ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 07-08-2020

ನಿತ್ಯಭವಿಷ್ಯ : 07-08-2020

- Advertisement -

ಮೇಷರಾಶಿ
ಆರ್ಥಿಕ ಪ್ರಗತಿ, ಶುಭ ಕಾರ್ಯ ಯೋಗ, ದೇವತಾ ಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಕಂಡು ಬಂದಾವು. ನಿರುದ್ಯೋಗಿಗಳು ಉದ್ಯೋಗಭಾಗ್ಯವನ್ನು ಪಡೆದಾರು. ಕುಟುಂಬದ ಹಿರಿಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವೃದ್ಧರಿಂದ ಬೈಗುಳ, ವಿಚ್ಛೇದನದಲ್ಲಿ ಜಯ, ಉದ್ಯೋಗ ಬದಲಾವಣೆ, ವಿದ್ಯಾಭ್ಯಾಸ ಪ್ರಗತಿ

ವೃಷಭರಾಶಿ
ದೈವಾನುಗ್ರಹವಿಲ್ಲದೆ ನಿರೀಕ್ಷಿತ ಕೆಲಸಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ಸರಕಾರಿ ಅಧಿಕಾರಿ ವರ್ಗದವರಿಂದ ಕ್ಲೇಶವಿದೆ. ಮುಂಗೋಪದಿಂದಾಗಿ ಆಪ್ತೇಷ್ಟರ ವಿರಸ ಕಟ್ಟಿಕೊಳ್ಳುವಂತಾದೀತು. ವ್ಯವಹಾರದಲ್ಲಿ ಸಂತೃಪ್ತಿ. ಶುಭ ಕಾರ್ಯಗಳು ರದ್ದು, ಅನಾರೋಗ್ಯದಿಂದ ಚಿಂತೆ, ಮೂರನೇ ವ್ಯಕ್ತಿಗಳಿಂದ ಸಮಸ್ಯೆ, ಆರ್ಥಿಕವಾಗಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ,ಅಧಿಕಾರಿಗಳಿಂದ ಸಮಸ್ಯೆ.

ಮಿಥುನರಾಶಿ
ಮಾನಸಿಕ ಖನ್ನತೆಯಿಂದ ಬಳಲಲಿದ್ದೀರಿ. ಕ್ರಿಮಿನಲ್‌ ಮೊಕದ್ದಮೆಯಿಂದ ಕ್ಲೇಶವಿದೆ. ರಾಜಕೀಯದಲ್ಲಿ ಪಕ್ಷಾಂತರದ ಪಿಡುಗು ಕಂಡು ಬಂದೀತು. ತೋಟಗಾರಿಕೆ, ಕೃಷಿ ಕಾರ್ಯದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಭಾವನೆಗಳಿಗೆ ಪೆಟ್ಟು,ಮಕ್ಕಳಲ್ಲಿ ಅನಾರೋಗ್ಯ, ದೀರ್ಘಕಾಲೀನ ಸೋಲು, ಸಾಲ ದೊರೆಯುವುದು, ಸಂಗಾತಿಗೆ ಅನಾರೋಗ್ಯ, ಮೃಷ್ಟಾನ್ನ ಭೋಜನ.

ಕಟಕರಾಶಿ
ಸ್ತ್ರೀಯರಿಂದ ನೋವು, ಸ್ಥಿರಾಸ್ತಿಯ ಚಿಂತೆ, ವಾಹನಾಪಘಾತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಲಿದೆ. ಆರ್ಥಿಕ ಮುಗ್ಗಟ್ಟು ಆಗಾಗ ತೋರಿ ಬರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಅನಿರೀಕ್ಷಿತ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ವಿರುತ್ತದೆ. ವಾಹನದ ಆಸೆ, ಮಕ್ಕಳಿಂದ ತೊಂದರೆ, ಸಾಲಗಾರರಾಗುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಸಿಂಹರಾಶಿ
ಗೃಹ ನಿರ್ಮಾಣ ಆಸೆ, ಮಕ್ಕಳ ಜೀವನ ಅಭಿವೃದ್ಧಿ, ರಿಪೇರಿ, ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ನೂತನ ನೆಂಟರಿಷ್ಟರ ಸಮಾಗಮದಿಂದ ಸಂತಸ ಹೆಚ್ಚಲಿದೆ. ಕಡ್ಡಾಯವಾಗಿ ಧನ ಸಂಗ್ರಹಕ್ಕೆ ಮನಸ್ಸು ಮಾಡುವುದು ಉತ್ತಮ. ದಿನಾಂತ್ಯ ಕಿರು ಸಂಚಾರ. ಸ್ತ್ರೀಯರೊಂದಿಗೆ ಮನಸ್ತಾಪ, ಮಾನಸಿಕ ತೊಳಲಾಟ, ಕಾನೂನುಬಾಹಿರ ಚಟುವಟಿಕೆಯಿಂದ ತೊಂದರೆ

ಕನ್ಯಾರಾಶಿ
ಆರ್ಥಿಕವಾಗಿ ಅನುಕೂಲ,ಉದ್ಯೋಗ ಪ್ರಗತಿ, ಅಧಿಕಾರಿಗಳಿಂದ ಅನುಕೂಲ, ದೃಢ ನಿರ್ಧಾರಗಳು ಸಾಂಸಾರಿಕ ಜೀವನಕ್ಕೆ ಪೂರಕವಾಗಲಿದೆ. ಹಾಗೂ ಸಮಸ್ಯೆಗಳನ್ನು ಸಾವಧಾನದಿಂದ ನಿಭಾಯಿಸಿಕೊಂಡು ಹೋಗುವುದರಿಂದ ಶಾಂತಿ, ಸಮಾಧಾನ ಸಿಗಲಿದೆ. ಸಾಮಾಜಿಕರಂಗದಲ್ಲಿ ಅಪಮಾನ ಸ್ಥಿತಿ ಇರುತ್ತದೆ. ದಾಂಪತ್ಯ ಸಮಸ್ಯೆಗಳು, ಸ್ಥಿರಾಸ್ತಿ, ವಾಹನದಲ್ಲಿ ತಪ್ಪು ನಿರ್ಧಾರ, ಪಾಲುದಾರಿಕೆಯಿಂದ ಮುಕ್ತಿ

ತುಲಾರಾಶಿ
ಸತ್ಕಾರ್ಯಗಳಿಗೆ ಧನವಿನಿಯೋಗವಾಗಿ ಸಂತಸ ತರಲಿದೆ. ಉದ್ಯೋಗಿ ಮಹಿಳೆಯರಿಗೆ ವೃತ್ತಿರಂಗದಲ್ಲಿ ಸಮಾಧಾನ ಸಿಗಲಿದೆ. ರಾಜಕೀಯ ವರ್ಗದವರಿಗೆ ಸ್ಥಾನಮಾನಕ್ಕಾಗಿ ಹೋರಾಟ ವಿರುತ್ತದೆ. ಪ್ರವಾಸ ಮುದ ನೀಡಲಿದೆ. ಸ್ವಂತ ಕೆಲಸಕಾರ್ಯಗಳಲ್ಲಿ ಪ್ರಗತಿ, ಗುಪ್ತ ಶತ್ರುಗಳು, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ

ವೃಶ್ಚಿಕರಾಶಿ
ಶುಭಕಾರ್ಯ ಯೋಗ, ಸ್ಥಿರಾಸ್ತಿ ನಷ್ಟ, ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಧನವ್ಯಯವಾದೀತು. ಬರಬೇಕಾದ ಹಳೇ ಬಾಕಿ ದೊರಕಲಿದೆ. ಸಾಂಸಾರಿಕವಾಗಿ ಚಾಡಿಕೋರರ ಮಾತು ತಲೆಯನ್ನು ಕೆಡಿಸಲಿದೆ. ವ್ಯಾಪಾರಿಗಳು ಜಾಣ್ಮೆ ವಹಿಸಿದ್ದಲ್ಲಿ ಲಾಭ ಪಡೆಯುವಿರಿ. ಸ್ಥಳ ಬದಲಾವಣೆ, ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವರು, ಸೌಂದರ್ಯವರ್ಧಕಗಳ ಖರೀದಿ, ಆಧ್ಯಾತ್ಮಿಕ ಚಿಂತನೆ ಉತ್ತಮ ಹೆಸರು ಮಾಡುವ ಹಂಬಲ

ಧನಸ್ಸುರಾಶಿ
ಸಾಲಬಾಧೆ ಮತ್ತು ಶತ್ರು ಕಾಟದ ಚಿಂತೆ, ಆರೋಗ್ಯ ಸಮಸ್ಯೆಗಳು, ಅತಿಯಾದ ಒಳ್ಳೆತನದಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ವಿದೇಶಿ ಉದ್ಯೋಗದ ಭಾಗ್ಯವನ್ನು ತಂದು ಕೊಡಲಿದೆ. ಮುಖ್ಯವಾಗಿ ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸುವುದು ಅಗತ್ಯವಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ ವಿರುತ್ತದೆ. ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ

ಮಕರರಾಶಿ
ಸ್ವಂತ ವ್ಯವಹಾರದಲ್ಲಿ ಪ್ರಗತಿ,ದೂರ ಪ್ರದೇಶದಲ್ಲಿ ಉದ್ಯೋಗ, ಮಕ್ಕಳಿಂದ ಕಲಾ ಚಟುವಟಿಕೆ, ಕೆಲಸಕಾರ್ಯಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗುವುದು ಉತ್ತಮ. ನೂತನ ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತರಲಿದೆ. ಒಮ್ಮೊಮ್ಮೆ ನಿಮ್ಮ ಅತ್ಮೀಯರು ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿಯಾರು. ಶೃಂಗಾರ ಸಾಧನ ಖರೀದಿ, ಸ್ತ್ರೀಯರಿಂದ ಮೋಸ, ಕೌಟುಂಬಿಕ ಪ್ರಗತಿ, ಉದ್ಯೋಗ ಬಡ್ತಿ.

ಕುಂಭರಾಶಿ
ಸ್ಥಿರಾಸ್ತಿಯಿಂದ ಲಾಭ,ತಂದೆಯಿಂದ ಧನಾಗಮನ, ಪ್ರಯಾಣ ಅನುಕೂಲ, ಕುಟುಂಬಿಕರ ಹಳೆಯ ನಿಷ್ಠುರ ಪುನಃಪ್ರಕಟವಾದೀತು. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯು ಬೇಸರ ತರಲಿದೆ. ಹಿರಿಯರ ಮಾತಿಗೆ ತಾಳ್ಮೆಯಿಂದ ವ್ಯವಹರಿಸಿರಿ. ಪತ್ರಿಕೋದ್ಯಮಿಗಳಿಗೆ ಯಶಸ್ಸು ದೊರಕಲಿದೆ.
ಮಹಿಳೆಯರಿಂದ ಸಹಕಾರ, ಯೋಗ ಫಲಗಳು, ಅದೃಷ್ಟ ಒಲಿಯುವುದು, ಆರೋಗ್ಯ ವೃದ್ಧಿ

ಮೀನರಾಶಿ
ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ವಿವಾಹಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ. ಸಾಮಾಜಿಕ ಕಾರ್ಯರಂಗದಲ್ಲಿ ನಿಮ್ಮ ಕ್ರಿಯಾಶೀತೆಗೆ ಉತ್ತಮ ಗೌರವ ಲಭಿಸಲಿದೆ. ಹಿರಿಯರಿಗೆ ದೇವತಾಕಾರ್ಯಗಳು ಮನಸ್ಸಿಗೆ ಶಾಂತಿ, ಸಮಾಧಾನ ನೀಡಲಿದೆ. ಬಂಧು ವಿರೋಧ, ಬೇಸರದ ದಿವಸ, ಅಧಿಕ ಕೋಪ, ಆರ್ಥಿಕ ಹಿನ್ನಡೆ, ಮಾಟ ಮಂತ್ರ ತಂತ್ರದ ಭೀತಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular