ನಿತ್ಯಭವಿಷ್ಯ : 28-08-2020

0

ಮೇಷರಾಶಿ
ನಿಮ್ಮಿಚ್ಛೆಯಂತೆ ಕೆಲಸಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಭೂಮಿ ಮತ್ತು ವಾಹನ ಖರೀದಿ ಸಾಧ್ಯತೆ, ನಷ್ಟ ಮತ್ತು ಅನಗತ್ಯ ಕಿರಿಕಿರಿ, ತಾಯಿಂದ ಅನುಕೂಲ, ಸಾಂಸಾರಿಕ ಸುಖ ಹಂತ ಹಂತವಾಗಿ ವೃದ್ಧಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ.

ವೃಷಭರಾಶಿ
ಆಕಸ್ಮಿಕ ಧನಲಾಭ, ಹತ್ತಿರದ ಪ್ರಯಾಣ ಮತ್ತು ಪತ್ರ ವ್ಯವಹಾರ, ಗೃಹ ಬದಲಾವಣೆಯಿಂದ ತೊಂದರೆ, ಕಂಕಣಬಲ ಕೂಡಿ ಬರಲಿದೆ, ಸಹೋದರನೊಂದಿಗೆ ಕಿರಿಕಿರಿ, ಮನಸ್ತಾಪ, ಉತ್ತಮ ಆದಾಯ ಉತ್ತಮವಿದ್ದರೂ ಖರ್ಚುವೆಚ್ಚಗಳು ಅಧಿಕವಾದಾವು, ನಿರುದ್ಯೋಗಿಗಳಿಗೆ ನಿರಾಶೆ ಕಾಡಲಿದೆ.

ಮಿಥುನರಾಶಿ
ಅಧಿಕಾರಿ ವರ್ಗದವರೊಂದಿಗೆ ಕಲಹ ಮನಸ್ತಾಪ ಅಸಹಕಾರ ಉಂಟಾಗಲಿದೆ, ಸಹದ್ಯೋಗಿಗಳೊಂದಿಗೆ ಕಿರಿಕಿರಿ, ಸಂಗಾತಿಯಿಂದ ಸ್ನೇಹಿತರಿಂದ ಲಾಭ, ಆಧ್ಯಾತ್ಮದ ಬಗ್ಗೆ ಒಲವು, ತಂದೆ ಮಕ್ಕಳಲ್ಲಿ ಕಲಹಕ್ಕೆ ಕಾರಣವಾದೀತು, ಉದ್ಯೋಗದಲ್ಲಿ ಬದಲಾವಣೆ ತೋರಿ ಬಂದೀತು.

ಕಟಕರಾಶಿ
ಶತ್ರು ಕಾಟಗಳು, ಅನಾರೋಗ್ಯ ಸಮಸ್ಯೆಗಳು, ಸಾಲದ ಸುಳಿಗೆ ಸಿಲುಕುವಿರಿ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಗಾಗ ನಿರುತ್ಸಾಹವು ಕಾಡಲಿದೆ. ರಾಜಕೀಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು. ಸಾಂಸಾರಿಕವಾಗಿ ಹೆಚ್ಚು ಭಾವುಕರಾಗಿ ವರ್ತಿಸಲಿದ್ದೀರಿ. ಜೀವನದಲ್ಲಿ ಏರುಪೇರಾದೀತು.

ಸಿಂಹರಾಶಿ
ಆರ್ಥಿಕವಾಗಿ ನಿಮಗೆ ಪ್ರತಿಕೂಲವಾದ ಬೆಳವಣಿಗೆ ಬೇಸರ ತಂದೀತು, ಮಕ್ಕಳಿಗಾಗಿ ಅಧಿಕ ಖರ್ಚು, ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ, ಆಕಸ್ಮಿಕ ತೊಂದರೆಗಳು. ನಿವೇಶನಕ್ಕಾಗಿ ಖರ್ಚು ಬರಲಿದೆ. ಕುಟುಂಬದ ಸದಸ್ಯರ ಕುರಿತು ಹೆಚ್ಚಿನ ಜಾಗ್ರತೆ ವಹಿಸಿರಿ. ಅನಿರೀಕ್ಷಿತವಾಗಿ ಖರ್ಚು ತರಲಿದೆ.

ಕನ್ಯಾರಾಶಿ
ನಿಮಗೆ ಪೂರಕವಾದ ದಿನಗಳಿವು. ವೃತ್ತಿಯಲ್ಲಿ ಉತ್ತಮ ಸಂಬಂಧ ಹೊಂದುವಿರಿ, ಸ್ಥಿರಾಸ್ತಿ ಮತ್ತು ವಾಹನ ಲಾಭ, ಅಧ್ಯಾತ್ಮದ ಕಡೆ ಹೆಚ್ಚಿನ ಒಲವು, ಸಹೋದರರಿಂದ ಧನಾಗಮನ, ಅನಿರೀಕ್ಷಿತವಾಗಿ ಕೆಲವು ಘಟನೆಗಳು ನಿಮಗೆ ಸಂತೋಷ ತರಲಿವೆ. ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ.

ತುಲಾರಾಶಿ
ಸಂಬಂಧದಲ್ಲಿ ಏರುಪೇರು ಉಂಟಾಗಬಹುದು, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ಸಾಲದ ಚಿಂತೆ, ಇದರಿಂದ ನಿಮ್ಮ ವಿವೇಚನೆಗೆ ಸಮಸ್ಯೆಯು ಬರಲಿದೆ. ಆರ್ಥಿಕವಾಗಿ ಹೂಡಿಕೆ ಬಗ್ಗೆ ಜಾಗ್ರತೆ ವಹಿಸುವುದು. ಸಾಮಾಜಿಕ ಕಾರ್ಯದಲ್ಲಿ ತೊಡಕುಗಳಿವೆ.

ವೃಶ್ಚಿಕರಾಶಿ
ವೃತ್ತಿಯಲ್ಲಿ ನಿಮಗೆ ಪ್ರತಿಕೂಲವಾದ ವಾತಾವರಣ ನಿರ್ಮಾಣವಾಗಲಿದೆ, ಅಧಿಕ ತಿರುಗಾಟ ಮತ್ತು ಅನುಕೂಲ, ಆಕಸ್ಮಿಕವಾಗಿ ನಷ್ಟ, ಮಕ್ಕಳ ನಡವಳಿಕೆಯಿಂದ ಬೇಸರ. ಅನಿರೀಕ್ಷಿತ ಆತ್ಮೀಯ ಸ್ನೇಹಿತರೊಬ್ಬರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿ ಗಳು ಅಭ್ಯಾಸದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ.

ಧನುರಾಶಿ
ಆಗಾಗ ಸಮಸ್ಯೆಗಳು ಆರೋಗ್ಯದಲ್ಲಿ, ಮನಸ್ಸಿನಲ್ಲಿ ಕಾಡಲಿವೆ, ವಾಹನ ಅಪಘಾತ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಿರಾಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವಿರಿ. ಆರ್ಥಿಕವಾಗಿ ಸಹೋದ್ಯೋಗಿಗಳ ಜತೆಗಿನ ನಿಮ್ಮ ಸಂಬಂಧವು ಉತ್ತಮಗೊಳ್ಳಲಿದೆ, ಅನಿರೀಕ್ಷಿತವಾಗಿ ಆರ್ಥಿಕ ನೆರವು ನಿಮಗೆ ಒದಗಿ ಬರಲಿದೆ.

ಮಕರರಾಶಿ
ನಿಮ್ಮ ಪ್ರಾಮಾಣಿಕತೆಗೆ ವೃತ್ತಿಯಲ್ಲಿ ಉತ್ತಮ ಫ‌ಲ ದೊರಕಲಿದೆ. ಆರ್ಥಿಕವಾಗಿ ಮಾತ್ರ ಎಚ್ಚರಿಕೆಯಿಂದ ವರ್ತಿಸಬೇಕಾದೀತು. ಆಗಾಗ ಆರ್ಥಿಕ ಒತ್ತಡಗಳು ಕಂಡು ಬಂದರೂ ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾದೀತು, ಅಧಿಕ ಖರ್ಚು, ಆತ್ಮೀಯರಿಂದ,ಸಹೋದರನಿಂದ ಮೋಸ, ಸ್ವಯಂಕೃತ ಅಪರಾಧಗಳಿಂದ ದುಂದುವೆಚ್ಚ.

ಕುಂಭರಾಶಿ
ಕುಟುಂಬದಲ್ಲಿ ವಾಗ್ವಾದಗಳು, ಕೆಲಸ ಕಾರ್ಯಗಳಲ್ಲಿ ಕಿರಿಕಿರಿ, ಕಾರ್ಮಿಕರು ದೊರಕುವ ಸಾಧ್ಯತೆ, ಕುಟುಂಬ ನೆಮ್ಮದಿ ಸಿಗಲಿದೆ, ವೃತ್ತಿಯಲ್ಲಿ ನಿಮಗೆ ಪ್ರತಿಕೂಲವಾದ ಬೆಳವಣೆಗೆಯಿಂದ ಸಣ್ಣ ಸಣ್ಣ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವಿರಿ. ಕೆಲವರ ಅಸಂತೋಷಕ್ಕೆ ಇದು ಕಾರಣವಾಗಬಹುದು. ತಾಳ್ಮೆ ಇರಲಿ.

ಮೀನರಾಶಿ
ಆಗಾಗ ಖರ್ಚುವೆಚ್ಚಗಳು ಅಧಿಕವಾದಾವು, ಅನಿರೀಕ್ಷಿತ ರೂಪದಲ್ಲಿ ಬರಬೇಕಾದ ಹಣ ಬರಲಿದೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ವಸ್ತ್ರಾಭರಣ, ಫೈನಾನ್ಸ್ ಕ್ಷೇತ್ರದಲ್ಲಿ ಅನುಕೂಲ, ವೈವಾಹಿಕ ಸಂಬಂಧಗಳ ಬಗ್ಗೆ ಮುಂದುವರಿಯುವುದು ಅಗತ್ಯವಿದೆ, ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

Leave A Reply

Your email address will not be published.