ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 10-08-2020

ನಿತ್ಯಭವಿಷ್ಯ : 10-08-2020

- Advertisement -

ಮೇಷರಾಶಿ
ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಆರೋಗ್ಯ ಕೆಡದಂತೆ ಜಾಗ್ರತೆ ವಹಿಸಿರಿ. ದಿನಾಂತ್ಯ ಕಾರ್ಯಾರ್ಥ ಕಿರುಸಂಚಾರವು ಒದಗಿ ಬರಲಿದೆ.ಕೃಷಿಕರಿಗೆ ಉತ್ತಮ ಲಾಭ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಇತರರ ಮಾತಿನಿಂದ ಕಲಹ.

ವೃಷಭರಾಶಿ
ಮಹಿಳೆಯರಿಗೆ ವಿಶೇಷ ಲಾಭ, ಸಣ್ಣಪುಟ್ಟ ವಿಚಾರದಲ್ಲಿ ಕಲಹ, ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇರಲು ಖರ್ಚುವೆಚ್ಚಗಳು ಅಧಿಕವಾಗಲಿವೆ. ಮಕ್ಕಳೊಡನೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಬಿಸಿ ಮಾಡಿಕೊಳ್ಳದಿರಿ. ವಿಪರೀತ ಖರ್ಚು, ಅತಿಯಾದ ನಿದ್ರೆ, ರೋಗ ಬಾಧೆ.

ಮಿಥುನರಾಶಿ
ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ ಒದಗಿ ಬರಲಿದೆ. ಆರ್ಥಿಕ ಪರಿಸ್ಥಿತಿಯು ಚೇತರಿಕೆ ಇದ್ದರೂ ಜಾಗ್ರತೆ ವಹಿಸಬೇಕಾಗುತ್ತದೆ. ಯೋಗ್ಯ ವಯಸ್ಕರು ಕಂಕಣಬಲದ ಭಾಗ್ಯವನ್ನು ಹೊಂದಲಿದ್ದಾರೆ. ಮನೆಯಲ್ಲಿ ಸಂತಸವಿರುವುದು. ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ದೂರ ಪ್ರಯಾಣ, ಹಳೆಯ ಸಾಲ ಮರುಪಾವತಿ, ಶುಭಸುದ್ದಿ ತಿಳಿಯುವಿರಿ.

ಕಟಕರಾಶಿ
ಸಪ್ತಮದ ಶನಿಯು ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚ ತರಲಿದೆ. ಗೃಹಕೃತ್ಯದ ವಿಚಾರದಲ್ಲಿ ಪತ್ನಿಯೊಡನೆ ಸಹಮತವಿರಲಿ. ನಿರುದ್ಯೋಗಿಗಳು ಇದ್ದ ಕೆಲಸದಲ್ಲಿ ತೃಪ್ತಿ ಪಡುವಂತಾದೀತು. ದಿನಾಂತ್ಯ ಅತಿಥಿಗಳು ಬಂದಾರು. ಪಟ್ಟುಬಿಡದೆ ಹಿಡಿದ ಕೆಲಸವನ್ನು ಮಾಡುವಿರಿ, ಆಲಸ್ಯ ಮನೋಭಾವ, ಮಿತ್ರರ ಭೇಟಿ, ದೂರ ಪ್ರಯಾಣ.

ಸಿಂಹರಾಶಿ
ಪ್ರಭಾವಿ ವ್ಯಕ್ತಿಗಳ ಭೇಟಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಗೊಂದಲದ ಪರಿಸ್ಥಿತಿಯು ಉಪಶಮನವಾಗಲಿದೆ. ಹಿರಿಯರ ಹಿತವಚನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಸಮಸ್ಯೆಗಳು ಪರಿಹಾರ ಕಂಡು ಮನೆಯಲ್ಲಿ ಶಾಂತಿ, ಸಮಾಧಾನಗಳು ಕಂಡು ಬರಲಿವೆ. ಆಕಸ್ಮಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ.

ಕನ್ಯಾರಾಶಿ
ಪ್ರಿಯ ಜನರ ಭೇಟಿ, ಮಾತಿನ ಚಕಮಕಿ, ದೈನಂದಿನ ಕಾರ್ಯಗಳನ್ನು ಎಂದಿನಂತೆ ನೆರವೇರಿಸಿ ಮುನ್ನಡೆಯಿರಿ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ರೀತಿ ಯಲ್ಲಿ ತೊಡಗಬೇಕಾಗುತ್ತದೆ. ಆಪ್ತೆಷ್ಟರೊಂದಿಗೆ ಹೆಚ್ಚಿನ ಕಾಲ ಕಳೆಯಬೇಕಾಗುತ್ತದೆ. ಆರೋಗ್ಯದಲ್ಲಿ ಜಾಗ್ರತೆ ಮಾಡುವುದು. ನೆಮ್ಮದಿ ಇಲ್ಲದ ಜೀವನ, ವಿಪರೀತ ಹಣವ್ಯಯ.

ತುಲಾರಾಶಿ
ಸ್ಥಳ ಬದಲಾವಣೆ, ಟ್ರಾವೆಲ್ಸ್ ಕೆಲಸದವರಿಗೆ ನಷ್ಟ, ಹಲವು ವಿಚಾರಗಳಲ್ಲಿ ಅನಾವಶ್ಯಕವಾಗಿ ಕೊರಗುವಂತಾದೀತು. ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಲಿದೆ. ಬಂಧುಗಳಿಂದ ಶುಭಸುದ್ದಿ ಕೇಳುವಿರಿ. ಸಾಧನೆಯ ದಿನ ಇಂದು ಯಾವ ಕಾರ್ಯ ಮಾಡಬೇಕೆಂದಿದ್ದಿರೋ ಸಾಧಿಸುವಿರಿ. ಧನಹಾನಿ, ಶೀತ ಸಂಬಂಧವಾದ ರೋಗ, ದುರಾಲೋಚನೆ.

ವೃಶ್ಚಿಕರಾಶಿ
ಸ್ಥಾನ ಭ್ರಷ್ಟತ್ವ, ಮನೋವ್ಯಥೆ, ನಿರೀಕ್ಷಿತ ಕಾರ್ಯದಲ್ಲಿ ಸಫ‌ಲತೆಯನ್ನು ಪಡೆಯಲಿದ್ದೀರಿ. ಆಪ್ತರೊಂದಿಗೆ ವೈಮನಸ್ಸು ಕರಗಲಿದೆ. ನೀವು ಪ್ರಗತಿ ಸಾಧಿಸುವುದು ಕಷ್ಟವಲ್ಲ. ಕಠಿಣ ಪರಿಶ್ರಮದ ಅಗತ್ಯವಿದೆ. ಮುಖ್ಯವಾಗಿ ನಿಮಗೆ ಸಹನೆಯ ಅಗತ್ಯವಿದೆ. ದೇವತಾ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ, ಷೇರು ವ್ಯವಹಾರಗಳಲ್ಲಿ ನಷ್ಟ.

ಧನಸ್ಸುರಾಶಿ
ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಅವ್ಯಕ್ತ ಆತಂಕ ಕಾಡಲಿದೆ. ನಿರುದ್ಯೋಗಿಗಳಿಗೆ ಬಹಳ ಕಷ್ಟದಿಂದ ಕಾರ್ಯಸಾಧನೆಯಾಗಲಿದೆ. ಯೋಗ್ಯ ವಯಸ್ಕರು ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಕಂಕಣಬಲವನ್ನು ಪಡೆಯಲಿದ್ದೀರಿ. ಆರೋಗ್ಯ ಜಾಗ್ರತೆ. ಭೋಗವಸ್ತು ಪ್ರಾಪ್ತಿ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯ ವೃದ್ಧಿ, ಇಷ್ಟಾರ್ಥಸಿದ್ಧಿ.

ಮಕರರಾಶಿ
ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಬಹಳ ದಿನಗಳ ನಂತರ ನಿಮಗೆ ಚೇತರಿಕೆ ಕಂಡು ಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡು ಬಂದರೂ ಅತೀ ಜಾಗ್ರತೆ ವಹಿಸಿರಿ. ಅನಿರೀಕ್ಷಿತವಾಗಿ ವೃತ್ತಿರಂಗದ ಸಂಬಂಧವಾಗಿ ಅಧಿಕಾರಿಗಳ ಆಗಮನವಾದೀತು. ಸತ್ಕಾರ್ಯಸಕ್ತಿ, ದ್ರವ್ಯಲಾಭ, ಚಂಚಲ ಮನಸ್ಸು, ಮಾಡುವ ಕೆಲಸದಲ್ಲಿ ಹಿಂಜರಿಯುವಿಕೆ.

ಕುಂಭರಾಶಿ
ಪುತ್ರಪ್ರಾಪ್ತಿ, ವಾಹನ ಖರೀದಿ, ಸಾಂಸಾರಿಕವಾಗಿ ಪತ್ನಿಯ ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಫ‌ಲವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳಿಗೆ ಆಗಾಗ ಗೊಂದಲದ ಪರಿಸ್ಥಿತಿಗಳು ಎದುರಾಗಲಿವೆ. ಧೈರ್ಯ ವಹಿಸಿರಿ. ಮೋಸದ ಬಲೆಗೆ ಬೀಳುವಿರಿ, ವೈದ್ಯ ವೃತ್ತಿಯವರಿಗೆ ಅನುಕೂಲ, ಗೆಳೆಯರಲ್ಲಿ ಕಲಹ.

ಮೀನರಾಶಿ
ಹಿತಶತ್ರುಗಳಿಂದ ತೊಂದರೆ, ನಾನಾ ರೀತಿಯ ಮನಃಸ್ಥಿತಿ ಗೊಂದಲಮಯ ವಾದೀತು. ಹಿರಿಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿವೆ. ಯೋಗ್ಯ ವಯಸ್ಕರಿಗೆ ಪ್ರಯತ್ನಬಲದಿಂದಲೇ ಕಂಕಣಬಲ ಒದಗಿಬರಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಊರೂರು ಸುತ್ತಾಟ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆತಂಕ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular