ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣ : ಸಿಐಡಿ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ

0

ಉಡುಪಿ : ಎಂಬಿಎ ಪದವೀಧರೆ ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣದ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿದ್ದರೂ ಕೂಡ, ತನಿಖೆ ವಿಳಂಭವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಶಾ ಪೂಜಾರಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಇದೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಯಬ್ರಕಟ್ಟೆಯ ಎಂಬಿಎ ಪದವೀಧರೆ ಅನಿಶಾ ಪೂಜಾರಿ ತನ್ನ ಪ್ರಿಯಕರನಿಗೆ ಸೇರಿದ ಹಾಡಿಯಲ್ಲಿ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಳು. ಅನಿಶಾ ಸಾವಿನ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ರಹ್ಮಾವರ ಠಾಣೆಯ ಪೊಲೀಸರು ಆರೋಪಿ ಚೇತನ್ ಶೆಟ್ಟಿಯನ್ನು ಬಂಧಿಸಿದ್ದರು.

ಅನಿಶಾ ಸಾವಿನ ಬೆನ್ನಲ್ಲೇ 4 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಅಲ್ಲದೇ ಪ್ರಿಯಕರ ಚೇತನ್ ಶೆಟ್ಟಿ ಎಂಬಾತನ ಜೊತೆಗೆ ನಡೆಸಿರುವ ಆಡಿಯೋ ಸಂಭಾಷಣೆಗಳು ಪತ್ತೆಯಾಗಿದೆ. ಮಾತ್ರವಲ್ಲ ಸ್ವತಃ ಅನಿಶಾ ಪೂಜಾರಿ ಪ್ರಿಯಕರ ಚೇತನ ಶೆಟ್ಟಿಯಿಂದ ಆಗಿರುವ ಅನ್ಯಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಆದರೂ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದರು. ಈ ವೇಳೆಯಲ್ಲಿ ಅನಿಶಾ ಫೋಷಕರು ವಿರೋಧವವನ್ನು ವ್ಯಕ್ತಪಡಿಸಿದ್ದರು.

ಅನಿಶಾ ಪೂಜಾರಿ ಹಾಗೂ ಚೇತನ್ ಶೆಟ್ಟಿ ಕಳೆದ ಆರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಆದರೆ ಚೇತನ್ ಶೆಟ್ಟಿ ಅನಿಶಾ ಪೂಜಾರಿಗೆ ಮೋಸ ಮಾಡಿ ಮತ್ತೊಂಬ್ಬ ಯುವತಿಯ ಜೊತೆಗೆ ವಿವಾಹವಾಗಲು ಮುಂದಾಗಿದ್ದಾನೆ.

ಮದುವೆಗಾಗಿ ಛತ್ರವನ್ನೂ ಕೂಡ ಬುಕ್ ಮಾಡಿದ್ದಾನೆ. ಈ ವಿಷಯ ತಿಳಿದು ತನ್ನನ್ನೇ ಮದುವೆಯಾಗುವಂತೆ ಅನಿಶಾ ತನ್ನ ಪ್ರಿಯಕರನಲ್ಲಿ ಕೇಳಿಕೊಂಡಿದ್ದಾನೆ. ಆದರೆ ಚೇತನ್ ಹಾಗೂ ಆತನ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಅನಿಶಾ ಸಾವಿಗೆ ಶರಣಾಗಿದ್ದಳು.

ಸಾವಿನ ಬೆನ್ನಲ್ಲೇ ದೊರೆತ ಸಾಕ್ಸ್ಯಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಚೇತನ್ ಪ್ರೇರಣೆಯಿಂದಲೇ ಅನಿಶಾ ಸಾವನ್ನಪ್ಪಿ ರೋದು ಕಂಡುಬರುತ್ತಿದೆ. ಆದರೆ ಪೊಲೀಸರು ಪ್ರಕರಣದ ತನಿಖೆಯಲ್ಲಿ ವಿಳಂಭ ಮಾಡುತ್ತಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೇ ಪೋಷಕರು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Leave A Reply

Your email address will not be published.