ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ :13-03-2021 ಯೋಗ್ಯ ವಯಸ್ಕರಿಗೆ ಕಂಕಣಬಲ‌ ಕೂಡಿಬರಲಿದೆ

ನಿತ್ಯಭವಿಷ್ಯ :13-03-2021 ಯೋಗ್ಯ ವಯಸ್ಕರಿಗೆ ಕಂಕಣಬಲ‌ ಕೂಡಿಬರಲಿದೆ

- Advertisement -

ಮೇಷರಾಶಿ
ಸವಾಲುಗಳನ್ನು ಹೊಸ ರೀತಿಯಲ್ಲಿ ಎದುರಿಸಲು ಸಜ್ಜಾಗಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾತ್ಮಕತೆಯಿಂದ ಎಲ್ಲರ ಮನ ಗೆಲ್ಲಲಿದ್ದೀರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಚಿಂತೆ ಬೇಡ.
ಅದೃಷ್ಟ ಸಂಖ್ಯೆ : 6

ವೃಷಭರಾಶಿ
ಇನ್ನೊಬ್ಬರನ್ನು ಮೆಚ್ಚಿಸಲು ನಿಮ್ಮತನವನ್ನು ಮರೆಯಬೇಕಿಲ್ಲ. ಮನಸ್ಸಿಗೆ ಹಿಡಿಸಿದ ಕೆಲಸ ಮಾಡಲಿದ್ದೀರಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ. ಅತಿಯಾದ ವಿಶ್ವಾಸವೂ ವಂಚನೆಗೆ ಕಾರಣವಾದೀತು, ಎಚ್ಚರ.
ಅದೃಷ್ಟ ಸಂಖ್ಯೆ : 8

ಮಿಥುನರಾಶಿ
ಬಹುದಿನಗಳಿಂದ ಕುಟುಂಬ ಸದಸ್ಯರು ಮಾಡುತ್ತಿದ್ದ ಬೇಡಿಕೆ ಪೂರ್ತಿ ಮಾಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರಿಗಳಿಗೆ ಆರ್ಥಿಕವಾಗಿ ಲಾಭವಿಲ್ಲದಿದ್ದರೂ ನಷ್ಟವಾಗದು.
ಅದೃಷ್ಟ ಸಂಖ್ಯೆ :1

ಕರ್ಕಟಕರಾಶಿ
ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರುವುದು. ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ.
ಅದೃಷ್ಟ ಸಂಖ್ಯೆ : 9

ಸಿಂಹರಾಶಿ
ಅನಿವಾರ್ಯ ಸಂದರ್ಭಗಳಲ್ಲಿ ಕೆಲವೊಂದು ಹೊಂದಾಣಿಕೆ ಮಾಡುವುದು ಅನಿವಾರ್ಯವೆನಿಸಲಿದೆ. ಇಷ್ಟ ಮಿತ್ರರ ಭೇಟಿಯಾಗಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಚಿಂತೆ ಬೇಡ.
ಅದೃಷ್ಟ ಸಂಖ್ಯೆ : 2

ಕನ್ಯಾರಾಶಿ
ಉದ್ಯೋಗ ನಿಮಿತ್ತ ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ದೇವತಾ ಪ್ರಾರ್ಥನೆ ಮಾಡಿ.
ಅದೃಷ್ಟ ಸಂಖ್ಯೆ :  7

ತುಲಾರಾಶಿ
ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಗುರಿಯಾದೀತು. ಹಾಗಿದ್ದರೂ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಯತ್ನ ಬೇಡ. ಸ್ವಯಂ ವ್ಯಾಪಾರಿಗಳಿಗೆ ಶತ್ರುಬಾಧೆ ಕಂಡುಬಂದೀತು. ತಾಳ್ಮೆಯಿರಲಿ.
‌‌ಅದೃಷ್ಟ ಸಂಖ್ಯೆ :  4

ವೃಶ್ಚಿಕರಾಶಿ
ಇಷ್ಟಮಿತ್ರರೊಂದಿಗೆ ಸದ್ಯದಲ್ಲೇ ಪ್ರವಾಸ ಕೈಗೊಳ್ಳುವ ಯೋಗ ಕೂಡಿಬರಲಿದೆ. ಸಂಗಾತಿಯ ಬಹುದಿನಗಳ ಬೇಡಿಕೆ ಪೂರೈಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಪೂರ್ತಿಯಾಗಲಿವೆ. ಕಿರು ಓಡಾಟ ನಡೆಸಲಿದ್ದೀರಿ.
‌‌ಅದೃಷ್ಟ ಸಂಖ್ಯೆ :  6

ಧನುರಾಶಿ
ವೃತ್ತಿರಂಗದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಲಗಾರರ ಚಿಂತೆ ಕಾಡಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬಂದೀತು. ಅನಿರೀಕ್ಷಿತವಾಗಿ ಹಳೆಯ ಸಂಬಂಧಿಕರನ್ನು ಭೇಟಿ ಮಾಡಲಿದ್ದೀರಿ.
‌‌ಅದೃಷ್ಟ ಸಂಖ್ಯೆ :  3

ಮಕರರಾಶಿ
ಯಾವುದೇ ವಿಚಾರ ಅಥವಾ ವ್ಯಕ್ತಿಗಳನ್ನು ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು ಕೊರಗುವುದು ಬೇಡ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸುವ ಯೋಗ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ.
ಅದೃಷ್ಟ ಸಂಖ್ಯೆ :  8

ಕುಂಭರಾಶಿ
ವೃತ್ತಿರಂಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ನಿರಾಸೆಯಾದೀತು. ಆದರೆ ಭರವಸೆ ಕಳೆದುಕೊಳ್ಳಬೇಡಿ. ದಾಯಾದಿ ಕಲಹಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.
ಅದೃಷ್ಟ ಸಂಖ್ಯೆ :  4

ಮೀನರಾಶಿ
ಕೆಲವೊಂದು ವಿಚಾರಗಳಲ್ಲಿ ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಖರ್ಚು ವೆಚ್ಚಗಳಾದೀತು. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗವಿದೆ.
ಅದೃಷ್ಟ ಸಂಖ್ಯೆ :  5

ಶುಭಂಭವತು
#ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular