ಮೇಷರಾಶಿ
ವಿದ್ಯಾರ್ಥಿಗಳಲ್ಲಿ ಅಧ್ಯಯನದ ಕಡೆ ಆಸಕ್ತಿ ಕಡಿಮೆ, ಮಿತ್ರರು ಶತ್ರುಗಳಾಗುವರು, ವ್ಯಾಪಾರ, ವ್ಯವಹಾರಗಳು ಚೇತರಿಕೆಯನ್ನು ಪಡೆದಾವು. ಆದರೂ ಅನಿರೀಕ್ಷಿತ ಲಾಭವನ್ನು ತಂದಾವು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಸಾಂಸಾರಿಕವಾಗಿ ಬಾಳ ಸಂಗಾತಿ ಒಡನಾಟ ಬೇಕೆನಿಸಲಿದೆ, ಅಧಿಕ ಸುಸ್ತು, ನರದೌರ್ಬಲ್ಯ, ಚರ್ಮ ತುರಿಕೆ, ತಲೆನೋವು.
ವೃಷಭರಾಶಿ
ಉನ್ನತ ವಿದ್ಯಾಭ್ಯಾಸದ ಹಂಬಲ, ಗೆಳೆಯರ ಸಹಕಾರ ಮನಸ್ಸನ್ನು ಪ್ರಸನ್ನಗೊಳಿಸಲಿದೆ. ಕನ್ಯಾಮಣಿ ಗಳಿಗೆ ನಾನಾ ರೀತಿಯಲ್ಲಿ ವಿವಾಹ ಅವಕಾಶವು ದೊರಕ ಲಿದೆ. ಮುಖ್ಯವಾಗಿ ಹೊಂದಾಣಿಕೆಯಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ, ಆರ್ಥಿಕ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಲ್ಲಿ ತೊಡಕು, ಸಂಸಾರದಲ್ಲಿ ಕಲಹ ಮತ್ತು ಮನಸ್ತಾಪ, ಉದ್ಯೋಗದಲ್ಲಿ ಒತ್ತಡಗಳು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

ಮಿಥುನರಾಶಿ
ಶತ್ರುಗಳು ಅಧಿಕ, ಅನಾರೋಗ್ಯ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಉತ್ಸಾಹ ಮುನ್ನಡೆಗೆ ಸಾಧಕವಾದೀತು. ವೃತ್ತಿರಂಗದಲ್ಲಿ ಉನ್ನತಿಯ ಬೆಳವಣಿಗೆಯು ಕಂಡು ಬರುವುದು. ಆಸ್ತಿಯ ವಿವಾದವನ್ನು ಬಗೆಹರಿಸಿಕೊಳ್ಳಿರಿ, ಮಾತು ಕಡಿಮೆ ಮಾಡಿದಷ್ಟು ಉತ್ತಮ.ಮಾಟ ಮಂತ್ರ ತಂತ್ರದ ಆತಂಕ.
ಕಟಕರಾಶಿ
ಮಕ್ಕಳಿಂದ ಆಕಸ್ಮಿಕ ಧನ ನಷ್ಟ, ಆರೋಗ್ಯದಲ್ಲಿ ಏರುಪೇರು, ಪುಣ್ಯಕಾರ್ಯಗಳು ಸಮಾಧಾನ ತರಲಿವೆ. ಆದಾಯದ ವೃದ್ಧಿಯು ನಾನಾ ರೂಪದಲ್ಲಿ ಹೆಚ್ಚು ಸಮಾಧಾನ ತರಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ತರಲಿದೆ. ಸಾಮಾಜಿಕ ರಂಗದಲ್ಲಿ ಅಭಿವೃದ್ಧಿ ಇದೆ, ವಿದ್ಯಾಭ್ಯಾಸದಲ್ಲಿ ತೊಡಕು, ಬಂಧು ಬಾಂಧವರೊಂದಿಗೆ ಮನಸ್ತಾಪ.

ಸಿಂಹರಾಶಿ
ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಮಹಿಳೆಯರಲ್ಲಿ ಆತಂಕ ದುಡುಕುತನ, ಯಾವುದಕ್ಕೂ ಈ ದಾನ ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸೀತು. ತಾಳ್ಮೆ ಅಗತ್ಯವಿರುತ್ತದೆ. ನಿರುದ್ಯೋಗಿಗಳಿಗೆ ನಾನಾ ರೀತಿಯಲ್ಲಿ ಅವಕಾಶಗಳು ಒದಗಿ ಬರಲಿವೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಿರಿ, ಹೆಚ್ಚು ಅಕ್ರಮ ವಿಷಯಗಳು ಬಯಲು.
ಕನ್ಯಾರಾಶಿ
ವಿದ್ಯಾಭ್ಯಾಸ ನಿಮಿತ್ತ ದೂರ ಪ್ರಯಾಣ, ಅಧೈರ್ಯದ ಹೆಜ್ಜೆಯಿಂದ ದಾರಿಯಲ್ಲಿ ವಿಪತ್ತು ಇಂದು ಕಂಡು ಬರಲಿದೆ. ಖರ್ಚುವೆಚ್ಚಗಳು ಮಿತಿಮೀರಿದರೂ ಬರಬೇಕಾದ ಹಣವು ಸಿಗಲಿವೆ. ಅನಿರೀಕ್ಷಿತ ಬದಲಾವಣೆಯು ತೋರಿ ಬಂದೀತು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಸ್ವಯಂಕೃತ ಅಪರಾಧದಿಂದ ಕಲಹಗಳು.

ತುಲಾರಾಶಿ
ಮಕ್ಕಳ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದಗಳು, ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆಯು ಕಂಡು ಬರಲಿದೆ. ಆಗಾಗ ವೃತ್ತಿರಂಗದಲ್ಲಿ ಕ್ಲೇಶವೂ, ಅಪವಾದ ಭೀತಿಯೂ ಇದ್ದೀತು. ಕೋರ್ಟುಕಚೇರಿಯಲ್ಲಿ ನಿಮಗೆ ಜಯ ಲಭಿಸಲಿದೆ, ಹಣಕಾಸಿನ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ದೂರ ಪ್ರಯಾಣ.
ವೃಶ್ಚಿಕರಾಶಿ
ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಹೆತ್ತವರಿಗೆ ಮಕ್ಕಳ ಜೊತೆ ಹೊಂದಿಕೊಂಡು ಹೋಗುವುದು ಅಗತ್ಯ ವಿರುತ್ತದೆ. ವೃತ್ತಿಪರವಾಗಿ ಸ್ವಲ್ಪ ಮಟ್ಟಿನ ಬದಲಾವಣೆ ತೋರಿ ಬಂದೀತು. ಆರೋಗ್ಯ ಭಾಗ್ಯದಲ್ಲಿ ಆಗಾಗ ಏರುಪೇರು ಕಂಡು ಬರಲಿದೆ, ಮಕ್ಕಳಲ್ಲಿ ಒತ್ತಡ,ಮರೆವಿನ ಸ್ವಭಾವ, ಮಿತ್ರರಿಂದ ಚರಾಸ್ತಿ,ಭೂಮಿ ಪ್ರಾಪ್ತಿ.

ಧನಸ್ಸುರಾಶಿ
ಮಕ್ಕಳಲ್ಲಿ ಚುರುಕುತನ ಕಡಿಮೆ, ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ ಇರುತ್ತದೆ. ಆರ್ಥಿಕವಾಗಿ ವಿವಿಧ ರೀತಿಯಲ್ಲಿ ಮೂಲಧನ ವೃದ್ಧಿಯಾಗುತ್ತದೆ. ಹಾಗೇ ವೃತ್ತಿಪರವಾಗಿ ಸ್ವಲ್ಪ ಮಟ್ಟಿನ ಬದಲಾವಣೆಯನ್ನು ಮಾಡಿಕೊಳ್ಳುವುದು ಆವಶ್ಯಕ, ನೆರೆಹೊರೆ ಯವರಿಂದ ಆತ್ಮಗೌರವಕ್ಕೆ ಧಕ್ಕೆ, ಆತ್ಮೀಯ ಮಿತ್ರರು ದೂರ.
ಮಕರರಾಶಿ
ಅನಾರೋಗ್ಯ ಸಮಸ್ಯೆಯಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಯೋಗ್ಯ ವಯಸ್ಕರಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಒಳ್ಳೆಯ ನೆಂಟಸ್ತಿಕೆ ದೊರಕಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ದೊರಕಲಿದೆ. ಆದಾಯವನ್ನು ಹೆಚ್ಚಿಸಿಕೊಂಡಲ್ಲಿ ಖರ್ಚುಗಳ ಬಗ್ಗೆ ಚಿಂತೆ ಇರದು, ಮಿತ್ರರೊಂದಿಗೆ ಕಲಹಗಳು, ಸಮಸ್ಯೆಗಳು, ಶುಭಕಾರ್ಯಕ್ಕೆ ಕಾಲ ಕೂಡಿ ಬರುವುದು.

ಕುಂಭರಾಶಿ
ಮಾಟ ಮಂತ್ರ ತಂತ್ರದ ಆತಂಕ, ಅನಾರೋಗ್ಯ ಸಮಸ್ಯೆಗಳು, ಕೊಟ್ಟ ಸಾಲಕ್ಕಾಗಿ ನಾನಾ ರೀತಿಯ ಕಷ್ಟನಷ್ಟವನ್ನು ಅನುಭವಿಸ ಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಮಾಧಾನ ತರಲಿದೆ. ಪುಣ್ಯ ಕಾರ್ಯಗಳು ಗೋಚರಕ್ಕೆ ಬಂದು ಸಮಾಧಾನವಾಗಲಿವೆ. ಕಿರು ಸಂಚಾರವಿದೆ, ಆಸ್ಪತ್ರೆಗೆ ದಾಖಲಾಗುವ ಸಂಭವ, ಹಣಕಾಸಿನ ವಿಚಾರವಾಗಿ ಮೋಸ.
ಮೀನರಾಶಿ
ವಿದ್ಯಾಭ್ಯಾಸ ಆರಂಭಕ್ಕೆ ಸಿದ್ಧತೆ, ಶ್ರೀದೇವತಾನುಗ್ರಹ ಸದ್ಯದಲ್ಲೇ ತೋರಿ ಬಂದು ನಿಮ್ಮ ಸಕಲ ಮನೋರಥವು ಈಡೇರಲಿದೆ. ಅಲ್ಲಿಯವರೆಗೆ ತಾಳ್ಮೆ ಸಮಾಧಾನ ಕಾಯ್ದುಕೊಳ್ಳುವುದು ಅಗತ್ಯ. ವಿದ್ಯಾರ್ಥಿ ಉತ್ತಮ ಫಲಿತಾಂಶವನ್ನು ಹೊಂದಿಯಾರು, ದಂಪತಿಯಲ್ಲಿ ಮನಸ್ತಾಪಗಳು, ಆಸ್ತಿ ಮತ್ತು ವಾಹನ ನಷ್ಟ.