ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ- ಸ್ನೇಹಿತರ ಸಹಕಾರ, ಆರ್ಥಿಕ ಸಂಕಷ್ಟದಿಂದ ಪಾರು

Horoscope : ದಿನಭವಿಷ್ಯ- ಸ್ನೇಹಿತರ ಸಹಕಾರ, ಆರ್ಥಿಕ ಸಂಕಷ್ಟದಿಂದ ಪಾರು

- Advertisement -

ಮೇಷರಾಶಿ
ಶೀಘ್ರದಲ್ಲಿಯೇ ಉತ್ತಮ ಸಮಯ ಬರಲಿದೆ, ಹಣದ ವಿಚಾರಕ್ಕೆ ಚಿಂತೆ ಅಗತ್ಯವಿಲ್ಲ, ಅತ್ಯಾಪ್ತರನ್ನು ಭೇಟಿಯಾಗುವಿರಿ, ಕುಟುಂಬದ ಹಿರಿಯರ ಸಲಹೆಯನ್ನು ಆಲಿಸಿ, ಉತ್ತಮ ಕೆಲಸದತ್ತ ಗಮನಹರಿಸಿ, ಸಾಮಾಜಿಕವಾಗಿ ಮನ್ನಣೆ ದೊರೆಯಲಿದೆ, ತಾಳ್ಮೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆಯಾಗಲಿದೆ.

ವೃಷಭರಾಶಿ
ಜೀವನವನ್ನು ಆನಂದಿಸುವಿರಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆಧ್ಯಾತ್ಮದತ್ತ ಒಲವು, ಹಣಗಳಿಕೆಗೆ ಹೊಸ ದಾರಿ ಗೋಚರಿಸಲಿದೆ, ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ, ಕೋಪವನ್ನು ಕಡಿಮೆ ಮಾಡಿಕೊಳ್ಳಿ, ಮಾಡಿದ ತಪ್ಪನ್ನು ಸರಿಪಡಿಸಲು ಯತ್ನಿಸಿ, ಇಂದು ಹೆಚ್ಚು ಸಕ್ರೀಯರಾಗಿರುವಿರಿ, ಆಹಾರ ಸೇವೆಯಲ್ಲಿ ಎಚ್ಚರವಾಗಿರುವುದು ಒಳಿತು.

ಮಿಥನರಾಶಿ
ವ್ಯಾಯಾಮ ಮಾಡುವ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಿ, ಹಣದ ಉಳಿತಾದ ಕಡೆಗೆ ಗಮನ ಹರಿಸಿ, ಮಕ್ಕಳ ವಿಚಾರಕ್ಕಾಗಿ ದೂರ ಪ್ರಯಾಣ, ವಾಸ್ತವಾಂಶವನ್ನು ಪರಿಶೀಲಿಸಿ ಮುನ್ನಡೆಯಿರಿ, ನೀವಿಂದು ರೊಮ್ಯಾಂಟಿಕ್‌ ಕ್ಷಣಗಳನ್ನು ಅನುಭವಿಸುವಿರಿ, ಒತ್ತಡದಿಂದ ಕಾರ್ಯನಿರ್ವಹಣೆ, ಸಂಗಾತಿಗೆ ವಿಶೇಷವಾದದನ್ನು ನೀಡುವ ಸಾಧ್ಯತೆ.

ಕರ್ಕಾಟಕರಾಶಿ
ಅನಗತ್ಯ ವಿಚಾರಗಳಿಂದ ದೂರವಿರಿ, ಆಪ್ತರು ಹಾಗೂ ಸಂಬಂಧಿಕರ ಜೊತೆಗೆ ವ್ಯವಹಾರ ನಡೆಸುವಾಗ ಎಚ್ಚರವಿರಲಿ, ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ, ಸ್ನೇಹಿತರನ್ನು ಭೇಟಿಯಾಗುವಿರಿ, ಸ್ಪರ್ಧಾತ್ಮಕ ಪರೀಕ್ಷೆಯಿಂದ ಉತ್ತಮ ಫಲಿತಾಂಶ, ಕುಟುಂಬದ ಸದಸ್ಯರ ಜೊತೆಗೆ ಹಲವು ನಿರ್ಧಾರ ಕೈಗೊಳ್ಳುವಿರಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ಸಿಂಹರಾಶಿ
ನಿಮ್ಮ ಪಾಲಿಗಿಂದು ವಿಶೇಷವಾದ ದಿನ, ಅಸಮಾನ್ಯವಾದುದದನ್ನು ಮಾಡಲು ಪ್ರಯತ್ನಿಸುವಿರಿ, ರೋಮಾಂಚನಕಾರಿ ಸನ್ನಿವೇಶವನ್ನು ಅನುಭವಿಸುವಿರಿ, ಹಣಕಾಸಿನ ವಿಚಾರದಲ್ಲಿ ಲಾಭಗಳಿಸುವಿರಿ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಘರ್ಷಣೆ, ವಿಷಕಾರಿ ಆಹಾರ ಸೇವನೆಯ ಬಗ್ಗೆ ಎಚ್ಚರವಿರಲಿ, ಸ್ನೇಹಿತರಲ್ಲಿ ತಪ್ಪು ಭಾವನೆ ಬರುವ ಸಾಧ್ಯತೆಯಿದೆ.

ಕನ್ಯಾರಾಶಿ
ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ಮನೆಗೆ ಸಂಬಂಧಿಕರ ಭೇಟಿ ಸಾಧ್ಯತೆ, ಸಂಗಾತಿಯೊಂದಿಗೆ ಸುಂದರ ಸಂಜೆಯನ್ನು ಕಳೆಯುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಹೊಂದಾಣಿಕೆಯಿಂದ ಮುನ್ನಡೆದರೆ ಅಧಿಕ ಲಾಭ.

ತುಲಾರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಆರ್ಥಿಕ ವಿಚಾರದಲ್ಲಿ ಮಿಶ್ರದಿನ, ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಬೇಡಿ, ಸಹೋದ್ಯೋಗಿಗಳು ಸಹಕಾರ ಮಾಡಲಿದ್ದಾರೆ, ಮನೆಯಲ್ಲಿ ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ, ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದೆ, ಕೃಷಿ ಸಂಬಂಧಿ ವ್ಯವಹಾರದಲ್ಲಿ ಅಧಿಕ ಲಾಭ.

ವೃಶ್ಚಿಕರಾಶಿ
ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ, ಜಟಿಲ ಸಮಸ್ಯೆಯೂ ಇಂದು ಪರಿಹಾರವನ್ನು ಕಾಣಲಿದೆ, ನಗು ಆರೋಗ್ಯದ ಗುಟ್ಟು ಅನ್ನೋದು ನೆನಪಿರಲಿ, ಹಣದ ಖರ್ಚು ಅಧಿಕ ವಾಗಲಿದೆ, ಸ್ನೇಹಿತರು ಅಮೂಲ್ಯವಾದ ಗಿಫ್ಟ್‌ ನೀಡುವ ಸಾಧ್ಯತೆ, ಸಾಮಾಜಿಕವಾಗಿ ಬಹುಖ್ಯಾತಿ ದೊರೆಯಲಿದೆ.

ಧನಸುರಾಶಿ
ಆಹಾರ ಸೇವನೆಯಲ್ಲಿ ಎಚ್ಚರವಹಿಸಿ, ತಾತ್ಕಾಲಿಕ ಸಾಲದ ಯತ್ನ ಬೇಡ, ಹಳೆಯ ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಂಗಾತಿಯ ಕಡೆಗೆ ಹೆಚ್ಚಿನ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ, ಶೀಘ್ರದಲ್ಲಿಯೇ ಶುಭ ಸುದ್ದಿಯೊಂದನ್ನು ಕೇಳುವಿರಿ.

ಮಕರರಾಶಿ
ಹಣಕಾಸಿನ ಒಪ್ಪಂದ ಲಾಭವನ್ನು ತಂದುಕೊಡಲಿದೆ, ಕೆಲಸದ ಸ್ಥಳದಲ್ಲಿ ಉತ್ತಮ ಲಾಭ ದೊರೆಯಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ಪಾತ್ರವಾಗಲಿದೆ, ಸೆಮಿನಾರ್‌, ಪ್ರದರ್ಶನ ಗಳಲ್ಲಿ ಭಾಗಿಯಾಗುವಿರಿ, ದೂರದ ಊರಿನಿಂದ ಶುಭ ಸಮಾಚಾರವನ್ನು ಕೇಳುವಿರಿ.

ಕುಂಭರಾಶಿ
ನಿಮ್ಮ ಆರೋಗ್ಯವನ್ನು ಸುಧಾರಿಸಲು ಹಲವು ಕೆಸಲ ಮಾಡಲು ಸಕಾಲ, ಅನಿರೀಕ್ಷಿತ ಖರ್ಚು ಬೇಸರವನ್ನು ಮೂಡಿಸಲಿದೆ, ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ, ಗೆಳೆಯರ ಜೊತೆಗೆ ವ್ಯವಹಾರ ಮಾಡುವ ಎಚ್ಚರವಿರಲಿ, ಒಡಹುಟ್ಟಿದವರ ಸಹಾಯ ದೊರೆಯಲಿದೆ.

ಮೀನರಾಶಿ
ದುಡಿಕಿನ ವರ್ತನೆ ಸಾಂಸಾರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎಚ್ಚರವಿರಲಿ, ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ, ಹಣದ ವಿಚಾರದಲ್ಲಿ ಜಗಳವಾಗುವ ಸಾಧ್ಯತೆ, ಶಾಂತ ಸ್ವಭಾವ ನಿಮಗೆ ಬೇಸರ ಮೂಡಿಸಲಿದೆ, ಓದಿನತ್ತ ಹೆಚ್ಚು ಆಕರ್ಷಿತರಾಗಲಿದ್ದೀರಿ.

(Horoscope today astrological prediction for September 15)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular