ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 29-12-2020

ನಿತ್ಯಭವಿಷ್ಯ : 29-12-2020

- Advertisement -

ಮೇಷರಾಶಿ
ದೇವತಾ ಕಾರ್ಯಗಳಲ್ಲಿ ಆಸಕ್ತಿ, ಶತ್ರುವಿನ ಬಾಧೆಯಿಂದಾಗಿ ಪದೇ ಪದೇ ಕಾರ್ಯಹಾನಿ, ಜೊತೆಗೆ ಆರ್ಥಿಕವಾಗಿ ವೆಚ್ಚ, ನೌಕರರ ಅಸಹಕಾರದಿಂದ ನಿಮ್ಮ ಕಾರ್ಯಗಳು ವಿಳಂಬವಾದೀತು. ವೈವಾಹಿಕ ಮಾತುಕತೆ ನಡೆದೀತು, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ ಭೋಜನ.

ವೃಷಭರಾಶಿ
ಯುವತಿಯರಿಗೆ ಮಾಂಗಲ್ಯಭಾಗ್ಯ ಯೋಗ ಕೂಡಿಬರಲಿದೆ, ಇಲ್ಲ ಸಲ್ಲದ ಅಪವಾದ ನಿಂದನೆ, ಅತಿಯಾದ ಒತ್ತಡ, ಭೂಮಿಯಿಂದ ಲಾಭ, ಬಂಧುಗಳಿಂದ ಗೌರವ, ಆದರಗಳು ಪ್ರಾಪ್ತಿಯಾಗಲಿದೆ. ದ್ವಂದ್ವ ಮನೋಭಾವವನ್ನು ಬಿಟ್ಟುಬಿಡಿರಿ. ಅಲ್ಲಸಲ್ಲದ ಆರೋಪಗಳಿಗೆ ಕಿವಿಗೊಡದಿರಿ, ಆದಷ್ಟು ಜಾಗ್ರತೆಯಿಂದಿರಿ,

ಮಿಥನರಾಶಿ
ಆದಷ್ಟು ಜಾಗ್ರತೆಯಿಂದಿರಿ, ಹೊಸ ವಾಹನ ಖರೀದಿಯು ನಡೆದೀತು, ಕೃಷಿ, ವ್ಯವಸಾಯದವರಿಗೆ ಸಹಾಯ ಹಸ್ತ ಒದಗಿಬರಲಿದೆ, ಹಳೇ ಬಾಕಿ ಚುಕ್ತಾ ಸಂಭವವಿದೆ. ಭೋಗ ಹಾಗೂ ವಿಲಾಸೀ ಜೀವನ ಕೊಂಚ ಆರೋಗ್ಯವನ್ನು ಹಾಳು ಮಾಡಲಿದೆ, ಇಲ್ಲ ಸಲ್ಲದ ಅಪವಾದ ನಿಂದನೆ, ಅತಿಯಾದ ಒತ್ತಡ, ಭೂಮಿಯಿಂದ ಲಾಭ.

ಕಟಕರಾಶಿ
ಆಂತರಿಕ ಕಲಹ, ದೂರಾಲೋಚನೆ, ತೀರ್ಥಯಾತ್ರಾ ದರ್ಶನ, ನವಯುವಕರಿಗೆ ಕಂಕಣಭಾಗ್ಯದ ಯೋಗ, ಆಕಸ್ಮಿಕ ಧನಲಾಭ, ವಿವಾಹಿತರಿಗೆ ಸಂತತಿಯ ಆಗಮನದಿಂದ ಸಂತಸ. ಆದರೆ ಚಿಕಿತ್ಸೆಗಾಗಿ ಹಣ ವಿನಿಯೋಗವಾದೀತು. ಬಂಧುಗಳ ಆಗಮನ. ಕೃಷಿಯಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಶುಭ.

ಸಿಂಹರಾಶಿ
ಮನೆಯಲ್ಲಿ ಶುಭಕಾರ್ಯ, ಸ್ಥಾನ ಪ್ರಾಪ್ತಿಗಾಗಿ ಒದ್ದಾಟ ಕಂಡುಬಂದೀತು. ಮಕ್ಕಳ ವಿದ್ಯಾಭ್ಯಾಸದ ಖರ್ಚು ಕಂಡುಬಂದೀತು, ವ್ಯಾಪಾರಿಗಳಿಗೆ ಅತೀ ಲಾಭವಿದ್ದೀತು. ಕಟ್ಟಡ ಕಾಮಗಾರಿ ಕೆಲಸದವರಿಗೆ ಇದ್ದುದರಲ್ಲೇ ತೃಪ್ತಿ ಪಡಬೇಕಾದೀತು., ಜಾಗ್ರತೆ, ಮನೋವ್ಯಥೆ, ಉದ್ಯೋಗದಲ್ಲಿ ಕಿರಿ-ಕಿರಿ, ಯಾರನ್ನು ನಂಬಬೇಡಿ.

ಕನ್ಯಾರಾಶಿ
ಹಿತಶತ್ರುಗಳಿಂದ ತೊಂದರೆ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಬ್ಯಾಂಕಿಂಗ್‌ ಉದ್ಯಮ, ಲೇವಾದೇವಿ, ನಿವೇಶನ ಖರೀದಿ, ಮಾರಾಟದಲ್ಲಿ ಲಾಭವಿದೆ, ಸಂಪಾದನೆಯನ್ನು ವರ್ಧಿಸಿಕೊಂಡರೆ ವೆಚ್ಚ ಅದನ್ನು ಮೀರಿಸಲಿದೆ. ಆರೋಗ್ಯವು ಉತ್ತಮವಿರುತ್ತದೆ. ಉಷ್ಣವಾಯು ಪೀಡೆ ಕಂಡುಬಂದೀತು, ಮಿತ್ರರಲ್ಲಿ ಸ್ನೇಹ ವೃದ್ಧಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.

ತುಲಾರಾಶಿ
ಬಂಧುಜನರ ಸಹಕಾರ ನಿಮಗೆ ಕಂಡುಬರಲಿದೆ. ಆದರೆ ಛಲ, ಆತ್ಮವಿಶ್ವಾಸದಿಂದ ಮುನ್ನಡೆದಲ್ಲಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ. ದೇವಕಾರ್ಯಗಳಿಗಾಗಿ ಧನವ್ಯಯ ಕಂಡುಬಂದೀತು. ಕಿರು ಪ್ರಯಾಣವಿದೆ, ಹಿತಶತ್ರುಗಳಿಂದ ತೊಂದರೆ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಮಿತ್ರರಲ್ಲಿ ಸ್ನೇಹ ವೃದ್ಧಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.

ವೃಶ್ಚಿಕರಾಶಿ
ಹೊಸ ವ್ಯಾಪಾರದಿಂದ ಲಾಭ, ನೌಕರ ವರ್ಗಕ್ಕೆ ಕೆಲಸದ ಒತ್ತಡವಿದ್ದರೂ ಆದಾಯಕ್ಕೆ ಕೊರತೆ ಇರದು. ಪ್ರವಾಸಿ ಉದ್ಯಮ, ಸಾರಿಗೆ, ಉದ್ಯೋಗ, ಎಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ವೃತ್ತಿ ನಿರತರಿಗೆ ಮುಂಭಡ್ತಿಯ ಅವಕಾಶವಿದೆ, ವರ್ಗಾವಣೆಯ ಸೂಚನೆ ಇದ್ದೀತು. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ, ಸುಖ ಭೋಜನ.

ಧನಸ್ಸುರಾಶಿ
ನ್ಯಾಯಾಲಯದ ಕೆಲಸಗಳು ಸಫ‌ಲವಾಗಲಿವೆ. ಮಕ್ಕಳ ಆರೋಗ್ಯವು ಹದಗೆಡಲಿದೆ. ಚಿಕಿತ್ಸೆ , ಕಳವಳ, ಅನಾವಶ್ಯಕ ಪ್ರಯಾಣವೂ ಕಾಣಿಸಬಹುದು. ಆದರೆ ಅವಿವಾಹಿತರಿಗೆ ವಿವಾಹಸಿದ್ಧಿಯ ಕಾಲ, ವ್ಯಾಪಾರಿಗಳಿಗೆ ಪ್ರಗತಿ ಇದೆ. ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ವಿದ್ಯಾಭಿವೃದ್ಧಿ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಅನಾರೋಗ್ಯ.

ಮಕರರಾಶಿ
ಆಸ್ತಿ ವಿಚಾರಗಳು ಬಗೆಹರಿಯುತ್ತವೆ, ಅಧಿಕ ಖರ್ಚು, ಶತ್ರುಬಾಧೆ, ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೊಂಚ ಅಭಿವೃದ್ಧಿಯ ಕಾಲ, ವಾಯುಪೀಡೆ, ಹೃದಯಬೇನೆ ಯಂತಹ ತೊಂದರೆಗಳು ಕಂಡುಬರಬಹುದು, ನೀವು ಕಳೆದುಕೊಂಡ ಒಡವೆಯು ದೊರಕಲಿದೆ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು.

ಕುಂಭರಾಶಿ
ಪ್ರವಾಸ ಯೋಗ, ಸಂತಾನ ಅಭಿವೃದ್ಧಿಯ ಕಾಲ ಕೂಡಿ ಬಂದಿದೆ. ಸರ್ವತೋಮುಖ ಅಭಿವೃದ್ಧಿಗಾಗಿ ಸ್ವಲ್ಪ ಕಠಿಣ ಪರಿಶ್ರಮದ ಅಗತ್ಯವಿದೆ, ಗೃಹ ನಿರ್ಮಾಣದಂತಹ ಕೆಲಸವನ್ನು ಆರಂಭಿಸಲಿದ್ದೀರಿ, ಆರೋಗ್ಯ ಅಭಿವೃದ್ಧಿ, ಕೋರ್ಟ್ ವ್ಯವಹಾರಗಳಲ್ಲಿ ವಿಘ್ನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಲ್ಪ ಪ್ರಗತಿ, ಸಾಧಾರಣ ಫಲ.

ಮೀನರಾಶಿ
ಪರೋಪಕಾರವನ್ನು ಸ್ವಲ್ಪ ಕಡಿಮೆ ಮಾಡಿ, ಕುಲದೇವರ ಅನುಗ್ರಹಕ್ಕಾಗಿ ಪ್ರಾರ್ಥನೆ, ಪತ್ನಿಯ ಆರೋಗ್ಯದ ಬಗ್ಗೆ ಜಾಗ್ರತೆ, ಸುಖದುಃಖ ಸಮ್ಮಿಶ್ರ ಫ‌ಲಾನುಭವಿಗಳಾಗಿರುವಿರಿ, ಚಿಂತೆಯನ್ನು ಬಿಟ್ಟುಬಿಡಿ, ಯತ್ನ ಕಾರ್ಯಗಳಲ್ಲಿ ಅಡತಡೆ, ಅನಿರೀಕ್ಷಿತ ಖರ್ಚು, ಮನಕ್ಲೇಷ, ಆಲಸ್ಯ ಮನೋಭಾವ, ವಿವಾದಗಳಿಗೆ ಆಸ್ಪದ ಕೊಡಬೇಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular