ಸಂಜನಾ ನನ್ನನ್ನು ಕತ್ತು ಹಿಸುಕಿ ಸಾಯಿಸ್ತಾಳೆ ಎಂದ ರಾಗಿಣಿ : ಒಂದೇ ಕೊಠಡಿಯಲ್ಲಿದ್ದಾರೆ ಮಾದಕ ನಟಿಯರು

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿರುವ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಲಾಗಿದೆ. ಆದರೆ ಸಂಜನಾ ನನ್ನನ್ನ ಸಾಯಿಸ್ತಾಳೆ ಅಂತಾ ರಾಗಿಣಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾಳೆ.

ಡ್ರಗ್ಸ್ ಮಾಫಿಯಾ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಮಾಧಕ ನಟಿಯರನ್ನು ರಾಜ್ಯ ಮಹಿಳಾ ನಿಲಯದಲ್ಲಿ ಇರಿಸಲಾಗಿದ್ದು, ಐದು ಬೆಡ್​​ಗಳಿರುವ ಒಂದೇ ಕೊಠಡಿಯಲ್ಲಿ ಇವರಿಬ್ಬರಿಗೂ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ನಟಿಮಣಿಯರ ಮಧ್ಯದಲ್ಲಿರುವ ಮೂರು ಬೆಡ್​​ಗಳಲ್ಲಿ ಮಹಿಳಾ ಪೊಲೀಸರು ವಾಸ್ತವ್ಯ ಹೂಡಲಿದ್ದಾರಂತೆ.

ಸಂಜನಾ ಅವರನ್ನು ಬಿಟ್ರೆ ತನ್ನನ್ನ ಕತ್ತು ಹಿಸುಕಿ ಸಾಯಿಸ್ತಾನೆ ಅಂತಾ ರಾಗಿಣಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಅಷ್ಟೇ ಅಲ್ಲಾ ಮಹಿಳಾ ನಿಲಯದಲ್ಲಿ ರಾಗಿಣಿ ಸರಿಯಾಗಿ ಊಟ ಮಾಡುತ್ತಿಲ್ಲವಂತೆ. ಏನು ಕೇಳಿದ್ರೂ ಇಲ್ಲಾ ಇಲ್ಲಾ ಅಂತಿದ್ದಾಳೆ ಅಂತಾನೂ ಪೊಲೀಸ್ ಮೂಲಗಳು ತಿಳಿಸಿವೆ.

Leave A Reply

Your email address will not be published.