ಫುಟ್‍ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ಫುಟ್ಭಾಲ್​ನ ದಂತಕಥೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತನ್ನ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಡಿಯಾಗೋ ಮರಡೋನಾ ಅವರು ಹೃದಯಘಾತದಿಂದ ತಮ್ಮ ನಿವಾಸದಲ್ಲೇ ಸಾವನ್ನಪ್ಪಿದ್ದಾರೆ.

ಪುಟ್ಬಾಲ್​ನ ಸರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದ ಮರಡೋನಾ ಇಂದಿಗೂ ಅನೇಕರಿಗೆ ಸ್ಫೂರ್ತಿ. 1986ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್​ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಈ ಆಟಗಾರ.

ಡಿಯಾಗೋ ಮರಡೋನಾ ಅವರು ಮೂರು ವಾರದ ಹಿಂದೆಯಷ್ಟೆ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.
ಅರ್ಜೆಂಟೀನಾದ ಫುಟ್‍ಬಾಲ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆಗಳನ್ನು ನಿರ್ಮಿಸಿರುವ ಡಿಯಾಗೋ ಮರಡೋನಾ ವಿಶ್ವದದ್ಯಾಂತ ಅಭಿಮಾನಿಗಳನ್ನು ಹೊಂದಿದ್ದರು.

ಜೊತೆಗೆ ಡ್ರಗ್ಸ್ ಮತ್ತು ಮದ್ಯವೆಸನಿಯಾಗಿದ್ದು, ಪುಟ್ಬಾಲ್​ ಹೊರತಾಗಿ ಮಾದಕ ಚಟದಿಂದಾಗಿ ಕೂಡ ಇವರ ವೃತ್ತಿ ಜೀವನ ವಿವಾದಕ್ಕೆ ಗುರಿಯಾಗಿತ್ತು. ಮರಡೋನಾ ನಿಧನ ವಿಶ್ವದ ಕ್ರೀಡಾ ಪ್ರೇಮಿಗಳಿಗೆ ನೋವುಂಟು ಮಾಡಿದೆ.

Comments are closed.