ಲಿ ಪಾರ್ಟಿ ನಡೆಯುತ್ತೆ ಅನ್ನೋದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದೇ ವೇಳೆಯಲ್ಲಿ ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಯುವ ನಟ ಪೋಸ್ಟ್ ಮಾರ್ಟಮ್ ಯಾಕೆ ಮಾಡಲಿಲ್ಲಾ ಅಂತಾ ಪ್ರಶ್ನೆ ಮಾಡಿದ್ದರು.

ಇದರ ಬೆನ್ನಲ್ಲೇ ಚಿರು ಮಾವ ಸುಂದರ್ ರಾಜ್ ಅವರು ಪೋಸ್ಟ್ ಮಾರ್ಟಮ್ ಮಾಡದಿರುವ ಕುರಿತು ಸ್ಪಷ್ಟನೆಯನ್ನು ಕೊಟ್ಟಿದ್ದರು. ಅಲ್ಲದೇ ಮೇಘನಾ ರಾಜ್ ಕಣ್ಣೀರು ಸುರಿಸಿ ತನ್ನ ಗಂಡನ ಹೆಸರನ್ನು ಹಾಳು ಮಾಡಬೇಡಿ ಅಂತಾ ಕಣ್ಣೀರು ಹಾಕಿದ್ರೆ, ಚಿರು ಸರ್ಜಾ ತಮ್ಮ ಧ್ರುವಾ ಸರ್ಜಾ ಇಂದ್ರಜಿತ್ ಲಂಕೇಶ್ ವಿರುದ್ದ ಕಿಡಿ ಕಾರಿದ್ದರು.

ಇದೆಲ್ಲಾ ಬೆಳವಣಿಗೆಗಳ ನಡುವಲ್ಲೇ ಇಂದ್ರಜಿತ್ ಲಂಕೇಶ್ ಚಿರಂಜೀವಿ ಸರ್ಜಾ ವಿಚಾರದಲ್ಲಿ ನೀಡಿದ್ದ ಹೇಳಿಕೆಯನ್ನು ವಾಪಾಸ್ ಪಡೆದಿದ್ದರು. ಆದರೆ ಇದೀಗ ಮೇಘನಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರಬರೆದಿದ್ದಾರೆ. ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎನ್.ಎಮ್ ಸುರೇಶ್ ಅವರು ಮೇಘನಾ ರಾಜ್ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಾತುಗಳ ನನ್ನನ್ನು ಮಾನಸಿಕ ತೊಳಲಾಟಕ್ಕೆ ತಳ್ಳಿದೆ. ಗರ್ಭಿಣಿಯಾಗಿರುವ ನಾನು ಮಾನಸಿಕ ತೊಳಲಾಟದಲ್ಲಿದ್ದೇನೆ. ನನ್ನ ದಿವಂಗತ ಪತಿ ಮೇಲೆ ಇಂದ್ರಜಿತ್ ಆರೋಪ ಮಾಡಿದ್ದಾರೆ. ಇಂದ್ರಜಿತ್ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಲಿ ಎಂದು ಮೇಘನಾ ಪತ್ರಬರೆದಿದ್ದಾರೆ.

ಮೇಘನಾ ರಾಜ್ ಪತ್ರ ಬರೆದಿರುವ ಕುರಿತು ಇಂದ್ರಜಿತ್ ಲಂಕೇಶ್ ಅವರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪತ್ರವನ್ನು ಬರೆದು, ಅವರ ಗಮನಕ್ಕೆ ತರುತ್ತೇವೆ ಎಂದು ಕೆ.ವಿ ಚಂದ್ರಶೇಖರ್ ಹೇಳಿದ್ದಾರೆ.

ಒಂದಡೆ ಡ್ರಗ್ಸ್ ದಂಧೆ ಸ್ಯಾಂಡಲ್ ವುಡ್ ಮಂದಿಯ ಕರಾಳತೆಯನ್ನು ಅನಾವರಣಗೊಳಿಸುತ್ತಿದ್ರೆ, ಇನ್ನೊಂದೆಡೆ ಮೇಘನಾ ತನ್ನ ಪತಿಗೆ ಕಳಂಕ ಬಾರದಂತೆ ಎಚ್ಚರವಹಿಸುತ್ತಿದ್ದಾರೆ. ಈಗಾಗಲೇ ಚಿರಂಜೀವಿ ಸರ್ಜಾ ವಿಚಾರದಲ್ಲಿ ನೀಡಿದ್ದ ಹೇಳಿಕೆಯನ್ನು ವಾಪಾಸ್ ಪಡೆದಿರುವುದಾಗಿ ಹೇಳಿದ್ದ ಇಂದ್ರಜಿತ್ ಲಂಕೇಶ್, ಇದೀಗ ಗರ್ಭಿಣಿ ಮೇಘನಾ ರಾಜ್ ಪತ್ರಕ್ಕೆ ಅದ್ಯಾವ ರೀತಿಯಲ್ಲಿ ಉತ್ತರ ಕೊಡ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

Leave A Reply

Your email address will not be published.