ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 29-11-2020

ನಿತ್ಯಭವಿಷ್ಯ : 29-11-2020

- Advertisement -

ಮೇಷರಾಶಿ
ಮಾತಿಗಿಂತ ಮೌನವೇ ಲೇಸು, ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಮೂಡಿಬಂದಾರು, ನಿಮ್ಮ ಕೆಲಸವನ್ನು ಮುಂದುವರಿಸಿದ್ರೆ ಶುಭಫಲವಿದೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಸಂತಸ.

ವೃಷಭರಾಶಿ
ಹಬ್ಬ ಹರಿದಿನಗಳಿಂದ ಖರ್ಚಿಗೆ ದಾರಿಯಾಗಲಿದೆ, ದಂಡ ಕಟ್ಟುವ ಸಾಧ್ಯತೆ, ಅತಿಯಾದ ಕೋಪ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅನ್ಯರಲ್ಲಿ ವೈಮನಸ್ಸು, ಆರೋಗ್ಯ ಹಾಗೂ ಸಂಸಾರದ ಕಡೆಗೆ ಗಮಕ ಹರಿಸಿ.

ಮಿಥುನರಾಶಿ
ಆರ್ಥಿಕವಾಗಿ ಒಳ್ಳೆಯ ಆದಾಯವಿರುತ್ತದೆ, ಆರೋಗ್ಯದಲ್ಲಿ ಅಭಿವೃದ್ದಿ ಕಂಡುಬರುತ್ತದೆ, ಅನುಕೂಲಕರವಾದ ದಿನ, ನಾನಾ ರೀತಿಯ ಚಿಂತೆ, ಆರೋಗ್ಯದಲ್ಲಿ ಏರುಪೇರು, ದುಡುಕು ಸ್ವಭಾವ, ಕೆಟ್ಟ ಆಲೋಚನೆ, ಮಾತಿನಲ್ಲಿ ಹಿಡಿತ ಅಗತ್ಯ, ಪರಸ್ಥಳ ವಾಸ.

ಕಟಕರಾಶಿ
ಉದ್ಯೋಗ, ವ್ಯವಹಾರದಲ್ಲಿ ಅಭಿವೃದ್ದಿ, ಗೆಳೆಯರಲ್ಲಿ ದ್ವೇಷ, ಧನಹಾನಿ, ಮಾನಸಿಕ ವೇದನೆ, ಗುರುಗಳಿಂದ ಹಿತನುಡಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿಯಿಂದ ಮುಂಭಡ್ತಿ ಲಭಿಸುತ್ತದೆ.

ಸಿಂಹರಾಶಿ
ಮನೆಯಲ್ಲಿ ಸಂತಸದ ವಾತಾವರಣ, ಕಿರು ಸಂಚಾರ, ಕೃಷಿ ಕ್ಷೇತ್ರದವರಿಗೆ ಸ್ವಲ್ಪ ಆಲೋಚಿಸುವ ಸಮಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಶತ್ರುಗಳ ಭಾದೆ, ಕುತಂತ್ರಕ್ಕೆ ಬಲಿಯಾಗುವಿರಿ, ಗೆಳೆಯರಿಂದ ಸಹಾಯ, ದಾನ ಧರ್ಮದಲ್ಲಿ ಆಸಕ್ತಿ.

ಕನ್ಯಾರಾಶಿ
ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತದೆ, ಸಂಚಾರದಲ್ಲಿ ಹೆಚ್ಚಿನ ಜಾಗೃತೆವಹಿಸಿ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಬಂಧು ಮಿತ್ರರಲ್ಲಿ ವಿರೋಧ, ಹಾಡುವ ಮಾತಿನಿಂದ ಕಲಹ, ವಾದ-ವಿವಾದಗಳಲ್ಲಿ ಜಯ.

ತುಲಾರಾಶಿ
ಮನೆಯಲ್ಲಿ ಗೃಹಿಣಿಯ ಅನಾರೋಗ್ಯ ನಿಮ್ಮನ್ನು ಕಂಗೆಡಿಸಲಿದೆ, ನಿಮ್ಮ ಅದೃಷ್ಟ ಹಾಗೂ ಪ್ರಯತ್ನಬಲ ಮತ್ತು ನಂಬಿಕೆ ಹೊಂದಿಕೊಂಡಿರುತ್ತದೆ, ಇಷ್ಟವಾದ ವಸ್ತುಗಳ ಖರೀದಿ, ಮಾತೃವಿನಿಂದ ಶುಭಹಾರೈಕೆ, ಧನಸಹಾಯ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕರಾಶಿ
ದೇವರ ಕಾರ್ಯಗಳಿಗಾಗಿ ಖರ್ಚು, ನಿಮ್ಮಿಂದ ಸತ್ಕಾರ್ಯಗಳು ನಡೆದು ಜೆಮ್ಮೆ ತರಲಿದೆ, ಜೀವನದಲ್ಲಿ ಪ್ರಭಾವ ಬೀರುವ ಧಾರ್ಮಿಕ ವ್ಯಕ್ತಿಗಳ ಸಂಪರ್ಕ ನಿಮ್ಮದಾಗಲಿದೆ, ನಾನಾ ವಿಚಾರಗಳಲ್ಲಿ ಆಸಕ್ತಿ, ವಸ್ತ್ರ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಆಕಸ್ಮಿಕ ಖರ್ಚು, ನಂಬಿಕಸ್ಥರಿಂದ ದ್ರೋಹ.

ಧನಸ್ಸುರಾಶಿ
ಆರ್ಥಿಕವಾಗಿ ಉತ್ತಮ ಆದಾಯವಿರುತ್ತದೆ, ಉದ್ಯೋಗ, ವ್ಯವಹಾರ, ವ್ಯಾಪಾರಗಳಲ್ಲಿ ಅಭಿವೃದ್ದಿ ಕಂಡುಬರುತ್ತದೆ, ಸ್ನೇಹಿತರ ನೆರವು ಸಿಗಲಿದೆ, ಉದ್ಯೋಗದಲ್ಲಿ ಉನ್ನತ ಸ್ಥಾನ, ಸುಖ ಭೋಜನ, ಋಣಭಾದೆ, ದ್ರವ್ಯಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಮಕರರಾಶಿ
ಪತ್ನಿಯ ಸಂತೋಷ ನಿಮಗೆ ಉಲ್ಲಾಸಕರ ವಾತಾವರಣವನ್ನು ನೀಡುತ್ತದೆ, ಹೊಸ ನಿವೇಷನ ಖರೀದಿ ಭಾಗ್ಯ, ವ್ಯಾಸಂಗಕ್ಕೆ ತೊಂದರೆ, ಶತ್ರುಭಯ, ತೀರ್ಥಕ್ಷೇತ್ರ ದರ್ಶನ, ಹಣ ಬಂದರೂ ಉಳಿಯುವುದಿಲ್ಲ, ಕುಲ ದೇವರ ಪೂಜೆ ಮಾಡಿ.ದಿನಾಂತ್ಯದಲ್ಲಿ ಅತಿಥಿಗಳ ಆಗಮನ ಖುಷಿಯನ್ನು ಕೊಡಲಿದೆ.

ಕುಂಭರಾಶಿ
ಪ್ರಯತ್ನ ಬಲ, ಆತ್ಮವಿಶ್ವಾಸದಿಂದ ಗೆಲುವು, ಇಚ್ಛಿತ ಕಾರ್ಯಗಳಲ್ಲಿ ಜಯ, ಸಾಲ ಮಾಡುವ ಸಾಧ್ಯತೆ, ಅನ್ಯ ಜನರಲ್ಲಿ ಪ್ರೀತಿ, ಅತಿಯಾದ ನಿದ್ರೆ, ಋಣಭಾದೆ, ಮನಸ್ಸು ಚಂಚಲ, ಯಾವುದೇ ಗೊಂದಲಕ್ಕೆ ಒಳಗಾಗದಂತೆ ಎಚ್ಚವಹಿಸಿ.

ಮೀನರಾಶಿ
ಕೋರ್ಟ್ ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ವಿವಾಹಕ್ಕೆ ತೊಂದರೆ, ಕುಟುಂಬದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ, ಅನಾವಶ್ಯಕ ಚಿಂತೆ, ದೇಹಾರೋಗ್ಯದಲ್ಲಿ ಪ್ರಗತಿ ಕಾಣಲಿದೆ, ಮಕ್ಕಳ ಬಗ್ಗೆ ಚಿಂತೆ ತಪ್ಪಿದ್ದಲ್ಲ, ಋಣಾತ್ಮಕವಾಗಿ ಚಿಂತಿಸದಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular