ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 04-09-2020

ನಿತ್ಯಭವಿಷ್ಯ : 04-09-2020

- Advertisement -

ಮೇಷರಾಶಿ
ವ್ಯಾಪಾರ, ವ್ಯವಹಾರಗಳು ಚೇತರಿಕೆಯನ್ನು ಪಡೆದಾವು. ಆದರೂ ಅನಿರೀಕ್ಷಿತ ಲಾಭವನ್ನು ತಂದಾವು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಸಾಂಸಾರಿಕವಾಗಿ ಬಾಳ ಸಂಗಾತಿ ಒಡನಾಟ ಬೇಕೆನಿಸಲಿದೆ, ದೂರ ಪ್ರಯಾಣ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ಉದ್ಯೋಗ ನಷ್ಟ.

ವೃಷಭರಾಶಿ
ಚರಾಸ್ತಿ ವಿಚಾರವಾಗಿ ಕಲಹ, ಗೆಳೆಯರ ಸಹಕಾರ ಮನಸ್ಸನ್ನು ಪ್ರಸನ್ನಗೊಳಿಸಲಿದೆ. ಕನ್ಯಾಮಣಿಗಳಿಗೆ ನಾನಾ ರೀತಿಯಲ್ಲಿ ವಿವಾಹ ಅವಕಾಶವು ದೊರಕಲಿದೆ. ಮುಖ್ಯವಾಗಿ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ, ದಾಂಪತ್ಯದಲ್ಲಿ ಅಸಮಾಧಾನ, ಕಲಹ, ಸ್ನೇಹಿತರಿಂದ ಉದ್ಯೋಗ ಲಾಭ.

ಮಿಥುನರಾಶಿ
ತಂದೆಯಿಂದ ಆರ್ಥಿಕ ಸಹಾಯ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ಸಾಹ ಮುನ್ನಡೆಗೆ ಸಾಧಕವಾದೀತು. ವೃತ್ತಿರಂಗದಲ್ಲಿ ಉನ್ನತಿಯ ಬೆಳವಣಿಗೆಯು ಕಂಡು ಬರುವುದು. ಆಸ್ತಿಯ ವಿವಾದವನ್ನು ಬಗೆಹರಿಸಿಕೊಳ್ಳಿರಿ. ಮಾತು ಕಡಿಮೆ ಮಾಡಿದಷ್ಟು ಉತ್ತಮ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕಟಕರಾಶಿ
ಮಕ್ಕಳೊಂದಿಗೆ ಕಿರಿಕಿರಿ, ವಾಹನ ಅಪಘಾತ ಸಂಭವ, ಪುಣ್ಯಕಾರ್ಯಗಳು ಸಮಾಧಾನ ತರಲಿವೆ. ಆದಾಯದ ವೃದ್ಧಿಯು ನಾನಾ ರೂಪದಲ್ಲಿ ಹೆಚ್ಚು ಸಮಾಧಾನ ತರಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ತರಲಿದೆ. ಸಾಮಾಜಿಕ ರಂಗದಲ್ಲಿ ಅಭಿವೃದ್ಧಿ ಇದೆ, ಅತಿಯಾದ ಆಸೆ- ಆಕಾಂಕ್ಷಿಗಳಿಂದ ತೊಂದರೆ.

ಸಿಂಹರಾಶಿ
ಯಾವುದಕ್ಕೂ ಈ ದಾನ ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸೀತು. ತಾಳ್ಮೆ ಅಗತ್ಯ ವಿರುತ್ತದೆ. ನಿರುದ್ಯೋಗಿಗಳಿಗೆ ನಾನಾ ರೀತಿಯಲ್ಲಿ ಅವಕಾಶಗಳು ಒದಗಿ ಬರಲಿವೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಿರಿ, ರಾಜಯೋಗದ ಭಾವ, ಆರೋಗ್ಯದಲ್ಲಿ ವ್ಯತ್ಯಾಸಗಳು, ತಾಯಿಯೊಂದಿಗೆ ಜಗಳ, ಮನಸ್ತಾಪ.

ಕನ್ಯಾರಾಶಿ
ಸೇವಕರಿಂದ ಅನುಕೂಲ, ಲಾಭ ವಾಹನ, ಚಿರಾಸ್ತಿ ನಷ್ಟವಾಗುವ ಸೂಚನೆ, ಅಧೈರ್ಯದ ಹೆಜ್ಜೆಯಿಂದ ದಾರಿಯಲ್ಲಿ ವಿಪತ್ತು ಇಂದು ಕಂಡು ಬರಲಿದೆ. ಖರ್ಚುವೆಚ್ಚಗಳು ಮಿತಿಮೀರಿದರೂ ಬರಬೇಕಾದ ಹಣವು ಸಿಗಲಿವೆ. ಅನಿರೀಕ್ಷಿತ ಬದಲಾವಣೆಯು ತೋರಿ ಬಂದೀತು. ಶುಭವಿದೆ, ನಿದ್ರಾಭಂಗ, ಉದ್ಯೋಗದಲ್ಲಿ ಬಡ್ತಿ.

ತುಲಾರಾಶಿ
ಆರ್ಥಿಕ ಸಮಸ್ಯೆಗಳು ಬಗೆಹರಿಯುವವು, ಸ್ಥಳ, ಉದ್ಯೋಗ, ಗೃಹ ಬದಲಾವಣೆ ಮಾಡುವಿರಿ, ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆಯು ಕಂಡು ಬರಲಿದೆ. ಆಗಾಗ ವೃತ್ತಿರಂಗದಲ್ಲಿ ಕ್ಲೇಶವೂ, ಅಪವಾದ ಭೀತಿಯೂ ಇದ್ದೀತು. ಕೋರ್ಟುಕಚೇರಿಯಲ್ಲಿ ನಿಮಗೆ ಜಯ ಲಭಿಸಲಿದೆ.ಉದ್ಯೋಗದಲ್ಲಿ ಬಡ್ತಿ ಮತ್ತು ಉನ್ನತ ಸ್ಥಾನಮಾನಗಳು.

ವೃಶ್ಚಿಕರಾಶಿ
ಧಾರ್ಮಿಕ ಸಲಕರಣೆಗಳ ಮಾರಾಟದಲ್ಲಿ ಲಾಭ, ಆರೋಗ್ಯ ಸಮಸ್ಯೆ, ಸ್ವಯಂಕೃತ ಅಪರಾಧಗಳು, ಹೆತ್ತವರಿಗೆ ಮಕ್ಕಳ ಜೊತೆ ಹೊಂದಿಕೊಂಡು ಹೋಗುವುದು ಅಗತ್ಯ ವಿರುತ್ತದೆ. ವೃತ್ತಿಪರವಾಗಿ ಸ್ವಲ್ಪ ಮಟ್ಟಿನ ಬದಲಾವಣೆ ತೋರಿ ಬಂದೀತು. ಆರೋಗ್ಯ ಭಾಗ್ಯದಲ್ಲಿ ಆಗಾಗ ಏರುಪೇರು ಕಂಡು ಬರಲಿದೆ, ಪ್ರಗತಿಯನ್ನು ಕುಂಠಿತಗೊಳಿಸುವುದು, ಯೋಗಾಯೋಗಗಳು ಕೂಡಿಬರುವ ಸಮಯ.

ಧನಸ್ಸುರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಆರ್ಥಿಕವಾಗಿ ವಿವಿಧ ರೀತಿಯಲ್ಲಿ ಮೂಲಧನ ವೃದ್ಧಿಯಾಗುತ್ತದೆ. ಹಾಗೇ ವೃತ್ತಿಪರವಾಗಿ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಮಾಡಿಕೊಳ್ಳುವುದು ಆವಶ್ಯಕ, ಪರಸ್ಪರ ಆತ್ಮೀಯತೆ ಬೆಳೆಯುವುದು, ಆಕಸ್ಮಿಕ ಪ್ರಯಾಣ, ಪತ್ರಗಳ ನೋಂದಣಿಗೆ ಉತ್ತಮ ಸಮಯ.

ಮಕರರಾಶಿ
ಪಾಲುದಾರಿಕೆಯಲ್ಲಿ ಅಧಿಕ ಲಾಭ, ಯೋಗ್ಯ ವಯಸ್ಕರಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಒಳ್ಳೆಯ ನೆಂಟಸ್ತಿಕೆ ದೊರಕಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ದೊರಕಲಿದೆ. ಆದಾಯವನ್ನು ಹೆಚ್ಚಿಸಿಕೊಂಡಲ್ಲಿ ಖರ್ಚುಗಳ ಬಗ್ಗೆ ಚಿಂತೆ ಇರದು, ಬಂದು ಬಾಂಧವರು ದೂರ ಆಗುವಿರಿ, ಯತ್ನ ಕಾರ್ಯಗಳಲ್ಲಿ ಜಯ.

ಕುಂಭರಾಶಿ
ಉದ್ಯೋಗ & ವ್ಯಾಪಾರಕ್ಕೆ ಸಾಲ, ಕೊಟ್ಟ ಸಾಲಕ್ಕಾಗಿ ನಾನಾ ರೀತಿಯ ಕಷ್ಟನಷ್ಟವನ್ನು ಅನುಭವಿಸ ಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಮಾಧಾನ ತರಲಿದೆ. ಪುಣ್ಯ ಕಾರ್ಯಗಳು ಗೋಚರಕ್ಕೆ ಬಂದು ಸಮಾಧಾನವಾಗಲಿವೆ. ಕಿರು ಸಂಚಾರವಿದೆ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ ಲಭಿಸುವುದು, ಆದಾಯ ಮತ್ತು ಖರ್ಚು ಸಮ ಪ್ರಮಾಣ.

ಮೀನರಾಶಿ
ಮಕ್ಕಳಿಂದ ಸಹಾಯ ಮತ್ತು ಸಹಕಾರ, ಸ್ವಂತ ವ್ಯಾಪಾರದಲ್ಲಿ ನಷ್ಟ, ಶ್ರೀದೇವತಾನುಗ್ರಹ ಸದ್ಯದಲ್ಲೇ ತೋರಿ ಬಂದು ನಿಮ್ಮ ಸಕಲ ಮನೋರಥವು ಈಡೇರಲಿದೆ. ಅಲ್ಲಿಯವರೆಗೆ ತಾಳ್ಮೆ ಸಮಾಧಾನ ಕಾಯ್ದುಕೊಳ್ಳುವುದು ಅಗತ್ಯ. ವಿದ್ಯಾರ್ಥಿ ಉತ್ತಮ ಫ‌ಲಿತಾಂಶವನ್ನು ಹೊಂದಿಯಾರು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular