ಮೇಷರಾಶಿ
ಮಾನಸಿಕವಾಗಿ ಸಂಕಟಗಳು ಬಾಧಿಸುವ ಸಾಧ್ಯತೆ, ಮಿತ್ರರೊಂದಿಗೆ ಭೇಟಿ ಹಾಗೂ ಸಂತಸದ ವಾತಾವರಣ. ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲವನ್ನು ಮುಂದುವರಿಸಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಕಿರು ಸಂಚಾರ ವಿರುವುದು, ಅನಗತ್ಯ ಬೇಸರದ ಪರಿಸ್ಥಿತಿಗಳು, ತಾಯಿ ಆರೋಗ್ಯದಲ್ಲಿ ಏರುಪೇರು.
ವೃಷಭರಾಶಿ
ಮಾನ ಅಪಮಾನಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಮುಗ್ಗಟ್ಟು, ಆಯುಷ್ಯಕಾರಕನಾದ ಶನಿಯು ನಿಮಗೆ ರಕ್ಷಣೆ ನೀಡಲಿದ್ದಾನೆ. ದೇಹಾರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಪುನಃಹ ಸರಿಯಾಗಿ ಎದ್ದೇಳುವಿರಿ. ವೈವಾಹಿಕ ಪ್ರಸ್ತಾವಗಳು ಕೂಡಿ ಬಂದು ಕಂಕಣಬಲ ಪ್ರಾಪ್ತಿಯಾದೀತು. ಶುಭವಿದೆ, ಕುಟುಂಬದ ಮಾನಹಾನಿ.

ಮಿಥುನರಾಶಿ
ಧನಾಗಮನ, ವರ್ಗಾವಣೆಯಾಗುವ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸಗಳು, ದೈನಂದಿನ ವ್ಯವಚರಿಯಲ್ಲಿ ಏನೂ ಹೆಚ್ಚು ಕಮ್ಮಿಯಾಗದೆ ಸುಖದಲ್ಲೇ ಕಳೆದು ಹೋಗ ಲಿದೆ. ದಾಯಾದಿಗಳಿಂದ ಕಿರುಕುಳ ಕೂಡಿ ಬಂದೀತು. ನೆರೆಹೊರೆಯವ ರೊಂದಿಗೆ ಸ್ನೇಹಪರ ನಡತೆ ಇದ್ದೀತು. ಸಹಕಾರ ನೀಡಲಿರುವರು.
ಕಟಕರಾಶಿ
ನಷ್ಟಗಳು ಉಂಟಾಗುವವು, ನಿದ್ರಾಭಂಗ, ಹಿತಶತ್ರುಗಳ ಕಾಟದಿಂದ ರೋಸಿ ಹೋದಿರಿ. ಜಾಗ್ರತೆ ಮಾಡಿರಿ. ನಯವಂಚಕರಿಂದಲೇ ಹಾನಿಗೊಳ ಗಾಗುವ ಪರಿಸ್ಥಿತಿ ಕಂಡು ಬರಲಿದೆ. ಮೋಡಿಯಿಂದ ಮರುಳಾಗಿ ಮೋಹ ಹೋಗದಿರಿ. ಪತಿಯ ಆಸೆಗೆ ಸಂಪೂರ್ಣ ಸಹಕಾರ ನೀಡಿರಿ, ಆಕಸ್ಮಿಕ ದುರ್ಘಟನೆಗಳು ನಡೆಯುವುವು.

ಸಿಂಹರಾಶಿ
ಭೂಮಿಯಿಂದ ಲಾಭ, ಮಹಿಳೆಯರಿಂದ ತೊಂದರೆ, ಚಿನ್ನದಂತಹ ಪತ್ನಿಯಿಂದ ನಿಮಗೆ ಸಹಕಾರ ಸಿಗಲಿದೆ. ಮಾತಿನಲ್ಲಿ ಕಠಿಣತೆ ಇದ್ದರೂ ಇನ್ನೊಬ್ಬರಿಗೆ ಮೋಸ ಮಾಡುವವರಲ್ಲಾ. ಇದೇ ಸಂತೃಪ್ತಿ ನಿಮಗೆ ಇರುವುದು. ದೇಹಾರೋಗ್ಯದಲ್ಲಿ ತುಂಬಾ ಬದಲಾವಣೆ ಇದ್ದೀತು, ಅಧಿಕ ಉಷ್ಣದಿಂದ ಬಾಯಿ ಹುಣ್ಣು.
ಕನ್ಯಾರಾಶಿ
ಅಧಿಕ ಲಾಭ, ವಾಹನ ಚಾಲನೆಯಿಂದ ಪೆಟ್ಟು, ನಿಮ್ಮ ವ್ಯಕ್ತಿತ್ವ ಅಂಗಸೌಷ್ಠವ ಹಾಗೂ ಮಾತಿನಿಂದ ಮೋಡಿ ಮಾಡುವ ನೀವು ಎಲ್ಲರನ್ನೂ ಮೆಚ್ಚಿಸುವಿರಿ. ಆದರೆ ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರಲಾರದು. ಜಾಗ್ರತೆ ಮಾಡಿರಿ. ಕುಟುಂಬಿಕರೊಂದಿಗೆ ಕಲಹವು ಸಲ್ಲದು, ಮೊಂಡುವಾದ ಧೋರಣೆಯಿಂದ ತೊಂದರೆ.

ತುಲಾರಾಶಿ
ಉದ್ಯೋಗ ಸಮಸ್ಯೆಯಿಂದ ನಿದ್ರಾಭಂಗ, ಮಾನಸಿಕವಾಗಿ ಕೆಟ್ಟ ಆಲೋಚನೆಗಳು, ತಕ್ಕಡಿಯಂತೆ ಮೇಲೆ ಕೆಳಗಾಗಲಿರುವ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ. ಸಂಶಯ ಪ್ರವೃತ್ತಿಯ ನೀವು ಎಲ್ಲರನ್ನು ಅದೇ ದೃಷ್ಟಿಯಿಂದ ನೋಡದಿರಿ. ಭಾವನಾತ್ಮಕವಾಗಿ ದುಃಖಕ್ಕೆ ಒಳಗಾಗದಿರಿ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನಿಂದನೆ.
ವೃಶ್ಚಿಕರಾಶಿ
ಸಾಲಗಾರರಿಂದ ಮುಕ್ತಿ, ಮಿತ್ರರೊಂದಿಗೆ ದುಷ್ಟ ಕೆಲಸ, ದುರಾಚಾರಗಳಿಗೆ ಮುಂದಾಗುವಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಕಂಡು ಬಂದರೂ ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿಯು ಕಂಡು ಬರಲಿದೆ. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಸಂತೋಷದಲ್ಲಿ ಪಾಲ್ಗೊಳ್ಳಿರಿ. ಶುಭವಿದೆ, ಅನಿರೀಕ್ಷಿತವಾಗಿ ಪ್ರಯಾಣ ರದ್ದು.

ಧನಸ್ಸುರಾಶಿ
ಪ್ರೀತಿ-ಪ್ರೇಮದ ಪ್ರಸ್ತಾವನೆಗಳು, ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ಸಂತೋಷ ಸಿಗಲಿದೆ. ಪತ್ನಿಯ ಉದ್ಯೋಗದ ಭೇಟೆಯು ಮುಂದುವರಿಯಲಿದೆ. ಸೃಜನಾತ್ಮಕವಾಗಿ ಸ್ಪಂದಿಸಿರಿ. ಮಾತಿನಿಂದ ಮೌನ ಲೇಸು. ಎಂಬುದನ್ನು ನೆನಪಿಟ್ಟುಕೊಳ್ಳಿರಿ, ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ.
ಮಕರರಾಶಿ
ಸಾಲ ಮಾಡುವ ಪರಿಸ್ಥಿತಿ, ಸ್ವಂತ ಉದ್ಯಮದಿಂದ ಹಿಂದೆ ಸರಿಯುವಿರಿ, ಗೃಹ ಸಾಲ ಹಾಗೂ ವಾಹನ ಸಾಲಕ್ಕಾಗಿ ಸ್ವಲ್ಪ ಪರದಾಟ ಕಂಡು ಬಂದೀತು. ಆದರೂ ನಿಮಗೆ ಬೇಗ ಅದರ ವ್ಯವಸ್ಥೆಯಾಗಲಿದೆ. ದೃಢ ನಿರ್ಧಾರದಿಂದ ಮುನ್ನಡೆದರೆ ಒಳಿತು. ಅದರೂ ಪರದಾಟವು ತಪ್ಪದು, ಸಾಲದಿಂದ ತೊಂದರೆಗೆ ಸಿಲುಕುವಿರಿ.

ಕುಂಭರಾಶಿ
ನಿಮಗೆ ಸಿಗಬೇಕಾದ ಮಾನ ಸನ್ಮಾನಗಳು ಬೇರೆಯವರ ಪಾಲು, ಕಲ್ಪನಾ ಭಾವಗಳಿಂದ ತೊಂದರೆಗೆ ಸಿಲುಕುವ ಸಂಭವ, ಧನ, ಕನಕಗಳ ಖರೀದಿಯು ಕಂಡು ಬಂದೀತು. ಮನೆಯಾಕೆಗೆ ಸಂತೃಪ್ತಿಯಾದೀತು. ಮಕ್ಕಳಿಂದ ಜಾಗದ ಖರೀದಿ ಇದ್ದೀತು. ಜಾಗ್ರತೆಯಿಂದ ಮುನ್ನಡೆಯಿರಿ. ದೇಹಾರೋಗ್ಯಕ್ಕಾಗಿ ಸ್ವಲ್ಪ ಖರ್ಚುವೆಚ್ಚ ಬಂದೀತು, ಬೆಳವಣಿಗೆಯಲ್ಲಿ ಕುಂಠಿತವಾಗುವುದು,
ಮೀನರಾಶಿ
ತಾಯಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಬಿರುಕು, ಮಾತು ಕಮ್ಮಿ ಇದ್ದರೂ ಕೆಲವೊಮ್ಮೆ ಅತೀ ಮಾತುಗಳನ್ನು ಅಡುವಿರಿ. ಬೇಗನೆ ಇತರರೊಂದಿಗೆ ಬೆರೆಯುವ ನಿಮಗೆ ಬೇಗನೆ ನಿಷ್ಠುರ ಮಾಡಿಕೊಳ್ಳುವ ತಪ್ಪು ನಿರ್ಧಾರವನ್ನು ಮಾಡುವಿರಿ. ತಾಳ್ಮೆಬೇಕು, ವಾಹನ ಖರೀದಿಗೆ ತಂದೆಯೊಂದಿಗೆ ಸಮಾಲೋಚನೆ.