Horoscope : ದಿನಭವಿಷ್ಯ-ನಿಮ್ಮನ್ನು ಬಲಿಪಶುವನ್ನಾಗಿಸುವ ಯತ್ನ ನಡೆಯುತ್ತಿದೆ ಎಚ್ಚರವಿರಲಿ

ಮೇಷರಾಶಿ
ಒತ್ತಡವನ್ನು ಕಡಿಮೆ ಮಾಡಿಕೊಂಡ್ರೆ ಮಾನಸಿಕ ಶಾಂತಿ, ಭೂಮಿ ಮಾರಾಟ ಹಾಗೂ ಖರೀದಿ ಅಧಿಕ ಲಾಭ, ಅದೃಷ್ಟ ನಿಮ್ಮನ್ನು ಹುಡುಕಿಬರಲಿದೆ, ಮಾತನಾಡುವಾಗ ಎಚ್ಚರಿಕೆ ವಹಿಸಿ, ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ, ವ್ಯವಹಾರ ಕ್ಷೇತ್ರದಲ್ಲಿ ಲಾಭ ದೊರೆಯುವ ಸಾಧ್ಯತೆ.

ವೃಷಭರಾಶಿ
ಅದೃಷ್ಟವನ್ನೇ ಅವಲಂಬಿಸಬೇಡಿ, ಆರೋಗ್ಯ ಸುಧಾರಣೆಯತ್ತ ಗಮನ ಹರಿಸಿ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಲಿದೆ, ಆಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಕುಟುಂಬದವರೊಂದಿಗೆ ಅನ್ಯೋನ್ಯತೆ, ಆತ್ಮವಿಶ್ವಾಸದಿಂದ ಅಧಿಕ ಲಾಭ ದೊರೆಯಲಿದೆ.

ಮಿಥುನರಾಶಿ
ತಾಳ್ಮೆಯನ್ನು ಕಳೆದುಕೊಳ್ಳಬೇಡಿ, ನಿರಂತರ ಪ್ರಯತ್ನದಿಂದ ಯಶಸ್ಸು ದೊರೆಯಲಿದೆ, ಸುಲಭವಾಗಿ ಬಂಡವಾಳ ಸಂಗ್ರಹ, ಬಾಕಿ ಇರುವ ಸಾಲ ತೀರಿ ನೆಮ್ಮದಿ, ಮನೆಯಲ್ಲಿ ಬಾಕಿ ಉಳಿದ ಕಾರ್ಯಗಳು ಪೂರ್ಣಗೊಳ್ಳಲಿದೆ, ಇತರರು ನಿಮಗೆ ಸಹಾಯ ಮಾಡಲಿದ್ದಾರೆ, ಕೆಲಸದ ಹಿನ್ನೆಲೆಯಲ್ಲಿ ದೂರ ಸಂಚಾರ.

ಕರ್ಕಾಟಕರಾಶಿ
ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ, ಸ್ನೇಹಿತರ ಜೊತೆಗೆ ಕಾಲ ಕಳೆಯುವಿರಿ, ಹಣದ ಸಮಸ್ಯೆಯು ನಿಮ್ಮನ್ನು ಕಾಡಲಿದೆ, ಪಾಲುದಾರಿಕೆ ವ್ಯವಹಾರದಿಂದ ಸದ್ಯಕ್ಕೆ ದೂರವಿರಿ, ಸಮಯದ ಮಹತ್ವವನ್ನು ಅರಿತುಕೊಳ್ಳಿ, ವೈವಾಹಿಕ ಜೀವನ ಅದ್ಬುತವಾಗಿರಲಿದೆ, ಸಂಗಾತಿಯಿಂದ ಸಹಕಾರ ದೊರೆಯಲಿದೆ.

ಸಿಂಹರಾಶಿ
ಆರೋಗ್ಯದ ಬಗ್ಗೆ ಚಿಂತೆ ಅಗತ್ಯವಿಲ್ಲ, ಸುತ್ತಮುತ್ತಲಿನ ಜನರು ಮನೋಸ್ಥೈರ್ಯವನ್ನು ಹೆಚ್ಚಿಸುತ್ತಾರೆ, ಇತರರನ್ನು ಸಂಪರ್ಕಿಸದೇ ಹಣದ ಹೂಡಿಕೆ ಮಾಡಬೇಡಿ, ಕೆಲಸದ ಬದಲಾವಣೆಯಿಂದ ಲಾಭ ದೊರೆಯಲಿದೆ, ದೂರದೂರುಗಳಿಗೆ ಪ್ರಯಾಣ ಮಾಡುವಿರಿ, ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಗೆಲುವು.

ಕನ್ಯಾರಾಶಿ
ದಾನ ಕಾರ್ಯಗಳು ಮಾನಸಿಕ ನೆಮ್ಮದಿಯನ್ನು ತರಲಿದೆ, ಮಕ್ಕಳ ಶಿಕ್ಷಣಕ್ಕಾಗಿ ಅಧಿಕ ಖರ್ಚು, ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ, ಕೆಲಸದಿಂದ ಅಧಿಕ ಒತ್ತಡ, ತಪ್ಪುಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ, ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಟಿವಿಯಲ್ಲೇ ಹೆಚ್ಚು ಸಮಯ ಕಳೆಯಲಿದ್ದಾರೆ, ಇತರರ ಹಸ್ತಕ್ಷೇಪದಿಂದ ಬೇಸರ.

ತುಲಾರಾಶಿ
ಇಂದು ನಿಮ್ಮ ಪಾಲಿಗೆ ವಿಶೇಷವಾದ ದಿನ, ಅಸಮಾನ್ಯವಾದುದನ್ನು ಮಾಡಲು ಅನುವು ಮಾಡಿಕೊಡುತ್ತದೆ, ಹಣಕಾಸಿನ ವಿಚಾರದಲ್ಲಿ ಸುಧಾರಣೆಯನ್ನು ಕಾಣಲಿದೆ, ಸ್ನೇಹಿತರ ಜೊತೆಗೆ ಹಲವು ವಿಷಯಗಳನ್ನು ಹಂಚಿಕೊಳ್ಳುವಿರಿ, ಸಮಸ್ಯೆಯನ್ನು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ, ಕಷ್ಟಕರ ಪರಿಸ್ಥಿತಿಯ ನಿಂತ್ರಣಕ್ಕೆ ಶ್ರಮವಹಿಸಿ ದುಡಿಯಬೇಕಾದ ಸ್ಥಿತಿ.

ವೃಶ್ವಿಕರಾಶಿ
ಧೂಮಪಾನವನ್ನು ತ್ಯೆಜಿಸಿ, ಹಣ ಹೂಡಿಕೆಗೆ ಹೊಸ ಅವಕಾಶ ದೊರೆಯಲಿದೆ, ಒತ್ತಡ ಕಡಿಮೆಯಾಗಲಿದೆ, ಅತ್ಯಾಪ್ತರು ಅಮೂಲ್ಯವಾದ ಉಡುಗೊರೆಯನ್ನು ನೀಡುವರು, ಕೆಲಸ ಕಾರ್ಯಗಳಲ್ಲಿ ಹೊಂದಾಣಿಕೆ ಅಗತ್ಯ, ಸ್ನೇಹಿತ ರೊಂದಿಗೆ ಸಮಯ ಕಳೆಯುವಿರಿ, ಸಂಗಾತಿಯಿಂದ ಸಹಕಾರ ದೊರೆಯಲಿದೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ಧನಸುರಾಶಿ
ಹಳೆಯ ಸ್ನೇಹಿತರ ಪುನರ್‌ಮಿಲನ, ಅನಗತ್ಯ ವೆಚ್ಚದಿಂದ ಸಮಸ್ಯೆ, ಪ್ರೇಮ ಜೀವನ ಸುಂದರ ತಿರುವು ಪಡೆಯಲಿದೆ, ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುವಿರಿ, ಪ್ರೇಮ ಜೀವನ ಹೊಸ ತಿರುವು ಪಡೆಯಲಿದೆ, ಆಲೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ, ಏಕಾಂಗಿಯಾಗಿ ಸಮಯ ಕಳೆಯುವಿರಿ, ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಮನೆಯವರೊಂದಿಗೆ ಕಾಲ ಕಳೆಯುವಿರಿ.

ಮಕರರಾಶಿ
ತಾಯಂದಿರ ಪಾಲಿಗೆ ವಿಶೇಷವಾದ ದಿನ, ಸಾಲ ತೆಗೆದುಕೊಳ್ಳು ಪ್ಲ್ಯಾನ್‌ ಇದ್ದರೆ ಮುಂದೂಡುವುದು ಉತ್ತಮ, ಮನೆಗೆ ಅತಿಥಿಗಳು ಭೇಟಿ ನೀಡಲಿದ್ದಾರೆ, ಪ್ರಿಯತಮೆಯೊಂದಿಗೆ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ, ಜನರ ಜೊತೆ ಸಂವಹನದ ವೇಳೆಯಲ್ಲಿ ಎಚ್ಚರವಾಗಿರಿ, ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುವಿರಿ.

ಕುಂಭರಾಶಿ
ನಿಮ್ಮ ಕನಸು ನನಸಾಗಲಿದೆ, ಸಂತೋಷ ಕ್ಷಣಗಳು ಕೆಲವೊಮ್ಮೆ ಸಮಸ್ಯೆ ದಾರಿ ಮಾಡಿಕೊಡಲಿದೆ, ವ್ಯಾಪಾರ- ವ್ಯವಹಾರದಲ್ಲಿ ಅಧಿಕ ಲಾಭ, ಸಂಗಾತಿಯಿಂದ ಒತ್ತಡ ಉಂಟಾಗಲಿದೆ, ಬಾಕಿ ಉಳಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರಲಿದೆ, ಸಂಗಾತಿಯನ್ನು ಯಾವುದೇ ಕಾರಣಕ್ಕೂ ನೋವಲ್ಲಿ ಇಡಬೇಡಿ.

ಮೀನರಾಶಿ
ಯಾರಾದ್ರೂ ನಿಮ್ಮನ್ನು ಬಲಿಪಶುವನ್ನಾಗಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಸ್ನೇಹಿತರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ, ಹಣಕಾಸಿನ ವಿಚಾರದಲ್ಲಿ ಹಲವು ಅನುಕೂಲಗಳು ದೊರೆಯಲಿದೆ, ಮನೆಗೆ ದೂರದ ಬಂದುಗಳ ಭೇಟಿಯಿಂದ ಸಂತಸ, ಉದ್ಯೋಗದಲ್ಲಿ ಲಾಭದಾಯಕವಾಗಲಿದೆ, ಪಾಲುದಾರಿಕೆ ವ್ಯವಹಾರದಿಂದ ದೂರವಿರಿ, ಹೊಸ ಒಪ್ಪಂದಕ್ಕೆ ಸಹಿ ಮಾಡುವ ಸಾಧ್ಯತೆ.

ಇದನ್ನೂ ಓದಿ : ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ: 3.3 ಮಿಲಿಯನ್ ವೀವ್ಸ್ ಪಡೆದ ಟಾರ್ಚರ್ ಸಾಂಗ್

ಇದನ್ನೂ ಓದಿ : ಸೋನು ಸೂದ್ ಗೆ ಐಟಿ ಶಾಕ್: ನಟನಿಗೆ ಸೇರಿದ 6 ಕಡೆ ದಾಳಿ

(Horoscope today astrological prediction for September 16)

Comments are closed.