ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 13-10-2020

ನಿತ್ಯಭವಿಷ್ಯ : 13-10-2020

- Advertisement -

ಮೇಷರಾಶಿ
ಶುಭ ಮಂಗಲ ಕಾರ್ಯಕ್ಕಾಗಿ ಓಡಾಟ ಕಂಡುಬರುವುದು. ಯತ್ನ ಕಾರ್ಯಗಳಲ್ಲಿ ವಿಘ್ನ, ದ್ರವ್ಯ ನಷ್ಟ, ನೌಕರಿಯಲ್ಲಿ ಕಿರಿಕಿರಿ, ಚಂಚಲ ಮನಸ್ಸು. ಈ ನೆಂಟಸ್ಥಿಕೆಯನ್ನು ಮುಂದುವರಿಸುವುದು. ವೃತ್ತಿರಂಗದಲ್ಲಿ ತುಂಬಾ ಚುರುಕಾಗಿ ಓಡಾಡುವ ಕಾಲವಿದು. ಆದರೆ ಜೀವಕ್ಕೆ ಸುಸ್ತು ಕಂಡುಬಂದು ಸಾಕೆನಿಸಲಿದೆ.

ವೃಷಭರಾಶಿ
ವೃದ್ಧರ ಧನವ್ಯಯ, ಮಿತ್ರರಿಂದ ವಂಚನೆ, ಅಲ್ಪ ಪ್ರಗತಿ, ಮನಸ್ತಾಪ, ಶತ್ರುಬಾಧೆ. ಮನಸ್ಸಿಗೆ ತುಸು ಸಮಾಧಾನವು ಸಿಗಲಿದೆ. ಮಾಡುವ ಕೆಲಸ ಕಾರ್ಯವು ಸಮಾಧಾನ ತರಲಿದೆ. ದಾಯಾದಿಗಳು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿಯಾರು. ಸಮಾಧಾನ ಹಾಗೂ ತಾಳ್ಮೆಯ ಆವಶ್ಯಕತೆ ಇದೆ.

ಮಿಥುನರಾಶಿ
ಕುಟುಂಬದ ಸದಸ್ಯರ ಮಂಗಲಕಾರ್ಯಕ್ಕಾಗಿ ಓಡಾಟ ತಂದೀತು. ಆರೋಗ್ಯದಲ್ಲಿ ಸುಧಾರಣೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ. ಪುತ್ರನ  ಹುಟ್ಟುಹಬ್ಬದ ಸಂಭ್ರಮ. ವೃತ್ತಿರಂಗದಲ್ಲಿ ಸಂತಸದಾಯಕ ವಾತಾವರಣವಿದ್ದು ಸಹೋದ್ಯೋಗಿ ಗಳಿಂದ ಸಹಕಾರ ದೊರೆತು ಸಂತಸ ಸಿಗಲಿದೆ.

ಕಟಕರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಷೇರುಮಾರುಕಟ್ಟೆಯಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು. ಭಾತೃವರ್ಗದವರ ಮಿಲನದಿಂದ ಸಂತೋಷ ಪಡುವಿರಿ. ಮನೆಯಲ್ಲಿ ಹರುಷದ ವಾತಾವರಣವು ಕಂಡುಬಂದೀತು. ಮನೆಯಲ್ಲಿ ಹಿರಿಯರ ಆರೋಗ್ಯದ ವಿಚಾರದಲ್ಲಿ ಚಿಂತೆ ಕಂಡುಬಂದೀತು. ದಿನಾಂತ್ಯ ಶುಭ.

ಸಿಂಹರಾಶಿ
ಯಾರು ಏನೆಂದರೂ ನಿಮ್ಮ ಜೀವನದಲ್ಲಿ ಹಲವು ತಿಂಗಳಿಂದ ನಿಮಗೆ ಉದ್ವೇಗ, ಸಿಡುಕು ಹಾಗೂ ಕೋಪ ಕಂಡುಬಂದೀತು. ಉದ್ಯೋಗದಲ್ಲಿ ಬಡ್ತಿ, ಭೂಲಾಭ, ದಾನ ಧರ್ಮದಲ್ಲಿ ಆಸಕ್ತಿ, ಶತ್ರು ಧ್ವಂಸ. ಅದನ್ನು ಸ್ವಲ್ಪ ಬಿಟ್ಟು ಬಿಡಿರಿ. ಆದಷ್ಟು ಯೋಗ, ಧ್ಯಾನವನ್ನು ಮಾಡಿ ಸಮಾಧಾನ ಪಡೆಯಿರಿ.

ಕನ್ಯಾರಾಶಿ
ಅನುಕೂಲಗಳು ಜಾಸ್ತಿ, ಆದಾಯ ಹೆಚ್ಚುತ್ತೆ, ಸುಖ ಭೋಜನ, ದಾಂಪತ್ಯ ಜೀವನದಲ್ಲಿ ನೆಮ್ಮದಿ. ನೀವು ಮಾಡಿದ ಎಡವಟ್ಟು ಕೆಲಸದಿಂದ ಹಲವರಿಗೆ ಬೇಸರ, ಕಷ್ಟವಾದೀತು. ವೃತ್ತಿರಂಗದಲ್ಲೂ ಉದ್ವೇಗ, ಸ್ಪರ್ಧೆಯು ಕಂಡುಬಂದೀತು. ನಿಮ್ಮ ಕಾರ್ಯವೈಖರಿಯಿಂದ ಮೆಚ್ಚುಗೆ ಗಳಿಸಲಿದ್ದೀರಿ. ಶುಭವಿದೆ.

ತುಲಾರಾಶಿ
ಸಣ್ಣಪುಟ್ಟ ಕೆಲಸಗಳಿಗಾಗಿ ತಲೆಬಿಸಿ ಮಾಡದಿರಿ. ಬಂಧುಗಳ ಬೇಟೆ, ಭೂಮಿ ಕೊಳ್ಳುವಿಕೆ, ವಾಹನದಿಂದ ಧನ ನಷ್ಟ ಎಚ್ಚರ, ಸುಖ ಭೋಜನ. ನೀವು ಹಿಡಿದ ಕೆಲಸ ಮುಗಿಯುವ ತನಕ ಸಮಾಧಾನ ಸಿಗದು. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ಕಿರಿಕಿರಿ ಕಂಡುಬಂದೀತು. ಸಹನೆ, ತಾಳ್ಮೆ ಇರಲಿ.

ವೃಶ್ಚಿಕರಾಶಿ
ಶತ್ರುಬಾಧೆ, ಬಂಧು ಮಿತ್ರರಲ್ಲಿ ಕಲಹ, ವ್ಯಾಜ್ಯಗಳಿಂದ ತೊಂದರೆ, ಸಲ್ಲದ ಅಪವಾದ. ಮಕ್ಕಳ ಮಂಗಲ ಕಾರ್ಯಕ್ಕಾಗಿ ಓಡಾಟ ತಂದೀತು. ಬೆಳಗ್ಗಿನಿಂದ ಶುರುವಾದ ಓಡಾಟದಿಂದ ನಿಮಗೆ ಸುಸ್ತು ಆದೀತು. ಕುಟುಂಬದ ಇತರ ಸದಸ್ಯರಿಂದ ಸಹಾಯ ಒದಗಿ ಬಂದೀತು. ಕಿರು ಸಂಚಾರವಿದೆ.

ಧನಸ್ಸುರಾಶಿ
ದೇವಸ್ಥಾನ ಯಾ ಪ್ರವಾಸವು ಒದಗಿ ಬರಲಿದೆ. ಪ್ರಿಯ ಜನರ ಭೇಟಿ, ಸ್ಥಿರಾಸ್ತಿ ಸಂಪಾದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ವ್ಯಾಪಾರ ಉದ್ಯೋಗದಲ್ಲಿ ಅಲ್ಪ ಲಾಭ. ಪ್ರವಾಸದ ಸಂತಸ, ಮೋಜು ನಿಮಗೆ ಸಿಗಲಿದೆ. ಪತ್ನಿಯ ಇಷ್ಟಾರ್ಥ ಸಿದ್ಧಿಗಾಗಿ ಪ್ರಯಾಣ ಒದಗಲಿದೆ. ಕೋರ್ಟು ಕಚೇರಿ ವಿಭಾಗದಲ್ಲಿ ನಿಮಗೆ ತಲೆ ಕೆಡಲಿದೆ.

ಮಕರರಾಶಿ
ದ್ರವ್ಯಲಾಭ, ಕೀರ್ತಿ ವೃದ್ಧಿ, ಕೃಷಿಯಲ್ಲಿ ಲಾಭ, ಮಿತ್ರರ ಸಹಾಯ, ಆರೋಗ್ಯ ವೃದ್ಧಿ. ಮನೆಯಲ್ಲಿ ಮಕ್ಕಳಿಂದ ಸಮಾಧಾನ, ಸಂತಸ ಕೂಡಿ ಬರಲಿದೆ. ಹಲವು ಸಮಯದಿಂದ ಮೂಲೆಗೆ ಬಿದ್ದ ಕೆಲಸ ಕಾರ್ಯ ನೆರವೇರಿ ಸಂಭ್ರಮ ತಂದೀತು. ಹಳೇ ಸಾಮಾನುಗಳನ್ನು ವಿಲೇವಾರಿ ಮಾಡುವುದು.

ಕುಂಭರಾಶಿ
ಮಕ್ಕಳ ಬಗ್ಗೆ ಹೆಮ್ಮೆ ಪಡುವಿರಿ. ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸಂತಸವಾಗಲಿದೆ. ಯತ್ನ ಕಾರ್ಯ ವಿಘ್ನ, ಮನಸ್ಸಿನಲ್ಲಿ ಗೊಂದಲ, ಸೇವಕ ವರ್ಗದಿಂದ ತೊಂದರೆ, ಮನಸ್ಸಿಗೆ ಚಿಂತೆ. ಮಕ್ಕಳಿಂದ ಜಾಗ ಯಾ ಮನೆ ಖರೀದಿ ನಡೆದೀತು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದು ಸಂತಸವಾದೀತು.

ಮೀನರಾಶಿ
ಅತಿಯಾದ ನಿದ್ರೆ, ಸ್ವಜನ ವಿರೋಧ, ಅಧಿಕಾರಿಗಳಲ್ಲಿ ಕಲಹ, ರೋಗಬಾಧೆ, ವ್ಯವಹಾರದಲ್ಲಿ ಏರುಪೇರು. ಮನೆಯ ಸದಸ್ಯರೊಂದಿಗೆ ಮುಕ್ತವಾಗಿ ಬೆರೆತು ಸಂತಸ ಪಡುವಿರಿ. ನೆಂಟಸ್ಥಿಕೆಯ ವಿಷಯದಲ್ಲಿ ತಲೆ ಕೆಟ್ಟಿàತು. ಆದರೆ ನೀವು ಮನಸ್ಸು ಮಾಡಿದ್ದಲ್ಲಿ ಒಳ್ಳೆಯ ಫ‌ಲ ಸಿಗಲಿದೆ. ಆರೋಗ್ಯದಲ್ಲಿ ಜಾಗ್ರತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular