ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯ ಭವಿಷ್ಯ : ಶ್ರೀರವಿಶಂಕರ ಗುರೂಜಿ (04-11-2020)

ನಿತ್ಯ ಭವಿಷ್ಯ : ಶ್ರೀರವಿಶಂಕರ ಗುರೂಜಿ (04-11-2020)

- Advertisement -

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಚತುರ್ಥಿ ತಿಥಿ, ಮೃಗಶಿರಾ ನಕ್ಷತ್ರ, ಶಿವಯೋಗ, ಬಾಲವ ಕರಣ, ನವೆಂಬರ್ 04 , ಬುಧವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ಇಂದು ಗುರೂಜಿರವರು ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದಾರೆ. ನವೆಂಬರ್ ಎಂದಾಕ್ಷಣ ಇಂಗ್ಲಿಷ್ ಅಂಕಿಯ ಪ್ರಕಾರ ಒಂದು, ಒಂದು, ಅದು ಸೇರಿ ಚಂದ್ರನ ಭಾವದ ಎರಡು ಎಂಬ ಅರ್ಥವನ್ನು ಕೊಡುತ್ತದೆ. ಪರಿಪೂರ್ಣವಾದ ಗೌರಿ ಗಣಪತಿ ಹಾಗೂ ದುರ್ಗಾದೇವಿಯ ಸಂಕೇತ ಆಗಿರುವ ಅದ್ಭುತವಾದ ಮಾಸ ನವೆಂಬರ್. ನೀವು ತುಂಬಾ ಭಾವುಕರು ತುಂಬಾ ಸೆನ್ಸಿಟಿವ್. ನಿಮ್ಮ ಕುಟುಂಬವನ್ನು ಪ್ರೀತಿಸುವಲ್ಲಿ ನಿಮಗೆ ನೀವೇ ಸಾಟಿ. ನಮ್ಮ ಸುತ್ತಮುತ್ತಲಿನ ಜನರನ್ನು ಸಂತೋಷ ವಾಗಿ ಇಟ್ಟುಕೊಳ್ಳುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಅದ್ಭುತವಾದ ವ್ಯಕ್ತಿ ನೀವು. ನೀವು ಎಲ್ಲರನ್ನೂ ಪ್ರೀತಿಸುತ್ತೀರ ಅದು ನಿಮಗೆ ದೈವ ಕೊಟ್ಟಿರುವಂತಹ ಜನ್ಮತಃ ಒಂದು ಸಂಕಲ್ಪ. ಪ್ರೀತಿಯ ದೇವತೆಗಳು ನೀವು, ಅಮ್ಮನ ಪ್ರೀತಿಯಂತೆ ನಿಮ್ಮ ಪ್ರೀತಿ.

ಅಮ್ಮಾ ಪ್ರೀತಿಸುವುದರಲ್ಲಿ 1ಅರ್ಥವಿದೆ ಅದು ಕರುಳ ಸಂಬಂಧ, ಅಣ್ಣತಮ್ಮ ಪ್ರೀತಿಸುವುದರಲ್ಲಿ ರಕ್ತ ಸಂಬಂಧ, ತಂದೆ ಪ್ರೀತಿಸುವುದರಲ್ಲಿ ಆತ್ಮ ಸಂಬಂಧ, ಬಂಧುಬಾಂಧವರು ಪ್ರೀತಿಸುವಲ್ಲಿ ಬಾಂಧವ್ಯದ ಸಂಬಂಧ, ಆದರೆ ಗುರು ಪ್ರೀತಿಸುವಲ್ಲಿ ಯಾವುದೇ ರೀತಿಯ ಎಕ್ಸ್ ಪೆಕ್ಟೇಶನ್ ಇಲ್ಲ. ಗುರುವಿಗೆ ಇನ್ನೊಬ್ಬರನ್ನು ಬೆಳೆಸಬೇಕು ಅಭಿವೃದ್ಧಿಪಡಿಸಲು ಚಿಂತನೆ ಇರಬೇಕೆ ಹೊರತು ತನ್ನ ಅಭಿವೃದ್ಧಿ ತನ್ನ ಕುಟುಂಬ ಎಂಬ ಪರಂಪರೆ ಇರಬಾರದು. ಇಂತಹ ಭಾವ ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರಿಗೆ ಇರುತ್ತದೆ. ನೀವು ಪಬ್ಲಿಕ್ ಪ್ರಾಪರ್ಟಿ ಇದ್ದ ಹಾಗೆ. ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರಿಗೆ ವಿದ್ಯಾದೇವಿ ಆತ್ಮಿಕವಾಗಿ ಜನ್ಮತಃ ಇದ್ದರೂ ಭೌತಿಕವಾಗಿ ಇಲ್ಲವೆಂಬಂತೆ ಎಲ್ಲರಿಗೂ ಅನಿಸಿದರೂ ಕೂಡ ನೀವು ಅಪರ ಜ್ಞಾನಿಗಳು. ಜ್ಞಾನ ಭಂಡಾರದ ಸಂಚಾರ ನೀವು, ಯಾರಾದರೂ ನಿಮ್ಮನ್ನು ಬಡಿದೆಬ್ಬಿಸಿದರೆ, ಇಲ್ಲವೇ ನೀವೇ ಎದ್ದರೂ ಕೂಡ ಚರಿತ್ರೆಯನ್ನೇ ಸೃಷ್ಟಿಸುವ ಅಪರಿಮಿತ ಶಕ್ತಿ ನಿಮಗಿರುತ್ತದೆ.

ಆದರೆ ಕೆಲವೊಮ್ಮೆ ನಿಮಗೆ ಕಾನ್ಫಿಡೆನ್ಸ್ ಕಡಿಮೆಯಿರುತ್ತದೆ. ನವೆಂಬರ್ ಮಾಸದಲ್ಲಿ ತುಲಾ ರಾಶಿಯಲ್ಲಿ ಸೂರ್ಯನು ಸ್ಥಿತನಾಗಿರುತ್ತಾನೆ. ಆತ್ಮಕಾರಕ ಪಿತೃಕಾರಕನಾದ ಸೂರ್ಯ ನೀಚನಾಗಿರುವುದರಿಂದ ತಂದೆಯ ಸುಖ ನಿಮಗೆ ಕಡಿಮೆ, ಇಲ್ಲವೇ ತಂದೆಯಿಂದ ದೂರವಿರು ತೀರ, ಇಲ್ಲವೇ ಕುಟುಂಬದಿಂದಲೇ ದೂರವಿರುತ್ತೀರ, ತಂದೆಗೆ ವಿರುದ್ಧವಾಗಿ ನೀವು ನಿಂತುಕೊಳ್ಳುತ್ತೀರಿ, ಇಲ್ಲವೇ ನಿಮ್ಮ ತಂದೆ ನಿಮಗೆ ವಿರುದ್ಧವಾಗಿ ನಿಂತುಕೊಳ್ಳುತ್ತಾರೆ, ನಿಮಗೆ ನಿಮ್ಮ ತಂದೆಯ ಪ್ರೀತಿ ಸಾಮಾನ್ಯವಾಗಿ ಕಡಿಮೆಯೇ ಇರುತ್ತದೆ. ಆತ್ಮಕಾರಕ ನೀಚನಾಗಿ ರುವುದರಿಂದ ನೀವು ಸದಾ ಪ್ರೀತಿಯನ್ನೇ ಬಯಸ್ಸುತ್ತಿರುತ್ತೀರ. ಅದೇ ನಿಮಗೆ ಫೇಲೂರ್ ಆಗುವ ಸಾಧ್ಯತೆಯಿದೆ. ಈ ಮಾಸದಲ್ಲಿ ಹುಟ್ಟಿದವರಿಗೆ ಒಂದಾದರು ಲವ್ ಫೇಲೂರ್ ಇದ್ದೇ ಇರುತ್ತದೆ. ನೀವು ಯಾರನ್ನು ಅತಿಯಾಗಿ ಪ್ರೀತಿಸುತ್ತೀರೊ ಹಚ್ಚಿಕೊಳ್ಳುತ್ತೀರೋ ಅವರಿಂದ ಕಿರಿಕಿರಿ ಇದ್ದೇ ಇರುತ್ತದೆ. ನೀವು 1ಸಣ್ಣ ಗಾಯವನ್ನು ಕೂಡ ಸಹಿಸಿಕೊಳ್ಳುವುದಿಲ್ಲ. ಅಲ್ಲದೆ ಇಂಜೆಕ್ಷನ್ ತೆಗೆದುಕೊಳ್ಳುಲು ಕೂಡ ನೀವು ಭಯಪಡುತ್ತೀರ.

ಡಾಕ್ಟರ್ ಹತ್ತಿರ ಹೋಗಲು ಭಯಪಡುವ ವ್ಯಕ್ತಿಗಳಲ್ಲಿ ನೀವು ಮೊದಲಿಗರಾಗಿರುತ್ತೀರಿ. ತುಂಬಾ ಒತ್ತಡ ಅವಮಾನಗಳನ್ನು ತಡೆದು ಕೊಳ್ಳುವುದಿಲ್ಲ, ಬೇಗ ಕುಸಿದು ಬಿಡುತ್ತೀರಾ. ನೀವು ಬಹುಬೇಗ ಭಾವನಾತ್ಮಕವಾಗಿ ಅಟ್ಯಾಚ್ ಮೆಂಟ್ ಆಗುತ್ತೀರಾ. ನೀವು ಬಹುಬೇಗ ದೊಡ್ಡವರಿಗೆ ಮತ್ತು ಚಿಕ್ಕ ಮಗುವಂತೆ ಚಿಕ್ಕ ಮಕ್ಕಳಿಗೆ ಹತ್ತಿರವಾಗುತ್ತೀರ. ನೀವು ಮಗುವೆ, ಯಾರು ಬೇಕಾದರೂ ನಿಮಗೆ ಮೋಸ ಮಾಡ ಬಹುದು. ನಮಗೆ ಬಹು ಬೇಗ ಕೋಪ ಬರುತ್ತದೆ. ಸ್ವಂತ ಪರಿಶ್ರಮದಿಂದ ನೀವು ಏನನ್ನಾದರೂ ಬೇಕಾದರೂ ಮಾಡಬಲ್ಲಿರಿ. ಸೂರ್ಯ ನೀಚನಾಗಿರುವುದರಿಂದ ನಿಮ್ಮನ್ನ ಯಾರಾದರೂ ಬಡಿದೆಬ್ಬಿಸಬೇಕು. ಪ್ರೀತಿಯ ವಿಚಾರದಲ್ಲಿ ಸಂಗಾತಿಯ ರೂಪದಲ್ಲೋ, ಮಕ್ಕಳ ರೂಪದಲ್ಲೂ,ಬಂಧುಗಳ ರೂಪದಲ್ಲಿ ಯಾವುದೋ 1ರೀತಿಯಲ್ಲಿ ನಿಮಗೆ 1ಪೆಟ್ಟು ಖಂಡಿತ. ನವೆಂಬರ್ ಮಾಸದಲ್ಲಿ ಹುಟ್ಟಿದ ಅವರು ಎಲ್ಲರಿಗೂ ಪ್ರೀತಿಯನ್ನ ಹಂಚುತ್ತಾರೆ ಆದರೆ ಅವರಿಗೆ ಪ್ರೀತಿ ದೊರೆಯುವುದಿಲ್ಲ.

ಅದರಲ್ಲೂ ಈ ಮಾಸದಲ್ಲಿ ಹುಟ್ಟಿದ ಸ್ತ್ರೀಯರಿಗೆ 1ಲವ್ ಫೇಲೂರ್ ಅಥವಾ ನಂಬಿಕೆ ದ್ರೋಹವಾಗಿಯೇ ಇರುತ್ತದೆ. ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ನಿಮ್ಮ ಹಳೆಯ ನೆನಪು ನೋವುಗಳು ನಿಮ್ಮನ್ನು ಕಾಡುತ್ತಿರುತ್ತದೆ ಆದ್ದರಿಂದ ನೀವು ಗಮ್ಯವನ್ನು ತಲುಪಲು ಆಗುವುದಿಲ್ಲ. ಅಪರಿಮಿತ ಬುದ್ಧಿ ಶಕ್ತಿ, ಜ್ಞಾನ ಶಕ್ತಿ, ಗಣಪತಿಯ ನೆನಪಿನ ಶಕ್ತಿ , ಯಾವುದಾದರೂ ಒಂದನ್ನು ಕಲಿಯಬೇಕೆ ಎಂದುಕೊಂಡರೆ ನೀವು ಅದನ್ನು ಕಲಿತೇ ತೀರುತ್ತೀರ. ಚಿಕ್ಕ ವಯಸ್ಸಿನಲ್ಲೇ ನಿಮ್ಮಗೆ ಯಶಸ್ಸು ಬರುತ್ತದೆ ಅದನ್ನು ನೀವು ಹಿಡಿದುಕೊಳ್ಳಬೇಕು. ಅದನ್ನ ಹಾಗೇ ಕರಗತಲಾಮಲಕ ಮಾಡಿಕೊಳ್ಳಬೇಕು. ಆದರೆ ಸ್ವಲ್ಪ ಆತುರ ಪಡುತ್ತೀರಾ ಸೂರ್ಯನೇ ನೀಚನಾಗಿರುವುದರಿಂದ ನೀವು ಏನು ಎಂಬುದು ಲೋಕಕ್ಕೇ ಗೊತ್ತು. ನಿಮ್ಮ ಭಾವ, ಹಾವ, ಆಲೋಚನಾ, ಚಿಂತನಾ, ಮಂಥನ ವಿಮುಖತೆ ಎಲ್ಲವೂ ಗೊತ್ತಿದೆ, ಯಾರಿಗೂ ಹೇಳುವ ಅವಶ್ಯಕತೆಯಿಲ್ಲ. ನೀವು ನಿಮ್ಮೊಳಗೆ ತುಂಬಾ ನೋವು ಇಟ್ಟುಕೊಳ್ಳುತ್ತೀರಾ, ಒಳಗೆಯೇ ಅಳಬೇಡಿ. ಎಲ್ಲಾ ನೋವು ದುಃಖಗಳನ್ನು ಹೊರ ಹಾಕಿ ಬಿಡಿ. ಇಲ್ಲವೇ ನಿಮಗೆ ನರ್ವಸ್ ಪ್ರಾಬ್ಲಂ ಬರುತ್ತದೆ.

ದುಶ್ಚಟಗಳಿಗೆ ಬಲಿಯಾಗುವ, ಆರ್ಥರೈಟಿಸ್ ಪ್ರಾಬ್ಲಂ, ಲಂಗ್ಸ ಪ್ರಾಬ್ಲಂ, ಹೃದಯ ಸಂಬಂಧಿ ಕಾಯಿಲೆ, ಲಿವರ್ ಸಮಸ್ಯೆ, ಚಟಗಳಿಗೆ ದಾಸರಾಗುವ, ತುಂಬಾ ತಿನ್ನುವ ಹವ್ಯಾಸಕ್ಕೆ ಒಳಗಾಗಿ ದಪ್ಪವಾಗುವ ಸಂಭವವಿದೆ. ಒಂದೇ ಕೆಲಸವನ್ನು ಪದೇ ಪದೇ ಮಾಡುವುದು, ಅತಿಯಾಗಿ ಕೋಪಗೊಳ್ಳುವುದು. ಬೆಳೆಯುತ್ತಾ ನೀವು ಸಮಾಜದಿಂದ ವಿಮುಖವಾಗಿ ನಿಂತು ಬಿಡುತ್ತೀರ, ಏಕಾಂಗಿಯಾಗಿರಲು ಇಷ್ಟಪಡುತ್ತೀರಾ, ಏಕಾಂಗಿತನ ಒಳ್ಳೆಯದಲ್ಲ. ಜನರೊಂದಿಗೆ ಬೆರೆಯಬೇಕು ನೀವು ಇರೋದು ಕಾಡಿನಲ್ಲಲ್ಲ ಸಮಾಜದಲ್ಲಿ ಜನರೊಂದಿಗೆ.
ನವೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಮಾತು ತೂಕ ಗತ್ತು, ವ್ಯವಸ್ಥೆ, ಕೆಲಸ ಯಾವುದನ್ನು ಮಾಡಿದರೆ ಚೆನ್ನಾಗಿರುತ್ತದೆ. ಗೌರಿ ಗಣೇಶ ಸಂಗಮದ ಶಕ್ತಿಯ ಬಗ್ಗೆ ಮುಂದಿನ ಭಾಗದಲ್ಲಿ ಮತ್ತಷ್ಟು ಮಾಹಿತಿಗಳನ್ನು ತಿಳಿಸಿಕೊಡಲಾಗುತ್ತದೆ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಚಂದ್ರ ಕುಜ ಇರುವುದರಿಂದ ಟೆಕ್ನಿಕಲ್ ಲೈನ್ ಇಂಟೀರಿಯರ್ಸ್ ಮ್ಯಾಕ್ಯಾನಿಕಲ್ ಇಂಜಿನಿಯರಿಂಗ್ ಈ ರೀತಿಯ ವ್ಯವಹಾರಗಳಲ್ಲಿ ಇರುವವರಿಗೆ ಪರಿಶ್ರಮದಿಂದ ಲಾಭವನ್ನು ನೋಡು ವಂತಹ ಅನುಕೂಲಕರವಾದ ದಿನ

ವೃಷಭರಾಶಿ
ಸ್ವಲ್ಪ ಜಾಗ್ರತೆ ಇಂದು ಯಾರೊಂದಿಗಾದರೂ ಸಣ್ಣ ಕಿರಿಕಿರಿ, ವಾಗ್ವಾದ, ಜಗಳ, ಪೆಟ್ಟು, ಇನ್ ಫೆಕ್ಷನ್ ಗಳಾಗುವ ಸಂಭವವಿದೆ. 1 ಬೊಗಸೆ ಬೆಲ್ಲ ಅವಲಕ್ಕಿಯನ್ನ ತೆಗೆದುಕೊಂಡು ಅಶ್ವತ್ಥವೃಕ್ಷದ ಕೆಳಗೆ ಚೆಲ್ಲಿಹೋಗಿ ಒಳ್ಳೆಯದಾಗುತ್ತದೆ.

ಮಿಥುನರಾಶಿ
ಪ್ರಯಾಣ ನಿಷಿದ್ಧ, ವಾದ ನಿಷಿದ್ಧ, ವಾಗ್ವಾದ ನಿಷಿದ್ಧ, ಭೂಮಿಯ ವಿಚಾರದಲ್ಲಿ ಮಾತುಕತೆ ಆಡಲು ಹೋಗಲೇಬೇಡಿ.

ಕರ್ಕಾಟಕರಾಶಿ
ಯಾವ ವಾದಕ್ಕೆ ಹೋದರು ನೀವು ಗೆದ್ದು ಬಿಡುತ್ತೀರ ಆಗೆಂದು ಬಂಡೆಗೆ ತಲೆ ಚಚ್ಚಿಕೊಳ್ಳಲು ಹೋಗಬೇಡಿ.

ಸಿಂಹರಾಶಿ
ಅಧಿಕಾರಸ್ಥ ಜಾತಕ, ಬುದ್ಧಿ, ಜ್ಞಾನ, ವಿಜ್ಞಾನ, ಸುಜ್ಞಾನ, ಮಹಾ ಜ್ಞಾನ, ಉಪಯೋಗಿಸಿ ಗೆಲುವು ಇಂದು ಕಟ್ಟಿಟ್ಟ ಬುತ್ತಿ.

ಕನ್ಯಾರಾಶಿ
ಚೆನ್ನಾಗಿದೆ ತುಂಬಾ ಲೆಕ್ಕಾಚಾರ, ಪ್ಲಾನಿಂಗ್, ತುಂಬ ಅಲರ್ಟ್ ಒಳ್ಳೆಯದಲ್ಲ. ಗಾಬರಿಪಡಿಸುವ ಬಿಡುತ್ತದೆ. ಆಗೋದೆಲ್ಲಾ ಒಳ್ಳೇದಕ್ಕೆ ಅವನಿಗೆ ಗೊತ್ತಿದೆ ಸರಿಯಾದ ದಾರಿಯಲ್ಲೇ ಕರೆದುಕೊಂಡು ಹೋಗುತ್ತಾನೆ.

ತುಲಾರಾಶಿ
ತಿಳಿದವರಿಂದ, ಹತ್ತಿರದವರಿಂದ, ಪುಟ್ಟ ಪೆಟ್ಟು ನೋವು ವ್ಯವಹಾರದಲ್ಲಂಟು ಜಾಗ್ರತೆ.

ವೃಶ್ಚಿಕ ರಾಶಿ
ಚೆನ್ನಾಗಿದೆ ವಕ್ರವಾಗಿಯಾದರೂ ನಿಮಗೊಂದು ಲಾಭವುಂಟು. ಹಾಗೆಂದು ವಕ್ರ ದಾರಿಗೆ ಹೋಗದಿರಿ.

ಧನಸ್ಸುರಾಶಿ
ಅತಿಯಾದ ಧೈರ್ಯ ಮೊಂಡು ಧೈರ್ಯವಾಗಿ ಬಿಡುತ್ತದೆ ಹಾಗೆಂದು ಮೋಸ ಮಾಡಲು ಹೋಗಬೇಡಿ. ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಒಂದಲ್ಲ 1ದಿನ ನಾವು ಮಾಡಿದ ಮೋಸ ಹೊರಗೆ ಬಂದೇ ಬರುತ್ತದೆ.

ಮಕರರಾಶಿ
ವಾಹನ ಭೂಮಿ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಆರ್ಕಿಟೆಕ್ಟ್ ಡೆವಲಪ್ ಮೆಂಟ್ ಈ ವ್ಯವಹಾರಗಳಲ್ಲಿರುವ ವರೆಗೆ ಚೆನ್ನಾಗಿದೆ.

ಕುಂಭರಾಶಿ
ಮಿಲಿಟರಿ, ಪೋಲಿಸ್, ರಕ್ಷಣಾ ಇಲಾಖೆ, ಡಿಫೆನ್ಸ್, ವಿಮಾನ ಇಲಾಖೆ, ತಾಂತ್ರಿಕ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೆ ಆಗಮ ಪೂಜಾ ಯಜ್ಞ ಯಾಗ ಮುಂತಾದ ಕೆಲಸಗಳನ್ನು ಮಾಡುತ್ತಿದ್ದರೆ ಅತ್ಯಧಿಕ ಅನುಕೂಲ.

ಮೀನರಾಶಿ
ಸಲ್ಪ ರಿವರ್ಸ್ ಗೇರ್ ನಲ್ಲಿ ಓಡುವಂತಹ ಪ್ರಭಾವವಿರುತ್ತದೆ. ಎಕ್ಸ್ ಪರ್ಟ್ ಆಗಿರುವವರನ್ನು ಕೇಳಿ ತಿಳಿದುಕೊಳ್ಳಿ. ಎಲ್ಲಾ ತಿಳಿದಿದೆ ಎಂಬ ಭಾವವನ್ನು ಬಿಟ್ಟು, ಕೇಳಿ ಮುಂದಕ್ಕೆ ಇಡಿ ಗೆಲುವು ನಿಮ್ಮದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular