ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮನ್ ಗೆ ಕೊರೊನಾ ಪಾಸಿಟಿವ್ : 40ಕ್ಕೂ ಅಧಿಕ ಪತ್ರಕರ್ತರಿಗೆ ಕ್ವಾರಂಟೈನ್ !

0

ಬೆಂಗಳೂರು : ಕೊರೊನಾ ಸೋಂಕು ಇದೀಗ ಪತ್ರಕರ್ತರಿಗೂ ಒಕ್ಕರಿಸಿದೆ. ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮೆನ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದ್ದು, 40ಕ್ಕೂ ಅಧಿಕ ಪತ್ರಕರ್ತರನ್ನು ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸೋ ಸಾಧ್ಯತೆಯಿದೆ.

ಕೊರೊನಾ ವಿರುದ್ದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರೊ ಪತ್ರಕರ್ತರನ್ನು ರಾಜ್ಯ ಸರಕಾರದ ಆದೇಶದನ್ವನ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ತಪಾಸಣೆಗೆ ಒಳಪಟ್ಟಿರುವವರ ಪೈಕಿ ಕನ್ನಡದ ಪ್ರಮುಖ ಸುದ್ದಿ ವಾಹಿನಿಯ ಕ್ಯಾಮರಾಮನ್ ಗೆ ಕೊರೊನಾ ಸೋಂಕು ದೃಢಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾಜ್ಯ ಆರೋಗ್ಯ ಇಲಾಖೆ 120 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಿದ್ದು, 119 ಮಂದಿಯ ತಪಾಸಣಾ ವರದಿಯಲ್ಲಿ ನೆಗೆಟಿವ್ ವರದಿ ಬಂದಿದೆ.

ಅಲ್ಲದೇ ಇಂದೂ ಸಹ 200ಕ್ಕೂ ಅಧಿಕ ಪತ್ರಕರ್ತರನ್ನು ತಪಾಸಣೆಗ ಒಳಪಡಿಸಲಾಗಿದೆ. ಇದೀಗ ಕ್ಯಾಮರಾಮನ್ ಗೆ ಕೊರೊನಾ ಸೋಂಕು ದೃಢಪಟ್ಟಿರೋ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿರುವ ವಿವಿಧ ವಾಹಿನಿಗಳ ವರದಿಗಾರರು, ಕ್ಯಾಮರಾಮೆನ್, ಡ್ರೈವರ್ ಹಾಗೂ ತಾಂತ್ರಿಕ ಸಿಬ್ಬಂಧಿಗಳು ಸೇರಿದಂತೆ ಸುಮಾರು 40ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ.

Leave A Reply

Your email address will not be published.