ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 11-09-2020

ನಿತ್ಯಭವಿಷ್ಯ : 11-09-2020

- Advertisement -

ಮೇಷರಾಶಿ
ಸಾಂಸಾರಿಕವಾಗಿ ಸುಖ, ಸಂತೋಷಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣಲಿವೆ. ಸ್ವಂತ ವ್ಯವಹಾರದಲ್ಲಿ ಯಶಸ್ಸು, ಆಯುಷ್ಯದ ಭೀತಿ, ಅಧಿಕ ಉಷ್ಣ, ಹೊಟ್ಟೆನೋವು, ಅಜೀರ್ಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭಕಾರ್ಯಕ್ಕೆ ಪ್ರಯತ್ನ, ಕೆಟ್ಟವರ ಸಹವಾಸ, ಯಾವುದಕ್ಕೂ ಹೊಂದಾಣಿಕೆಯು ಅಗತ್ಯವಿದೆ. ನಿಮ್ಮ ಮನೆತನದ ಹಿರಿಯ ವ್ಯಕ್ತಿಯೊಂದಿಗೆ ಸಲಹೆಗಳನ್ನು ಕೇಳಿರಿ.

ವೃಷಭರಾಶಿ
ಕಠಿಣ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಮುನ್ನಡೆವ ಅಗತ್ಯವಿದೆ., ನಿದ್ರಾಭಂಗ, ಒತ್ತಡಗಳು, ಸಂಗಾತಿಯಿಂದ ದೂರ, ಅನಗತ್ಯ ತಿರುಗಾಟ, ಕಾರ್ಯ ವಿಘ್ನ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ನಷ್ಟ, ಯಂತ್ರೋಪಕರಣಗಳಿಂದ ತೊಂದರೆ, ಹಿತ ಶತ್ರುಗಳ ನಡೆನುಡಿ ಗಮನಿಸುತ್ತಾ ಇರಬೇಕು. ಹಳೇ ಮಿತ್ರರ ಭೇಟಿ ಸಂತೋಷಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ಮಿಥುನರಾಶಿ
ಹಣಕಾಸಿನ ನೆರವು, ಅನಾರೋಗ್ಯದಿಂದ ಚೇತರಿಕೆ, ಸ್ನೇಹಿತರಿಂದ ಅನುಕೂಲ, ಸೇವಾ ಉದ್ಯೋಗ ಲಾಭ, ಸೇವಕರ ಪ್ರಾಪ್ತಿ, ಬಡತನದಿಂದ ಹೊರಬರುವ ಪ್ರಯತ್ನ, ಮಾನಸಿಕ ಒತ್ತಡ, ಮಾತಿನಿಂದ ತೊಂದರೆ, ಉತ್ತಮ ಗುರುಬಲದ ನಿಮಗೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಬುನಾದಿ ಹಾಕಬಹುದು. ಕಾರ್ಮಿಕ ವರ್ಗದವರಿಗೆ ಭಡ್ತಿಯ ಸೂಚನೆ ತಂದೀತು. ಸಮಾಧಾನದಿಂದ ಕಳೆಯುವ ದಿನಗಳಾಗಲಿವೆ. ಶುಭವಿದೆ.

ಕಟಕರಾಶಿ
ಕಾರ್ಯನಿಮಿತ್ತ ಸಂಚಾರವು ಕೂಡಿ ಬಂದೀತು. ಸ್ವ ಪ್ರಯತ್ನದಲ್ಲಿ ಸೋಲು, ದೂರದಲ್ಲಿ ಉದ್ಯೋಗ, ಸರ್ಕಾರಿ ಕಾರ್ಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಸಂಶಯದಿಂದ ನಿದ್ರಾಭಂಗ, ಸ್ಪರ್ಧಾತ್ಮಕ ಯಶಸ್ಸು, ವಿದ್ಯಾಭ್ಯಾಸ ಪ್ರಗತಿ, ಲಾಭ ಸ್ಥಾನದ ಕೇತುವಿನಿಂದಾಗಿ ಅನಿರೀಕ್ಷಿತವಾಗಿ ಲಾಭ ಪಡೆಯುವಿರಿ. ಮಕ್ಕಳ ಶ್ರೇಯೋಭಿವೃದ್ಧಿಯು ತೋರಿ ಬಂದೀತು. ಮನಸ್ಸು ಸ್ವತ್ಛಂದವಾಗಿಟ್ಟುಕೊಳ್ಳಿರಿ.

ಸಿಂಹರಾಶಿ
ಹಲವು ದಿನಗಳಿಂದ ಚಿಂತೆಯ ಗೂಡಾದಿದ್ದ ನೀವು ಇಂದು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಿರಿ. ತಂದೆಯಿಂದ ಅನುಕೂಲ, ಸ್ವಂತ ಉದ್ಯೋಗದಲ್ಲಿ ಯಶಸ್ಸು, ಕಾರ್ಯ ಅನುಕೂಲ, ಮಿತ್ರರಿಂದ ಅಂತರ, ಲಾಭ ಅಧಿಕ, ರಕ್ತ ಸಂಬಂಧಿಗಳಿಂದ ನೋವು, ಉನ್ನತ ವಿದ್ಯಾಭ್ಯಾಸ ಒಲವು, ಹಲವು ಕಾಲದಿಂದ ನನೆಗುದಿಗೆ ಬಿದ್ದಿದ ಕಾರ್ಯಕ್ಕೆ ಸ್ವಲ್ಪ ಚಾಲನೆಯು ದೊರಕಲಿದೆ.

ಕನ್ಯಾರಾಶಿ
ಅನಿರೀಕ್ಷಿತ ನಷ್ಟ, ಕೋರ್ಟ್ ಕೇಸ್‍ಗಳು, ಅನಗತ್ಯ ಪ್ರಯಾಣ, ಕಾರ್ಯ ವಿಘ್ನ, ಅತಿ ಕಷ್ಟದ ಸನ್ನಿವೇಶ, ದಾಯಾದಿ ಕಲಹ, ಉದ್ಯೋಗದಲ್ಲಿ ತೊಂದರೆ, ಮಾನಸಿಕ ಒತ್ತಡಗಳು, ಅಪಘಾತಗಳು, ಮಂಗಲಕಾರ್ಯದ ಬಗ್ಗೆ ಆಲೋಚಿಸಿರುವಿರಿ. ಆಗಿಯೇ ತಿರುವುದು. ಮನೆಯಲ್ಲಿ ಸಂಭ್ರಮ ಹಾಗೂ ಸಂತಸದ ವಾತಾವರಣ. ಕೆಟ್ಟ ವ್ಯಸನದ ಮಿತ್ರರ ಚಾಳಿಯಿಂದ ನೀವು ಜೀವನವನ್ನು ಕಳೆದು ಕೊಂಡೀರಾ ಜೋಕೆ.

ತುಲಾರಾಶಿ
ಏನೂ ಏರುಪೇರು ಇಲ್ಲದೆ ಸಾಮಾನ್ಯರಂತೆ ದಿನ ಕಳೆಯುವಿರಿ, ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಯಶಸ್ಸು, ಮಕ್ಕಳ ಭವಿಷ್ಯದ ಚಿಂತೆ, ಗೊಂದಲಗಳು, ಗಾಬರಿ, ಅಧಿಕ ಸಿಟ್ಟು, ಆತ್ಮ ಸಂಕಟಗಳು, ಆರ್ಥಿಕ ರಂಗದಲ್ಲಿ ಸ್ವಲ್ಪ ಏಳಿಗೆ ಕಂಡು ಬಂದೀತು. ಗೃಹದಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಹಕಾರವಿದ್ದು ತುಸು ನೆಮ್ಮದಿ ದೊರಕೀತು.

ವೃಶ್ಚಿಕರಾಶಿ
ಉತ್ತಮ ಗುರುಬಲವಿರುವುದರಿಂದ ಕೈಹಾಕಿದ ಕೆಲಸದಲ್ಲಿ ಜಯ ಸಾಧಿಸುವಿರಿ, ಉದ್ಯೋಗದಲ್ಲಿ ಯಶಸ್ಸು, ಸಾಲಬಾಧೇ, ಶತ್ರು ದಮನ, ಕೋಪತಾಪಗಳು, ತಲೆನೋವು, ಉಷ್ಣ ಭಾದೆ, ತಿಂಗಳ ದೋಷ, ತಂದೆಯೊಂದಿಗೆ ಅಸಮಾಧಾನ, ಪ್ರಯಾಣ ತಡೆ, ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಮಾಧಾನ ಮೂಡಿ ಬಂದೀತು. ಆದರೂ ಆರೋಗ್ಯದಲ್ಲಿ ಜಾಗ್ರತೆ ಮಾಡುವುದು.

ಧನಸ್ಸುರಾಶಿ
ಮಕ್ಕಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕಾರ್ಯ ಜಯ, ಒತ್ತಡಗಳಿಂದ ನಿದ್ರಾಭಂಗ, ಸಂಶಯಗಳ ಸುಳಿದಾಟ, ಯಂತ್ರಗಳಿಗೆ ಖರ್ಚು, ವೃತ್ತಿರಂಗದಲ್ಲಿ ಏರಿಳಿತ ಕಂಡು ಬಂದರೂ ಸಮಾಧಾನವಾಗಲಿದೆ. ಬೇರೊಂದೂರಿಗೆ ವರ್ಗಾವಣೆ ಇದ್ದೀತು. ಉಪೇಕ್ಷೆ ಮಾಡದಿರಿ. ಮುಂದೆ ಒಳ್ಳೆಯದಿದೆ. ಮಾವನ ಮನೆಯಿಂದ ಒಳ್ಳೆಯ ಹಿತನುಡಿಗಳ ಲಾಭ ಸಿಕ್ಕೀತು.

ಮಕರರಾಶಿ
ನೋವು ಸಂಕಟಗಳು, ಭೂಮಿ ವಾಹನ ಯೋಗ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಸಂಶಯ, ಪಾಲುದಾರಿಕೆ ಲಾಭ, ಗುಪ್ತ ವಿಷಯಗಳಲ್ಲಿ ಯಶಸ್ಸು, ಮನೆಯಲ್ಲಿ ಮಕ್ಕಳ ಕಿರಿಕಿರಿಯಿಂದ, ಸಿಟ್ಟು ಬಂದೀತು. ತಾಳ್ಮೆ ಅಗತ್ಯವಿದೆ. ಕಾರ್ಯರಂಗದಲ್ಲಿ ಅನ್ಯ ರಿಂದ ಉಪಟಳ ಕಂಡು ಬಂದೀತು. ವೃತ್ತಿಯ ಬೇಟೆಯಲ್ಲಿರುವವರಿಗೆ ಮನಸ್ಸಿಗೆ ಸಮಾಧಾನ ತರುವ ಉದ್ಯೋಗ ಸಿಗಲಿದೆ.

ಕುಂಭರಾಶಿ
ಹತ್ತಿರದ ಪ್ರಯಾಣ, ಉದ್ಯೋಗ ಬದಲಾವಣೆ, ಕಾರ್ಯಜಯ, ದಾಯಾದಿ ಸಮಸ್ಯೆಗಳು, ಭಾವನೆಗಳಿಗೆ ಪೆಟ್ಟು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಯಗತಿಯಲ್ಲಿ ಏಳಿಗೆ ಕಂಡು ಬರಲಿದೆ. ಉತ್ತಮ ದೈವಾನುಗ್ರಹದಿಂದ ನಿಮ್ಮಣಿಕೆಯ ಕಾರ್ಯಗಳೆಲ್ಲಾ ಸಿದಿ§ಸಲಿವೆ. ಆರ್ಥಿಕವಾಗಿ ಏನೂ ಚಿಂತೆ ಇರದು. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು.

ಮೀನರಾಶಿ
ನೂತನ ಜಾಗದ, ಯಾ ವಾಹನ ಖರೀದಿಯಿಂದ ಸಂತಸ, ಆರ್ಥಿಕವಾಗಿ ಅನುಕೂಲ, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯ, ತಂದೆಯಿಂದ ಅನುಕೂಲ, ಮಾತಿನಲ್ಲಿ ಜಾಗ್ರತೆ, ಪ್ರಯಾಣದಲ್ಲಿ ಯಶಸ್ಸು, ಮಕ್ಕಳ ಅಭಿವೃದ್ಧಿ ಕಂಡು ಸಂತಸವಾದೀತು. ಮಕ್ಕಳ ನೆಂಟಸ್ಥಿಕೆಯ ವಿಚಾರದಲ್ಲಿ ಸ್ವಲ್ಪ ವಿಚಾರಿಸಿ ಮುನ್ನಡೆಯಿರಿ. ಸಂಚಾರದಿಂದ ಸಮಾಧಾನವಿದ್ದೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular