ಮೇಷರಾಶಿ
ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮೊಂಡುತನ, ಪ್ರಯಾಣದಲ್ಲಿ ಅನಾನುಕೂಲ, ಆತ್ಮ ಸಂಕಟ ಮತ್ತು ಆತ್ಮಗೌರವಕ್ಕೆ ಧಕ್ಕೆ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ. ಆರ್ಥಿಕವಾಗಿ ಸಮಸ್ಯೆಗಳ ಪರಿಹಾರಾರ್ಥ ಯಶಸ್ವಿ ಕಾರ್ಯ ತಂತ್ರಗಳ ಜೋಡಣೆ, ರೂಪಣೆ, ಸಫಲತೆಯನ್ನು ತಂದುಕೊಡಲಿದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನ ಗೊಳ್ಳಲಿರುವ ಸೂಚನೆಯು ಕಂಡುಬರುತ್ತದೆ.
ವೃಷಭರಾಶಿ
ಹಣಕಾಸಿನ ವಿಚಾರದಲ್ಲಿ ಪ್ರಗತಿ, ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯವಾದೀತು. ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿ ಕೊಳ್ಳುವ ಸೂಚನೆ ಕಂಡುಬಂದೀತು. ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ ಮತ್ತು ಆತಂಕ, ಉದ್ಯೋಗದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಗೊಂದಲ, ಪ್ರಯಾಣದಲ್ಲಿ ಅಡೆತಡೆ.

ಮಿಥುನ ರಾಶಿ
ಸ್ವಯಂಕೃತ ಅಪರಾಧ, ಆತುರದ ನಿರ್ಧಾರದಿಂದ ತೊಂದರೆ, ಕಾರ್ಯಕ್ಷೇತ್ರದಲ್ಲಿ ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯ ಬೇಕಾದ ಪರಿಸ್ಥಿತಿಯು ತೋರಿ ಬರುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಆತಂಕ, ಬಂಧು ಬಾಂಧವರೊಂದಿಗೆ ಕಾಲಕಳೆಯುವಿರಿ.
ಕಟಕ ರಾಶಿ
ಕಾರ್ಯದೊತ್ತಡದಿಂದ ಮಾನಸಿಕವಾಗಿ ಅಶಾಂತಿ, ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು, ಆರೋಗ್ಯ ಭಯ ನಿವಾರಣೆಯಾಗಲಿದೆ, ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ, ಹೊಂದಾಣಿಕೆಯ ಪ್ರಯತ್ನ ಅಗತ್ಯವಿದೆ, ಆಕಸ್ಮಿಕ ಧನಾಗಮನ, ಕುಟುಂಬದಲ್ಲಿ ನಷ್ಟ ಮತ್ತು ನಿರಾಸೆ, ಆರೋಗ್ಯ ತೊಂದರೆಗಳು, ಸರ್ಕಾರದಿಂದ ತೊಂದರೆ, ನಂಬಿಕೆ ದ್ರೋಹ, ಹೊಸ ವಸ್ತು ಖರೀದಿ ಬೇಡ.

ಸಿಂಹ ರಾಶಿ
ಧನ ಸಂಪಾದನೆಗೆ ಮುಂದಾಗುವಿರಿ, ಅಧಿಕಾರ ಪಡೆಯುವ ಆಸೆ, ಧನಾರ್ಜನೆಯಲ್ಲಿ ಪ್ರಗತಿ, ಧಾರ್ಮಿಕ ಗುರುಗಳ ಭೇಟಿಯ ಅಪೂರ್ವ ಅವಕಾಶಗಳಿಂದ ಮಾನಸಿಕವಾಗಿ ನೆಮ್ಮದಿ ತಂದೀತು. ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ಮಾನ ಸನ್ಮಾನದ ಬಯಕೆ, ಆತ್ಮಗೌರವಕ್ಕೆ ಧಕ್ಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭಾವನಾತ್ಮಕವಾಗಿ ಮೋಸ.
ಕನ್ಯಾ ರಾಶಿ
ಉದ್ಯೋಗ ನಷ್ಟ ಮತ್ತು ಅಪವಾದಗಳು, ಆರೋಗ್ಯದ ಚಿಂತೆ,ಆರ್ಥಿಕ ನಷ್ಟ, ತಾಯಿಯಿಂದ ಲಾಭ, ವಾಹನ ಖರೀದಿಯ ಮನಸ್ಸು, ಕೌಟುಂಬಿಕ ವಾದ-ವಿವಾದ, ಕಲಹಗಳು ಹಂತ ಹಂತವಾಗಿ ಉಪಶಮನವಾಗಲಿವೆ, ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ, ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು, ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು, ಪಿತ್ರಾರ್ಜಿತ ಸ್ವತ್ತಿನಲ್ಲಿ ತೊಂದರೆ.

ತುಲಾರಾಶಿ
ಸಂತಾನ ಚಿಂತೆ, ಮಕ್ಕಳ ಭವಿಷ್ಯದ ಚಿಂತೆ, ಆತ್ಮ ಸಂಕಟ, ಬೇಸರ, ತುಸು ನಿಧಾನಗತಿಯಲ್ಲಿ ಸಾಗಲಿರುವ ಕಾರ್ಯ ಯೋಜನೆಯು ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ, ಸ್ಥಗಿತ ಯೋಜನೆಯೊಂದರ ಅನುಷ್ಠಾನಾರ್ಥ ಕಾರ್ಯಚಟುವಟಿಕೆ ಸಫಲವಾಗಲಿದೆ, ಸರ್ಕಾರದಿಂದ ಲಾಭ, ಮನೋ ಚಂಚಲತೆ, ಉದ್ಯೋಗ ಬದಲಾವಣೆ ಆಲೋಚನೆ. ರ್ಯ ಕ್ಷೇತ್ರದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ.
ವೃಶ್ಚಿಕರಾಶಿ
ಪೂರ್ವಯೋಜಿತ ಕಾರ್ಯಗಳಲ್ಲಿ ಯಶಸ್ಸು, ಬಂಧುಮಿತ್ರರ ಸಹಕಾರ ಇಚ್ಛಿತ ಕಾರ್ಯಗಳಿಗೆ ಅನುಕೂಲವಾದೀತು, ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ, ತುಸು ಕಲಹ ಪ್ರಸಂಗ ಎದುರಾದರೂ ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ, ಉದ್ಯೋಗದಲ್ಲಿ ತೊಂದರೆ, ಸ್ಥಿರಾಸ್ತಿ ನಷ್ಟ ಮತ್ತು ತೊಂದರೆ, ದ್ವಿಚಕ್ರವಾಹನದಿಂದ ಸಮಸ್ಯೆ, ಆಯುಷ್ಯ ಭೀತಿ, ತಂದೆ ತಾಯಿಯಿಂದ ಅನುಕೂಲ, ಅನಾರೋಗ್ಯ ಸಮಸ್ಯೆಗಳಿಗೆ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸುರಾಶಿ
ಆತ್ಮಾಭಿಮಾನದಿಂದ ಮುನ್ನುಗ್ಗುವಿರಿ, ಒಳ್ಳೆತನದಿಂದ ಸಮಸ್ಯೆ, ಕೆಲಸ ಕಾರ್ಯದಲ್ಲಿ ಜಯ, ಪಾಲುದಾರಿಕೆಯಲ್ಲಿ ತೊಂದರೆ, ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಸಫಲತೆ ಇರುತ್ತದೆ, ಸಾಂಸಾರಿಕವಾಗಿ ವಿಶ್ರಾಂತಿಯು ಸುಖಾಪೇಕ್ಷೆಯಾದೀತು, ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೈವ ಮತ್ತು ಗುರು ನಿಂದನೆ, ಭವಿಷ್ಯದ ಚಿಂತೆ ಮತ್ತು ಆತಂಕ.
ಮಕರರಾಶಿ
ಕುಟುಂಬ ಕಲಹ, ಹೃದಯ ಸಂಬಂಧಿ ಕಾಯಿಲೆ ಸಾಧ್ಯತೆ, ಆರ್ಥಿಕ ಸಂಕಷ್ಟ, ಹೊಸ ಉದ್ಯಮ ವ್ಯವಹಾರದಿಂದ ಸಮಸ್ಯೆ, ಅಪೂರ್ವ ಅವಕಾಶವೊಂದು ಎದುರಾಗಲಿರುವ ಸೂಚನೆ ತಂದುಕೊಡಲಿದೆ, ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ, ಸಾಂಸಾರಿಕ ಸಮಸ್ಯೆಯೊಂದರ ಮೇಲೆ ಹತೋಟಿ ಸಾಧಿಸುವ ಅವಕಾಶ ತಂದೀತು, ಸಾಲಗಾರರ ಮತ್ತು ಶತ್ರುಗಳ ಕಾಟ, ಕಷ್ಟದ ಸಮಯ, ಅಪಕೀರ್ತಿಗಳು.

ಕುಂಭರಾಶಿ
ಪ್ರೇಮ ಭಾವನೆಗಳಿಂದ ತೊಂದರೆ, ದುಶ್ಚಟಗಳು ಅಧಿಕ, ಮಕ್ಕಳಿಂದ ಸಮಸ್ಯೆ, ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆ ಅಗತ್ಯವೆನಿಸಲಿದೆ, ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ, ದೇಹಾ ರೋಗ್ಯದಲ್ಲಿ ಕೂಡಾ ಸುಧಾರಣೆ ಸಮಾಧಾನ ತರಲಿದೆ, ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಗೆ ಬರಲಿದೆ, ಸಂಗಾತಿಯಿಂದ ಬೇಸರ, ಗರ್ಭ ದೋಷ ಮತ್ತು ಬಾಲಗ್ರಹ ದೋಷ, ಭಾವನಾತ್ಮಕವಾಗಿ ಸಮಸ್ಯೆ, ಕೆಲಸಗಾರರ ಕೊರತೆ ಬಗೆಹರಿಯುವುದು.
ಮೀನರಾಶಿ
ಆರೋಗ್ಯ ವ್ಯತ್ಯಾಸದಿಂದ ನಿದ್ರಾಭಂಗ, ಶತ್ರುಗಳು ಮತ್ತು ಸಾಲದ ಚಿಂತೆ, ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡು ಬಂದೀತು, ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯದಲ್ಲಿ ಪ್ರಗತಿ ಇದೆ, ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿಯಿಂದ ತೊಂದರೆ, ಕೆಲಸಗಾರರಿಂದ ನಷ್ಟ, ಬಾಡಿಗೆದಾರರಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.