ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 25-05-2020

ನಿತ್ಯಭವಿಷ್ಯ : 25-05-2020

- Advertisement -

ಮೇಷರಾಶಿ
ಮಿತ್ರರಿಂದ ಬೆಂಬಲ, ಮುಖ್ಯವಾದ ಕೆಲಸಗಳಲ್ಲಿ ಮುನ್ನಡೆ, ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರುವುದು ಉತ್ತಮ. ಒಳ್ಳೆಯ ಅವಕಾಶಗಳಿಂದ ಕಳೆದುಕೊಂಡ ಅಸ್ತಿತ್ವವನ್ನು ಮತ್ತೆ ಸಂಪಾದಿಸಲಿದ್ದೀರಿ. ಸುತ್ತಮುತ್ತಲಿನವರು ನಿಮಗೆ ಬೆಂಬಲ ನೀಡುವುದರಿಂದ ಸಂತೋಷಗೊಳ್ಳುವಿರಿ. ಹೆಚ್ಚುವರಿ ಹಣ ಗಳಿಸಲು ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ. ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಲಾಭ, ಅನುಕೂಲವಾದ ದಿನ.

ವೃಷಭರಾಶಿ
ಹಣಕಾಸು ಮುಗ್ಗಟ್ಟು, ಸಾಲ ಮಾಡುವ ಪರಿಸ್ಥಿತಿ, ನೀವಾಡುವ ಮಾತಿನಿಂದ ನಿಷ್ಠೂರ, ಮಾತಿನ ಚಕಮಕಿ, ಶತ್ರುಗಳ ಬಾಧೆ, ವೃತ್ತಿರಂಗದಲ್ಲಿ ನಿಮ್ಮ ಭಾವನೆಗಳಿಗೆ ನಿರಾಸೆಯಾಗಲಿದೆ. ವಿದ್ಯಾರ್ಥಿಗಳಿಗೆ ದೃಢ ನಿರ್ಧಾರದಿಂದ ಮುನ್ನಡೆ. ದಿನಾಂತ್ಯದಲ್ಲಿ ಶುಭವಾರ್ತೆ. ಹಣಕಾಸಿನ ಸಮಸ್ಯೆಯಿಂದ ಮನೆಯಲ್ಲಿ ಕಲಹ. ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.

ಮಿಥುನರಾಶಿ
ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿದೆ. ಕುಟುಂಬದಲ್ಲಿ ಶುಭ ವಾರ್ತೆ ಕೇಳುವಿರಿ. ವೃತ್ತಿರಂಗದಲ್ಲಿ ಪ್ರಯತ್ನ ಬಲದಿಂದ ಯಶಸ್ಸು, ನಿಮ್ಮ ಸಂಗಾತಿಯ ಅನಾರೋಗ್ಯ ಆತಂಕಕ್ಕೆ ಎಡೆಮಾಡಿಕೊಡಲಿದೆ. ಅಲ್ಪ ಆದಾಯ, ಅಧಿಕವಾದ ಖರ್ಚು, ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಪರರಿಗೆ ಸಹಾಯ ಮಾಡುವಿರಿ.

ಕಟಕರಾಶಿ
ನಾನಾ ರೀತಿಯ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಸಂಸಾರದಲ್ಲಿ ಹೊಂದಾಣಿಕೆಯಿಂದ ಮುನ್ನಡೆ ತರಲಿದೆ. ಆಶಾವಾದಿಗಳಾಗಿ ಮುನ್ನಡೆಯಿರಿ. ಸರಕಾರಿ ಕೆಲಸಗಳು ಕಾರ್ಯರೂಪಕ್ಕೆ ಬರಲಿವೆ. ಭವಿಷ್ಯದ ಒಳಿತಿಗಾಗಿ ಹೂಡಿಕೆ ಮಾಡುವುದು ಉತ್ತಮ. ಸಂಗಾತಿಯಿಂದ ಸಂತೋಷ. ಚಂಚಲ ಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಿಶ್ರ ಫಲ ಯೋಗ.

ಸಿಂಹರಾಶಿ
ಹಿರಿಯರಿಂದ ಮಾರ್ಗದರ್ಶನ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ವೃತ್ತಿರಂಗದಲ್ಲಿ ಬದಲಾವಣೆಯ ಸೂಚನೆ ಸಂತಸ ತರಲಿದೆ. ಲೆಕ್ಕಾಚಾರಗಳಿಂದಾಗಿ ಆರ್ಥಿಕವಾಗಿ ನೀವು ಗಟ್ಟಿಯಾಗುವಿರಿ. ಜಾಗ್ರತೆ ಇರಲಿ. ಗಾಳಿಯಲ್ಲಿ ಮನೆ ಕಟ್ಟುವಂತಹ ವ್ಯರ್ಥ ಪ್ರಯತ್ನ ಮಾಡದಿರಿ. ಸಾಲ ಹಿಂದಿರುಗಿಸದ ಸ್ನೇಹಿತರಿಂದ ದೂರವಿರಿ. ಮಾನಸಿಕ ನೆಮ್ಮದಿ, ವಿಪರೀತ ಕೋಪ, ಕುಟುಂಬದಲ್ಲಿ ಸೌಖ್ಯ

ಕನ್ಯಾರಾಶಿ
ಆತ್ಮೀಯರೊಂದಿಗೆ ಕಷ್ಟ ಹೇಳಿಕೊಳ್ಳುವಿರಿ, ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಇದೆ. ದಾಯಾದಿಗಳ ಬಗೆಗಿನ ಅತೀ ಆತ್ಮವಿಶ್ವಾಸದಿಂದ ಸಮಸ್ಯೆ. ಪರರನ್ನು ಟೀಕಿಸುವುದರಲ್ಲೇ ಸಮಯ ವ್ಯರ್ಥ ಮಾಡದಿರಿ. ಹಿರಿಯರಿಂದ ಧನಲಾಭ, ಹಠಮಾರಿ ತನದಿಂದ ಪೋಷಕರಿಗೆ ನೋವು. ಪೋಷಕರ ಮಾತು ಕೇಳುವುದುರಿಂದ ಉತ್ತಮ. ಕುಲದೇವರ ಆರಾಧನೆಯಿಂದ ಶುಭ, ಮಾನಸಿಕ ನೆಮ್ಮದಿ, ದಿನಸಿ ವಸ್ತುಗಳ ಖರೀದಿ, ಅಧಿಕವಾಧ ಖರ್ಚು, ಶುಭ ಫಲ ಯೋಗ.

ತುಲಾರಾಶಿ
ಮನಸ್ಸಿಗೆ ಅತೀ ನೋವು, ಬೇಜವಾಬ್ದಾರಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಉಳಿತಾಯದ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸಿ. ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರೆ ಯಶಸ್ಸು. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಅನಿರೀಕ್ಷಿತ ಪಾವತಿಗಳು ನಿಮ್ಮ ಹಣಕಾಸಿನ ಹೊರೆಯನ್ನು ಹೆಚ್ಚಿಸಬಹುದು. ಬಾಳ ಸಂಗಾತಿಯು ನಿಮ್ಮ ಬಗ್ಗೆ ಕಾಳಜಿ ವಹಿಸುವರು. ಶತ್ರುಗಳಿಂದ ಎಚ್ಚರಿಕೆ, ಮಕ್ಕಳಿಂದ ಸಹಾಯ, ದಿನಾಂತ್ಯದಲ್ಲಿ ನೆಮ್ಮದಿ ಲಭಿಸುವುದು.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಬ್ಯಾಂಕ್‌, ಫೈನಾನ್ಸ್‌ ಕಂಪೆನಿಯಿಂದ ಮಾನಹಾನಿ, ಭೂಮಿಗೆ ಸಂಬಂಧಿಸಿದ ವಿಷಯಕ್ಕೆ ಹಣವನ್ನು ಖರ್ಚು. ಹಿರಿಯರಿಂದ ಭಾವನಾತ್ಮಕವಾದ ಬೆಂಬಲ ಸಿಗುವುದು. ಸುಖ ಭೋಜನ ಪ್ರಾಪ್ತಿ, ಕುಟುಂಬ ಸೌಖ್ಯ, ಮನಸ್ಸಿಗೆ ಬೇಸರ, ಕೆಲಸ ಕಾರ್ಯಗಳಲ್ಲಿ ಒತ್ತಡ.

ಧನಸ್ಸುರಾಶಿ
ಖರ್ಚು ವೆಚ್ಚ ಕಡಿಮೆಗೊಳಿಸುವುದು ಉತ್ತಮ, ವೃತ್ತಿರಂಗದಲ್ಲಿ ಆಗಾಗ ಬದಲಾವಣೆಯ ಸಾಧ್ಯತೆ ಇದೆ. ಗುರಿ ಸಾಧನೆಗಾಗಿ ನೀವು ನಡೆಸುವ ಪ್ರಯತ್ನ ಸಫಲವಾದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ದಿನಾಂತ್ಯದಲ್ಲಿ ಸಂತಸವಿದೆ. ಪ್ರಭಾವೀ ವ್ಯಕ್ತಿಗಳ ಬೆಂಬಲದಿಂದ ನಿಮ್ಮ ನೈತಿಕ ಸ್ಥೈರ್ಯವು ಹೆಚ್ಚುವುದು. ಶತ್ರುಗಳ ಬಾಧೆ, ಹಣಕಾಸು ವಿಚಾರದಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಾರನ್ನೂ ಹೆಚ್ಚು ನಂಬಬೇಡಿ.

ಮಕರರಾಶಿ
ಶಕ್ತಿ ಮೀರಿ ಶ್ರಮ ಪಡುವಿರಿ, ವ್ಯವಹಾರದಲ್ಲಿ ಒತ್ತಡ ಹೆಚ್ಚಾಗುವುದು, ಮನೆಯಲ್ಲಿ ಶುಭ ಕಾರ್ಯಗಳ ಚಿಂತನೆಗೆ ಕೈಗೂಡುವುದಿಲ್ಲ. ಹಠಮಾರಿ ಧೋರಣೆ ಕೈಬಿಟ್ಟರೆ ನೆಮ್ಮದಿಯ ವಾತಾವರಣ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹೆಚ್ಚು ಹಣವನ್ನು ಖರ್ಚು ಮಾಡಿದರೂ ಆರ್ಥಿಕ ಹೊರೆ ಕಂಡುಬಾರದು. ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದೇ ಪರದಾಟ.

ಕುಂಭರಾಶಿ
ಅಪರಿಚಿತರಿಂದ ತೊಂದರೆ, ಆಲಸ್ಯ ಮನೋಭಾವ, ಮನೆಯಲ್ಲಿ ಆಗಾಗ ಸಮಾಧಾನಕರ ವಾತಾವರಣ ಕಂಡು ಬರುತ್ತದೆ. ನಿಮ್ಮ ಆತ್ಮವಿಶ್ವಾಸಕ್ಕೆ ಬಲವಿರಲಿ. ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸೂಕ್ತ ಬಜೆಟ್‌ ರೂಪಿಸಿಕೊಳ್ಳಿ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ಶರೀರದಲ್ಲಿ ನೋವು, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಮೀನರಾಶಿ
ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ, ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾಗಬಹುದು. ಈ ಬಗ್ಗೆ ಗಮನ ಹರಿಸಿ. ಶ್ರೀದೇವತಾದರ್ಶನ ಭಾಗ್ಯ ಶಾಂತಿ ನೀಡಲಿದೆ. ನಿಮ್ಮ ತಾಯಿಯ ದುಂದುವೆಚ್ಚವನ್ನು ನೋಡಿ ನೀವು ಚಿಂತಿತರಾಗಬಹುದು. ಮಾತಿನ ಮೇಲೆ ಹಿಡಿತವಿರಲಿ. ಇಲ್ಲದಿದ್ರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಋಣ ಬಾಧೆ, ಹಣಕಾಸು ನಷ್ಟ, ವಾದ-ವಿವಾದಗಳಿಂದ ದೂರವಿರಿ, ಆತ್ಮೀಯರಲ್ಲಿ ಮನಃಸ್ತಾಪ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular