ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 28-07-2020

ನಿತ್ಯಭವಿಷ್ಯ : 28-07-2020

- Advertisement -

ಮೇಷರಾಶಿ
ಮಹಿಳೆಯರಿಗೆ ಅನುಕೂಲ, ವ್ಯವಹಾರಗಳಲ್ಲಿ ಲಾಭ. ಶತ್ರುಗಳಿಂದ ತೊಂದರೆ, ಪ್ರವಾಸ ಯೋಗದಿಂದ ಸಂತೋಷವಾದೀತು. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಅನುಕೂಲವಾದ ಉತ್ತಮ ಫ‌ಲಿತಾಂಶ ಲಭಿಸಲಿದೆ. ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೆಪಟ್ಟಾರು. ರಾಜಕೀಯದವರಿಗೆ ಶುಭವಿದೆ. ಋಣ ಬಾಧೆಯಿಂದ ಮುಕ್ತಿ, ಮಿಶ್ರ ಫಲ ಯೋಗ.

ವೃಷಭರಾಶಿ
ಆತ್ಮೀಯರಿಂದ ಸಹಕಾರ, ಶುಭಕಾರ್ಯ ನಿಮಿತ್ತ ಓಡಾಟ, ಭೂ ವ್ಯವಹಾರಗಳಲ್ಲಿ ಅನುಕೂಲ, ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳಬೇಕಾದೀತು. ಲಾಟರಿ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ, ಸೂಕ್ತ ಸಲಹೆಗಳು ನಿಮಗೆ ಉಪಯುಕ್ತವಾಗಲಿವೆ. ಸಂತಸವಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣಕ್ಕೆ ಮನಸ್ಸು.

ಮಿಥುನರಾಶಿ
ಪತ್ನಿಯ ಬಹು ದಿನಗಳ ಕನಸು ಸದ್ಯದಲ್ಲೇ ನನಸಾದೀತು. ಸ್ಥಳ-ಗೃಹ ಬದಲಾವಣೆಗೆ ಮನಸ್ಸು, ಬಂಧುಗಳ ಭೇಟಿ, ಪುಣ್ಯ ಕ್ಷೇತ್ರದ ದರ್ಶನ, ವೈಯಕ್ತಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯಾದೀತು. ಯೋಗ್ಯ ವಯಸ್ಕರಿಗೆ ಇದು ಉತ್ತಮ ಕಾಲ. ಸರಕಾರೀ ಕೆಲಸದಲ್ಲಿ ಹಿನ್ನಡೆ ಇರುತ್ತದೆ. ಅಧಿಕವಾದ ಖರ್ಚು, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.

ಕಟಕರಾಶಿ
ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಸಮಾಧಾನ ತರಬಲ್ಲವು. ಯತ್ನ ಕಾರ್ಯದಲ್ಲಿ ಜಯ, ದೂರ ಸಂಚಾರದಲ್ಲಿ ಸಂತಸ ತಂದರೂ ಅನಿರೀಕ್ಷಿತ ರೂಪದಲ್ಲಿ ಅಡಚಣೆಗಳಿರುತ್ತವೆ. ದೇವತಾ ಕಾರ್ಯಗಳು ಮನಸ್ಸಿಗೆ ಸಮಾಧಾನವನ್ನು ನೀಡಲಿವೆ. ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಸ್ತ್ರೀಯರಿಗೆ ಚಿನ್ನಾಭರಣ ಯೋಗ, ಶುಭ ಫಲ ಪ್ರಾಪ್ತಿ.

ಸಿಂಹರಾಶಿ
ಹಣಕಾಸು ಪರಿಸ್ಥಿತಿ ಚೇತರಿಕೆ, ನೆಮ್ಮದಿ ಇಲ್ಲದ ಜೀವನ. ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರೋಗ್ಯದಲ್ಲಿ ಏರುಪೇರು, ಅವಿವಾಹಿತರು ಭಾಗ್ಯಶಾಲಿಗಳಾದಾರು. ಧನಬಲ, ಜನಬಲ ಪ್ರಾಪ್ತಿಗಾಗಿ ಸಕಲ ಕಾರ್ಯಗಳಲ್ಲಿ ಮುನ್ನಡೆಗೆ ಸಾಧ್ಯವಾಗಲಿದೆ. ಹಿರಿಯರ ಪ್ರೀತಿ ಉತ್ಸಾಹಗಳಿಂದ ಮಾನಸಿಕ ಶಾಂತಿ ಸಮಾಧಾನ ಸಿಗಲಿದೆ. ದಿನಾಂತ್ಯ ಶುಭವಿದೆ.

ಕನ್ಯಾರಾಶಿ
ಸಾಲದಿಂದ ಮುಕ್ತರಾಗುವ ಸಾಧ್ಯತೆ. ದೂರ ಪ್ರಯಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಗೃಹದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾದೀತು. ವಾಹನ ಸಂಚಾರ, ರಿಪೇರಿ ಕೆಲಸಗಳಿಗಾಗಿ ನಾನಾ ರೀತಿಯಲ್ಲಿ ಖರ್ಚು ಬಂದೀತು. ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ಆರೋಗ್ಯಕ್ಕೆ ಆಗಾಗ ತಪಾಸಣೆ ಅಗತ್ಯವಿದೆ. ಅಕಾಲ ಭೋಜನ, , ಮಾನಸಿಕ ನೆಮ್ಮದಿ.

ತುಲಾರಾಶಿ
ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ, ಅವಿವಾಹಿತರಿಗೆ ವೈವಾಹಿಕ ಭಾಗ್ಯಕ್ಕೆ ಹೊಸ ಸಂಬಂಧಗಳು ಒದಗಿಬರುತ್ತವೆ. ನಿರುದ್ಯೋಗಿಗಳ ಅಲೆದಾಟ ಕಡಿಮೆಯಾಗಲಿದೆ. ಧನಾಗಮನವು ಉತ್ತಮವಿದ್ದರೂ ಖರ್ಚು ಅಷ್ಟೇ ಬರಲಿದೆ. ಗೃಹದಲ್ಲಿ ಧಾರ್ಮಿಕ ಕಾರ್ಯ ನಡೆದೀತು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ವೃಶ್ಚಿಕರಾಶಿ
ಜನ ಸ್ನೇಹ, ಪ್ರೀತಿಯಿಂದ ಸಕಲ ಕಾರ್ಯದಲ್ಲೂ ಜಯಶೀಲರಾಗುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ನೆಮ್ಮದಿಗೆ ಭಂಗ, ಅವಿವಾಹಿತರು ಭಾಗ್ಯಶಾಲಿಗಳಾದಾರು. ಆಗಾಗ ಮಾನಸಿಕ ಅಶಾಂತಿ ತೋರಿಬಂದರೂ ಆತ್ಮ  ವಿಶ್ವಾಸವು ನಿಮ್ಮನ್ನು ಕಾಡಲಿದೆ. ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಇಲ್ಲ ಸಲ್ಲದ ಅಪವಾದ, ಹಿರಿಯರ ಸಲಹೆಯಿಂದ ಮನಃಶಾಂತಿ.

ಧನಸ್ಸುರಾಶಿ
ದೇವರ ಕಾರ್ಯಗಳಲ್ಲಿ ಭಾಗಿ, ಹಿರಿಯರಿಗೆ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ದೊರೆಯಲಿವೆ. ಮಿತ್ರರ ಸಹಕಾರವು ಮುನ್ನಡೆಗೆ ಸಾಧಕವಾಗಲಿದೆ. ಅವಿವಾಹಿತರಿಗೆ ಒಳ್ಳೆಯ ಪ್ರಸ್ತಾವಗಳು ಒದಗಿ ಬರಲಿವೆ. ನಿರೀಕ್ಷಿತ ಮನೋಕಾಮನೆ ನೆರವೇರಲಿದೆ. ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ದುಷ್ಟರಿಂದ ತೊಂದರೆ.

ಮಕರರಾಶಿ
ಪರಿಶ್ರಮಕ್ಕೆ ತಕ್ಕ ಫಲ, ದೈವಬಲ ಇಲ್ಲದಿರುವುದರಿಂದ ಆಗಾಗ ಕಿರಿಕಿರಿಯನ್ನು ಅನುಭವಿಸುವಂತಾದೀತು. ವಾಸಸ್ಥಳದ ಬದಲಾವಣೆ ತೋರಿಬಂದೀತು. ಎಷ್ಟು ಜಾಗ್ರತೆ ಮಾಡಿದರೂ ಹಿತಶತ್ರುಗಳ ಕಾಟ ತಪ್ಪದು. ನಿರುತ್ಸಾಹವು ಕಾಡಲಿದೆ. ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗದಲ್ಲಿ ಬಡ್ತಿ, ಭೂ ವ್ಯವಹಾರಗಳಲ್ಲಿ ಲಾಭ, ಸಹೋದರರಿಂದ ಹಿತವಚನ.

ಕುಂಭರಾಶಿ
ಆಕಸ್ಮಿಕ ಧನ ಲಾಭ, ಶತ್ರುಗಳಿಂದ ತೊಂದರೆ. ಅಧಿಕವಾದ ಸಿಟ್ಟು, ಗೌರವಕ್ಕೆ ಧಕ್ಕೆ, ನಿಂದನೆಗಳಿಂದ ಮನಃಸ್ತಾಪ, ಹಿರಿಯರ ಆರೋಗ್ಯದ ಹೆಚ್ಚಿನ ಜಾಗ್ರತೆ ಮಾಡಿರಿ. ಉದ್ಯೋಗದಲ್ಲಿ ಅಭಿವೃದ್ಧಿಯು ಕಂಡುಬಂದು ಸಮಾಧಾನವಾಗಲಿದೆ. ನೂತನ ಕಾರ್ಯಾರಂಭಕ್ಕೆ ಆತುರ ಬೇಡ. ಉದ್ಯೋಗಿಗಳಿಗೆ ಬದಲಾವಣೆಯು ತೋರಿ ಬರುವುದು.

ಮೀನರಾಶಿ
ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಂದ ಕಿರಿಕಿರಿ, ದಿನಾಂತ್ಯಕ್ಕೆ ನೆಮ್ಮದಿ ವಾತಾವರಣ. ಹೊಸ ಸ್ಥಳಗಳ ಸಂದರ್ಶನದ ಭಾಗ್ಯವಿದೆ. ಕೃಷಿ ವ್ಯವಹಾರದಲ್ಲಿ ಯಶಸ್ಸಿರುತ್ತದೆ. ಅನಿರೀಕ್ಷಿತ ಅತಿಥಿಗಳ ಆಗಮನವಿರುತ್ತದೆ. ಕಾರ್ಯರಂಗದಲ್ಲಿ ಹಿನ್ನಡೆಗೆ ಸರಿದಾರು. ಮಕ್ಕಳ ಅಭ್ಯಾಸದಲ್ಲಿ ಸಮಾಧಾನವು ದೊರಕಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular