ಸೋಮವಾರ, ಜೂನ್ 16, 2025
HomehoroscopeHoroscope : ದಿನಭವಿಷ್ಯ- ಇಂದು ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

Horoscope : ದಿನಭವಿಷ್ಯ- ಇಂದು ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

- Advertisement -

ಮೇಷರಾಶಿ
ಹೈನುಗಾರಿಕೆ, ಹಾಲು ಉದ್ಯಮ ಮಾಡುವವರಿಗೆ ಅಧಿಕ ಲಾಭ, ಅಸಡ್ಡೆ ವರ್ತನೆಯನ್ನು ದೂರಮಾಡಿ, ಹೊಸ ಯೋಜನೆ ಆರಂಭಿಸುವ ಮೊದಲು ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ, ವಿವಾದಗಳಿಂದ ದೂರವಿರಲು ಯತ್ನಿಸಿ, ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುವಿರಿ, ಸಂಗಾತಿಯೊಂದಿಗೆ ಅಸಮಾಧಾನ.

ವೃಷಭರಾಶಿ
ವ್ಯವಹಾರಿಕವಾಗಿ ಪ್ರಗತಿ ಸಾಧಿಸುವಿರಿ, ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ, ಆರೋಗ್ಯದ ಹಿನ್ನೆಲೆಯಲ್ಲಿ ಅಧಿಕ ಖರ್ಚು, ಅನಿರೀಕ್ಷಿತ ನಡವಳಿಕೆಯಿಂದ ಬೇಸರ, ಸಹೋದ್ಯೋಗಿಗಳು ಅಸಮಧಾನಗೊಳ್ಳಬಹುದು, ಪ್ರೀತಿಯನ್ನು ಹಂಚಿಕೊಂಡರೆ ಅದೃಷ್ಟ ಒಲಿಯಲಿದೆ, ಹಣಕಾಸಿನ ವಿಚಾರದಲ್ಲಿ ಅಧಿಕ ಲಾಭ ದೊರೆಯಲಿದೆ.

ಮಿಥುನರಾಶಿ
ಹಣಕಾಸಿನ ಸಮಸ್ಯೆ ಕಾಣಿಸಲಿದೆ, ಮನೆಯಲ್ಲಿ ಉತ್ತಮ ವಾತಾವರಣ, ಕೆಲಸದ ಸ್ಥಳದಲ್ಲಿ ವಿಶೇಷ ಅನುಭವ ಎದುರಾಗಲಿದೆ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ದೊರೆಯಲಿದೆ, ಸಂಗಾತಿಯಿಂದ ಸಹಕಾರ, ಅವಿವಾಹಿತರಿಗೆ ವಿವಾಹ ಭಾಗ್ಯ, ಸಹೋದ್ಯೋಗಿಗಳೊಂದಿಗೆ ಕಿರಿಕಿರಿ ಎದುರಾಗಲಿದೆ.

ಕರ್ಕಾಟಕರಾಶಿ
ಆರೋಗ್ಯದ ವಿಚಾರವಾಗಿ ಹೆಚ್ಚು ಚಿಂತೆ ಮಾಡಬೇಡಿ, ಹಣಕಾಸಿನ ಸಮಸ್ಯೆಗಳಿಗೆ ಇಂದು ಪರಿಹಾರ ದೊರೆಯಲಿದೆ, ಮಕ್ಕಳ ಅಧ್ಯಯನದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ರಾಜಕಾರಣಿಗಳಿಗೆ ಹೊಸ ಅವಕಾಶ ದೊರೆಯಲಿದೆ, ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ, ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ.

ಸಿಂಹರಾಶಿ
ದೂರ ಪ್ರಯಾಣ ಸಾಧ್ಯತೆ, ಸಂಗಾತಿಯ ಸಹಕಾರ ದೊರೆಯಲಿದೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಅಗತ್ಯ, ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲಿದ್ದಾರೆ, ಇತರರನ್ನು ಮೆಚ್ಚಿಸುವ ಕಾರ್ಯಕ್ಕೆ ಹೋಗಬೇಡಿ, ಸ್ನೇಹಿತರಿಂದ ಸಹಕಾರ ದೊರೆಯಲಿದೆ.

ಕನ್ಯಾರಾಶಿ
ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ ತರಲಿದೆ, ಆಹ್ವಾನಿಸದೇ ಅತಿಥಿಗಳು ಮನೆಗೆ ಬಂದಾರು, ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವ ಘಟನೆಗಳು ನಡೆಯಲಿದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಮಹಿಳೆಯರಿಂದ ಸಹಕಾರ ದೊರೆಯಲಿದೆ, ನಿಮ್ಮ ಪಾಲಿಗೆ ಇಂದು ಉತ್ತಮ ದಿನ.

ತುಲಾರಾಶಿ
ಕ್ರೀಡಾಪಟುಗಳಿಗೆ ಅದೃಷ್ಟವನ್ನು ತರಲಿದೆ, ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಕರೆ ಬರುವ ಸಾಧ್ಯತೆ, ಬರಬೇಕಾದ ಹಣ ಕೈ ಸೇರಲಿದೆ, ಸಂಬಂಧಿಗಳ ಭೇಟಿಯಿಂದ ಸಂತಸ, ಆತ್ಮವಿಶ್ವಾಸದಿಂದ ವ್ಯವಹಾರದಲ್ಲಿ ಪ್ರಗತಿ, ವೈವಾಹಿಕ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿದೆ.

ವೃಶ್ಚಿಕರಾಶಿ
ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ, ಹಳೆಯ ನೆನಪುಗಳು ಮರುಕಳಿಸಲಿವೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದೇಶಿ ಪ್ರಯಾಣ, ಪ್ರಿಯಕರನೊಂದಿಗೆ ಹೆಚ್ಚು ಕಾಲ ಕಳೆಯುವಿರಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆಯಿಂದ ಅಧಿಕ ಲಾಭ ದೊರೆಯಲಿದೆ.

ಇದನ್ನೂ ಓದಿ : ತೀರ್ಥಸ್ನಾನ ಮಾಡಿದ್ರೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕರುಣಿಸುತ್ತಾಳೆ ಈ ತಾಯಿ !

ಧನಸುರಾಶಿ
ಆದಾಯಕ್ಕಿಂತ ಅಧಿಕ ಖರ್ಚು, ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಕಿರಿಕಿರಿ, ಮಾನಸಿಕ ಒತ್ತಡವನ್ನು ದೂರ ಮಾಡಲು ಪ್ರಯತ್ನಿಸಿ, ಆರೋಗ್ಯದ ವಿಚಾರಕ್ಕೆ ಆಸ್ಪತ್ರೆಗೆ ಅಲೆಯಬೇಕಾದ ಸ್ಥಿತಿ ಮಾಡಬೇಕಾಗಿದೆ, ಸಮಸ್ಯೆಯನ್ನು ಮುಂದೂಡುವ ಬದಲು ಪರಿಹಾರಕ್ಕೆ ಯತ್ನಿಸುವುದು ಒಳಿತು.

ಮಕರರಾಶಿ
ನಿಮ್ಮ ಪ್ರಗತಿಗೆ ಹಳೆಯ ವಿಚಾರಗಳು ಅಡ್ಡಿಯಾಗಲಿವೆ, ಹಣಕಾಸಿನ ವಿಚಾರದಲ್ಲಿ ನಷ್ಟ, ಹಿರಿಯರ ಆರೋಗ್ಯದ ಬಗ್ಗೆ ಅಸಡ್ಡೆ ಬೇಡ, ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಲು ಯತ್ನಿಸಿ, ಶೀಘ್ರದಲ್ಲಿಯೇ ನಿಮಗೆ ಹೊಸ ಅವಕಾಶಗಳು ಗೋಚರಕ್ಕೆ ಬರಲಿದೆ, ಪುಣ್ಯಕ್ಷೇತ್ರಗಳ ಭೇಟಿಯಿಂದ ಅದೃಷ್ಟ ಒಲಿಯಲಿದೆ.

ಇದನ್ನೂ ಓದಿ : ದೇವರನ್ನು ಕಾಯುತ್ತೆ ಮೊಸಳೆ : ಇದು ತಿರುವನಂತರಪುರದ ಅನಂತ ಪದ್ಮನಾಭ ಸ್ವಾಮಿಯ ಮೂಲಸ್ಥಾನ

ಕುಂಭರಾಶಿ
ಹೊಸ ಹೂಡಿಕೆ ಇಂದು ಅಧಿಕ ಲಾಭವನ್ನು ತಂದುಕೊಡಲಿದೆ, ಕೆಲವರು ಪ್ರಮುಖ ನಿರ್ಧಾರ ಕೈಗೊಳ್ಳುವಂತೆ ಪ್ರಚೋದಿಸುತ್ತಾರೆ, ಬಾಕಿ ಇರುವ ಕಾರ್ಯಗಳನ್ನು ಮುಗಿಸಲು ಇಂದು ಅನುಕೂಲಕರ ದಿನ, ಸಂದರ್ಶನಕ್ಕೆ ಹಾಜರಾಗಲು ಕರೆ ಬರಲಿದೆ, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ, ಅವಿವಾಹಿತರಿಗೆ ವಿವಾಹ ಭಾಗ್ಯ.

ಮೀನರಾಶಿ
ಸ್ನೇಹಿತರು ಸಕಾಲದಲ್ಲಿ ಸಹಕಾರ ಮಾಡುವರು, ಸಂಗಾತಿಯೊಂದಿಗೆ ಸಮಯ ಕಳೆಯುವಿರಿ, ಹತಾಶೆಯ ಮನೋಭಾವ ನಿಮ್ಮನ್ನು ಚಿಂತೆಗೀಡು ಮಾಡಲಿದೆ, ಹಳೆಯ ಒಪ್ಪಂದ ಲಾಭವನ್ನು ತಂದುಕೊಡಲಿದೆ, ಸಾಲಗಾರರ ಕಿರಿಕಿರಿಗೆ ತಾತ್ಕಾಲಿಕ ಮುಕ್ತಿ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

ಇದನ್ನೂ ಓದಿ : Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

(Horoscope today astrological prediction for September 13)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular