ಯೂ ಟ್ಯೂಬ್​ನಲ್ಲಿ ಹವಾ ಸೃಷ್ಟಿಸಿದೆ ಧ್ರುವ ಸರ್ಜಾ ಖರಾಬು ಹಾಡು..!

0

ಧ್ರುವ ಸರ್ಜಾ ಹಾಗೂ ರಶ್ಮಿಕಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಪೊಗರು. ಸ್ಯಾಂಡಲ್​ವುಡ್​ನಲ್ಲಿ ಈ ಚಿತ್ರದ ಕುರಿತಾಗಿ ಬೆಟ್ಟದಷ್ಟು ನಿರೀಕ್ಷೆ ಇದೆ. ಡೈಲಾಗ್​ ಟೀಸರ್​ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ಪೊಗರು ಸಿನಿಮಾ ಸಿನಿಪ್ರಿಯರಲ್ಲಿರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಚಂದನ್ ಶೆಟ್ಟಿ ಮ್ಯೂಸಿಕಲ್ ಕಂಪೋಸ್ ಮಾಡಿರುವ ಕನ್ನಡದ ಪೊಗರು ಸಿನಿಮಾದ ತೆಲುಗು ಅವತರಿಣಿಕೆಯ ಖರಾಬು ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಹೊಸ ದಾಖಲೆ ಬರೆಯುತ್ತಿದೆ.

ಚಿತ್ರತಂಡ ಈ ಹಿಂದೆಯೇ ಹೇಳಿದಂತೆ ಖರಾಬು ಹಾಡನ್ನು ಇಂದು ತೆಲುಗಿನಲ್ಲಿ ರಿಲೀಸ್​ ಮಾಡಿದೆ. ಟಾಲಿವುಡ್​ನಲ್ಲೂ ಈ ಹಾಡಿಗೆ ಕನ್ನಡದಂತೆಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಸದ್ಯ ಟಾಪ್​ನಲ್ಲಿದೆ.

ಹಾಡಿನಲ್ಲಿ ನಾಯಕಿಗೆ ಕಾಟ ಕೊಡಲಾಗಿದ್ದು, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆಯೆಂಬ ಆರೋಪ ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಮಾತ್ರವಲ್ಲ ಪೊಗರು ಸಿನಿಮಾದಿಂದಲೂ ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಕೆಲವು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ಕನ್ನಡದಲ್ಲಿ ಖರಾಬು ಹಾಡು ಏಪ್ರಿಲ್​ನಲ್ಲಿ ರಿಲೀಸ್​ ಆಗಿದ್ದು, ಮೂರು ತಿಂಗಳಿನಲ್ಲಿ ಹತ್ತು ಕೋಟಿ ಜನ ವೀಕ್ಷಿಸಿದ್ದಾರೆ. ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾದಲ್ಲಿ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ನಟ ಧ್ರುವ ಸರ್ಜಾ ಜೊತೆಗೆ ಅಂತರರಾಷ್ಟ್ರೀಯ ಫೈಟರ್​ಗಳು ಕೈ ಮಿಲಾಯಿಸಿದ್ದಾರೆ.

ಇದೀಗ ಧ್ರುವ ಸರ್ಜಾ ತೆಲುಗಿನಲ್ಲಿಯೂ ಮಿಂಚುಹರಿಸಿದ್ದು, ಖರಾಬು ಹಾಡು ಯೂಟ್ಯೂಬ್ ನಲ್ಲಿ ಧೂಳು ಎಬ್ಬಿಸುತ್ತಿದೆ. ವಿಭಿನ್ನವಾಗಿರುವ ಹಾಡು ತೆಲುಗು ಸಿನಿ ರಸಿಕರಿಗೆ ಸಖತ್ ಇಷ್ಟವಾದಂತಿದೆ.

Leave A Reply

Your email address will not be published.