ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (07-11-2020)

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಸಪ್ತಮಿ ತಿಥಿ, ಪುಷ್ಯ ನಕ್ಷತ್ರ, ಶುಭ ಯೋಗ , ಭದ್ರಂಕ್ ಕರಣ, ನವೆಂಬರ್ 07 , ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗಿನ ಜಾವ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

ನಮ್ಮ ಹಿರಿಯರು ಸದಾಕಾಲ ಎಂಬತ್ತು ತೊಂಬತ್ತು ವರ್ಷಗಳಾದರೂ ಆರೋಗ್ಯವಂತರಾಗಿರುತ್ತಿದ್ದರು ಕಾರಣ ಮೈಲಿಗಟ್ಟಲೆ ಬರಿಗಾಲಿನಲ್ಲಿ ಓಡಾಡುತ್ತಿದ್ದರು. ಬೆಳಗಿನ ಜಾವ ತೋಟಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಕೆಲಸವನ್ನು ಹೋಗುತ್ತಿದ್ದರು ಇದರಿಂದ 1 ಕಡೆಗೆ ವಾಕಿಂಗ್ ಮಾಡಿದ ಆಗೆ ಆಗುತ್ತಿತ್ತು, ಒಳ್ಳೆಯ ಗಾಳಿಯ ಸೇವನೆ ಕೂಡ ಆಗುತ್ತಿತ್ತು. ಕೆಲಸದ ಮೇಲೆ ಜವಾಬ್ದಾರಿ ಕೂಡ ಹೆಚ್ಚಾಗುತ್ತಿತ್ತು ಅದಕ್ಕಾಗಿ ನಮ್ಮ ಹಿರಿಯರು ಆರೋಗ್ಯವಾಗಿರುತ್ತಿದ್ದರು. ಯಾರು ಸೂರ್ಯೋದಯಕ್ಕಿಂತ ಮೊದಲು ಅಂದರೆ ಎಂಬತ್ತು 88 ನಿಮಿಷಗಳಿಗಿಂತ ಮೊದಲೇ ಯಾರು ಹೇಳುತ್ತಾರೋ ಅವರು 50% ಕಾಯಿಲೆ ಹೋಯಿತು ಎಂದರ್ಥ. ರಾತ್ರಿ 9 ಗಂಟೆಗೆ ಮಲಗಿಕೊಳ್ಳುವ ಅಭ್ಯಾಸ ಇರಬೇಕು.

ಬೆಳಿಗ್ಗೆ ಎದ್ದ ತಕ್ಷಣ ಬೇವಿನಕಡ್ಡಿಯನ್ನು ಅಗಿಯುವುದರಿಂದ ದೇಹದಲ್ಲಿನ ಉಷ್ಣಾಂಶವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಅಸಿಡಿಟಿ, ಅಲ್ಸರ್, ಗ್ಯಾಸ್ ಟ್ರಬಲ್,ಫೈಲ್ ಕಣ್ಣು ಮಂಜಾಗುತ್ತದೆ,ಸ್ಟ್ರೋಕ್ ಒಡೆಯುತ್ತದೆ, ಕಣ್ಣಿಗೆ ಬಹುಬೇಗ ಕನ್ನಡಕ ಬರುತ್ತದೆ, ಕೂದಲು ಉದುರುತ್ತದೆ. ಮನುಷ್ಯನ ಅತಿ ದೊಡ್ಡ ಶಾಪವೆಂದರೆ ಅವನಿಗಿರುವ 2ಚಿಂತೆ. ಪ್ರಪಂಚದ ದಲ್ಲಿ ಇದಕ್ಕಿಂತ ಮೀರಿದ ಚಿಂತೆ ಯಾವುದೂ ಇಲ್ಲ. ಈ 2ಚಿಂತೆಗಳಲ್ಲೇ ಮನುಷ್ಯ ಬಾಳುತ್ತಾನೆ. ಭೂತಕಾಲದ ಸಮಸ್ಯೆಗಳ ಚಿಂತೆಯಲ್ಲಿ ನೆನಪಿನಲ್ಲಿ ಬಾಳುತ್ತಾನೆ ಇಲ್ಲವೇ ಭವಿಷ್ಯತ್ಕಾಲದ ಚಿಂತೆಯಲ್ಲಿ ಬಾಳುತ್ತಾನೆ. ಭೂತಕಾಲ ಮತ್ತು ಭವಿಷತ್ ಕಾಲದ ಚಿಂತನೆಗಳಿಂದಲೇ ಮನುಷ್ಯ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಈ ಚಿಂತನೆಗಳಿಂದಲೇ ಮನುಷ್ಯನ ದೇಹ ಬಿಸಿಯಾಗುತ್ತದೆ ಅರ್ಧ ತಲೆನೋವು ಬರುತ್ತದೆ, ತಲೆಭಾರ, ತಲೆನೋವು, ಸ್ಕಿನ್ ಅಲರ್ಜಿ, ಕೂದಲು ಉದುರುವುದು,ಮುಂತಾದ ಸಮಸ್ಯೆಗಳ ಸುಳಿಗೆ ಸಿಲುಕುತ್ತೇವೆ.

ಹೊಟ್ಟೆ ಹಾಳಾಯಿತು ಎಂದರೆ ಸಂಪೂರ್ಣವಾಗಿ ಆರೋಗ್ಯವೇ ಹಾಳಾಯಿತು ಎಂದರ್ಥ. ಮಲಬದ್ಧತೆ ಸಮಸ್ಯೆ ಗ್ಯಾಸ್ಟ್ರಿಕ್ ಸಮಸ್ಯೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ ಆದ್ದರಿಂದ ಪ್ರತಿನಿತ್ಯ 1ಬೇವಿನ ಕಡ್ಡಿಯನ್ನು ಅಗಿಯುವುದರಿಂದ ಆರೋಗ್ಯವಾಗಿರಬಹುದು. ಬೇವಿನಕಟ್ಟಿ ಸಿಗಲಿಲ್ಲ ವೆಂದರೆ 1ಬೊಗಸೆಯಷ್ಟು ಬೇವಿನ ಎಲೆಯನ್ನು 2ಚೊಂಬು ಆದ್ಯತೆ ಹಾಕಿ ಮಂದ ಉರಿಯಲ್ಲಿ ಮೂವತ್ತು ನಿಮಿಷಗಳ ಕಾಲ ಕುದಿಸಿ ನೀರು ಕಮ್ಮಿಯಾದ ಮೇಲೆ ಆ ನೀರನ್ನು ಕುಡಿಯಿರಿ ಇದರಿಂದ ದೇಹಕ್ಕೆ ತಂಪಾಗುತ್ತದೆ. ಪಿಸಿಒಡಿ, ಪಿಸಿಒಎಸ್, ಸ್ಕಿನ್ ಪ್ರಾಬ್ಲಂ, ಸೋರಿಯಾಸಿಸ್, ಚರ್ಮ ಒಣಗುತ್ತದೆ, ಬಾಯಿಯ ದುರ್ಗಂಧ, ಬಾಯಿಗೆ ರುಚಿ ಸಿಗುತ್ತಿಲ್ಲ, ಈ ಸಮಸ್ಯೆಗಳು ಉಂಟಾದರೆ ನಿಮ್ಮ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿದೆ ಎಂದರ್ಥ.

ತಿನ್ನುವಂತಹ ಆಹಾರ ಪಚನವಾಗಲು ಕೂಡಾ ಅದಕ್ಕೆ ಅವಶ್ಯಕತೆ ಇರುವಷ್ಟು ಉಷ್ಣಾಂಶ ಬೇಕು ಕಾಲು ಉರಿ ಬರುವುದು ಮಂಜಾಗುವುದು ಗಾಯಗಳು ಬೇಗ ವಾಸಿಯಾಗದಿರುವುದು ಕಣ್ಣಿನ ಕೆಳಗೆ ಕಪ್ಪಾಗುವುದು. ವಿಪರೀತ ಉಷ್ಣ ಆದರೆ ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಕೆಲಸ ಮಾಡಲು ಆಗದೇ ಇರುವುದು ವಿಪರೀತ ಸುಸ್ತು ಎನಿಸುವುದು ಬ್ಯಾಕ್ ಪೇನ್ ಬರುವುದು ಇವುಗಳೆಲ್ಲದರ ವೈಪರೀತ್ಯ ಶುರುವಾಗುತ್ತದೆ. ಇವೆಲ್ಲದಕ್ಕೂ ಅತ್ಯುತ್ತಮವಾಗಿ ಪರಿಣಾಮ ಬೀರುವುದು ಬೇವಿನ ಕಡ್ಡಿಯನ್ನು ಬೆಳಗಿನ ಜಾವ ಅಗಿಯುವುದು ಅತ್ಯದ್ಭುತವಾದ ಪರಿಹಾರ.

ಬೇವಿನ ಹೂವುಗಳನ್ನು ತಂದು ಅದನ್ನು 1ಬಿಳಿ ಬಟ್ಟೆಯಲ್ಲಿ ಕಟ್ಟಿ ನೇರವಾಗಿ ಬಿಸಿಲಿನಲ್ಲಿ ಒಣಗಿಸ ಬಾರದು ಕಿಟಿಕಿಯಲ್ಲಿ ನೇತುಹಾಕಿ 3ತಿಂಗಳಗಳ ಕಾಲ ಅದು ಬಿಸಿಲಿನ ಶಾಖಕ್ಕೆ ನಿಧಾನವಾಗಿ ಒಣಗುತ್ತದೆ. ಒಣಗಿದ ಮೇಲೆ ಅದನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. 1ಚಿಟಿಕೆ ಪುಡಿಯನ್ನು ತುಪ್ಪದ ಜೊತೆ ಅಥವಾ ಜೇನುತುಪ್ಪದ ಜೊತೆ ಬೆಳಿಗ್ಗೆ ಸೇವಿಸಿ. ತೇಜಸ್ಸು ಜ್ಞಾನ ತೇಜಸ್ಸು ಬಲ ಕಂಡ ಬಲ ದೇಹಬಲ ಮನೋಬಲ ಎಲ್ಲಾ ವೃದ್ಧಿಸುತ್ತದೆ.

ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಚಂದ್ರ ಶನಿ ದಲ್ಲಿ ಇರುವುದರಿಂದ ಸ್ವಲ್ಪ ತೊಳಲಾಟ ವಿರುತ್ತದೆ. ಶಿವಸ್ತುತಿ ಮಾಡಿ ಚಿತ್ರಾನ್ನವನ್ನ ಮಾಡಿ ನೈವೇದ್ಯ ಇಟ್ಟು ಅದನ್ನು ಯಾರಾದರೂ ಬಡವರಿಗೆ ಕೊಡಿ.

ವೃಷಭರಾಶಿ
ಶನಿ ಚೆನ್ನಾಗಿದ್ದಾನೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪರಿಶ್ರಮದಿಂದ ಲಾಭವನ್ನು ಪಡೆಯುತ್ತೀರ. ಕಷ್ಟಪಟ್ಟು ಮೇಲಕ್ಕೆ ಬರುವಂತಹ ಸುಯೋಗವಿದೆ.

ಮಿಥುನರಾಶಿ
ಅಷ್ಟಮದಲ್ಲಿ ಶನಿ ಇದ್ದಾನೆ ಕುಟುಂಬ ಸ್ಥಾನದಲ್ಲಿ ಕೂಡ ಚಂದ್ರ ಸಂಸಾರದಲ್ಲಿದ್ದಾನೆ ನಮಗಾಗಿ ಅಡ್ಡದಾರಿ ಅಡ್ಡ ಚಿಂತನೆಗಳ ಪ್ರಭಾವಕ್ಕೆ ಒಳಗಾಗುತ್ತಿದೆ ಎಚ್ಚರಿಕೆ. ಮನೆಯಲ್ಲಿ ನಂದಾದೀಪವನ್ನು ಹಚ್ಚಿ ಹೋಗಿ ದೀಪವನ್ನು ಹಚ್ಚುವುದರಿಂದ ಲಕ್ಷಾಂತರ ದೋಷ ನಿವಾರಣೆಯಾಗುತ್ತದೆ.

ಕರ್ಕಾಟಕರಾಶಿ
ಪರಿಶ್ರಮಕ್ಕೆ ತಕ್ಕ ಫಲ ಅದರೆ ಪರಿ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲ ಎಂದು ಒದ್ದಾಡುತ್ತೀರ. ಚೆನ್ನಾಗಿದೆ ನೆಮ್ಮದಿಯಾದ ಜೀವನವನ್ನ ಪಡೆಯುತ್ತೀರ. ದುರ್ಗಾದೇವಿಯ ದೇವಸ್ಥಾನವಿದ್ದರೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ ಸಪ್ತಮಿಯ ದಿನ ಇರುವುದರಿಂದ ಒಳ್ಳೆಯದಾಗುತ್ತದೆ.

ಸಿಂಹರಾಶಿ
ವೆಚ್ಚಗಳ ಚಿಂತೆ ಕಾಡುತ್ತದೆ ತೊಂದರೆಯೇನೂ ಇಲ್ಲ ಗಾಬರಿಯಾಗಬೇಡಿ. ಒಳ್ಳೆಯದಕ್ಕೆ ಖರ್ಚಾಗುತ್ತದೆ.

ಕನ್ಯಾರಾಶಿ
ಚಂದ್ರ ಲಾಭಸ್ಥಾನದಲ್ಲಿದ್ದಾನೆ ಪಂಚಮದಲ್ಲಿ ಶನಿ ಇರುವುದರಿಂದ ಕಷ್ಟಪಟ್ಟು ಅದಕ್ಕೆ ತಕ್ಕಂತೆ ಪ್ರತಿಫಲವನ್ನು ನೋಡುವಂತಹ ದಿನ. ಗೌರವ ಸನ್ಮಾನ ಎಲ್ಲ ದೊರೆಯುತ್ತದೆ ನಿಮ್ಮ ಮಾತನ್ನು ಎಲ್ಲರೂ ಕೇಳುತ್ತಾರೆ.

ತುಲಾರಾಶಿ
ವೃತ್ತಿಯಲ್ಲಿ ಪರಿಶ್ರಮವಿರುತ್ತದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೋಡುವಂತಹ ದಿನವಾಗಿರುತ್ತದೆ.

ವೃಶ್ಚಿಕರಾಶಿ
ತಾಯಿಯ ಆರೋಗ್ಯದ ವಿಚಾರದಲ್ಲಿ ಗಮನ ಕೊಡು ಮೂಲ ತ್ರಿಕೋನದಲ್ಲಿ ಕುಜ ಕೇತು ರಾಹು ಇರುವುದರಿಂದ ಮಂಡಿನೋವು ಸೊಂಟನೋವು ಯಾವುದೋ 1ರೀತಿಯ ಬಾಧೆಗೆ ಒಳಗಾಗುತ್ತೀರ ಎಚ್ಚರಿಕೆಯಾಗಿದೆ

ಧನಸ್ಸುರಾಶಿ
ಕುಡಿತ ಚಟ ಮೋಜು ಮಸ್ತಿಗಳಿಂದ ದೂರವಿರಿ. ಅದರಲ್ಲೂ ಮದಿರೆ ಯಿಂದ ದೂರವಿರಿ ಅದರ ಅಭ್ಯಾಸದಿಂದ ಬಾಧೆಯಿಂದ ಬಳಲುತ್ತಿರುವವರಿಗೆ ಕಾಮಾಲೆಯಿಂದ ಬಳಲುತ್ತಿರುವ ಅವರಿಗೆ ಶಂಕರ ಅಮೃತಾ 1ಒಳ್ಳೆಯ ರಾಮಬಾಣ ಬಳಸಿ ಒಳ್ಳೆಯದಾಗುತ್ತದೆ.

ಮಕರರಾಶಿ
ಅಂದುಕೊಂಡ ಕೆಲಸ ಕಾರ್ಯಗಳನ್ನ ಚೆನ್ನಾಗಿ ಮಾಡಿಕೊಂಡು ಹೋಗುತ್ತೀರಾ ತೊಂದರೆಯೇನೂ ಇಲ್ಲ.

ಕುಂಭರಾಶಿ
ದೇಹ ಬೇಗ ತೊಂದರೆಯಾಗುತ್ತದೆ ಆದ್ದರಿಂದ ದೇಹವನ್ನು ಆದಷ್ಟು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನ ಮಾಡಿ.

ಮೀನರಾಶಿ
ಚೆನ್ನಾಗಿದೆ ನಿಮ್ಮ ಏಳಿಗೆಯನ್ನು ಸಹಿಸದೆ ಹುಳಿ ಹಿಂಡುತ್ತಾರೆ ಜಾಗ್ರತೆಯಿಂದ ಇರಿ. ಧರ್ಮದ ದಾರಿಯಲ್ಲಿ ಏರಿ ಅಧರ್ಮದ ಹಾದಿ ತುಳಿಯಬೇಡಿ ಧರ್ಮ ದಿಂದ ಚಿರಸ್ಥಾಯಿಯಾಗಿರುತ್ತೀರ.

Comments are closed.