ಅಂತರ್ ಧರ್ಮಿಯ ಮದುವೆಗೆ ಪ್ರಚೋದನೆ ಆರೋಪ….! ತನಿಷ್ಕ್ ವಿರುದ್ಧ ನೆಟ್ಟಿಗರ ಹ್ಯಾಶ್ ಟ್ಯಾಗ್ ಅಭಿಯಾನ…!!

0

ವದೆಹಲಿ: ಒಮ್ಮೊಮ್ಮೆ ನಾವು ಅಂದುಕೊಳ್ಳೋದು ಒಂದಾದರೇ, ಬೇರೆಯವರು ಅಂದ್ಕೊಳ್ಳೋದು ಇನ್ನೊಂದು. ಒಡವೆ ಜಾಹೀರಾತಿ ಗಾಗಿ ವಿಭಿನ್ನ ಜಾಹೀರಾತು ಸಿದ್ಧಪಡಿಸಿದ ಸಂಭ್ರಮದಲ್ಲಿದ್ದ ತನಿಷ್ಕ್ ಜ್ಯುವೆಲ್ಲರಿಗೂ ಇಂತಹುದೇ ಸಂಕಷ್ಟವೊಂದು ಎದುರಾಗಿದೆ. ಸೀಮಂತ್ ಶಾಸ್ತ್ರದಲ್ಲಿ ಒಡವೆ ಪ್ರಮೋಟ್ ಮಾಡಲು ಹೋಗಿದ್ದ ತನಿಷ್ಕ್ ಸಂಸ್ಥೆ ಇದೀಗ ಅಂತರ್ ಧರ್ಮಿಯ ಮದುವೆಗೆ ಪ್ರೋತ್ಸಾಹ, ಲವ್ ಜೆಹಾದ್ ಹಾಗೂ ನಕಲಿ ಜಾತ್ಯಾತೀತೆಗೆ ಬೆಂಬಲ ನೀಡುತ್ತಿದೆ ಎಂಬ ಆರೋಪಕ್ಕೆ ತುತ್ತಾಗಿದೆ.


ಇತ್ತೀಚಿಗೆ ಆಭರಣದ ಫ್ಯಾಮಿಲಿ ಜಾಹೀರಾತೊಂದನ್ನು ಸಿದ್ಧಪಡಿಸಿದ್ದ ತನಿಷ್ಕ್, ಅದಕ್ಕಾಗಿ ಹಿಂದು ಹಾಗೂ ಮುಸ್ಲಿಂ ಮದುವೆಯ ಕಹಾನಿ ಆಯ್ಕೆ ಮಾಡಿತ್ತು. ಅಕ್ಟೋಬರ್ 9 ರಿಂದ ತೆರೆಕಂಡ ಈ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬವೊಂದು ತನ್ನ ಹಿಂದು ಸೊಸೆಗಾಗಿ ಸೀಮಂತ ಏರ್ಪಡಿಸುವ ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿರುವ ದೃಶ್ಯ ತೋರಿಸಲಾಗಿತ್ತು.


ಇದಕ್ಕೆ ಪ್ರತಿಕ್ರಿಯಿಸುವ ಹಿಂದೂ ಸೊಸೆ, ನಿಮ್ಮ ಸಂಪ್ರದಾಯದಲ್ಲಿ ಇದನ್ನೆಲ್ಲ ಮಾಡೋದಿಲ್ಲವಲ್ಲ ಎಂದು ಪ್ರಶ್ನಿಸಿದ್ದು, ಅದಕ್ಕೆ ಅತ್ತೆ ಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲ ಮನೆಯಲ್ಲೂ ಮಾಡುತ್ತಾರಲ್ಲವೇ ಎಂದು ಪ್ರಶ್ನಿಸುತ್ತಾರೆ.

https://youtu.be/hEwfhGAaxf8

ಈ ವಿಡಿಯೋಗೆ ಸೊಸೆಯನ್ನು ಮಗಳಾಗಿ ಕಾಣುವ ಕುಟುಂಬಕ್ಕೆ ಆಕೆ ಸೊಸೆಯಾಗಿ ಹೋಗಿದ್ದಾಳೆ. ಆಕೆಗಾಗಿ ಅವರು ತಮ್ಮದಲ್ಲದ ಧರ್ಮದ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ.ಎರಡು ವಿಭಿನ್ನ ಧರ್ಮ ಹಾಗೂ ಸಂಪ್ರದಾಯ ಹಾಗೂ ಪದ್ಧತಿಯ ಸಂಗಮವಿದು ಎಂದು ಬರೆಯಲಾಗಿದೆ.

https://twitter.com/bagga_daku/status/1315492776604098560

ಈ ಬರಹ ಹಾಗೂ ವಿಚಾರಧಾರೆಗೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಡಿಯೋಗೆ ಅಂದಾಜು 17 ಸಾವಿರ ಡಿಸ್ ಲೈಕ್‍ಗಳು ಬಂದಿದ್ದು, ಹ್ಯಾಶ್ ಟ್ಯಾಗ್ ಅಡಿಯಲ್ಲಿ “ಬೈಕಾಟ್ ತನಿಷ್”್ಕ ಎಂದು ಅಭಿಯಾನ ಆರಂಭವಾಗಿದೆ.


ಇಂತಹ ಜಾಹೀರಾತಿನ ಮೂಲಕ ತನಿಷ್ಕ್, ಲವ್ ಜಿಹಾದ್, ನಕಲಿ ಜಾತ್ಯಾತೀತತೆ ಹಾಗೂ ಧರ್ಮವಿರೋಧಿ ನೀತಿಯನ್ನು ಪ್ರಮೋಟ್ ಮಾಡುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿಬಂದಿದ್ದು, ನೆಟ್ಟಿಗರು ಈ ಜಾಹೀರಾತು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆಯೂ ತನಿಷ್ಕ್ ಜಾಹೀರಾತಿನಲ್ಲಿ ವರ್ಣಬೇಧ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

Leave A Reply

Your email address will not be published.