ಹೊಸ ದಾಖಲೆಗೆ ಬರೆದಿದೆ ವಿರುಷ್ಕಾ ಗುಡ್ ನ್ಯೂಸ್ !

0

ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಎರಡು ದಿನಗಳ ಹಿಂದೆಯಷ್ಟೇ ಗುಡ್ ನ್ಯೂಸ್ ಕೊಟ್ಟಿದ್ದರು. ದಂಪತಿ ಅಪ್ಪ ಅಮ್ಮನಾಗುತ್ತಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಟೊ ಪೋಸ್ಟ್ ಮಾಡಿದ್ದರು. ಆದ್ರೀಗ ವಿರುಷ್ಕಾ ಗುಡ್ ನ್ಯೂಸ್ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

ವಿರಾಟ್ ಕೊಯ್ಲಿ ಹಾಗೂ ಅನುಷ್ಕಾ ದಂಪತಿ 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿಯೂ ಹಾಗೂ ಅನುಷ್ಕಾ ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಚಿತ್ರದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಈ ಪ್ರಗ್ನನ್ಸಿ ಘೋಷಣೆ ಹೊರಬಿದ್ದ 24 ಗಂಟೆಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ 15.3 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಅತ್ಯಂತ ಹೆಚ್ಚು ಲೈಕ್ಸ್ ಪಡೆದುಕೊಂಡ ಸೆಲೆಬ್ರಿಟಿ ಇಮೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಯ್ಲಿ ಹಾಗೂ ಅನುಷ್ಕಾ ಶರ್ಮಾ ಯಾವುದೇ ಪೋಸ್ಟ್ ಹಾಕಿದ್ರೂ ಅತೀ ಹೆಚ್ಚು ಲೈಕ್ಸ್ ಬರ್ತಾ ಇತ್ತು.

ಈ ಹಿಂದೆ ವಿರೂಷ್ಕಾ ದಂಪತಿಗಳ ಮದುವೆ, ನಿಶ್ಚಿತಾರ್ಥದ ಪೋಟೋಗಳು ಅತೀ ಹೆಚ್ಚು ಲೈಕ್ಸ್ ಪಡೆದುಕೊಂಡಿದ್ದವು. ಆದ್ರೀಗ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

ಈ ಹಿಂದೆ ಅಮೆರಿಕದ ಫ್ಯಾಷನ್ ಮಾಡೆಲ್ ಗಿಗಿ ಹಡಿಡ್ ಪ್ರೆಗ್ನನ್ಸಿ ಸುದ್ದಿ ಪ್ರಕಟವಾದ 24 ಗಂಟೆಗಳಲ್ಲಿ 8.2 ದಶಲಕ್ಷ ಲೈಕ್ಸ್ ಪಡೆದುಕೊಂಡಿದ್ರೆ, ಅಮೆರಿಕದ ರೂಪದರ್ಶಿ ಹೈಲಿ ಬಾಲ್ಡ್‌ವಿನ್ ನಿಶ್ಚಿತಾರ್ಥದ ಪೋಟೋ 13.4 ದಶಲಕ್ಷ ಲೈಕ್ಸ್‌ಗಳನ್ನು ಪದಾಖಲೆ ಬರೆದಿತ್ತು. ಅಮೆರಿಕದ ಪಾಪ್​ ಸಿಂಗರ್​, ನಟಿ ಸೆಲೆನಾ ಗೋಮೆಜ್​ ಅವರು ಫ್ಲೋರೆನ್ಸ್​ಗೆ ವಿಹಾರಕ್ಕೆ ಹೋಗಿದ್ದಾಗಿನ ಚಿತ್ರ 14.2 ದಶಲಕ್ಷ ಲೈಕ್ಸ್​ಗಳನ್ನು ಪಡೆದುಕೊಂಡಿತ್ತು.

https://www.instagram.com/p/CEYZIPllBzF/

ರಾಕ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ಕುಸ್ತಿತಾರೆ ಡ್ವೇಯ್ನ ಜಾನ್ಸನ್ ವಿವಾಹದ ಚಿತ್ರ 14.6 ದಶಲಕ್ಷ ಲೈಕ್ಸ್‌ಗಳನ್ನು ಪಡೆದು ದಾಖಲೆ ನಿರ್ಮಿಸಿತ್ತು. ಆದ್ರೀಗ ವಿರಾಟ್ ಕೊಯ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಪ್ರಕಟಿಸಿದ ಸುದ್ದಿ ಹಿಂದಿನ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

https://www.instagram.com/p/CEYZINOpd53/
Leave A Reply

Your email address will not be published.