ಸಚಿವೆ ಶೋಭಾ ಕರಂದ್ಲಾಜೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ : ತಪ್ಪಿತು ಭಾರೀ ದುರಂತ

ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ಟೇಕಾಫ್‌ ಗೂ ಮುನ್ನವೇ ತಾಂತ್ರಿ ದೋಷ ಕಂಡುಬಂದಿದ್ದು, ಅದೃಷ್ಟವಶಾತ್‌ ಭಾರೀ ದುರಂತವೊಂದು ತಪ್ಪಿರುವ ಘಟನೆ ಬೆಂಗಳೂರಿನಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಶೋಭಾ ಕರಂದ್ಲಾಜೆ ಅವರು ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ವಿಮಾನದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹೀಗಾಗಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದೆ.

ಆದರೆ ಸಚಿವೆ ಶೋಭಾ ಕರಂದ್ಲಾಜೆ ಅವರು ಬದಲಿ ವಿಮಾನದ ವ್ಯವಸ್ಥೆಯನ್ನು ಕಲ್ಪಿಸುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಏರ್ಪೋರ್ಟ್‌ ಅಧಿಕಾರಿಗಳು ಬದಲಿ ವಿಮಾನದ ಮೂಲಕ ಸಚಿವೆ ಶೋಭಾ ಕರಂದ್ಲಾಜೆ ಅವರು ಉಳಿದ ಪ್ರಯಾಣಿಕರನ್ನು ಹೈದ್ರಾಬಾದ್‌ಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಶಾಸಕ ಭೂಪೇಂದ್ರ ಪಟೇಲ್‌ಗೆ ಒಲಿದು ಬಂತು ಗುಜರಾತ್‌ ಸಿಎಂ ಪಟ್ಟ

ಇದನ್ನೂ ಓದಿ : ಆರೋಗ್ಯ ಸೇವೆ ಇನ್ನೂ ಹತ್ತಿರ : 120 ಅಂಬ್ಯುಲೆನ್ಸ್ ಉದ್ಘಾಟಿಸಿದ CM ಬಸವರಾಜ ಬೊಮ್ಮಾಯಿ

(Technical issues foun ind Central Minister Shobha Karandlaje Travel on Board flight in bangalore Airport )

Comments are closed.