ಬಿಎಸ್ವೈ ಪರ್ಯಾಯ ನಾಯಕತ್ವಕ್ಕೆ ಬಿಜೆಪಿ ಸಿದ್ಧತೆ : ಸದ್ದಿಲ್ಲದೇ ಸಮರಾಂಗಣಕ್ಕೆ ಸಿ.ಟಿ.ರವಿ

0
  • ಪೂರ್ಣಿಮಾ ಹೆಗಡೆ

ಬೆಂಗಳೂರು : ರಾಜ್ಯ ಬಿಜೆಪಿಗೆ ಭರ್ಜರಿ ಸರ್ಜರಿ ಮಾಡೋಕೆ ಮುಂದಾಗಿರೋ ಹೈಕಮಾಂಡ್,ಸಿಎಂ ಬಿಎಸ್ವೈಗೆ ಪರ್ಯಾಯ ನಾಯಕತ್ವ ಹುಟ್ಟುಹಾಕುವ ಹಾಗೂ ಬೆಳೆಸುವ ಪ್ರಯತ್ನದಲ್ಲಿದ್ದ್ಯಾ? ಹೌದು, ಅಂತಿದೆ ರಾಜಕೀಯ ವಲಯಗಳು. ಇದಕ್ಕೆ ಸಾಕ್ಷಿ ಒದಗಿಸುತ್ತಿರೋದು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಉಸ್ತುವಾರಿಯಾಗಿ ಮಾಜಿ ಸಚಿವ, ಶಾಸಕ ಸಿ.ಟಿ.ರವಿ ನೇಮಕ ಆದೇಶ.

ಸಿಎಂ ಬಿಎಸ್ವೈ ಬಿಜೆಪಿಯ ಪ್ರಶ್ನಾತೀತ ನಾಯಕ ಅನ್ನೋದರಲ್ಲಿ ಎರಡನೇ ಮಾತಿಲ್ಲ. ಆದರೆ ಕಾಲಕಳೆದಂತೆ ಎಲ್ಲರಂತೆ ಸಿಎಂ ಬಿಎಸ್ವೈ ಕೂಡ ಕುಟುಂಬ ರಾಜಕಾರಣಕ್ಕೆ ಮನಸ್ಸು ಮಾಡ್ತಿರೋದು ಕಟ್ಟಾ ಬಿಜೆಪಿಗರಲ್ಲಿ ಅಸಮಧಾನ ಮೂಡಿಸಿದೆ. ಹೀಗಾಗಿ ಬಿಎಸ್ವೈಗೆ ವಿರುದ್ಧ ದಿಕ್ಕಿನಲ್ಲಿರೋ ಆರ್.ಎಸ್.ಎಸ್ ಮೂಲದ ಸಂತೋಷಜೀ ಹಾಗೂ ತಂಡ ನಿಧಾನಕ್ಕೆ ಬಿಎಸ್ವೈಗೆ ಪರ್ಯಾಯವಾದ ಹಾಗೂ ಅಷ್ಟೇ ಪ್ರಭಾವಿಯಾದ ನಾಯಕತ್ವವೊಂದನ್ನು ಹುಟ್ಟುಹಾಕುವ ಯತ್ನದಲ್ಲಿದ್ದು, ಇದರ ಪೂರ್ವತಯಾರಿಯಾಗಿಯೇ ಸಿ.ಟಿ.ರವಿಯವರನ್ನು ಕರ್ನಾಟಕದ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಮುಂದಿನ 2024 ರ ಚುನಾವಣೆ ವೇಳೆಗೆ ಸಿ.ಟಿ.ರವಿ ರಾಜ್ಯದಲ್ಲಿ ಪ್ರಭಾವಿ ಉಸ್ತುವಾರಿಯಾಗಿ ಪಕ್ಷ ಸಂಘಟಿಸಿ, ಚುನಾವಣೆ ಗೆಲ್ಲಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬಿಎಸ್ವೈಗೆ ಟಾಂಗ್ ನೀಡಿದರು ಅಚ್ಚರಿಯೇನಿಲ್ಲ. ಸಿಎಂ ಬಿಎಸ್ವೈ ಬಿಜೆಪಿಗೆ ಇದುವರೆಗೂ ಅನಿವಾರ್ಯವಾಗಿದ್ದರು.

ಆದರೆ ಈಗ ಪಕ್ಷ ಅಮಿತ್ ಶಾ ಮತ್ತು ನರೇಂದ್ರ ಮೋದಿಯಂತಹ ಚಾಣಾಕ್ಷ ಕೈಸೇರಿರೋದರಿಂದ ಎಲ್ಲವೂ ವ್ಯಕ್ತಿಗಿಂತ ಪಕ್ಷದ ಬೆಳವಣಿಗೆ ಯ ದೃಷ್ಟಿಕೋನದಿಂದ ನಡೆಸೋದರಲ್ಲಿ ಅನುಮಾನವಿಲ್ಲ. ಹೀಗಾಗಿ ನಿಧಾನಕ್ಕೆ ಬಿಎಸ್ವೈ ಪ್ರಭಾವಕ್ಕೆ ಬ್ರೇಕ್ ಹಾಕಿ ಸಿಟಿ ರವಿಯವರನ್ನು ಪೂರ್ಣಪ್ರಮಾಣದಲ್ಲಿ ಬೆಳೆಸುವ ಲೆಕ್ಕಾಚಾರ ಹೈಕಮಾಂಡ್ ಗೆ ಇದ್ದಂತಿದೆ.

ಪಕ್ಷದಲ್ಲೂ ಹಾಗೂ ರಾಜಕೀಯದಲ್ಲೂ ಇದುವರೆಗೂ ಶುದ್ಧ ಹಸ್ತರಾಗಿಯೇ ಗುರುತಿಸಿಕೊಂಡಿರೋ ಸಿ.ಟಿ.ರವಿ, ಮುಂದೊಂದು ದಿನ ಬಿಜೆಪಿಯ ಸಿಎಂ ಕ್ಯಾಂಡಿಡೇಟ್ ಎಂಬುದರಲ್ಲಿ ಅನುಮಾನವಿಲ್ಲ. ಜಾತಿ ಲೆಕ್ಕಾಚಾರದಲ್ಲೂ ಒಕ್ಕಲಿಗರಾಗಿರೋದು ಸಿ.ಟಿ.ರವಿಗೆ ವರವಾಗಿದೆ.

ಇನ್ನೊಂದೆಡೆ ಸಿ.ಟಿ.ರವಿ ಕೇಂದ್ರ ನಾಯಕರಾದ ಅಮಿತ್ ಶಾ, ನರೇಂದ್ರ ಮೋದಿ, ಜೆ.ಪಿ.ನಡ್ಡಾ ಸೇರಿದಂತೆ ಎಲ್ಲರ ಜೊತೆಯೂ ಒಳ್ಳೆಯ ಸಂಬಂಧ ಹೊಂದಿದ್ದು, ಪಕ್ಷಕ್ಕಾಗಿನ ಅವರ ದುಡಿಮೆ ಗುರುತಿಸಿಯೇ ಇದೀಗ ಬಿಜೆಪಿ ಹೈಕಮಾಂಡ್ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಕರ್ನಾಟಕದ ನಾಯಕರನ್ನೇ ಉಸ್ತುವಾರಿಯನ್ನಾಗಿ ನೇಮಿಸಿದೆ. ಅಷ್ಟೇ ಅಲ್ಲ ಕರ್ನಾಟಕದ ಜೊತೆ ಆಂಧ್ರಪ್ರದೇಶ, ತೆಲಂಗಾಣ,ಪುದುಚೆರಿ, ಕೇರಳ, ತಮಿಳುನಾಡಿನ ಬಿಜೆಪಿ ಹೊಣೆಗಾರಿಕೆಯೂ ಸಿ.ಟಿ.ರವಿ ಹೆಗಲೇರಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ.ರವಿ ಬಿಜೆಪಿಯ ಸಜ್ಜನ ರಾಜಕಾರಣಿ ಎಂದೇ ಗುರುತಿಸಿ ಕೊಂಡವರು. ಪಕ್ಷದ ಮಾತಿಗೆ ಮನ್ನಣೆ ನೀಡಿ ಯಾವುದೇ ಸದ್ದುಗದ್ದಲವಿಲ್ಲದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಟಿ.ರವಿ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಿದರೇ ಅದರಲ್ಲಿ ಅಚ್ಚರಿಪಡುವಂತ ವಿಚಾರವಿಲ್ಲ.

ರಾಜಕೀಯ ತುರ್ತು ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಚುಕ್ಕಾಣಿ ಹಿಡಿದು ಗೆದ್ದು ಬಂದು, ಸರ್ಕಾರ ರಚಿಸಿ ಮುಖ್ಯಮಂತ್ರಿ ಆದರೂ ಕೂಡ ಬಿಜೆಪಿಯಲ್ಲೇ ಬಿಎಸ್ವೈ ಆಡಳಿತ ವೈಖರಿ, ಅವರ ಪುತ್ರ ವಿಜಯೇಂದ್ರ್ ಅವರ ಆಡಳಿತ ಹಸ್ತಕ್ಷೇಪ ಎಲ್ಲವೂ ಪಕ್ಷದ ಗಮನದಲ್ಲಿದೆ.

ಹೀಗಾಗಿ ಮುಂದೊಂದು ದಿನ ಎದುರಾಗಬಹುದಾದ ನಾಯಕತ್ವದ ಬ್ಲ್ಯಾಕ್ಮೇಲ್ ಗೆ ಹೆದರಬಾರದೆಂಬ ಕಾರಣಕ್ಕೆ ಯಡಿಯೂರಪ್ಪನವರಿಗೆ ಪರ್ಯಾಯ ನಾಯಕತ್ವವಾಗಿ ಚಿಕ್ಕಮಗಳೂರಿನ ಕಲಿ ಸಿ.ಟಿ.ರವಿಯವರನ್ನು ಮುನ್ನಲೆಗೆ ತರಲಾಗುತ್ತಿದೆ ಎನ್ನುತ್ತಿದ್ದಾರೆ ಬಿಜೆಪಿ ನಡೆಗಳನ್ನು ಬಲ್ಲ ಹಿರಿಯ ವಿಶ್ಲೇಷಕರು.

Leave A Reply

Your email address will not be published.