ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 11-10-2020

ನಿತ್ಯಭವಿಷ್ಯ : 11-10-2020

- Advertisement -

ಮೇಷರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಭೋಗವಸ್ತು ಪ್ರಾಪ್ತಿ, ಮನಶಾಂತಿ, ಸಮಾಜದಲ್ಲಿ ಗೌರವ, ಮಿತ್ರರಿಂದ ಸಹಾಯ, ಆದಷ್ಟು ಜಾಗ್ರತೆಯಿಂದ ಇರಿ, ಶತ್ರು ಭಾದೆ. ಉದ್ಯೋಗ, ವ್ಯವಹಾರಗಳಲ್ಲಿ ಸ್ವಲ್ಪ ಮುನ್ನಡೆಯನ್ನು ಸಾಧಿಸಲಿದ್ದೀರಿ. ಹಿತಶತ್ರುಗಳ ವಂಚನೆಗೆ ಗುರಿಯಾಗದಂತೆ ಜಾಗ್ರತೆ ವಹಿಸಿರಿ. ನಿರೀಕ್ಷಿತ ಕೆಲಸಕಾರ್ಯಗಳು ಒತ್ತಡದಿಂದ ನೆರವೇರಲಿವೆ. ಜಾಗ್ರತೆ ಮಾಡಿರಿ.

ವೃಷಭರಾಶಿ
ಹೆಚ್ಚಿನ ಕೆಲಸಕಾರ್ಯಗಳು ನಿಮ್ಮೆಣಿಕೆಯಂತೆ ಜರಗಲಿವೆ. ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ, ಯತ್ನ ಕಾರ್ಯಗಳ ಅಡತಡೆ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಮನೆಯಲ್ಲಿ ಸಂತಸ, ಮಕ್ಕಳಿಂದ ನೋವು, ಅನಾರೋಗ್ಯ. ಆರೋಗ್ಯದ ವಿಚಾರದಲ್ಲಿ ಹಂತ ಹಂತವಾಗಿ ಸುಧಾರಣೆ ಕಂಡು ಬಂದೀತು. ನೆಂಟರಿಷ್ಟರ ಕಿರಿಕಿರಿಯಿಂದ ಮನಸ್ಸಿಗೆ ಬೇಸರವಾಗಲಿದೆ. ಶುಭವಿದೆೆ.

ಮಿಥುನರಾಶಿ
ಆಸ್ತಿ ವಿಚಾರಗಳಲ್ಲಿ ಕಲಹ ಎಚ್ಚರ, ಕೃಷಿಯಲ್ಲಿ ಲಾಭ, ಉತ್ತಮ ಬುದ್ಧಿಶಕ್ತಿ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ವ್ಯರ್ಥ ಧನಹಾನಿ, ದುರಾಲೋಚನೆ. ವೃತ್ತಿರಂಗದಲ್ಲಿ ನಿರೀಕ್ಷಿತ ಕಾರ್ಯಸಾಧನೆ ಯಿಂದ ಸಮಾಧಾನ ಸಿಗಲಿದೆ. ಅನಾವಶ್ಯಕವಾಗಿ ಖರ್ಚುವೆಚ್ಚಗಳು ತೋರಿ ಬಂದಾವು. ಜನರಿಂದ ನಿಮಗೆ ವಿಶೇಷ ರೀತಿಯಲ್ಲಿ ಗೌರವಾದರಗಳು ಲಭಿಸಲಿದೆ. ಶುಭವಾರ್ತೆ.

ಕಟಕರಾಶಿ
ಆಗಾಗ ದೇಹಾರೋಗ್ಯದಲ್ಲಿ ಏರುಪೇರು ಕಂಡು ಬಂದೀತು. ದೇವತಾ ಕಾರ್ಯಗಳಲ್ಲಿ ಭಾಗಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಕ್ಲೇಷ, ಸುಳ್ಳು ಮಾತನಾಡುವುದು, ಅಕಾಲ ಭೋಜನ, ರಾಜ ವಿರೋಧ, ಕ್ರಯ ವಿಕ್ರಯಗಳಲ್ಲಿ ಲಾಭ. ಜಾಗ್ರತೆ ಮಾಡಿರಿ. ಕೃಷಿಕರಿಗೆ ತಮ್ಮ ಮುನ್ನಡೆ ತಮಗೆ ಆಶ್ಚರ್ಯವೆನಿಸಲಿದೆ. ಆರ್ಥಿಕ ಸ್ಥಿತಿಯು ಸದ್ಯದಲ್ಲೇ ಸುಧಾರಣೆಗೊಂಡು ಸಮಾಧಾನ ತಂದೀತು.

ಸಿಂಹರಾಶಿ
ಅಧಿಕ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಷ್ಟ ವಸ್ತುಗಳ ಖರೀದಿ, ಚಂಚಲ ಮನಸ್ಸು, ಮಾತುಗಳಿಂದ ಕಲಹ ಸಂಭವ, ದಂಡ ಕಟ್ಟುವಿರಿ, ಮನಕ್ಲೇಷ. ಅಭಿಮಾನದ ಕೊಡುಗೆ ನಿಮಗೆ ನಷ್ಟವಾಗಲಿದೆ. ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಜಾಗ್ರತೆ ಮಾಡಬೇಕಾದ ಸ್ಥಿತಿಯು ತಲೆದೋರಲಿದೆ. ದೇವತಾಕಾರ್ಯಗಳಿಂದ ಮನಸ್ಸಿಗೆ ಸಮಾಧಾನವು ಸಿಗಲಾರದು.

ಕನ್ಯಾರಾಶಿ
ಆತ್ಮೀಯರಲ್ಲಿ ಕಲಹ, ರಾಜ ಭಯ, ಶತ್ರು ಭಾದೆ, ಮಾತಿನ ಮೇಲೆ ಹಿಡಿತವಿರಲಿ, ವಾಹನ ರಿಪೇರಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮಾತಾಪಿತರಲ್ಲಿ ಪ್ರೀತಿ. ಪಾಲು ಬಂಡವಾಳದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ. ಆಗಾಗ ಹಿರಿಯರ ಆರೋಗ್ಯ ತಪಾಸಣೆಗೆ ಕರೆದೊಯ್ಯಬೇಕಾಗಬಹುದು. ಕಾರ್ಮಿಕ ವರ್ಗದವರಿಗೆ ತಮ್ಮ ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕಾದೀತು.

ತುಲಾರಾಶಿ
ಪಾಲುದಾರಿಕೆ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅನಾರೋಗ್ಯ, ಕಾರ್ಯ ವಿಫಲ, ಸಾಲಭಾದೆ, ವಾಹನ ರಿಪೇರಿ, ಚಂಚಲ ಮನಸ್ಸು. ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಮುನ್ನಡೆಯಲಿವೆ. ವ್ಯಾವಹಾರಿಕವಾಗಿ ನೆಂಟರ ವ್ಯವಹಾರಗಳು ನಿರೀಕ್ಷಿತ ಮಟ್ಟ ತಲುಪಲಾರದು. ವೈಯಕ್ತಿಕವಾಗಿ ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬಂದೀತು.

ವೃಶ್ಚಿಕರಾಶಿ
ದುಡುಕುವ ಸ್ವಭಾವ, ಗುರು ಹಿರಿಯರಲ್ಲಿ ಭಕ್ತಿ, ದಾಂಪತ್ಯದಲ್ಲಿ ಪ್ರೀತಿ, ಶಸ್ತ್ರಚಿಕಿತ್ಸೆ ಸಾಧ್ಯತೆ, ಉದರಭಾದೆ, ಎಲ್ಲಿ ಹೋದರು ಅಶಾಂತಿ. ದೂರ ಸಂಚಾರದಲ್ಲಿ ಕೆಲಸಗಳು ನಿರ್ಮಿಘ್ನವಾಗಿ ನೆರವೇರಲಿವೆ. ವೈಯಕ್ತಿಕವಾಗಿ ವ್ಯಾಪಾರ, ವ್ಯವಹಾರ ಎಲ್ಲಾ ರೀತಿಯಲ್ಲಿ ನಿಮಗೆ ಪೂರಕವಾದೀತು. ವೃತ್ತಿರಂಗದಲ್ಲಿ ಕೆಲಸಗಳು ಅಡೆತಡೆಗಳಿಂದ ನಡೆಯಲಿವೆ.

ಧನಸುರಾಶಿ
ನಿಮ್ಮ ಪ್ರಯತ್ನಬಲದಲ್ಲಿ ವಿಶ್ವಾಸವನ್ನಿಟ್ಟು ಕೆಲಸಕಾರ್ಯಗಳನ್ನು ಮಾಡಿರಿ. ಸ್ತ್ರೀಸೌಖ್ಯ, ಪುಣ್ಯಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಧನಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪ್ರಿಯ ಜನರ ಭೇಟಿ, ಸುಖ ಭೋಜನ. ಅದರಲ್ಲೇ ನಿಮಗೆ ಜಯ ಲಭಿಸಲಿದೆ. ನಿಮ್ಮ ದಿಟ್ಟ ಹಾಗೂ ನೇರ ನಡೆಯು ಎಲ್ಲರಿಗೂ ಪ್ರಿಯವಾದೀತು. ಗುರಿಯತ್ತ ಲಕ್ಷವನ್ನಿಡಿರಿ.

ಮಕರರಾಶಿ
ಬಣ್ಣದ ಮಾತಿಗೆ ಮರುಳಾಗದಿರಿ, ನಂಬಿಕೆ ದ್ರೋಹ, ಅತಿಯಾದ ಕೋಪ, ಆಲಸ್ಯ ಮನೋಭಾವ, ದುಷ್ಟ ಜನರಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ ಸಾಧ್ಯತೆ.ಮನಸ್ಸು ಸ್ವಲ್ಪ ನಿರಾಳವಾಗಲಿದೆ. ಹಿರಿಯರ ಮಾರ್ಗದರ್ಶನ ಕೆಲಸಕಾರ್ಯದಲ್ಲಿ ಅನುಕೂಲ ಮಾಡಿ ಕೊಡಲಿದೆ. ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಸ್ವಲ್ಪ ಜಟಾಪಟಿಯಾದೀತು. ತಾಳ್ಮೆ ಇರಲಿ.

ಕುಂಭರಾಶಿ
ಆಗಾಗ ಹಣಕಾಸಿನ ಬಗ್ಗೆ ಚಿಂತೆ ಕಂಡು ಬಂದೀತು. ದಾನ ಧರ್ಮದಲ್ಲಿ ಆಸಕ್ತಿ, ವ್ಯಾಪಾರ-ವ್ಯವಹಾರಗಳಲ್ಲಿ ಮಂದಗತಿ, ಖರ್ಚಿನ ಬಗ್ಗೆ ನಿಗಾ ಇರಲಿ, ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಗೆಳೆಯರಲ್ಲಿ ಕಲಹ. ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ತೋರಿ ಬಂದರೂ ಒತ್ತಡ ಇರುತ್ತದೆ. ಪತಿಯಿಂದ ಅನಾವಶ್ಯಕವಾಗಿ ನಿಷ್ಠುರ ಕಂಡು ಬಂದೀತು ತಾಳ್ಮೆ ಸಹನೆ ಇರಲಿ.

ಮೀನರಾಶಿ
ಅಲ್ಪ ಪ್ರಗತಿ, ಅಪಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ, ವೈರಿಗಳಿಂದ ದೂರವಿರಿ, ಸ್ಥಿರಾಸ್ತಿ ಖರೀದಿ. ಕೌಟುಂಬಿಕವಾಗಿ ಸಮಾಧಾನ ಸಿಗಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಕನ್ಯಾದಾನದ ಯೋಗವು ಕಂಡು ಬರಲಿದೆ. ಅದಕ್ಕೆ ಪ್ರಯತ್ನ ಹಾಗೂ ಸಂಧಾನ ಮಾಡಿಕೊಂಡಲ್ಲಿ ಸಾಧ್ಯತೆ ಇರುತ್ತದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular