ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 08-09-2020

ನಿತ್ಯಭವಿಷ್ಯ : 08-09-2020

- Advertisement -

ಮೇಷ ರಾಶಿ
ವ್ಯಾಪಾರದಲ್ಲಿ ಲಾಭ, ಇಚ್ಛಿತ ಕಾರ್ಯಗಳಲ್ಲಿ ಬಾಗಿ, ಆರ್ಥಿಕವಾಗಿ ತುಂಬಾ ಅಭಿವೃದ್ಧಿಯು ಕಂಡು ಬಂದರೂ ಖರ್ಚುವೆಚ್ಚದ ಆತೀಯಾದ ಜಾಗ್ರತೆ ಮಾಡತಕ್ಕದು. ಪತ್ನಿಯಿಂದ ಅತೀ ಕಿರಿಕಿರಿ ಇದ್ದೀತು. ಆದಷ್ಟು ಜಾಗ್ರತೆಯಿಂದ ವ್ಯವಹರಿಸುವುದು, ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

ವೃಷಭ ರಾಶಿ
ಚಂಚಲ ಮನಸ್ಸು, ಅನಾರೋಗ್ಯ, ಮನಸ್ಸಿಗೆ ಅಶಾಂತಿ, ನಿಮಗೆ ಅತೀ ಕಷ್ಟಕರವಾಗಿ ಕಂಡೀತು. ಆರೋಗ್ಯದ ಏರುಪೇರಿನಿಂದ ಕಂಗಾಲಾಗುವಿರಿ. ಆದರೂ ಶನಿಯ ಅನುಗ್ರಹವು ನಿಮ್ಮ ಮೇಲಿರುವುದರಿಂದ ಪೀಡಿಸಿದರೂ ಉತ್ತಮ ಫ‌ಲಿತಾಂಶವಿದೆ, ಚಿಂತೆಗೆ ಒಳಗಾಗುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.

ಮಿಥುನ ರಾಶಿ
ಸ್ಥಿರಾಸ್ತಿ ಮಾರಾಟ, ಆದಾಯಕೈಗಾರಿಕಾ ವಲಯದಲ್ಲಿ ಕಾರ್ಮಿಕರಿಂದ ತೊಂದರೆಗಳು ಕಂಡು ಬಂದೀತು. ಅತೀ ಜಾಣ್ಮೆಯಿಂದ ವ್ಯವಹರಿಸಿ ಪರಿಹರಿಸಿಕೊಳ್ಳಿರಿ, ಮಾತು ಹಾಗೂ ನಡೆನುಡಿಯಲ್ಲಿ ನೇರತನದಿಂದ ಎಲ್ಲರ ಮೆಚ್ಚುಗೆ ಸಿಗಲಿದೆ, ಕಡಿಮೆ, ಖರ್ಚು ಜಾಸ್ತಿ, ಮಿತ್ರರಿಂದ ಮನಸ್ತಾಪ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕಟಕ ರಾಶಿ
ಯಾರನ್ನು ಹೆಚ್ಚಾಗಿ ನಂಬಬೇಡಿ,ಪತಿ ಹಾಗೂ ಪತ್ನಿಯೊಳಗೆ ಆಗಾಗ ವಾಗ್ವಾದಗಳು ಉಂಟಾದೀತು, ಪುತ್ರನು ನಿಮಗೆ ಅತೀ ಹಚ್ಚಿಕೊಳ್ಳುವನು. ಮನೆಯಲ್ಲಿ ಕುಟುಂಬದ ಹಿರಿಯ ಸದಸ್ಯರಿಂದ ಮೌನ ಹಿಂಸೆ ಅನುಭವಿಸುವಿರಿ, ವಿವಾಹ ಮಂಗಳ ಕಾರ್ಯದಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ, ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರ ಸ್ನೇಹ ವೃದ್ಧಿ.

ಸಿಂಹ ರಾಶಿ
ಸ್ತ್ರೀ ಲಾಭ, ಅಧಿಕಾರ-ಪ್ರಾಪ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ, ಮೃದುವಾದ ಮನಸ್ಸು ಇದ್ದರೂ ನೇರನುಡಿಯಿಂದ ಎಲ್ಲರೂ ನಿಮ್ಮನ್ನು ತಪ್ಪು ತಿಳಿಯಲಿದ್ದಾರೆ. ಆತುರದಿಂದ ಯಾವೊಂದು ನಿರ್ಧಾರವನ್ನು ಕೈಗೊಳ್ಳದಿರಿ. ತಾಳ್ಮೆ ಸಹನೆಯ ಅಗತ್ಯವಿದೆ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.

ಕನ್ಯಾ ರಾಶಿ
ಅನೇಕ ಜನರಿಗೆ ವಿವಾಹಯೋಗ, ಸುಖ ಭೋಜನ, ಸಮಾಜದಲ್ಲಿ ಗೌರವ, ನಿಮ್ಮ ಭವ್ಯ ಭವಿಷ್ಯದ ಬಗ್ಗೆ ಹಗಲು ಗನಸು ಕಾಣುವಿರಿ. ಮನೆಯಲ್ಲಿ ಮಂಗಲ ಕಾರ್ಯದ ತಯಾರಿ ನಡೆಯಲಿವೆ. ಮನೆಯಲ್ಲಿ ಹಿರಿಯರಿಂದ ಸ್ವಲ್ಪ ಬೇಸರವಾದೀತು, ಕೀರ್ತಿ, ಯತ್ನ ಕೆಲಸಕಾರ್ಯಗಳಲ್ಲಿ ಜಯ.

ತುಲಾ ರಾಶಿ
ಸಂಕುಚಿತ ಮನೋಭಾವವನ್ನು ಬಿಟ್ಟು ಮನ ಬಿಚ್ಚಿ ಮಾತನಾಡಿ ನಿಮ್ಮ ಕಾರ್ಯವನ್ನು ಮುಂದುವರಿಸಿರಿ. ಜಯವು ಸಿಗುವುದು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಸಂತಸ, ಕಾಲಿಗೆ ಪೆಟ್ಟು ಎಚ್ಚರದಿಂದಿರಿ, ಮನಸ್ಸಿಗೆ ಚಿಂತೆ, ವಿಪರೀತ ವ್ಯಸನಗಳು, ಕುಟುಂಬ ಸೌಖ್ಯ, ಆಲಸ್ಯ ಮನೋಭಾವ.

ವೃಶ್ಚಿಕ ರಾಶಿ
ಶ್ರಮಕ್ಕೆ ತಕ್ಕ ಫಲ, ಪೂಜಾ ಕೈಂಕರ್ಯಗಳಲ್ಲಿ ಬಾಗಿ, ಆರೋಗ್ಯದಲ್ಲಿ ಬೆನ್ನು ನೋವು, ಸೊಂಟ ನೋವು ಕಂಡು ಬಂದೀತು. ತಪಾಸಣೆ ಮಾಡಿಸಿರಿ. ಸರಿಯಾದ ಚಿಕಿತ್ಸೆಯಿಂದ ಗುಣಮುಖರಾಗುವಿರಿ. ಚಿಂತೆಯನ್ನು ಬಿಟ್ಟುಬಿಟ್ಟರೆ ಉತ್ತಮ, ದೂರ ಪ್ರಯಾಣ, ಋಣ ಬಾಧೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.

ಧನಸ್ಸು ರಾಶಿ
ಅಲ್ಪ ಲಾಭ, ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ನೇಮ ನಿರ್ಧರಿಸಿದ ಕಾರ್ಯದಲ್ಲಿ ಹಿಂಜರಿಕೆ ಕಂಡು ಬಂದೀತು. ಬೇಸರಬೇಡ. ಮುಂದೆ ಸಂತೋಷ ಕಂಡೇ ಕಾಣುವಿರಿ. ಮನೆಯಲ್ಲಿ ಮಾತಾಪಿತೃಗಳ ಆರೋಗ್ಯದ ಬಗ್ಗೆ ಚಿಂತೆ, ಅಧಿಕಾರ-ಪ್ರಾಪ್ತಿ, ಯತ್ನ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಮಿಶ್ರ ಫಲ.

ಮಕರ ರಾಶಿ
ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳ ಸದೆಬಡೆಯುವಿಕೆ, ದಾಕ್ಷಿಣ್ಯ ಹಾಗೂ ಸಂಕೋಚವು ನಿಮಗೆ ಜನ್ಮತಃ ಬಂದಿರುತ್ತದೆ, ವೃತ್ತಿರಂಗದಲ್ಲಿ ಏರುಗತಿ ಕಾಣಲಿರುವಿರಿ. ಗೃಹಾಲಂಕಾರ ಯಾ ಜಾಗದ ಖರೀದಿ ನಡೆದೀತು. ಮೋಸ ಹೋಗದಂತೆ ನೋಡಿರಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.

ಕುಂಭ ರಾಶಿ
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು, ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡು ಬಂದೀತು, ಪ್ರೀತಿಯಿಂದ ವ್ಯವಹರಿಸುವುದು ಅಗತ್ಯ. ನಿಷ್ಠುರವಾದಿಗಳಾಗದೆ ತಾಳ್ಮೆಯಿಂದ ವ್ಯವಹರಿಸಿರಿ. ಕಿರು ಸಂಚಾರವಿದೆ, ಪರಸ್ಥಳ ವಾಸ, ಮಾತಾಪಿತೃಗಳಲ್ಲಿ ವ್ಯತ್ಯಾಸ.

ಮೀನ ರಾಶಿ
ಭೂಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ವೃತ್ತಿರಂಗದ ಹೊಸ ವಾತಾವರಣವು ನಿಮಗೆ ಹರುಷ ತಂದೀತು. ಹೊಸ ಗೆಳೆಯರಿಂದ ಉತ್ತಮ ಸ್ಪಂದನೆ ದೊರಕಲಿದೆ, ಆದರೂ ನಿಮ್ಮ ಎಚ್ಚರದಲ್ಲಿ ನೀವಿರಬೇಕು, ಶುಭವಾರ್ತೆ ಇದೆ, ಮಾನಸಿಕ ಅಶಾಂತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ರೋಗಬಾಧೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular