ಪ್ರಸಾರ ನಿಲ್ಲಿಸುತ್ತಾ ಸಂವಿಧಾನ ಶಿಲ್ಪಿಯ ಜೀವನ ಚರಿತ್ರೆ “ಮಹಾನಾಯಕ” ?

0

ಬೆಂಗಳೂರು : ಕಿರುತೆರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ಮಹಾನಾಯಕ ಪ್ರಸಾರ ಸ್ಥಗಿತವಾಗುತ್ತಾ ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ.

ಮಹಾನಾಯಕ ಧಾರಾವಾಹಿ ಪ್ರಸಾರ ಮಾಡದಂತೆ ಬೆದರಿಕೆಗಳು ಬರುತ್ತಿದ್ದು, ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಟ್ವೀಟ್ ಮಾಡಿರೋದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಲಾಕ್ ಡೌನ್ ಆರಂಭವಾಗುತ್ತಿದ್ದಂತೆಯೇ ಧಾರಾವಾಹಿಗಳ ಪ್ರಸಾರಕ್ಕೆ ಬ್ರೇಕ್ ಬಿದ್ದಿತ್ತು. ಕನ್ನಡದ ಮನೋರಂಜನಾ ವಾಹಿನಿಗಳು ಹಿಂದಿ ಧಾರಾವಾಹಿಗಳನ್ನು ಕನ್ನಡ ಭಾಷೆಗೆ ಡಬ್ ಮಾಡಿ ಪ್ರಸಾರ ಮಾಡೋದಕ್ಕೆ ಶುರು ಮಾಡಿದ್ದವು. ಈಗಾಗಲೇ ಹಲವು ಧಾರವಾಹಿಗಳು ಜೀ ಕನ್ನಡ ವಾಹಿನಿಗೆ ಒಳ್ಳೆಯ ಟಿಆರ್ ಪಿ ತಂದುಕೊಟ್ಟಿತ್ತು. ಅಂತೆಯೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರಾವಾಹಿ ಕೂಡ ಪ್ರಸಾರವಾಗುತ್ತಿದೆ.

ಪ್ರತೀ ಶನಿವಾರ ಹಾಗೂ ಭಾನುವಾರದಂದು ಪ್ರಸಾರವಾಗುತ್ತಿರುವ ಧಾರಾವಾಹಿಗೆ ಆರಂಭದಲ್ಲಿ ಟಿಆರ್ ಪಿ ಏರದಿದ್ದರೂ ಕೂಡ ಕಳೆದ ಕೆಲ ವಾರಗಳಿಂದಲೂ ಭರ್ಜರಿ ಟಿಆರ್ ಪಿ ಬಾಚುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಸಾಧನೆಯನ್ನು ಮಹಾನಾಯಕ ಮೂಲಕ ಎಳೆ ಎಳೆಯಾಗಿ ಬಿಚ್ಚಿಡಲಾಗುತ್ತಿದೆ.

ಅಂದಿನ ಕಾಲದಲ್ಲಿ ಅಂಬೇಡ್ಕರ್ ಅವರು ಎದುರಿಸಿದ ಸಂಕಷ್ಟಗಳ ಸರಮಾಲೆಯನ್ನೇ ಚಿತ್ರಿಸಲಾಗಿದೆ. ಎಲ್ಲಾ ವರ್ಗದ ಜನರು ಮಹಾನಾಯಕನನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಯಾಕೆ ಪ್ರತೀ ವಿಕೆಂಡ್ ನಲ್ಲಿಯೂ ಎಲ್ಲರನ್ನೂ ಟಿವಿಯ ಮುಂದೆ ತಂದು ಕೂರಿಸಿದೆ ಮಹಾನಾಯಕ.

ಆದ್ರೀಗ ಮಹಾನಾಯಕ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಬ್ಯುನಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರಿಗೆ ಮಧ್ಯರಾತ್ರಿ ಬೆದರಿಕೆ ಕರೆಗಳು ಬರೋದಕ್ಕೆ ಶುರುವಾಗಿದೆಯಂತೆ. ಆದರೆ ಯಾವುದೇ ಕಾರಣಕ್ಕೂ ಧಾರಾವಾಹಿಯನ್ನು ನಿಲ್ಲಿಸೋದಿಲ್ಲಾ ಅಂತಾ ಟ್ವೀಟ್ ಮಾಡಿದ್ದಾರೆ. ರಾಘವೇಂದ್ರ ಹುಣಸೂರು ಅವರು ಟ್ವಿಟ್ ಮಾಡಿದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ನಡೆಯೋದಕ್ಕೆ ಶುರುವಾಗಿದೆ.

ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಒತ್ತಡ ಕೇಳಿಬಂದಿರುವ ಬೆನ್ನಲ್ಲೇ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರಿಗೆ ಕರೆಮಾಡಿ ಯಾವುದೇ ಬೆದರಿಕೆಗೂ ಬಗ್ಗಬೇಡಿ. ಮಹಾನಾಯಕ ಒಂದು ಅದ್ಬುತವಾದ ಧಾರವಾಹಿ ಯಾವುದೇ ಕಾರಣಕ್ಕೂ ಧಾರವಾಹಿ ಪ್ರಸಾರವನ್ನು ನಿಲ್ಲಿಸಬಾರದು. ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಅಂತಾ ಹೇಳಿದ್ದಾರೆ.

https://youtu.be/g2R_bHppI-E

ಮಹಾನಾಯಕ ಧಾರಾವಾಹಿ ಅತ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಊರು. ಊರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಜನರು ಮಹಾನಾಯಕ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ. ಮಾತ್ರವಲ್ಲ ಧಾರಾವಾಹಿ ಪ್ರಸಾರವನ್ನು ನಿಲ್ಲಿಸುವುದಿಲ್ಲ ಎಂದು ರಾಘವೇಂದ್ರ ಹುಣಸೂರು ಅವರು ತಿಳಿಸಿದ್ದಾರೆ.

Leave A Reply

Your email address will not be published.