ಸ್ಯಾಂಡಲ್ ವುಡ್ ನಲ್ಲಿ ಮೊಳಗಲಿದೆ ಮಂಗಳವಾದ್ಯ…! ಸಪ್ತಪದಿ ತುಳಿಯಲು ಸಜ್ಜಾದ ಲವ್ ಮಾಕ್ಟೆಲ್ ಜೋಡಿ..!!

ಲವ್-ಮಾಕ್ಟೇಲ್….ಇತ್ತೀಚಿನ ವರ್ಷದಲ್ಲಿ ಸದ್ದು ಮಾಡಿದ ಲವ್ ಸ್ಟೋರಿ. ಇಂತಹದೊಂದು ಮನತಟ್ಟುವ ಲವ್ ಸ್ಟೋರಿ ಕಟ್ಟಿಕೊಟ್ಟ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಡಾರ್ಲಿಂಗ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕೊನೆಗೂ ತಮ್ಮ ಲವ್ ಸ್ಟೋರಿಯನ್ನೂ ಮದುವೆಯ ಬಂಧನದಲ್ಲಿ ಗಟ್ಟಿಗೊಳಿಸುತ್ತಿದ್ದು, ವಿಭಿನ್ನವಾಗಿ ಈ ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಹೌದು ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಹಲವು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಲವ್ ಮಾಕ್ಟೇಲ್ ಸಕ್ಸಸ್ ಬಳಿಕ  ಈ ಸಂಗತಿಯನ್ನು ಮಾಧ್ಯಮಗಳ ಎದುರು ಹಂಚಿಕೊಂಡಿದ್ದರು. ಆದರೆ ಮದುವೆ ಯಾವಾಗ ಎಂಬ ಪ್ರಶ್ನೆಗೆ ನಸುನಗುವಿನಲ್ಲಿ ಉತ್ತರಿಸುತ್ತಿದ್ದ  ಜೋಡಿ ಈಗ ಮದುವೆಯ ದಿನಾಂಕವನ್ನು ಪಿಂಕ್ ಆಂಡ್ ವೈಟ್ ಕಾಮಿನೇಶನ್ ಬ್ಯಾಕ್ ಗ್ರೌಂಡ್ ಅಲಂಕಾರ, ಲವ್ಲಿ ಪ್ಲೇಸ್ ಹಾಗೂ ಕ್ಯೂಟ್ ಕೇಕ್ ಜೊತೆ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಈ ಲವ್ ಜೋಡಿ 2021 ರ ಫೆ.14 ರಂದು ಹೊಸಬದುಕಿಗೆ ಕಾಲಿಡಲಿದೆ. ಮದುವೆ ದಿನಾಂಕವನ್ನು ರೋಮ್ಯಾಂಟಿಕ್ ಆಗಿ ಅನೌನ್ಸ್ ಮಾಡಿರುವ  ಈ ಜೋಡಿಗೆ ಸ್ಯಾಂಡಲ್ ವುಡ್ ನಟ-ನಟಿಯರು ಶುಭಕೋರಿದ್ದಾರೆ. ಲವ್ ಮಾಕ್ಟೆಲ್-2 ಚಿತ್ರೀಕರಣ ಪೂರ್ಣಗೊಂಡ ಬಳಿಕ ಮದುವೆಯಾಗುವುದಾಗಿ ಹೇಳಿಕೊಂಡಿದ್ದ ಜೋಡಿ ಈಗ ಸಪ್ರೈಸ್ ಆಗಿ ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದೆ.

ಕೊರೋನಾ ಹಿನ್ನೆಲೆಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಬಹುನೀರಿಕ್ಷೆಯ ಲವ್ ಮಾಕ್ಟೇಲ್ ಸಿನಿಮಾ ಶೂಟಿಂಗ್ ಕೂಡ ವಿಳಂಬಗೊಂಡಿತ್ತು. ಈಗ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಅದರೊಂದಿಗೆ ಈ ಪ್ರೇಮಹಕ್ಕಿಗಳು ಸಿಹಿಸುದ್ದಿ ನೀಡಿದ್ದಾರೆ.

ತಮ್ಮ ಮದುವೆಯ ದಿನಾಂಕ ನಿಗದಿ ವಿಚಾರವನ್ನು ರೋಮ್ಯಾಂಟಿಕ್ ಪೋಟೋದೊಂದಿಗೆ ಟ್ವೀಟ್ ನಲ್ಲಿ ಅನೌನ್ಸ್ ಮಾಡಿರುವ ಡಾರ್ಲಿಂಗ್ ಕೃಷ್ಣ, ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ ಎಂದು ಕೋರಿದ್ದಾರೆ. ಇನ್ನು ಅಭಿಮಾನಿಗಳು ಈ ಪೋಟೋ ಹಾಗೂ ಟ್ವೀಟ್ ಗೆ ಸಖತ್ ಖುಷಿಯಾಗಿದ್ದು, ಪ್ರೀತಿಯ ಜೋಡಿಗೆ ಶುಭಹಾರೈಸಿದ್ದಾರೆ.

Comments are closed.