ನೀಲಾವರದ ಗೋಶಾಲೆಯಲ್ಲಿ ವೈಭವದ ಮೊಸರು ಕುಡಿಕೆ ಉತ್ಸವ

0

ಬ್ರಹ್ಮಾವರ : ನೀಲಾವರ ಗೋಶಾಲೆಯಲ್ಲಿ ಇದೇ ಪ್ರಥಮವೆಂಬಂತೆ ಕೃಷ್ಣ ಜಯಂತಿ ಮತ್ತು ಮೊಸರು ಕಡಿಕೆ ಉತ್ಸವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ‌ ದಿವ್ಯ ಉಪಸ್ಥಿತಿಯಲ್ಲಿ ಸರಳವಾಗಿ ವೈಭವದಿಂದ ನೆರವೇರಿತು.

ಕೃಷ್ಣಲೀಲೋತ್ಸವವನ್ನು ಶ್ರೀಗಳ ವಿದ್ಯಾರ್ಥಿಗಳು ಮತ್ತು ಸಿಬಂದಿ ವರ್ಗ ಅತ್ಯಂತ ವಿಶಿಷ್ಟವಾಗಿ ಸಂಯೋಜಿಸಿ ಹತ್ತಾರು ವಿದ್ಯಾರ್ಥಿಗಳು ತಾವೇ ಸ್ವಯಂ ಗೋಪಾಲಕರಾಗಿ ಗೋಶಾಲೆಯ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿ ಅಲ್ಲಲ್ಲಿ ತೂಗು ಹಾಕಿದ್ದ ಬಣ್ಣದ ಓಕುಳಿ , ಮೊಸರು , ಚಕ್ಕುಲಿ ಉಂಡೆ ಬೆಣ್ಣೆ , ಇತ್ಯಾದಿಗಳನ್ನು ತುಂಬಿದ್ದ ಅಲಂಕೃತ ಮಡಕೆಗಳನ್ನು ಒಡೆದು ಸಂಭ್ರಮಿಸಿದರು.

ಮಣ್ಣಿನಿಂದ ತಯಾರಿಸಿದ ಕೃಷ್ಣನ ವಿಗ್ರಹಕ್ಕೆ ಶ್ರೀಗಳು ಮಂಗಳಾರತಿ ಬೆಳಗಿದ ಬಳಿಕ ಬೆಳ್ಳಿ ಪಲ್ಲಕಿಯಲ್ಲಿಟ್ಟು , ಆ ಪಲ್ಲಕ್ಕಿಯನ್ನು ಟ್ರ್ಯಾಕ್ಟರ್ ನಲ್ಲಿಟ್ಟು ವಿವಿಧ ವೆರಷ ಚೆಂಡೆವಾದನ ಸಹಿತ ಮೆರವಣಿಗೆಯು ಗೋಶಾಲೆಯ ಆವರಣದಲ್ಲಿ ನಡೆಯಿತು.

ಉತ್ಸವದ ಬಳಿಕ ದೇವರಿಗೆ ವೇಣುವಾದನ ಸೇವೆ ನಡೆಯಿತು . ನಂತರ ಮೃಣ್ಮಯ ವಿಗ್ರಹವನ್ನು ಶ್ರೀಗಳು ಪುಷ್ಕರಿಣಿಯಲ್ಲಿ ವಿಸರ್ಜಿಸುವುದರೊಂದಿಗೆ ಸಂಪನ್ನಗೊಂಡಿತು.

Leave A Reply

Your email address will not be published.