ಮೇಷರಾಶಿ
ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಮಾನಹಾನಿ, ಅಪಕೀರ್ತಿ, ದುಷ್ಟ ಆಲೋಚನೆಗಳು, ಆರೋಗ್ಯ ಸಮಸ್ಯೆ ಮಾಟ ಮಂತ್ರ ತಂತ್ರದ ಭೀತಿ, ಈ ದಿನವು ನಿಮ್ಮಿಚ್ಚೆಯಂತೆ ಸಾಗುವುದು, ಚೆನ್ನಾಗಿ ಬಳಸಿಕೊಳ್ಳಿ, ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ, ಬಂಧು ಬಾಂಧವರಿಂದ ನೋವು ತೊಂದರೆ ಮತ್ತು ಕಿರಿಕಿರಿ.
ವೃಷಭರಾಶಿ
ಮಿತ್ರರಿಂದ ಉಪಯುಕ್ತ ಸಲಹೆಗಳು ಲಭಿಸಲಿದೆ, ಕೌಟುಂಬಿಕವಾಗಿ ಸಹನೆಯಿಂದ ವರ್ತಿಸಿರಿ, ಆಕಸ್ಮಿಕ ಪ್ರಯಾಣ ಉದ್ಯೋಗ, ಆರ್ಥಿಕ ಒತ್ತಡದಿಂದ ದಾಂಪತ್ಯದಲ್ಲಿ ಮನಸ್ತಾಪ, ಭವಿಷ್ಯದ ಚಿಂತೆ ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ ಸ್ವಂತ ಉದ್ಯಮದಲ್ಲಿ ಪ್ರಗತಿ ಸ್ಥಳ ಬದಲಾವಣೆ ಆಲೋಚನೆ.
ಮಿಥುನರಾಶಿ
ಕಾರ್ಯಕ್ಷೇತ್ರದಲ್ಲಿ ಏಕಾಗ್ರಚಿತ್ತದಿಂದ ಕೆಲಸಗಳನ್ನು ನಿರ್ವಹಿಸಿ, ದುಂದು ವೆಚ್ಚಗಳು ಅಧಿಕವಾದಾವು, ಯಾವುದೇ ವಿಚಾರದಲ್ಲಿಯೂ ಆತುರತೆ ಬೇಡ, ಸ್ವಯಂಕೃತ ಅಪರಾಧದಿಂದ ತೊಂದರೆ, ಸ್ವಂತ ವ್ಯಾಪಾರ ಉದ್ಯಮದಿಂದ ಧನಾಗಮನ, ಸ್ಥಿರಾಸ್ತಿ ನಷ್ಟ, ವಾಹನದಿಂದ ಪೆಟ್ಟು, ಅನಾರೋಗ್ಯ, ಸಾಲ.
ಕಟಕರಾಶಿ
ಸಾಂಸಾರಿಕವಾಗಿ ಸಂಬಂಧಗಳು ಕೆಡದಂತೆ ಎಚ್ಚರವಹಿಸಿ, ಅತ್ಯಧಿಕ ಒತ್ತಡ ದೇಹಾಯಾಸಕ್ಕೆ ಕಾರಣವಾದೀತು, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗ, ಲಾಭ, ಶತ್ರು ದಮನ, ದುಃಸ್ವಪ್ನ, ಅಧಿಕ ಖರ್ಚು, ದಾಂಪತ್ಯದಲ್ಲಿ ಒತ್ತಡ, ಬೇಸರ ಭಾವನೆಗಳಿಗೆ ಪೆಟ್ಟು, ನೆರೆಹೊರೆಯವರಿಂದ ಸಹಾಯ.
ಸಿಂಹರಾಶಿ
ಅನಿರೀಕ್ಷಿತ ವರ್ತನೆಯ ಮೂಲಕ ಅಸಹನೆ ಮೂಡಿಸಲಿದ್ದೀರಿ, ನಿರ್ಧಾರಗಳಲ್ಲಿ ಅನಿಶ್ವಿತತೆ ಕಾಡಲಿದೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ಥಿರಾಸ್ತಿ ಲಾಭ, ಆರ್ಥಿಕ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದಲ್ಲಿ ಮೋಸ, ಕುಟುಂಬದಲ್ಲಿ ಶತೃತ್ವ, ಸ್ನೇಹಿತರಿಂದ ನಷ್ಟ.
ಕನ್ಯಾರಾಶಿ
ವೃತ್ತಿರಂಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ, ಹೊಸ ಗೆಳೆಯರು ಸಿಗಲಿದ್ದಾರೆ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ಥಳ ಬದಲಾವಣೆ ಆಲೋಚನೆ, ಸಾಲ ಮಾಡುವ ಪರಿಸ್ಥಿತಿ, ಮಿತ್ರರಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸೋಲು ಮತ್ತು ಮಾನಸಿಕ ಕಿರಿಕಿರಿ
ತುಲಾರಾಶಿ
ಮಹಿಳೆಯರಿಗೆ ಬಾವುಕ ಸನ್ನಿವೇಶಗಳು ಸೃಷ್ಟಿಯಾದೀತು, ವಾಹನ ಚಾಲನೆಯಲ್ಲಿ ಜಾಗೃತೆವಹಿಸಿ, ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಆಸಕ್ತಿವಹಿಸುವ ಅಗತ್ಯವಿದೆ, ಬಂದ ಅವಕಾಶಗಳನ್ನು ನಿರಾಕರಿಸದಿರಿ, ಮಕ್ಕಳಿಂದ ಧನಾಗಮನ, ಭಾವನೆಗಳಿಗೆ ಮನ್ನಣೆ, ಹಣ ಹೂಡಿಕೆ, ನೋವು ಮತ್ತು ಶತ್ರುತ್ವ, ಅಧಿಕ ಖರ್ಚು
ವೃಶ್ಚಿಕರಾಶಿ
ಸಂಘರ್ಷದ ವಾತಾವರಣ ಸೃಷ್ಟಿಯಾಗಬಹುದು, ಕಠಿಣ ನಿರ್ಧಾರಗಳಿಂದ ಪಶ್ಚಾತಾಪ ಪಡಬೇಕಾದೀತು, ತಾಳ್ಮೆಯನ್ನು ಕಾಯ್ದುಕೊಳ್ಳುವ ಅವಶ್ಯಕತೆಯಿದೆ, ಸ್ವಂತ ಉದ್ಯಮ, ವ್ಯಾಪಾರ-ವ್ಯವಹಾರಕ್ಕೆ ಸಾಲ, ಒತ್ತಡ ಸೋಲು ನಷ್ಟ- ನಿರಾಸೆ, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು
ಧನಸ್ಸುರಾಶಿ
ಸಹೋದ್ಯೋಗಿಗಳ ಸಹಕಾರ ನೆಮ್ಮದಿಗೆ ಕಾರಣವಾಗಲಿದೆ, ವ್ಯವಹಾರದಲ್ಲಿ ಕಷ್ಟನಷ್ಟಗಳು ಎದುರಾಗಲಿದೆ, ನಿಮ್ಮ ಕರ್ತವ್ಯವನ್ನು ನಿರ್ಲಕ್ಷ್ಯ ಮಾಡದಿರಿ, ದೈವಾನುಗ್ರಹವು ನಿಮಗೆ ಪೂರಕವಾಗಲಿದೆ, ಸಂಗಾತಿಯಿಂದ ಬೇಸರ, ಸಂಶಯದ ವಾತಾವರಣ, ಉದ್ಯೋಗ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಮುಂದಾಲೋಚನೆ ಇಲ್ಲದೆ ಕೆಲಸ ಕಾರ್ಯಗಳಿಂದ ತೊಂದರೆ, ರೋಗರುಜಿನ
ಮಕರರಾಶಿ
ಹೊಂದಾಣಿಕೆಯಿಂದ ಸಂಬಂಧಗಳು ಕೆಡದಂತೆ ಎಚ್ಚರವಹಿಸಿ, ವೃತ್ತಿಪರವಾಗಿ ಅನಿರೀಕ್ಷಿತವಾಗಿ ಬೆಳವಣಿಗೆ ಕಂಡು ಬರಲಿದೆ, ವಿಪರೀತ ಖರ್ಚು ಕಂಡು ಬರಲಿದೆ, ವಿವೇಚನಾರಹಿತ ಕೆಲಸ ಮಾಡದಿರಿ, ಸಾಲದ ಸಹಾಯ, ತಂದೆಯಿಂದ ಲಾಭ, ಪ್ರಶಂಸೆ ಮತ್ತು ಶುಭಾಶಯ, ಹಿರಿಯ ವ್ಯಕ್ತಿಗಳಲ್ಲಿ ಅನಾರೋಗ್ಯ, ಮನಸ್ಥಾಪ, ದೂರ ಪ್ರಯಾಣ, ಕಾರ್ಯಜಯ
ಕುಂಭರಾಶಿ
ದೂರ ಸಂಚಾರದ ಯೋಗ ಕೂಡ ಬರುವುದು, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಲಾಭ, ಕಾರ್ಯರಂಗದಲ್ಲಿ ಚೇತರಿಯ ವಾತಾವರಣವು ಗೋಚರಕ್ಕೆ ಬರಲಿದೆ, ಕಾರ್ಮಿಕರ ಸೇವಕರ ಕೊರತೆ ಬಗೆಹರಿಯುವುದು, ಪ್ರೇಮಿಗಳ ಪ್ರೀತಿ ಪ್ರಣಯದಲ್ಲಿ ಸಕಾರತ್ಮಕ ಬೆಳವಣಿಗೆಯು ಕಂಡು ಬರಲಿದೆ, ದಿನಾಂತ್ಯಕ್ಕೆ ಶುಭವಿದೆ.
ಮೀನರಾಶಿ
ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಆಸ್ತಿ ಮತ್ತು ವಾಹನ ಕೊಳ್ಳುವ ಆಲೋಚನೆ, ಶುಭ ಯೋಗ ಪ್ರಾಪ್ತಿ, ಖರ್ಚು ಹೆಚ್ಚಿಸುವ ಕಾರ್ಯಗಳನ್ನು ತಪ್ಪಿಸಿಕೊಳ್ಳುವಿರಿ, ಆರ್ಥಿಕ ಸ್ಥಿತಿಯು ಹಂತ ಹಂತವಾಗಿ ಬೆಳವಣಿಗೆ ಕಂಡು ಬಂದು ಸಮಾಧಾನವಾಗಲಿದೆ, ಮಕ್ಕಳಿಂದ ಲಾಭ, ಕೋರ್ಟ್ ಕೇಸ್ ಗಳಲ್ಲಿ ಜಯ, ಬಂಧುಗಳಿಂದ ಅನುಕೂಲ