ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 08-10-2020

ನಿತ್ಯಭವಿಷ್ಯ : 08-10-2020

- Advertisement -

ಮೇಷರಾಶಿ
ನೋಂದಣಿ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳೊಂದಿಗೆ ಕಲಹ ಮತ್ತು ಕಿರಿಕಿರಿ, ಆರೋಗ್ಯ ಸಮಸ್ಯೆಗಳು ಹೆಚ್ಚು. ವೈಭವೋಪೇತವಾದ ಜೀವನವನ್ನು ನಡೆಸಿರುವ ನಿಮಗೆ ಸ್ವಲ್ಪ ಕಷ್ಟವೆನಿಸಬಹುದು. ಪತ್ನಿ ಹಾಗೂ ಮಕ್ಕಳಿಂದ ಕಿರಿಕಿರಿ ಆದರೂ ಸಹಿಸಬಹುದಾಗಿದೆ. ಕಾರ್ಯರಂಗ ದಲ್ಲಿ ಉತ್ತಮ ಆಭಿವೃದ್ಧಿಯು ಕಂಡು ಬರುವುದು.

ವೃಷಭರಾಶಿ
ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುವುದು. ಆರ್ಥಿಕ ಸಹಾಯ, ಭೂಮಿ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದ, ಮಾನಸಿಕ ನೆಮ್ಮದಿಗೆ ಭಂಗ. ನಿಮ್ಮ ಧೈರ್ಯವು ನಿಮಗೆ ಶ್ರೀರಕ್ಷೆಯಾಗಲಿದೆ. ದೇವರ ಮೇಲೆ ವಿಶ್ವಾಸವಿಡುವುದು. ನಿಮ್ಮ ಇಷ್ಟಾರ್ಥವು ಸಿದ್ದಿಸಲಿದೆ. ಹಿಡಿದ ಕೆಲಸಕಾರ್ಯಗಳು ನಿಮ್ಮ ಪರವಾಗಲಿದೆ.

ಮಿಥುನರಾಶಿ
ನಿಮ್ಮ ಋಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕವಾಗಿ ಚಿಂತಿಸಿರಿ. ಸಂಕಷ್ಟಗಳು ಬಂದರೂ ಅದನ್ನು ಎದುರಿಸುವ ಶಕ್ತಿಯು ನಿಮಗೆ ಒದಗಿ ಬರಲಿದೆ. ಮನೆಯಲ್ಲಿ ಗೃಹೋಪಕರಣಗಳ ಖರೀದಿ ಇದ್ದೀತು.

ಕಟಕರಾಶಿ
ತರ್ಕವೆಲ್ಲಾ ನಿಮ್ಮನ್ನು ಸುತ್ತುವರಿಯಲಿದೆ. ಅನಿರೀಕ್ಷಿತವಾಗಿ ಕಷ್ಟಗಳು ಕರಗಿ ಹೋದಾವು. ಶ್ರೀಗುರುವಿನ ಅನುಗ್ರಹವು ನಿಮ್ಮನ್ನು ಕಾಪಾಡಲಿದೆ. ದೂರ ಪ್ರದೇಶಗಳಿಗೆ ತೆರಳುವ ಸಂಭವ, ಅನಗತ್ಯ ಮಾತಿನಿಂದ ಕಲಹಗಳು, ಅವಕಾಶ ವಂಚಿತರಾಗುವಿರಿ. ಸಂಕಷ್ಟ ಮತ್ತು ಕಲಹಗಳು, ನೆರೆಹೊರೆಯವರಿಂದ ಕಿರಿಕಿರಿ, ಮಿತ್ರರಿಂದ ನಷ್ಟ. ಹಿರಿಯರಿಂದ ಹಿತವಚನ ಕೇಳಿ ಬಂದೀತು. ಕಿರು ಪ್ರಯಾಣ ಇರುತ್ತದೆ.

ಸಿಂಹರಾಶಿ
ಉತ್ತಮ ಅವಕಾಶಗಳು, ಯೋಗ ಯೋಗಗಳು ಪ್ರಾಪ್ತಿ, ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಅವಘಡ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ. ದುಗುಡ, ಉದ್ವೇಗವನ್ನು ಬಿಟ್ಟುಬಿಡಿರಿ. ನಿಮ್ಮ ಜೀವನವು ನಿಮ್ಮ ಕೈಯಲ್ಲಿರುತ್ತದೆ. ಈಗ ನಿಮಗೆ ಸಮಯವು ಒಳ್ಳೆಯದಿದೆ. ಧೈರ್ಯವಹಿಸಿ ಹೆಜ್ಜೆಯನ್ನು ಮುಂದಿಡಿರಿ.

ಕನ್ಯಾರಾಶಿ
ಆಕಸ್ಮಿಕ ಉದ್ಯೋಗ ನಷ್ಟ, ಸ್ವಂತ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ವ್ಯಕ್ತಿಗಳಿಂದ ತೊಂದರೆ, ರಾಜಯೋಗದ ದಿವಸ. ವಿವಿಧ ರಂಗಗಳಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ. ನೀವು ಕೈಹಿಡಿದ ಕೆಲಸ ಹೂ ಎತ್ತಿ ಇಟ್ಟಿ ಹಾಗೆ ಸುಲಭ ರೂಪದಲ್ಲಿ ಆಗಲಿದೆ. ಹಂತ ಹಂತವಾಗಿ ಅಭಿವೃದ್ಧಿಯು ತೋರಿ ಬಂದು ಸಮಾಧಾನವನ್ನು ನೀಡಲಿದೆ.

ತುಲಾರಾಶಿ
ನಾನಾ ರೀತಿಯಲ್ಲಿ ಕೆಲಸಕಾರ್ಯಗಳಿಗೆ ಅನುಕೂಲ ಕಂಡು ಬರಲಿದೆ. ಆಗಾಗ ಅನಿರೀಕ್ಷಿತ ಫ‌ಲಾಭಿಪ್ರಾಯವು ಬದಲಾವಣೆ ತಂದೀತು. ಪ್ರಯಾಣ ಮಾಡುವ ಸಂದರ್ಭ, ದಾಂಪತ್ಯದಲ್ಲಿ ವಾಗ್ವಾದಗಳು ಸಹೋದ್ಯೋಗಿಗಳಿಂದ ತೊಂದರೆ. ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಜಯ ಸಿಗಲಿದೆ. ಆರೋಗ್ಯದಲ್ಲಿ ಜಾಗ್ರತೆ.

ವೃಶ್ಚಿಕರಾಶಿ
ದೂರದ ಊರಿಂದ ಬಂಧುಗಳ ಆಗಮನವಿದ್ದೀತು. ದೇವತಾ ಕಾರ್ಯಗಳಿಗೆ ಇದು ಸುಸಮಯವಾಗಿದೆ. ಪ್ರಯಾಣಕ್ಕೆ ಅಡೆತಡೆಗಳು, ಸಾಲಗಾರರಿಂದ ಮಾನಹಾನಿ, ಆರೋಗ್ಯ ಸಮಸ್ಯೆಗಳಿಂದ ದೂರಾಲೋಚನೆ, ಜೀವನದ ಬಗ್ಗೆ ಬೇಸರ. ದುಂದುವೆಚ್ಚಗಳಿಗೆ ಕಡಿವಾಣ ಹಾಕಿರಿ. ಇತರರ ಬಗ್ಗೆ ಮೂಗು ತೂರಿಸುವ ಅವಕಾಶ ಕೈಗೊಳ್ಳದಿದ್ದರೆ ಒಳ್ಳೆಯದು.

ಧನಸ್ಸುರಾಶಿ
ಅನಾವಶ್ಯಕವಾಗಿ ಚಿಂತಿಸುವುದು ಅಗತ್ಯವಿಲ್ಲಾ. ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ ಮಕ್ಕಳಲ್ಲಿ ವೈರತ್ವ, ದೂರ ಪ್ರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ. ಎಲ್ಲವೂ ನಿಮ್ಮೆಣಿಕೆಯಂತೆ ನಡೆಯಲಾರದು ಆದರೂ ನಿಮ್ಮ ಇಷ್ಟಾರ್ಥವು ಸಿದಿ§ಯಾಗಲಿದೆ. ಉದರ, ಶೀತ, ಕಫ‌ ಬಾಧೆಯ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ.

ಮಕರರಾಶಿ
ವಸ್ತುಗಳ ಕಳವು ಮತ್ತು ನಷ್ಟ, ಮಿತ್ರರಿಂದ ಸಂಕಷ್ಟ ಮತ್ತು ಕುತಂತ್ರ, ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುವುದು. ಅನಿರೀಕ್ಷಿತವಾಗಿ ದೈವಾನುಗ್ರಹವು ನಿಮಗೊದಗಿ ಬಂದೀತು. ಚಂಚಲಚಿತ್ತದಿಂದ ಕೆಲಸಗಳು ಹಾಳಾದಾವು. ಉದ್ಯೋಗರಂಗದಲ್ಲಿ ಹೆಚ್ಚು ಏರಿಳಿತವಿರದು. ದ್ವಂದ್ವ ಮನಸ್ಸು ಮಾಡದಿರಿ. ಕೈಗೊಂಡ ಕಾರ್ಯವು ನನಸಾದೀತು.

ಕುಂಭರಾಶಿ
ಬೇಸಾಯಗಾರರಿಗೆ ಉತ್ತಮ ಲಾಭವು ತೋರಿ ಬರಲಿದೆ. ಹೆಣ್ಣುಮಕ್ಕಳಿಂದ ಶತ್ರುತ್ವ, ಬಂಧುಗಳಿಂದ ನೆರೆಹೊರೆಯವರಿಂದ ದಾಂಪತ್ಯದಲ್ಲಿ ವಿರಸ, ಮಕ್ಕಳ ಚಿಂತೆಗಳು ಅತಿ ಹೆಚ್ಚು ಬಾಧಿಸುವುದು. ವ್ಯಾಪಾರ, ವ್ಯವಹಾರದಲ್ಲಿ ಒಳ್ಳೆಯ ಲಾಭವು ತೋರಿ ಬಂದೀತು. ಮಂಗಲಕಾರ್ಯಕ್ಕಾಗಿ ಈಗ ಉತ್ತಮಬಲವು ಕೂಡಿ ಬಂದಿದೆ. ಕಿರು ಪ್ರಯಾಣ ಇರುವುದು.

ಮೀನರಾಶಿ
ಅನಿರೀಕ್ಷಿತ ರೂಪದಲ್ಲಿ ಶ್ರೀದೇವರ ಅನುಗ್ರಹವು ನಿಮ್ಮ ಪಾಲಿಗೆ ಒದಗಿ ಬರಲಿದೆ. ಮಕ್ಕಳಿಗೆ ಭೂಮಿ ಒಲಿದು ಬರುವುದು, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸುಗಳಲ್ಲಿ ಜಯ, ಮಾನಸಿಕ ನೆಮ್ಮದಿ ಪ್ರಾಪ್ತಿ. ಮಂಗಲಕಾರ್ಯದ ನಿಮಿತ್ತ ಪ್ರವಾಸ ತೋರಿ ಬರುವುದು. ಹಿರಿಯರೊಂದಿಗೆ ಉತ್ತಮ ನಡತೆಯು ಅಗತ್ಯವಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular