ನಿತ್ಯಭವಿಷ್ಯ : 29-07-2020

0

ಮೇಷರಾಶಿ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಲವೊಂದು ವಿಚಾರಗಳಲ್ಲಿ ನೀವೇ ಆಲೋಚಿಸಿ ಮುಂದುವರಿಯಬೇಕಾಗುತ್ತದೆ. ಶಾರೀರಿಕ ಸಮಸ್ಯೆಗಳು ಆಗಾಗ ಗೋಚರಕ್ಕೆ ಬಂದಾವು. ಜಾಗ್ರತೆ ವಹಿಸಬೇಕು. ಅಧಿಕವಾದ ತಿರುಗಾಟ, ವಾದ-ವಿವಾದ ಹೆಚ್ಚಾಗುವುದು.

ವೃಷಭರಾಶಿ
ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಆದಾಯ ಪ್ರಾಪ್ತಿ, ಕಾರ್ಯರಂಗದಲ್ಲಿ ಜನಾಪವಾದಕ್ಕೆ ಕಾರಣರಾಗದಂತೆ ಕಾಳಜಿ ವಹಿಸಿರಿ. ಸಾಂಸಾರಿಕವಾಗಿ ಖರ್ಚುವೆಚ್ಚ ಅಧಿಕವಾಗಲಿದೆ. ವಾಹನ ಖರೀದಿಗೆ ಉತ್ತಮ ಸಮಯ. ಮಾನಸಿಕ ನೆಮ್ಮದಿ, ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ಪ್ರೀತಿ.

ಮಿಥುನರಾಶಿ
ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಅನಿರೀಕ್ಷಿತ ಉದ್ಯೋಗ ಲಾಭ ನಿರುದ್ಯೋಗಿಗಳಿಗೆ ಸಿಗಲಿದೆ. ಸರಕಾರಿ ಇಲಾಖೆಯಿಂದ ಸಮಸ್ಯೆಯಾಗಲಿದೆ. ಆತ್ಮೀಯರೊಂದಿಗೆ ಕಲಹವಾಗಲಿದೆ. ಜಾಗ್ರತೆ ಇರಲಿ. ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಕಟಕರಾಶಿ
ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಶೀತ ಸಂಬಂಧಿತ ರೋಗ ಬಾಧೆ, ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಿಸಬೇಕು. ಕೆಲವೊಂದು ಮೂಲಗಳಿಂದ ಧನಾಗಮನ ವಿರುತ್ತದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ. ವಿವಾದಗಳಿಂದ ದೂರವಿರುವುದು ಉತ್ತಮ, ಹಿತ ಶತ್ರುಗಳ ಬಾಧೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.

ಸಿಂಹರಾಶಿ
ಗಣ್ಯ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯ ಸಿದ್ಧಿ, ಚಂಚಲ ಮನಸ್ಸು, ಶುಭಮಂಗಲಕಾರ್ಯಗಳಿಗೆ ತಯಾರಿ ನಡೆಯಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ಗುರುಹಿರಿಯರಿಂದ ಅನುಗ್ರಹ ಸಿಗಲಿದೆ. ವಿದ್ಯಾರ್ಥಿಗಳು ಪ್ರಯತ್ನಬಲದಿಂದ ಮುನ್ನಡೆಯಬೇಕು. ಕ್ರಯ-ವಿಕ್ರಯಗಳಿಂದ ಲಾಭ.

ಕನ್ಯಾರಾಶಿ
ವಿದ್ಯಾರ್ಥಿಗಳಲ್ಲಿ ಗೊಂದಲ, ನೆಮ್ಮದಿ ಇಲ್ಲದ ಜೀವನ, ಆರ್ಥಿಕವಾಗಿ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ವಿದ್ಯಾರ್ಥಿಗಳಿಗೆ ಈದಿನ ಉದಾಸೀನ ನಿರುತ್ಸಾಹ ಕಂಡು ಬರಲಿದೆ. ಶಾರೀರಿಕ ತೊಂದರೆಗಳು ಆಗಾಗ ಗೋಚರಕ್ಕೆ ಬರದಂತೆ ಜಾಗ್ರತೆ ವಹಿಸುವುದು. ಕಾರ್ಯ ಸಾಧನೆಗಾಗಿ ತಿರುಗಾಟ, ಪರಿಶ್ರಮಕ್ಕೆ ತಕ್ಕ ಫಲ, ಯತ್ನ ಕಾರ್ಯದಲ್ಲಿ ಅನುಕೂಲ.

ತುಲಾರಾಶಿ
ವಿಪರೀತ ವ್ಯಸನ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ, ಕೈಗೊಂಡ ಕಾರ್ಯಗಳಲ್ಲಿ ವಿವಿಧ ರೀತಿಯಲ್ಲಿ ಸಮಸ್ಯೆಗಳು ಕಾಡಿದರೂ ನಿಮ್ಮ ಪ್ರಯತ್ನಬಲವು ಸಾರ್ಥಕವಾಗಲಿವೆ. ಮಾನಸಿಕವಾಗಿ ಸಮಾಧಾನ ತೋರಿ ಬಂದು ಮುನ್ನಡೆಗೆ ಸಾಧಕವಾಗುತ್ತದೆ. ಸಂಚಾರವು ಬೇಡ. ಆಲಸ್ಯ ಮನೋಭಾವ, ಇಲ್ಲ ಸಲ್ಲದ ತಕರಾರು, ಆಕಸ್ಮಿಕ ಖರ್ಚು.

ವೃಶ್ಚಿಕರಾಶಿ
ದೂರ ಪ್ರಯಾಣದಿಂದ ತೊಂದರೆ, ಪರರ ಕುತಂತ್ರಕ್ಕೆ ಸಿಲುಕುವಿರಿ, ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶಗಳು ದೊರಕಲಿವೆ. ಗುರುಬಲವಿದ್ದು ಎಲ್ಲಾ ಆತಂಕವನ್ನು ನಿವಾರಿಸಬಹುದಾಗಿದೆ. ನೂತನ ಕಾರ್ಯಾರಂಭಕ್ಕೆ ಇದು ಅನುಕೂಲವಾದರೂ ಬದಲಾವಣೆಗೆ ಸಿದ್ಧರಾಗಬೇಕಾದೀತು. ನಂಬಿಕಸ್ಥರಿಂದ ಮೋಸ ಸಾಧ್ಯತೆ, ಎಲ್ಲಾ ಕಡೆಯಿಂದಲೂ ಒತ್ತಡ ಹೆಚ್ಚಾಗುವುದು, ಇಷ್ಟಾರ್ಥ ಸಿದ್ಧಿಸುವುದು.

ಧನಸ್ಸುರಾಶಿ
ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿಂದ ಹಿತನುಡಿ, ಮುಖ್ಯವಾಗಿ ಜೀವನದಲ್ಲಿ ಹೊಂದಾಣಿಕೆಯಿಂದ ಮುಂದುವರಿಯುವುದು ಅಗತ್ಯವಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು. ನವದಂಪತಿಗಳಿಗೆ ಶುಭವಾರ್ತೆ ಇದೆ. ಕೋರ್ಟುಕಚೇರಿಯಲ್ಲಿ ಜಯವಿದೆ. ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಲಭಿಸುವುದು.

ಮಕರರಾಶಿ
ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರು ತಾಳ್ಮೆಯಿಂದ ಇದಷ್ಟ ಒಳಿತು, ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಹೆಚ್ಚಿನ ಲಾಭವಾಗದಿದ್ದರೂ ನಷ್ಟವಾಗದು. ಶುಭಮಂಗಲ ಕಾರ್ಯಗಳಿಗಾಗಿ ಆಗಾಗ ಖರ್ಚುವೆಚ್ಚಗಳಿರುತ್ತವೆ. ವ್ಯರ್ಥ ಅಲೆದಾಟ ಸಾಮಾನ್ಯವಾಗಿರುತ್ತದೆ. ದಿನಾಂತ್ಯ ಶುಭವಿದೆ. ವೈರಿಗಳಿಂದ ಕುತಂತ್ರ, ಹಿತ ಶತ್ರುಗಳಿಂದ ಎಚ್ಚರ, ನಂಬಿಕಸ್ಥರಿಂದ ಮೋಸ.

ಕುಂಭರಾಶಿ
ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದ್ರವ್ಯ ಲಾಭ, ದೈವಾನುಗ್ರಹದಿಂದ ಕೆಲಸಕಾರ್ಯಗಳು ಶೀಘ್ರ ರೀತಿಯಲ್ಲಿ ನಡೆದಾವು. ಮಾನಸಿಕವಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ಶ್ರೀದೇವರನ್ನು ನೆನೆಯಿರಿ. ಕೃಷಿಕರಿಗೆ ಅನುಕೂಲ, ಭಾವನೆಗಳಿಗೆ ಸ್ಪಂದಿಸುವಿರಿ, ಶುಭ ಫಲ ಯೋಗ.

ಮೀನರಾಶಿ
ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಒತ್ತಡ, ಅತಿಯಾದ ಯೋಚನೆ, ಶುಭಮಂಗಲ ಕಾರ್ಯಗಳಿಗಾಗಿ ಕಾಯಬೇಕಾದೀತು. ವ್ಯಾಪಾರ, ವ್ಯವಹಾರದಲ್ಲಿ ತುಸು ಚೇತರಿಕೆ ತಂದೀತು. ಯಾವುದಕ್ಕೂ ಇತರರನ್ನು ಕಾಯದೆ ಸ್ವತಃ ಕಾರ್ಯರಂಗಕ್ಕೆ ಇಳಿಯುವುದು ಅತೀ ಅಗತ್ಯವಿದೆ. ಮಾತೃವಿನಿಂದ ಶುಭ ಹಾರೈಕೆ, ತಾಳ್ಮೆಯಿಂದ ಕಾರ್ಯ ಯಶಸ್ಸು.

Leave A Reply

Your email address will not be published.