ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 08-08-2020

ನಿತ್ಯಭವಿಷ್ಯ : 08-08-2020

- Advertisement -

ಮೇಷರಾಶಿ
ಶುಭಕಾರ್ಯಗಳಿಗೆ ಅಧಿಕ ಖರ್ಚು, ವಯೋವೃದ್ಧರಿಗೆ ಸಹಾಯ, ಮಕ್ಕಳಿಂದ ಬೇಸರ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಸ್ವಂತ ವ್ಯಾಪಾರದಲ್ಲಿ ಲಾಭ. ಸಾಮಾಜಿಕವಾಗಿ ಸ್ಥಾನಮಾನ, ಗೌರವವು ಲಭಿಸಲಿದೆ. ಹಣಕಾಸು ವಿಚಾರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಬಹುದು. ಸ್ತ್ರೀಯರಿಗೆ ವೃತ್ತಿರಂಗದಲ್ಲಿ ಮುನ್ನಡೆ ತೋರಿ ಬರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲವಿಲ್ಲ.

ವೃಷಭರಾಶಿ
ಭಾವನಾತ್ಮಕವಾಗಿ ಏಕಾಂಗಿತನದ ಅನುಭವವಾಗಲಿದೆ. ಯಾವುದೇ ನೋವು ಯಾರದೋ ನಿರಾಕರಣೆ ನಿಮಗೆ ಮಾನಸಿಕವಾಗಿ ಕಿರಿಕಿರಿ ತಂದೀತು. ದೇಹಾರೋಗ್ಯ ದಲ್ಲಿ ತುಸು ಚೇತರಿಕೆಯು ಕಂಡು ಬರಲಿದೆ. ಶುಭವಿದೆ ಸಂಗಾತಿಯೊಂದಿಗೆ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ವಿಷಯದಿಂದ ತೊಂದರೆ, ತಂದೆಯಿಂದ ಬೇಸರ, ಉದ್ಯೋಗ ಬದಲಾವಣೆ, ಬಂಧು ಬಾಂಧವರಿಂದ ಲಾಭ.

ಮಿಥುನರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ನಿಮ್ಮ ಬಾಹ್ಯ ಸ್ವರೂಪ ಚಂದಗಾಣಿಸಲು ಆಧ್ಯತೆ ಕೊಡುವಿರಿ. ಇತರರ ಮೆಚ್ಚುಗೆ ಪಡೆಯಲು ಒದ್ದಾಟವಿದೆ. ಆದರೂ ನಿಮ್ಮ ಉದ್ದೇಶವು ಈಡೇರಲಿದೆ. ಎಲ್ಲರಿಂದ ಮೆಚ್ಚುಗೆ ಗಳಿಸುವಿರಿ. ಸಂಚಾರದಲ್ಲಿ ಭಯವಿದೆ.ವಾಹನ ಅಪಘಾತಗಳು, ಆರ್ಥಿಕ ತೊಂದರೆ, ಮಾತಿನಿಂದ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಅಭಿವೃದ್ಧಿ

ಕಟಕರಾಶಿ
ಸ್ವಂತ ಕಾರ್ಯಗಳಲ್ಲಿ ಹಿನ್ನಡೆಯಾದರೂ ಜಯ, ಅನಾರೋಗ್ಯ, ಶತ್ರು ದಮನ, ಮಿತ್ರರಿಂದ ಅನುಕೂಲ, ಮಕ್ಕಳಿಂದ ಬೇಸರ, ಉದ್ಯೋಗ ಪ್ರಾಪ್ತಿ ಮತ್ತು ಲಾಭ, ಸಾಂಸಾರಿಕವಾಗಿ ಭಾವನಾತ್ಮಕವಾಗಿ ಏರುಪೇರಿನ ದಿನ. ಈ ವಿಚಾರದಲ್ಲಿ ಸಂಬಂಧಿಸಿದವರು ಸೂಕ್ಷ್ಮವಾಗಿ ಸ್ಪಂದಿಸಲಾರದು. ನಿಮ್ಮ ಅಹವಾಲು ಫ‌ಲ ಕಾಣಲಾರದು. ವಿದ್ಯಾರ್ಥಿಗಳಿಗೆ ನಿರುತ್ಸಾಹವು ಕಾಡಲಿದೆ.

ಸಿಂಹರಾಶಿ
ನಿಮ್ಮ ಆರ್ಥಿಕ ಸಮಸ್ಯೆಗಳು ನೀಗಲಿವೆ. ಮಾನಸಿಕ ಒತ್ತಡಗಳು, ಸಂಗಾತಿಯಲ್ಲಿ ಬೇಜವಾಬ್ದಾರಿತನ, ಹಿರಿಯರ ನಿಂದನೆ, ವಾಹನದಿಂದ ತೊಂದರೆ, ಅಧಿಕ ಖರ್ಚು. ಬಾಕಿಯಾದ ಕೆಲಸವನ್ನು ಇಂದು ಪೂರೈಸಲು ಯತ್ನಿಸ  ಬೇಕಾದೀತು. ಇಲ್ಲವಾದರೆ ಅದುವೇ ನಿಮಗೆ ದೊಡ್ಡ ಹೊರೆಯಾದೀತು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ.

ಕನ್ಯಾರಾಶಿ
ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ಅಥವಾ ವಾಹನ ಲಾಭ, ಮಕ್ಕಳ ವಿಷಯದಲ್ಲಿ ಆತಂಕ, ದುಶ್ಚಟಗಳು ಅಧಿಕ, ಕುಟುಂಬ ಕಲಹ ಕಾಲಿಗೆ ಪೆಟ್ಟು, ವಿದ್ಯಾಭ್ಯಾಸ ತೊಂದರೆ ಮಂದತ್ವ. ಕಾರ್ಯ ಒಂದನ್ನು ಮಾಡಬೇಕೇ, ಬೇಡವೇ ಎಂಬ ಸಂದಿಗ್ದತೆ ಇಂದು ನಿಮ್ಮನ್ನು ಕಾಡಲಿದೆ. ಯಾವುದೇ ನಿರ್ಧಾರಗಳನ್ನು ತಾಳಿದರೂ ವಿವಾದವು ನಿಮ್ಮ ಬೆಂಬಿಡಲಾರದು. ಕೆಲವರ ಕುರಿತಾದ ಪೂರ್ವಗ್ರಹ ಉತ್ತಮವಲ್ಲ.

ತುಲಾರಾಶಿ
ಅನಗತ್ಯ ತಿರುಗಾಟ ಶಕ್ತಿದೇವತೆಗಳ ದರ್ಶನ, ಬಂಧುಗಳಿಂದ ಅಪಮಾನ, ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಶತ್ರು ಕಾಟ, ಯಾವುದೇ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ಮುಂದುವರಿಯಿರಿ. ನಿಜ ವಿಷಯ ತಿಳಿಯಲು ಪ್ರಯತ್ನಿಸ ಬೇಕಾಗುತ್ತದೆ. ಹೊಂದಾಣೆಕೆಯು ನಿಮ್ಮನ್ನು ಕಾಪಾಡಲಿದೆ. ಅನಿರೀಕ್ಷಿತ ರೂಪದಲ್ಲಿ ಸಂಚಾರ ಯೋಗವಿದೆ.

ವೃಶ್ಚಿಕರಾಶಿ
ಕುಟುಂಬಸ್ಥರಿಂದ ಅಥವಾ ಸ್ನೇಹಿತರಿಂದ ಕೊಡುಗೆ ಪಡೆಯುವ ಸಂಭವವಿದೆ. ಎಲ್ಲರೊಡನೆ ಬೆರೆಯುವುದರಿಂದ ಮೆಚ್ಚುಗೆ ಹಾಗೂ ಸಂತಸವನ್ನು ಪಡೆಯಲಿದ್ದೀರಿ. ಆರ್ಥಿಕವಾಗಿ ಗೊಂದಲದ ಸ್ಥಿತಿ ಕಂಡು ಬರಲಿದೆ. ಸ್ತ್ರೀಯರಿಂದ ಆರ್ಥಿಕ ಸಹಾಯ, ವಾಗ್ವಾದಗಳು, ದುರಾಭ್ಯಾಸಗಳು, ಪ್ರಯಾಣದಲ್ಲಿ ತೊಂದರೆ, ಮಾನಸಿಕವಾಗಿ ಆತಂಕ, ಕುಟುಂಬದಲ್ಲಿ ತಂತ್ರದ ಭೀತಿಗಳು.

ಧನಸ್ಸುರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ವೇದನೆ, ಆಗಾಗ ಮನೆಯಲ್ಲಿ ಸಂಘರ್ಷ, ವಾದ, ವಿವಾದಗಳು ನಡೆಯಬಹುದು. ಆದರೆ ಅದನ್ನು ಸಮಾಧಾನದಿಂದ ಬಗೆ ಹರಿಸುವುದರಲ್ಲಿ ನೀವು ಸಫ‌ಲರಾಗುವಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ಹರಿಸುವುದು ಆವಶ್ಯಕ. ಆಕಸ್ಮಿಕವಾಗಿ ದೇವಮಾನವರ ದರ್ಶನ, ಚಂಚಲ ಮನಸ್ಥಿತಿ, ಸ್ಥಿರಾಸ್ಥಿಯಿಂದ ನೋವು, ಆರ್ಥಿಕ ಹಿನ್ನಡೆ

ಮಕರರಾಶಿ
ಶುಭ ಸಮಾಚಾರಗಳು, ಧನ ಸಂಪಾದನೆಗೆ ಮುಂದಾಗುವುದು, ಮಕ್ಕಳ ಚಿಂತೆ, ಯಂತ್ರೋಪಕರಣಗಳಿಂದ ತೊಂದರೆ, ಬಂಧುಗಳಿಂದ ನೋವು ಮತ್ತು ನಷ್ಟ, ಸ್ವಂತ ಉದ್ಯಮದಲ್ಲಿ ತೊಂದರೆ. ಹಲವರ ಕುರಿತು ಪೂರ್ವಾಗ್ರಹ ಉತ್ತಮವಲ್ಲಾ. ಆರ್ಥಿಕ ಸಮಸ್ಯೆ ನೀಗಲಿದೆ. ಬಾಕಿಯಾದ ಕೆಲಸಕಾರ್ಯವನ್ನು ಇಂದೇ ಪೂರೈಸಲು ಯತ್ನಿಸಬೇಕು. ಸಾಂಸಾರಿಕವಾಗಿ ಯೋಗ್ಯ ವಯಸ್ಕರಿಗೆ ಕಂಕಣಬಲ ಪ್ರಾಪ್ತಿ.

ಕುಂಭರಾಶಿ
ಎಲ್ಲಾ ವಿಚಾರದಲ್ಲಿ ಸಂದಿಗ್ಧತೆ ನಿಮ್ಮನ್ನು ಕಾಡಲಿದೆ. ಯಾವುದೇ ನಿರ್ಧಾರ ತಾಳಿದರೂ ವಿವಾದವು ನಿಮ್ಮನ್ನು ಬಿಡಲಾರದು. ಇಂದಿನ ದಿನಚರಿ ಮಾನಸಿಕವಾಗಿ ಸಮಾಧಾನ ಕೊಡಲಾರದು. ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿರಿ. ಕಾರ್ಯ ಜಯ, ವೃತ್ತಿಪರರಿಗೆ ಅನುಕೂಲ, ಅಪವಾದ ಮತ್ತು ನಷ್ಟ, ಅನಾರೋಗ್ಯ ತಂತ್ರ ಭೀತಿ.

ಮೀನರಾಶಿ
ಅನಾವಶ್ಯಕವಾಗಿ ಕೆಲಸಕಾರ್ಯಗಳಲ್ಲಿ ತಪ್ಪು ಅಭಿಪ್ರಾಯ ಕಾಡಬಹುದು. ಬಂದ ವಿವಾದವನ್ನು ಚೆನ್ನಾಗಿ ಅರ್ಥೈಸಿಕೊಂಡು ಮುಂದುವರಿಯುವುದು ಉತ್ತಮ. ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡು ಬರಲಿವೆ. ಉದ್ಯೋಗ ಪ್ರಗತಿ, ಮಕ್ಕಳಿಂದ ನೋವು ಸಂಶಯಗಳು ಭಾವನೆಗೆ ಪೆಟ್ಟು, ಬಾಲ ಗ್ರಹ ದೋಷ, ಆಧ್ಯಾತ್ಮ ಒಲವು, ಹಿರಿಯರಿಗಾಗಿ ಮತ್ತು ಯತ್ರೋಪಕರಣಗಳಿಗಾಗಿ ಖರ್ಚು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular